ಸದಸ್ಯರಾದರೆ ಮೋಸವಿಲ್ಲ ರಾಯಲ್ಟಿ
Team Udayavani, May 12, 2017, 3:01 PM IST
ಈ ರಾಯಲ್ಟಿ ಎಂಬ ಬಗ್ಗೆ ಎಲ್ಲರಲ್ಲೂ ಗೊಂದಲವಿದೆ. ಆ ಗೊಂದಲಕ್ಕೊಂದು ಉತ್ತರ ಕೊಟ್ಟಿದ್ದಾರೆ ಸಂಗೀತ ನಿರ್ದೇಶಕ
ವಿ.ಮನೋಹರ್. ಐಪಿಆರ್‌ಎಸ್ (ಇಂಡಿಯನ್ ಪರ್‌ಫಾರ್ಮಿಂಗ್ ರೈಟ್ ಸೊಸೈಟಿ)ಗೆ ಮನೋಹರ್ ಕರ್ನಾಟಕದ ಪ್ರತಿನಿಧಿಯಾಗಿದ್ದವರು.
ಆಡಿಯೋ ಕಂಪೆನಿಗಳು ಸಂಗೀತ ನಿರ್ದೇಶಕರು, ಗೀತರಚನೆಕಾರರಿಂದ ಸಹಿ ಪಡೆದು ಹಕ್ಕು ಕಸಿದುಕೊಳ್ಳುತ್ತಿವೆ ಎಂಬ ಆರೋಪವಿದೆ. ಅದಕ್ಕೆ ಮನೋಹರ್ ಹೇಳ್ಳೋದು ಹೀಗೆ. “ಆಡಿಯೋ ಕಂಪೆನಿಗಳು ಸಹಿ ಮಾಡಿಸಿಕೊಂಡರೂ ಗೀತರಚನೆಕಾರ, ಸಂಗೀತ ನಿರ್ದೇಶಕರು ಭಯಪಡಬೇಕಿಲ್ಲ. ಯಾಕೆಂದರೆ, ಅವರು ತಮಗೆ ರಾಯಲ್ಟಿ ಬರಲ್ಲ ಅಂದುಕೊಳ್ಳುವುದೇ ತಪ್ಪು. ಐಪಿಆರ್‌ಎಸ್‌ಗೆ ಸದಸ್ಯತ್ವ ಪಡೆದಿದ್ದರೆ, ಅಂತಹವರಿಗೆ ರಾಯಲ್ಟಿ ಎಂದಿಗೂ ತಪ್ಪುವುದಿಲ್ಲ. ಆಡಿಯೋ ಕಂಪೆನಿಗಳು ಸಹಿ ಮಾಡಿಸಿಕೊಳ್ಳುವುದಕ್ಕೂ, ರಾಯಲ್ಟಿ ಬರೋದಿಲ್ಲ ಎನ್ನುವುದಕ್ಕೂ ಅರ್ಥವಿಲ್ಲ. ಯಾರು ಸದಸ್ಯರಾಗಿರುತ್ತಾರೋ, ಅವರ ಕೆಲಸಾನುಸಾರ ಅವರಿಗೆ ರಾಯಲ್ಟಿ ಬರುತ್ತಾ ಹೋಗುತ್ತೆ. ಒಂದು ರುಪಾಯಿಯಲ್ಲಿ ನಾಲ್ಕು ಭಾಗ ಮಾಡಿ, ಅದನ್ನು ತಲುಪಿಸುವ ಜವಾಬ್ದಾರಿಯನ್ನು ಐಪಿಆರ್‌ಎಸ್ ವಹಿಸಿಕೊಂಡಿದೆ. ತಮ್ಮ ಏಜೆಂಟ್ ಮೂಲಕ ಸೂಕ್ತ ವ್ಯವಸ್ಥೆ ಮಾಡುತ್ತಿದೆ. ಆಡಿಯೋ ಕಂಪೆನಿಯೂ ಸಹ ಐಪಿಆರ್ ಎಸ್ ಸದಸ್ಯತ್ವ ಹೊಂದಿರುತ್ತೆ. ಅವರನ್ನೂ ಒಳಗೊಂಡಂತೆ, ಸಂಗೀತ ನಿರ್ದೇಶಕ, ನಿರ್ಮಾಪಕ ಹಾಗೂ ಗೀತರಚನೆಕಾರನಿಗೆ ಇಂತಿಷ್ಟು ಅಂತ ರಾಯಲ್ಟಿ ಹೋಗುತ್ತೆ. ಆದರೆ, ಇಲ್ಲಿ ಯಾರೋ ಹಾಡು ಬರೆದಿದ್ದೇನೆ, ನನ್ನ ಹಾಡು ಅಲ್ಲಿ ಬರುತ್ತಿದೆ ಅಂತ ಹೋಗಿ ರಾಯಲ್ಟಿ ಕೇಳ್ಳೋಕ್ಕಾಗಲ್ಲ. ಮೊದಲು ಸದಸ್ಯರಾಗಿರಬೇಕು. ಹಾಗಿದ್ದಲ್ಲಿ ಮಾತ್ರ ರಾಯಲ್ಟಿ ತಲುಪುತ್ತೆ.
ಇನ್ನು ಆಡಿಯೋ ಕಂಪೆನಿಗಳು ನಿರ್ಮಾಪಕರಿಂದ ಅಗ್ರಿಮೆಂಟ್ ಮಾಡಿಸಿಕೊಳ್ಳುತ್ತವೆ. ನಾವ್ಯಾರೂ ಅದಕ್ಕೆ ಸಹಿ ಹಾಕುತ್ತಿಲ್ಲ. ಹಾಗಂತ, ರಾಯಲ್ಟಿಯಲ್ಲಿ ಮೋಸ ಆಗುತ್ತಿಲ್ಲ’ ಎನ್ನುತ್ತಾರೆ ಅವರು.ಆದರೆ, ಆಡಿಯೋ ಕಂಪೆನಿಗಳು ಹಾಗೆ ಅಗ್ರಿಮೆಂಟ್ ಮಾಡಿಸಿಕೊಳ್ಳುವುದೇಕೆ, ಅದರಿಂದ ಲಾಭ ಇದೆಯಾ? ಈ ಮಾತಿಗೆ ಉತ್ತರಿಸುವ ಮನೋಹರ್ ಪದೇ ಪದೇ ಸಹಿ ಮಾಡಿಸಿಕೊಂಡು ಅಗ್ರಿಮೆಂಟ್ ಮಾಡಿಸಿಕೊಳ್ಳುವ ಆಡಿಯೋ ಕಂಪೆನಿಗಳ ವಿರುದ್ಧ ಕೋರ್ಟ್ ಮೆಟ್ಟಿಲೇರಿದರೆ, ಸಾಕಷ್ಟು ಸಲ ಅಗ್ರಿಮೆಂಟ್ ಮಾಡಿಸಿಕೊಂಡಿರುವುದನ್ನು ತೋರಿಸಿ, ಇನ್ನಷ್ಟು ಬಲಪಡಿಸಿಕೊಳ್ಳುವ ಸಾಧ್ಯತೆಯಿಂದಾಗಿ ಅಗ್ರಿಮೆಂಟ್ ಮೊರೆ ಹೋಗುತ್ತಿವೆ’ ಎಂದು ಸ್ಪಷ್ಟಪಡಿಸುತ್ತಾರೆ ಮನೋಹರ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.