ಸೌತೆಯಿಂದ ಸೌಂದರ್ಯ 

Team Udayavani, May 12, 2017, 3:36 PM IST

IMG-20170506-WA0016.jpg

ಬೇಸಿಗೆಯ ಉರಿಬಿಸಿಲಿನಲ್ಲಿ ಎಳೆ ಮುಳ್ಳುಸೌತೆ ಸೇವಿಸಿದರೆ ದೇಹಕ್ಕೆ ತಂಪು. ಹಾಂ! ಸೌತೆಕಾಯಿ ಒಂದು ಅತ್ಯುತ್ತಮ ಸೌಂದರ್ಯವರ್ಧಕ. ಬೇಸಿಗೆಯೂ ಸೇರಿದಂತೆ ಎಲ್ಲಾ ಕಾಲಗಳಲ್ಲೂ ಮನೆಯಲ್ಲಿಯೇ ಹತ್ತುಹಲವು ಸೌಂದರ್ಯವರ್ಧಕಗಳನ್ನು ತಯಾರಿಸಿ ಬಳಸಬಹುದು. ಮಾರುಕಟ್ಟೆಯಲ್ಲಿ ಲಭ್ಯವಿರುವ ಹಲವು ಸೌಂದರ್ಯವರ್ಧಕಗಳಲ್ಲಿ ಸೌತೆಕಾಯಿಯ ಅಂಶವಿದೆ. ಹಾಂ! ಅಂತೆಯೇ ಮನೆಯಲ್ಲಿ ತಯಾರಿಸಬಹುದಾದ ಈ ಕೆಳಗಿನ ಸೌಂದರ್ಯವರ್ಧಕಗಳು ಮಾರುಕಟ್ಟೆಯ ಸೌಂದರ್ಯವರ್ಧಕಗಳಿಗಿಂತಲೂ ಕಡಿಮೆಯೇನಿಲ್ಲ!

ತೈಲಯುಕ್ತ ಚರ್ಮದವರಿಗೆ ಸೌತೆಯ ಫೇಸ್‌ಪ್ಯಾಕ್‌
1/2 ಕಪ್‌ನಷ್ಟು ಸೌತೆಕಾಯಿಯನ್ನು ಅರೆದು ಪೇಸ್ಟ್‌ ತಯಾರಿಸಬೇಕು. ಅದಕ್ಕೆ 1 ಚಮಚ ನಿಂಬೆರಸ ಹಾಗೂ 1 ಚಮಚ ಅರಸಿನ ಹುಡಿ ಬೆರೆಸಬೇಕು. ಇದನ್ನು ಮುಖಕ್ಕೆ ಲೇಪಿಸಿ 15 ನಿಮಿಷಗಳ ಬಳಿಕ ತೊಳೆದರೆ ಮುಖದ ಜಿಡ್ಡು ನಿವಾರಣೆಯಾಗಿ ಮುಖ ಕಾಂತಿಯುತವಾಗುತ್ತದೆ. ಅಧಿಕ ತೈಲಾಂಶವುಳ್ಳವರು ಈ ಮಿಶ್ರಣಕ್ಕೆ ಮೊಟ್ಟೆಯ ಬಿಳಿಭಾಗವನ್ನು ಸೇರಿಸಿ ಲೇಪಿಸಿದರೆ ಅಧಿಕ ಪರಿಣಾಮಕಾರಿ.

ಮೊಡವೆನಿವಾರಕ ಸೌತೆಕಾಯಿ ಫೇಸ್‌ಮಾಸ್ಕ್
5 ಚಮಚ ಸೌತೆಕಾಯಿ ತಿರುಳಿನ ಪೇಸ್ಟ್‌, 1 ಚಮಚ ಮುಲ್ತಾನಿ ಮಿಟ್ಟಿ , 2 ಚಮಚ ತುಳಸೀರಸ, 2 ಚಮಚ ಜೇನುತುಪ್ಪ ಇವೆಲ್ಲವನ್ನು ಬೆರೆಸಿ ಮೊಡವೆ ಇರುವ ಭಾಗದಲ್ಲಿ ನಿತ್ಯವೂ ಲೇಪಿಸಿ ಫೇಸ್‌ಮಾಸ್ಕ್ ಹಾಕಬೇಕು. 20 ನಿಮಿಷಗಳ ಬಳಿಕ ತೊಳೆದರೆ ಮೊಡವೆ ಹಾಗೂ ಕಲೆ ನಿವಾರಣೆಯಾಗಿ ಮುಖ ಹೊಳೆಯುತ್ತದೆ.

ಒಣ ಚರ್ಮದವರಿಗೆ ಸೂಕ್ತವಾದ ಸೌತೆಕಾಯಿಯ ಫೇಸ್‌ಮಾಸ್ಕ್
5 ಚಮಚ ಸೌತೆಕಾಯಿಯ ತಿರುಳನ್ನು ಚೆನ್ನಾಗಿ ಅರೆಯಬೇಕು. ಅದಕ್ಕೆ ನಂತರ 2 ಚಮಚ ಹಾಲಿನ ಕೆನೆ ಹಾಗೂ 1 ಚಮಚ ಜೇನು ಬೆರೆಸಬೇಕು. ಇದನ್ನು ಮುಖಕ್ಕೆ ಲೇಪಿಸಿ 20 ನಿಮಿಷಗಳ ಬಳಿಕ ಬೆಚ್ಚಗಿನ ನೀರಿನಲ್ಲಿ ತೊಳೆದರೆ ಮುಖ ಮೃದುವಾಗಿ ಹೊಳೆಯುತ್ತದೆ.

ಬೇಸಿಗೆಯಲ್ಲಿ ವಿಶಿಷ್ಟವಾದ ಸೌತೆಕಾಯಿಯ ಫೇಸ್‌ಪ್ಯಾಕ್‌
ಸೌತೆಕಾಯಿಯನ್ನು ತೆಳ್ಳಗೆ ತುರಿಯಬೇಕು. ಇದನ್ನು 10 ಚಮಚ ತೆಗೆದುಕೊಂಡು, ಇದರೊಂದಿಗೆ ಓಟ್‌ಮೀಲ್‌ನ್ನು (3 ಚಮಚ) ಬೆರೆಸಬೇಕು. ಇದಕ್ಕೆ 2 ಚಮಚ ಮಜ್ಜಿಗೆ ಬೆರೆಸಬೇಕು. ಎಲ್ಲವನ್ನೂ ಚೆನ್ನಾಗಿ ಮಿಶ್ರಮಾಡಿ, ಮುಖಕ್ಕೆ ಲೇಪಿಸಿ 15 ನಿಮಿಷಗಳ ಬಳಿಕ ಬೆಚ್ಚಗಿನ ನೀರಿನಲ್ಲಿ ತೊಳೆಯಬೇಕು.

ಇದು ತುಂಬಾ ತಂಪು ತಂಪು ಬೇಸಿಗೆಯಲ್ಲಿ ಎಲ್ಲಾ ಬಗೆಯ ತ್ವಚೆಯವರಿಗೂ ಫೇಸ್‌ಪ್ಯಾಕ್‌ ಮಾಡಲು ಹಿತಕರ.

ಮುಖದ ಕಾಂತಿಗೆ ಸೌತೆ ಹಾಗೂ ಮೊಸರಿನ ಮುಖಲೇಪ ಎಳೆ ಸೌತೆಯನ್ನು ಸಣ್ಣಗೆ ಹೆಚ್ಚಿ ಬ್ಲೆಂಡರ್‌ನಲ್ಲಿ ದಪ್ಪ ಮೊಸರಿನೊಂದಿಗೆ ಅರೆಯಬೇಕು. ಈ ಪೇಸ್ಟ್‌ನ್ನು ಮುಖಕ್ಕೆ ದಪ್ಪಗೆ ಪದರದಂತೆ ಲೇಪಿಸಿ 1/2 ಗಂಟೆ ಬಿಡಬೇಕು. ತದನಂತರ ತಣ್ಣೀರಿನಲ್ಲಿ ತೊಳೆದರೆ ಮುಖದ ಕಾಂತಿ ವರ್ಧಿಸುತ್ತದೆ.

ಬಂಗು, ಕಲೆ, ಬಿಸಿಲುಗಂದು ನಿವಾರಕ ಸೌತೆ ಹಾಗೂ ಅಕ್ಕಿಹಿಟ್ಟಿನ ಲೇಪಎಳೆ ತಾಜಾ ಸೌತೆಕಾಯಿಯನ್ನು ದುಂಡಗೆ ಕತ್ತರಿಸಿ (ಸಿಪ್ಪೆ ಸಹಿತ), ಅದರ ಮೇಲೆ ಅಕ್ಕಿಹಿಟ್ಟು ಉದುರಿಸಿ ತದನಂತರ ನಿಂಬೆರಸ ಹಾಕಬೇಕು. ಈ ಬಿಲ್ಲೆಗಳನ್ನು ದುಂಡಗೆ ಬÂಂಗು, ಕಲೆ ಹಾಗೂ ಬಿಸಿಲುಗಂದು ಇರುವ ಭಾಗಗಳಲ್ಲಿ ಇರಿಸಿ ಮಾಲೀಶು ಮಾಡಿದರೆ ಪರಿಣಾಮಕಾರಿ.

ಚರ್ಮದ ಕಾಂತಿಗೆ, ಕಲೆನಿವಾರಿಸಲು, ಮೊಡವೆ ನಿವಾರಿಸಲು ಈ ಎಲ್ಲಾ ಫೇಸ್‌ಪ್ಯಾಕ್‌, ಫೇಸ್‌ಮಾಸ್ಕ್ ಲೇಪ ಇತ್ಯಾದಿಗಳನ್ನು ಬಳಸುವಾಗ ಅವುಗಳೊಂದಿಗೆ ನಿತ್ಯ 1 ಕಪ್‌ ತಾಜಾ ಸೌತೆಕಾಯಿಯ ಜ್ಯೂಸ್‌ ಸೇವಿಸಿದರೆ ಚರ್ಮಕ್ಕೆ ಹಿತಕರ ಆಗಿರುವ “ಈ’ ವಿಟಮಿನ್‌ ಅಧಿಕವಾಗಿ ದೊರೆತು, ಅದರೊಂದಿಗೆ ತೇವಾಂಶ, ಪೊಟ್ಯಾಶಿಯಂ, ಲ್ಯುಟಿನ್‌, ವಿಟಮಿನ್‌ “ಎ’, ಝೀ ಕ್ಸಾéನ್‌ಥಿನ್‌ ಅಂಶ ದೊರೆತು, ಇದೇ ಉತ್ತಮ ಸ್ಕಿನ್‌ಟಾನಿಕ್‌ನಂತೆೆ ಕಾರ್ಯವೆಸಗುತ್ತದೆ.

– ಡಾ| ಅನುರಾಧಾ ಕಾಮತ್‌

ಟಾಪ್ ನ್ಯೂಸ್

Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ

Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ

13-notes-1

Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Maharashtra Election: Focus on winning the booth: Modi’s Mantra to Workers

Maharashtra Election: ಬೂತ್‌ ಗೆಲ್ಲುವತ್ತ ಗಮನ ಹರಿಸಿ: ಕಾರ್ಯಕರ್ತರಿಗೆ ಮೋದಿ ಕರೆ

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

1

Lawyer Jagadish: ಮತ್ತೆ ಬಿಗ್‌ ಬಾಸ್‌ಗೆ ಕಾರ್ಯಕ್ರಮಕ್ಕೆ ಲಾಯರ್‌ ಜಗದೀಶ್‌ ಎಂಟ್ರಿ..!

6

Bengaluru: ಕಸವನ್ನು ಗೊಬ್ಬರವಾಗಿಸುವ “ಕಪ್ಪು ಸೈನಿಕ ನೊಣ’!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ

Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ

14-darshan

Actor Darshan ವಿರುದ್ದ ಸುಪ್ರೀಂನಲ್ಲಿ ಮೇಲ್ಮನವಿ: ಬೆಂಗ್ಳೂರು ಕಮೀಷನರ್‌

13-notes-1

Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Maharashtra Election: Focus on winning the booth: Modi’s Mantra to Workers

Maharashtra Election: ಬೂತ್‌ ಗೆಲ್ಲುವತ್ತ ಗಮನ ಹರಿಸಿ: ಕಾರ್ಯಕರ್ತರಿಗೆ ಮೋದಿ ಕರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.