SSLC: ವೈದ್ಯನ ಚಿಕಿತ್ಸೆಗೆ ಬಲಿಯಾದ ಅಭಿರಾಮ್‌ಗೆ ಶೇ.96ಅಂಕ
Team Udayavani, May 13, 2017, 11:53 AM IST
ಬೇತಮಂಗಲ: ಆತ ಬದುಕಿದ್ದರೆ ಫಲಿತಾಂಶ ನೋಡಿ ಎಷ್ಟು ಖುಷಿಪಡುತ್ತಿದ್ದನೋ ಏನೋ, ವಿಧಿಯ ಆಟದ ಎದುರು ಎಲ್ಲವೂ ನಗಣ್ಯ ಎಂಬುದು ಇದಕ್ಕೇ ಇರಬಹುದು. ಕಿವಿನೋವಿಗೆ ಚಿಕಿತ್ಸೆ ಪಡೆಯಲು ಕೋಲಾರ ಜಿಲ್ಲೆ ಬೇತಮಂಗಲ ಪಟ್ಟಣದ ಶಾರದಮೂರ್ತಿ ಕ್ಲಿನಿಕ್‌ಗೆ ಬುಧವಾರ ತೆರಳಿದ್ದ ವಡ್ಡಹಳ್ಳಿ ಗ್ರಾಮದ ಅಭಿರಾಮ್(16) ಎಂಬ ವಿದ್ಯಾರ್ಥಿ ಅಸುನೀಗಿದ್ದು, ಇದಕ್ಕೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಪಾಲಕರು ಆರೋಪಿಸಿದ್ದರು.
ಆದರೆ ಶುಕ್ರವಾರ ಬಂದ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಅಭಿರಾಮ್ ಉನ್ನತ ಶ್ರೇಣಿಯಲ್ಲಿ (603)ಶೇ.96.4ರಷ್ಟು ಸಾಧನೆ ಮಾಡಿ ಉತ್ತೀರ್ಣನಾಗಿದ್ದ. ಮಗನಿಗೆ ಸಿಹಿ ತಿನ್ನಿಸಿ ಸಂಭ್ರಮಿಸಬೇಕಾದ ದಿನವನ್ನು ಮಸಣದಲ್ಲಿ ಹಾಲು ಹಾಕುವ ಶಿಕ್ಷೆಯನ್ನು ನಕಲಿ ವೈದ್ಯ ನೀಡಿದ್ದಾನೆ ಎಂದು ಅಭಿರಾಮ್ ಪಾಲಕರು ಅಳಲು ತೋಡಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.