ಎಸ್ಸೆಸ್ಸೆಲ್ಸಿಯಲ್ಲಿ ಜಿಲ್ಲೆಗೆ 14ನೇ ಸ್ಥಾನ
Team Udayavani, May 13, 2017, 12:37 PM IST
ದಾವಣಗೆರೆ: ಕಳೆದ ಏಪ್ರಿಲ್‌ನಲ್ಲಿ ನಡೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಜಿಲ್ಲೆ ಈ ಬಾರಿ ರಾಜ್ಯದ ಪಟ್ಟಿಯಲ್ಲಿ 14ನೇ ಸ್ಥಾನದಲ್ಲಿದೆ. ಕಳೆದ ಬಾರಿ 19ನೇ ಸ್ಥಾನದಲ್ಲಿದ್ದ ಜಿಲ್ಲೆ ಈ ಬಾರಿ 5 ಸ್ಥಾನ ಮೇಲಕ್ಕೇರಿದೆ. ಈ ಬಾರಿ ಜಿಲ್ಲೆ ಶೇ.75.33ರಷ್ಟು ಫಲಿತಾಂಶದೊಂದಿಗೆ 14ನೇ ಸ್ಥಾನ ಪಡೆದಿದೆ.
ಶೇ. 0.33ರಷ್ಟು ತೇರ್ಗಡೆಯ ಕೊರತೆಧಿ ಯಿಂದ 12ನೇ ಸ್ಥಾನದಿಂದ ವಂಚಿತವಾಗಿದೆ. 0.33ಶೇಕಡವಾರು ಫಲಿತಾಂಶ ಪಡೆದಿದ್ದರೆ ಶೇ.75.66ರಷ್ಟು ಫಲಿತಾಂಶ ಪಡೆದು 12ನೇ ಸ್ಥಾನದಲ್ಲಿರುವ ಚಾಮರಾಜ ನಗರ ಜಿಲ್ಲೆಯ ಸ್ಥಾನಕ್ಕೆ ಬರಬಹುದಿತ್ತು. ಈ ಬಾರಿ ಒಟ್ಟು 23,210 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.
ಈ ಪೈಕಿ 17,337 ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಈ ಸಲವೂ ಸಹ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಶೇಕಡವಾರು 79.16ರಷ್ಟು ಬಾಲಕಿಯರು ತೇರ್ಗಡೆ ಆಗಿದ್ದಾರೆ. ಪರೀಕ್ಷೆ ಬರೆದಿದ್ದ 11,659 ವಿದ್ಯಾರ್ಥಿನಿಯರ ಪೈಕಿ, 9,229 ವಿದ್ಯಾರ್ಥಿನಿಯರು ತೇರ್ಗಡೆ ಆಗಿದ್ದಾರೆ. 11,551 ಬಾಲಕರ ಪೈಕಿ 8,109 ಮಂದಿ ಉತೀ¤ರ್ಣರಾಗಿದ್ದಾರೆ.
ದೇವಿಕಾ ಜಿಲ್ಲೆಗೆ ನಂ.1: ತರಳಬಾಳು ವಿದ್ಯಾಸಂಸ್ಥೆಯ ಎಸ್‌ಟಿಜೆ ಪ್ರೌಢಶಾಲೆಯ ದೇವಿಕಾ 622 ಅಂಕ ಪಡೆದು ಜಿಲ್ಲೆಗೆ ಅತಿ ಹೆಚ್ಚು ಅಂಕ ಪಡೆದ ಕೀರ್ತಿಗೆ ಪಾತ್ರರಾಗಿದ್ದಾರೆ. ದೇವಿಕಾ ಸಂಸ್ಕೃತ ವಿಷಯದಲ್ಲಿ 125, ಇಂಗೀಷ್ 99, ಕನ್ನಡ 99, ಗಣಿತ 99, ವಿಜ್ಞಾನ 100, ಸಮಾಜ ವಿಜ್ಞಾನ 100 ಅಂಕ ಗಳಿಸಿದ್ದಾರೆ.
620 ಆಂಕ ಪಡೆದಿರುವ ಮಾಗನೂರು ಬಸಪ್ಪ ಶಾಲೆಯ ಚಿನ್ಮಯ್ ಜಿಲ್ಲೆಗೆ ಹೆಚ್ಚು ಅಂಕ ಪಡೆದವರ ಪೈಕಿ 2ನೇ ಸ್ಥಾನದಲ್ಲಿದ್ದಾರೆ. ಮೂರನೇ ಸ್ಥಾನವನ್ನು 5 ವಿದ್ಯಾರ್ಥಿಗಳು ಹಂಚಿಕೊಂಡಿದ್ದಾರೆ. ಸಂತೆಬೆನ್ನೂರು ಎಸ್‌ಜೆವಿಪಿ ಸರ್ಕಾರಿ ಪಪೂ ಕಾಲೇಜಿನ ಸಾನಿಯಾ ಖಾನಂ, ಅಭಿಲಾಷ್,
ಜಗಳೂರು ಸರ್ಕಾರಿ ಪಪೂ ಕಾಲೇಜಿನ ಅನುಜಿತ್, ದಾವಣಗೆರೆ ನಗರದ ಸಿದ್ಧಗಂಗಾ ಕಾಂಪೋಸಿಟ್ ಹೈಸ್ಕೂಲ್‌ನ ಎ.ಎಸ್. ತಾನಿಯಾ, ಗೋಣಿವಾಡದ ಸೋಮೇಶ್ವರ ವಿದ್ಯಾಲಯದ ನಿಸರ್ಗ 619 ಅಂಕ ಪಡೆದು ಮೂರನೇ ಸ್ಥಾನದಲ್ಲಿದ್ದಾರೆ. ಹಾಲುವರ್ತಿ ಸರ್ಕಾರಿ ಪ್ರೌಢಶಾಲೆಯ ದೀಪಿಕಾ 618 ಅಂಕ ಗಳಿಸಿ ನಾಲ್ಕನೇ ಸ್ಥಾನ ಪಡೆದಿದ್ದಾರೆ.
ಈ ಬಾರಿಯೂ ಹೊನ್ನಾಳಿ ಪ್ರಥಮ: ಜಿಲ್ಲೆಯ ಹೊನ್ನಾಳಿ ತಾಲ್ಲೂಕು ಶೇ.82.26ರಷ್ಟು ಫಲಿತಾಂಶ ಪಡೆದು ಪ್ರಥಮ ಸ್ಥಾನ ಪಡೆದರೆ, ಹರಪನಹಳ್ಳಿ ಶೇ.65.52ರಷ್ಟು ಫಲಿತಾಂಶ ಪಡೆದುಕೊಂಡು ಕಡೆ ಸ್ಥಾನದಲ್ಲಿದೆ. ಚನ್ನಗಿರಿ ತಾಲ್ಲೂಕು ಶೇ.76.02ರ ಫಲಿತಾಂಶದೊಂದಿಗೆ 2ನೇ ಸ್ಥಾನ,
ದಾವಣಗೆರೆ ದಕ್ಷಿಣ ಶೇ.75.86ರಷ್ಟು ಫಲಿತಾಂಶದೊಂದಿಗೆ 3ನೇ ಸ್ಥಾನ, ದಾವಣಗೆರೆ ಉತ್ತರ ಶೇ.75.62ರಷ್ಟು ಫಲಿತಾಂಶದೊಂದಿಗೆ 4ನೇ ಸ್ಥಾನ, ಹರಿಹರ ತಾಲ್ಲೂಕು ಶೇ.74.06ರಷ್ಟು ಫಲಿತಾಂಶ ಪಡೆದು 5ನೇ ಸ್ಥಾನ, ಜಗಳೂರು ತಾಲ್ಲೂಕು ಶೇ.73.7ರಷ್ಟು ಪಲಿತಾಂಶದೊಂದಿಗೆ 6ನೇ ಸ್ಥಾನ ಪಡೆದುಕೊಂಡಿದೆ. ಕಳೆದ ಬಾರಿ ಸಹ ಹೊನ್ನಾಳಿ ಪ್ರಥಮ ಸ್ಥಾನದಲ್ಲಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf Protest: ರಾಜ್ಯ ಸರ್ಕಾರವನ್ನು ಜನರೇ ಕಿತ್ತೊಗೆಯಲಿದ್ದಾರೆ: ದಾವಣಗೆರೆಯಲ್ಲಿ ಪ್ರತಿಭಟನೆ
Govt Hospital: ಡಿ ಗ್ರೂಪ್ ಸಿಬ್ಬಂದಿಗೆ ಶೀಘ್ರನೇರ ಪಾವತಿ: ಸಚಿವ ದಿನೇಶ್ ಗುಂಡೂರಾವ್
ರಾಜ್ಯದ ರೈತರಿಗೆ ಕೇಂದ್ರ ಸರ್ಕಾರದಿಂದ ಭಾರಿ ಅನ್ಯಾಯವಾಗಿದೆ: ದಿನೇಶ್ ಗುಂಡೂರಾವ್
Davanagere: ಶಾಸಕರ ಖರೀದಿ ಆರೋಪ; ತನಿಖೆಗೆ ಎಸ್‌ಐಟಿ ರಚಿಸಿ: ಎಂ.ಪಿ.ರೇಣುಕಾಚಾರ್ಯ
Market: ಇಳುವರಿ ಕೊರತೆ: ತೆಂಗಿನಕಾಯಿ ಬೆಲೆ 58ರಿಂದ 60 ರೂಪಾಯಿ!
MUST WATCH
ಹೊಸ ಸೇರ್ಪಡೆ
Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್ ಟೂರಿಸಂ ಹಬ್ಬ!
BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.