ದೇವರ ಕತೆಗಳು


Team Udayavani, May 14, 2017, 3:45 AM IST

kate.jpg

ದೇವರಿಗೆ ದಂಡ
ಒಮ್ಮೆ ದೇವರು ದಿಲ್ಲಿಯ ಡಿ.ಟಿ.ಸಿ. ಬಸ್‌ ಹತ್ತಿದ.
“”ಟಿಕೇಟ್‌ ತೆಗೆದುಕೊಳ್ಳಿ” ಕಂಡಕ್ಟರ್‌ ಅವನ ಬಳಿ ಬಂದ.
“”ನಾನು ಸ್ಟಾಫ್” ಎಂದ ದೇವರು.
“”ಯಾವ ಸ್ಟಾಫ್?”
“”ನಾನು ದೇವರು” ಎಂದ ದೇವರು.
“”ದೇವರು ಸಾಫ್ಟ್ನಲ್ಲಿ ಬರಲ್ಲ. ಟಿಕೆಟ್‌ ತೆಗೆದುಕೊಳ್ಳಿ” ಎಂದ ಕಂಡಕ್ಟರ್‌.
“”ನನ್ನ ಹೆಸರು ಹೇಳಿಕೊಂಡು ಹಾಡು ಹೇಳುವ ಭಿಕ್ಷುಕರಿಗೆ ನೀನು ಪುಕ್ಕಟೆ ಪ್ರಯಾಣಿಸಲು ಬಿಡ್ತೀಯ. ಆದರೆ, ನನಗೆ ಟಿಕೆಟ್‌ ತೆಗೆದುಕೊಳ್ಳಿ ಅಂತ ಹೇಳ್ಳೋ ಧೈರ್ಯ ಮಾಡ್ತಿದ್ದೀಯ. ನಿನ್ನನ್ನು ನೋಡಿಕೊಳ್ತೀನಿ”
ಅಷ್ಟರಲ್ಲಿ ಬಸ್‌ಸ್ಟಾಫ್ ಬಂದಿತು. ಚೆಕ್ಕಿಂಗ್‌ ಅಧಿಕಾರಿಗಳು ಬಸ್‌ನೊಳಗೆ ಬಂದರು. ಅವರು ಟಿಕೆಟ್‌ ಇಲ್ಲದೆ ಪ್ರಯಾಣಿಸುತ್ತಿದ್ದ ದೇವರನ್ನು ಕೆಳಗಿಳಿಸಿ 20 ರೂಪಾಯಿ ದಂಡ ವಿಧಿಸಿದರು.

ದೇವರೇ ಸತ್ಯ
ಈಗ ಹೇಳುವ ದೇವರ ಪ್ರಸಂಗದಿಂದ ದೇವರು ಮನುಷ್ಯನಲ್ಲ ತಾನೇ ಎಂಬ ಅನುಮಾನವುಂಟಾಗುತ್ತದೆ.
ದೇವರು ದಿಲ್ಲಿಯಲ್ಲಿದ್ದಾಗಿನ ಘಟನೆ. ಆಗ ಅಲ್ಲಿಯ ಬಸ್ಸುಗಳ ಮೇಲೆ, “ಸತ್ಯವೇ ದೇವರು’ ಎಂದು ಬರೆಯಲಾಗಿರುತ್ತಿತ್ತು.
ದೇವರು ಇದನ್ನು ನೂರಾರು ಬಾರಿ ಓದಿದ. ಒಂದು ದಿನ ಅವನಿಗೆ ಸಿಟ್ಟು ಬಂದಿತು. ಅವನು ಹಿಂದು-ಮುಂದು ನೋಡದೆ ಕೂಡಲೇ ಡಿ.ಡಿ.ಸಿ. ಅಧ್ಯಕ್ಷರಿಗೆ ಫೋನಾಯಿಸಿದ, “”ನಾನು ದೇವರು ಮಾತನಾಡುತ್ತಿರುವುದು. ನೀವು ನೂರಾರು ಬಸ್ಸುಗಳ ಮೇಲೆ, ಸತ್ಯವೇ ದೇವರು ಎಂದು ಬರೆಸಿದ್ದೀರ, ಹಾಗಂದರೇನು? ಒಂದು ವೇಳೆ ಸತ್ಯವೇ ದೇವರಾದರೆ ನಾನ್ಯಾರು? ನಾನು ದೇವರಲ್ಲ ಅಂತ ನೀವು ಹೇಳಬೇಕೆಂದಿದ್ದೀರಾ? ನೀವು ತಕ್ಷಣ ಈ ಬಗ್ಗೆ ಯೋಚಿಸಿ “”ದೇವರೇ ಸತ್ಯ ಎಂದು ಬರೆಯಿಸಿ”.

ದೇವರ ಖುಷಿ
ಇದು ಪಂಜಾಬಿನಲ್ಲಿ ಆತಂಕವಾದ ಇದ್ದಾಗಿನ ಘಟನೆ. ಧೈರ್ಯಶಾಲಿ ಹಿಂದೂಗಳು ಅಮೃತಸರ-ಗುರುದಾಸಪುರಕ್ಕೆ ಹೋಗಲು ಭಯಪಡುತ್ತಿದ್ದರು.

ಆದರೆ ದೇವರಿಗೇನು ಭಯ! ಅವನು ಎಷ್ಟಾದರೂ ದೇವರಲ್ಲವೆ!
ದೇವರು ಅಮೃತಸರ-ಗುರುದಾಸಪುರ-ಜಾಲಂಧರ್‌ಗಳಿಗೆ ಹೋಗಿ ಬಂದ. ಅವನಿಗೆ ಯಾವ ವಿಘ್ನವೂ ಎದುರಾಗಬಾರದಿತ್ತು. ಆದರೆ ನಿಜವಾಗಿ ಹೇಳಬೇಕೆಂದರೆ ಯಾರೂ ಅವನಿಗೆ ತೊಂದರೆ ಕೊಡುವ ಪ್ರಯತ್ನವನ್ನು ಮಾಡಲಿಲ್ಲ.

ದೇವರು ದಿಲ್ಲಿಗೆ ಮರಳಿ ಬಂದಾಗ ತುಂಬಾ ಖುಷಿಗೊಂಡಿದ್ದ. ಒಂದು ವೇಳೆ ತಾನು ದೇವರಾಗಿರದೆ ಹಿಂದೂವಾಗಿದ್ದರೆ ಆಂಜನೇಯನಿಗೆ ಐದೂಕಾಲು ರೂಪಾಯಿಯನ್ನು ಕಾಣಿಕೆಯಾಗಿ ಕೊಡುತ್ತಿದ್ದೆ ಎಂಬುದು ಅವನ ಈ ಖುಷಿಗೆ ಕಾರಣವಾಗಿತ್ತು.

ಆದರೆ ಅವನು ದೇವರಾಗಿದ್ದು ಅಸಹಾಯಕನಾಗಿದ್ದ.

ದೇವರಿಗೆ ಜೈಲು
ಭೂಮಿಯಲ್ಲಿ ದೇವರು ಮನುಷ್ಯನಂತೆ ಯಾವುದೇ ಕಷ್ಟವನ್ನು ಅನುಭವಿಸಲು ಸಿದ್ಧನಾಗಿದ್ದ. ಆದರೆ ಅವನಿಗೆ ತನಗೆ ಯಾವುದೂ ಕಷ್ಟವಲ್ಲ ಎಂಬ ವಿಷಯ ತಿಳಿದಿತ್ತು.

ಅವನ ಭಕ್ತನೊಬ್ಬ ಒಂದು ಜಾಗದಲ್ಲಿ ದೇವಸ್ಥಾನವನ್ನು ಕಟ್ಟಿಸಿದ. ನಗರಸಭೆಯ ಅಧಿಕಾರಿಗಳು, “ಬೆಲೆಬಾಳುವ ಅಕ್ರಮ ಭೂಮಿಯನ್ನು ಸಕ್ರಮಗೊಳಿಸಿಕೊಳ್ಳಲೋಸುಗ ಆ ಜಾಗದಲ್ಲಿ ದೇವಸ್ಥಾನವನ್ನು ಕಟ್ಟಿಸಲಾಗಿದೆ’ ಎಂದು ಹೇಳುತ್ತಿದ್ದರು. ನಗರಸಭೆಯವರು ಆ ಭೂಮಿಯನ್ನು ತೆರವುಗೊಳಿಸುವಂತೆ ಆಗ್ರಹಪಡಿಸುತ್ತಿದ್ದರು. ಭಕ್ತ ದೇವರೆದುರು ಈ ಸಮಸ್ಯೆಯನ್ನಿಟ್ಟ. “ಚರಾಚರ ಜಗತ್ತನ್ನು ಸೃಷ್ಟಿಸಿದ ದೇವರಿಗೆ ಭೂಮಿಯ ಒಂದು ಚೂರನ್ನು ಕೊಡುವುದಿಲ್ಲವೆನ್ನುವುದು ಘೋರ ಪಾಪ!’ ಎಂಬುದು ಆ ಭಕ್ತನ ಹೇಳಿಕೆಯಾಗಿತ್ತು.

ದೇವರಿಗೆ ಭಕ್ತನ ಈ ಮಾತು ನಿಜವೆನಿಸಿತು. ಅವನು ತನ್ನ ಪ್ರತಾಪದಿಂದ ಒಂದು ಹೊಸ ಕಾಗದ-ಪತ್ರವನ್ನು ಮಾಡಿಸಿದ. ಆ ಪತ್ರದಿಂದಾಗಿ ಆ ಭೂಮಿಯ ವಶವನ್ನು ಕಾನೂನುಬದ್ಧ ಎಂದು ಹೇಳಬಹುದಿತ್ತು.
ಭಕ್ತ ಆ ಕಾಗದ-ಪತ್ರಗಳನ್ನು ಎಲ್ಲರಿಗೂ ತೋರಿಸುತ್ತಿದ್ದ. ನಗರಸಭೆಯ ಅಧಿಕಾರಿಗಳಿಗೆ ಈ ವಿಷಯ ತಿಳಿಯಿತು. ನಂತರ ಅವನನ್ನು ಸುಳ್ಳು ಪತ್ರ ಮಾಡಿಸಿದ ಆಪಾದನೆಯ ಮೇರೆಗೆ ಬಂಧಿಸಲಾಯಿತು.
ಇತ್ತ ಭಕ್ತ ಜೈಲು ಸೇರಿದರೆ ಅತ್ತ ದೇವರು ಅವನನ್ನು ತನ್ನ ಪ್ರತಾಪದಿಂದ ಬಿಡುಗಡೆಗೊಳಿಸಿದ. ಜೈಲಿನ ಬೀಗಗಳು ಬಂದ್‌ ಆಗಿಯೇ ಇದ್ದವು. ಆದರೆ ಭಕ್ತ ಹೊರ ಬಂದ.

ಘಟನೆಯ ಬಗ್ಗೆ ತನಿಖೆಯಾಯಿತು, ಜೈಲರ್‌ನನ್ನು ಕಡ್ಡಾಯವಾಗಿ ನಿವೃತ್ತಗೊಳಿಸಿ ಮನೆಗೆ ಕಳುಹಿಸಲಾಯಿತು. ಅವನ ಬಗ್ಗೆ ಲಂಚ ತಿಂದ ಆರೋಪವಿತ್ತು.

ದೇವರು ಇದನ್ನು ಸಹಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಅವನು ಭಕ್ತನ ಬಳಿಗೆ ಬಂದು ಹೇಳಿದ, “”ಜೈಲರ್‌ ಕಳಂಕಮುಕ್ತನಾಗಲು ನೀನು ಮತ್ತೆ ಜೈಲಿಗೆ ಹೋಗು. ನಿನ್ನನ್ನು ಬೇಗನೇ ಬಿಡುಗಡೆಗೊಳಿಸಲಾಗುವುದು. ನಾನು ನ್ಯಾಯಾಧೀಶರ ನಿಲುವನ್ನು ಬದಲಾಯಿಸುವೆ, ಅವರು ನಿನ್ನನ್ನು ದೋಷಮುಕ್ತನೆಂದು ಹೇಳಿ ಬಿಡುಗಡೆ ಮಾಡುವರು”.
ಆದರೆ ಭಕ್ತ, ಭಕ್ತನೇ ಆಗಿದ್ದ. ದೇವರ ಮಾತನ್ನು ಕೇಳಲಿಲ್ಲ. ಹೀಗಾಗಿ ದೇವರೇ ಭಕ್ತನ ವೇಷ ಧರಿಸಿ ಜೈಲಿಗೆ ಹೋಗಬೇಕಾಯಿತು. ಈ ನಡುವೆ ನ್ಯಾಯಾಧೀಶರು ಬೇರೊಂದು ನಗರಕ್ಕೆ ವರ್ಗವಾಗಿ ಹೋದರು. ಹೊಸ ನ್ಯಾಯಾಧೀಶರು ಬರುವುದು ಒಂದು ತಿಂಗಳು ತಡವಾಯಿತು. ಅದುವರೆಗೆ ದೇವರು ಜೈಲಿನಲ್ಲಿದ್ದ. 
ಒಂದು ವೇಳೆ ದೇವರ ಬದಲು ಮನುಷ್ಯನಾಗಿದ್ದರೆ ಮರಳಿ ಬಂದು ಭಕ್ತನನ್ನು ವಿಚಾರಿಸಿಕೊಳ್ಳುತ್ತಿದ್ದ. ಅವನ ದೇವಸ್ಥಾನವನ್ನು ಕೆಡವಿಹಾಕಿಸಲು ಸಾಧ್ಯವಾದುದನ್ನೆಲ್ಲಾ ಮಾಡುತ್ತಿದ್ದ. ಆದರೆ ಅವನು ದೇವರಾಗಿದ್ದ. ವಿಷಯ ಎಷ್ಟಾದರೂ ದೇವಸ್ಥಾನ ಮತ್ತು ಭಕ್ತನಿಗೆ ಸಂಬಂಧಿಸಿದ್ದಾಗಿತ್ತು.

ದೇವರಿಗೆ ಚಪ್ಪಲಿ
ದೇವರು ಹೀಗೆ ಮನಸ್ಸಿನ ಸಂತೋಷಕ್ಕಾಗಿ ರಸ್ತೆಯಲ್ಲಿ ಹೋಗುತ್ತಿದ್ದ. ಅಷ್ಟರಲ್ಲಿ ಸಮೀಪದಲ್ಲಿದ್ದ ಒಂದು ದೇವಸ್ಥಾನದಿಂದ ಸಂಗೀತದ ಸ್ವರ ಕೇಳಿಸಿತು. ದೇವರು ಅದನ್ನು ಗಮನವಿಟ್ಟು ಆಲಿಸಿದ. ಅದು ಅವನ ಸ್ತುತಿಯೇ ಆಗಿದ್ದು ಅದರ ಸಾರ ಹೀಗಿತ್ತು: “ಹೇ ಪ್ರಭು, ನಾನು ಪಾಪಿ, ನನ್ನನ್ನು ಉದ್ಧರಿಸು, ನನಗೆ ಸುಖ-ಸಂಪತ್ತನ್ನು ಕರುಣಿಸು,  ಶಾಂತಿ-ನೆಮ್ಮದಿಯನ್ನು ಕೊಡು. ನನ್ನನ್ನು ರೋಗ-ರುಜಿನ, ವೃದ್ಧಾಪ್ಯ ಮತ್ತು ಸಾವಿನಿಂದ ಪಾರುಮಾಡು, ನಾನು ಅಜ್ಞಾನಿ ಬಾಲಕ…’

ದೇವರು ದೇವಸ್ಥಾನದೊಳಗೆ ಬಂದು ಎಲ್ಲರೊಂದಿಗೆ ಸರಿಸಮಾನನಾಗಿ ಕೂತು ಭಜನಾ ಮಂಡಳಿಯೊಂದಿಗೆ ಸೇರಿಕೊಂಡ. ಅವನಿಗೆ ಭಜನೆಯಲ್ಲಿದ್ದ ಸಂಗೀತ ಎಷ್ಟು ಇಷ್ಟವಾಯಿತೆಂದರೆ, ಅವನು ಭಜನೆ ಹಾಡುವವರೊಂದಿಗೆ ತಾನೂ ಹಾಡಲಾಂಭಿಸಿದ.

ಮಂಗಳಾರತಿಯ ನಂತರ ಬಾಳೆಹಣ್ಣು ಮತ್ತು ಹಲ್ವÌ ಪ್ರಸಾದ ರೂಪದಲ್ಲಿ ದೇವರಿಗೂ ಸಿಕ್ಕಿತು. ಅವನು ತುಂಬಾ ಶ್ರದ್ಧೆಯಿಂದ ಪ್ರಸಾದವನ್ನು ತಿಂದ.

ದೇವರು ಹೊರ ಬಂದಾಗ ಅವನ ಪಾದರಕ್ಷೆಗಳು ಕಳುವಾಗಿದ್ದವು!

ದೇವರ ಆಸೆ
ಅದೊಂದು ದಿನ ದೇವರು, ಒಂದು ನಗರದಲ್ಲಿ ಒಬ್ಬ ಮಹಿಳೆ ತುಂಬಾ ರಸವತ್ತಾದ ರಸಗುಲ್ಲಾಗಳನ್ನು ಮಾಡುತ್ತಾಳೆ ಎಂಬ ಸುದ್ದಿಯನ್ನು ಕೇಳಿದ. ದೇವರು ಅವಳ ಪತಿಯ ಮಿತ್ರನ ವೇಷದಲ್ಲಿ ಅವಳ ಮನೆಗೆ ಹೋದ. ಅವಳ ಪತಿ ಆಗ ಮನೆಯಲ್ಲಿರಲಿಲ್ಲ. ಆ ಮಹಿಳೆ ಮತ್ತು ದೇವರು ಬಡವರ-ದೀನದಲಿತರ ಬಗ್ಗೆ ಚೆನ್ನಾಗಿ ಹರಟಿದರು.
ಕಡೆಗೆ ಆ ಮಹಿಳೆ ಅಡುಗೆ ಮನೆಗೆ ಹೋಗಿ ಚಹಾ ಮಾಡಿ ತಂದಳು. ಈಗ ದೇವರು ನಿರ್ಲಜ್ಜತೆಯಿಂದ ಹೇಳಬೇಕಾಯಿತು, “”ಭಾಭಿ, ನೀವು ನನಗೆ ರಸಗುಲ್ಲಾ ಕೊಡದೆ ತುಂಬಾ ದಿನಗಳಾದವು”.
“”ಅಣ್ಣಾ , ಏನಂತ ಹೇಳಲಿ, ಎಲ್ಲವೂ ತುಂಬಾ ದುಬಾರಿಯಾಗಿವೆ. ಈಗ ರಸಗುಲ್ಲಾ ಮಾಡಲು ಧೈರ್ಯ ಬರಲ್ಲ. ಮಾಡಿದಾಗ ಖಂಡಿತ ನಿನಗೆ ಕೊಡ್ತೀನಿ”.

ದೇವರು, “”ಈಗ ಸುಳ್ಳು ಹೇಳಿದರೆ ಆಟ ನಡೆಯುವುದಿಲ್ಲ” ಎಂದು ತಿಳಿದ. ಅವನು ಸೂಕ್ಷ್ಮ ರೂಪದಲ್ಲಿ ಅವತರಿಸಿ ಅವಳು ಸುಳ್ಳು ಹೇಳಿದ್ದಕ್ಕೆ ಶಿಕ್ಷಿಸಲು ಮಾಡಿಟ್ಟಿದ್ದ ರಸಗುಲ್ಲಾಗಳನ್ನೆಲ್ಲಾ ತಿಂದ. ನಿಜವಾಗಿಯೂ ಅವು ತುಂಬಾ ರುಚಿಕರವಾಗಿದ್ದವು.

ಮರುದಿನ ಅವಳ ಮನೆಗೆ ಕೆಲಸಕ್ಕೆ ಬರುವ ಹುಡುಗಿಗೆ ಅವಳು ಮನಸಾರೆ ಥಳಿಸಿದಳು.

ದೇವರ ಪ್ರಶ್ನೆ

ದೇವರು ಮಂಟೋ ಕಥೆಗಳನ್ನು ಓದಿದಾಗಿನಿಂದ ಅವನಿಗೆ ಪುಸ್ತಕ ಓದುವ ಆಸಕ್ತಿ ಬೆಳೆದಿತ್ತು. ಅವನು ಒಂದು “ಪುಸ್ತಕ ಮಂದಿರ’ಕ್ಕೆ ಹೋಗಿ ನೂರು ರೂಪಾಯಿಯ ಪುಸ್ತಕವೊಂದನ್ನು ಖರೀದಿಸಲು ಆಯ್ಕೆ ಮಾಡಿದ.
ಅವನು ಬಿಲ್‌ ಬರೆಯಲು ಪುಸ್ತಕಗಳನ್ನು ಕೌಂಟರ್‌ನಲ್ಲಿಟ್ಟ. ಬಿಲ್‌ನಲ್ಲಿ ಹಣ “ನೂರಾ ಇಪ್ಪತ್ತು ರೂಪಾಯಿಗಳು’ ಎಂದಿತ್ತು. ದೇವರಿಗೆ ಆಶ್ಚರ್ಯವಾಯಿತು.

“”ನೋಡಿ, ಕಮೀಷನ್‌ ಕೊಡುವುದಕ್ಕೆ ಬದಲು ಈ ಇಪ್ಪತ್ತು ರೂಪಾಯಿಗಳನ್ನು ಯಾಕೆ ಹೆಚ್ಚಿಸಿದಿರಿ?” ದೇವರು ಕೇಳಿದ.
“”ಇದು ಸೇಲ್ಸ್‌ ಟ್ಯಾಕ್ಸ್‌ಗೆ ಸಂಬಂಧಿಸಿದ್ದು”
“”ಪುಸ್ತಕಗಳ ಮೇಲೆ ಸೇಲ್ಸ್‌ ಟ್ಯಾಕ್ಸ್‌ ಹಾಕೋದು ಎಂದಿನಿಂದ ಪ್ರಾರಂಭವಾಗಿದೆ?”
“”ಪುಸ್ತಕಗಳನ್ನು ಶೃಂಗಾರದ ವಸ್ತುಗಳ ಅಡಿಯಲ್ಲಿ ಪರಿಗಣಿಸಿದ ದಿನದಿಂದ” ಎಂದ ಪುಸ್ತಕದ ವ್ಯಾಪಾರಿ.

ಮೂಲ: ವಿಷ್ಣು ನಾಗರ್‌
ಅನು.: ಡಿ. ಎನ್‌. ಶ್ರೀನಾಥ್‌

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ 109: ದೇವರ ಇಚ್ಛೆ ಏನು?

Udupi: ಗೀತಾರ್ಥ ಚಿಂತನೆ 109: ದೇವರ ಇಚ್ಛೆ ಏನು?

Moodbidri: ಆಳ್ವಾಸ್‌ ವಿರಾಸತ್‌ ಶಾಸ್ತ್ರೀಯ ಯುವಸಂಪದ

Moodbidri: ಆಳ್ವಾಸ್‌ ವಿರಾಸತ್‌ ಶಾಸ್ತ್ರೀಯ ಯುವಸಂಪದ

BBK11: ಚೈತ್ರಾ ಅಭಿನಯ ‌ಕಂಡು‌ ಮೂಕವಿಸ್ಮಿತರಾದ ಮನೆಮಂದಿ

BBK11: ಚೈತ್ರಾ ಅಭಿನಯ ‌ಕಂಡು‌ ಮೂಕವಿಸ್ಮಿತರಾದ ಮನೆಮಂದಿ

Katapadi: ಹೃದಯ ವಿದ್ರಾವಕ ಘಟನೆ: ಸಾವಿನಲ್ಲೂ ಒಂದಾದ ದಂಪತಿ

Katapadi: ಹೃದಯ ವಿದ್ರಾವಕ ಘಟನೆ: ಸಾವಿನಲ್ಲೂ ಒಂದಾದ ದಂಪತಿ

1-jjjjj

ODI; ಟೀಮ್ ಇಂಡಿಯಾದ ಹೊಸ ಜೆರ್ಸಿ ಬಿಡುಗಡೆ ಮಾಡಿದ ಜಯ್ ಶಾ,ಹರ್ಮನ್ ಪ್ರೀತ್

1-allu

”Pushpa 2′′ ಭಾಷೆಯ ತಡೆಯನ್ನು ಮುರಿಯುತ್ತಿದೆ, ತೆಲುಗು ಜನರಿಗೆ ಹೆಮ್ಮೆ: ಅಲ್ಲು ಅರ್ಜುನ್

arrested

Indiranagar; ಅಸ್ಸಾಂ ಯುವತಿ ಹ*ತ್ಯೆ ಕೇಸ್: ಆರೋಪಿ ಬಂಧಿಸಿದ ಪೊಲೀಸರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

120

Tourist place: ಲೇಪಾಕ್ಷಿ ಪುರಾಣದ ಕಥೆಯ ಕೈಗನ್ನಡಿ

9

Cooker Story: ಹತ್ತು ಸಲ ಕೂಗಿದ್ರೂ  ಅವರಿಗೆ ಗೊತ್ತಾಗಲಿಲ್ಲ..!

ಪತ್ರಕರ್ತರಿಂದ…ಪತ್ರಕರ್ತರಿಗಾಗಿ… ಕಷ್ಟದಲ್ಲಿ ಕೈಹಿಡಿಯುವ ಆಪದ್ಭಾಂಧವ!

ಪತ್ರಕರ್ತರಿಂದ…ಪತ್ರಕರ್ತರಿಗಾಗಿ… ಕಷ್ಟದಲ್ಲಿ ಕೈಹಿಡಿಯುವ ಆಪದ್ಭಾಂಧವ!

3

Kannada: ವೀರ ಕನ್ನಡಿಗ: ತನು ಕನ್ನಡ, ಮನ(ನೆ) ಕನ್ನಡ

ಪಾಠ ಮಾಡಿದೆವು… ಸರಿ, ಬದುಕಲು ಕಲಿಸಿದೆವಾ?

ಪಾಠ ಮಾಡಿದೆವು… ಸರಿ, ಬದುಕಲು ಕಲಿಸಿದೆವಾ?

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Udupi: ಗೀತಾರ್ಥ ಚಿಂತನೆ 109: ದೇವರ ಇಚ್ಛೆ ಏನು?

Udupi: ಗೀತಾರ್ಥ ಚಿಂತನೆ 109: ದೇವರ ಇಚ್ಛೆ ಏನು?

1-MGM

Udupi MGM; ಡಿ.1ರಂದು ಪ್ರಾಕ್ತನ ವಿದ್ಯಾರ್ಥಿಗಳ ಅಮೃತ ಸಮ್ಮಿಲನ ಕಾರ್ಯಕ್ರಮ

Moodbidri: ಆಳ್ವಾಸ್‌ ವಿರಾಸತ್‌ ಶಾಸ್ತ್ರೀಯ ಯುವಸಂಪದ

Moodbidri: ಆಳ್ವಾಸ್‌ ವಿರಾಸತ್‌ ಶಾಸ್ತ್ರೀಯ ಯುವಸಂಪದ

BBK11: ಚೈತ್ರಾ ಅಭಿನಯ ‌ಕಂಡು‌ ಮೂಕವಿಸ್ಮಿತರಾದ ಮನೆಮಂದಿ

BBK11: ಚೈತ್ರಾ ಅಭಿನಯ ‌ಕಂಡು‌ ಮೂಕವಿಸ್ಮಿತರಾದ ಮನೆಮಂದಿ

byndoor

Bantwal: ಅಪಘಾತ; ಗಾಯಾಳು ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.