ಜಗತ್ತೇ ಇ – ಒತ್ತೆ, ನೂರಕ್ಕೂ ಹೆಚ್ಚು ದೇಶಗಳ ಸೈಬರ್ ಲೋಕದ ಮೇಲೆ ದಾಳಿ
Team Udayavani, May 14, 2017, 10:35 AM IST
– ಭಾರತ ಸಹಿತ ನೂರಕ್ಕೂ ಹೆಚ್ಚು ದೇಶಗಳ ಸೈಬರ್ ಲೋಕದ ಮೇಲೆ ದಾಳಿ
– ಹಿಂದೆಂದೂ ಕಂಡರಿಯದ ಮಾದರಿ ಅಟ್ಯಾಕ್, ಹಣಕ್ಕೆ ಬ್ಲಾಕ್‌ವೆುಲ್
ಲಂಡನ್: ತಂತ್ರಜ್ಞಾನವನ್ನು ನೆಚ್ಚಿಕೊಂಡ ಜಗತ್ತನ್ನು ಗುರಿಯಾಗಿಸಿಕೊಂಡು, ಅನಾಮಿಕರು ಶುಕ್ರವಾರದಿಂದ ನಿರಂತರವಾಗಿ ನಡೆಸಿದ ಬೃಹತ್ ದಾಳಿಗೆ ಸೈಬರ್‌ಲೋಕವೇ ತಲ್ಲಣಗೊಂಡಿದೆ. ಭಾರತ, ಇಂಗ್ಲೆಂಡ್, ಅಮೆರಿಕ, ರಷ್ಯಾ, ಜರ್ಮನಿ ಒಳಗೊಂಡಂತೆ 100ಕ್ಕೂ ಹೆಚ್ಚು ರಾಷ್ಟ್ರಗಳ, 1,30,000 ಕಂಪ್ಯೂಟರ್‌ಗಳು “ವನ್ನಾ ಕ್ರೈ ರ್ಯಾನ್ಸಂವೇರ್’ ಎಂಬ ಮಾಲ್‌ವೇರ್ (ದುರುದ್ದೇಶಪೂರಿತ ಸಾಫ್ಟ್ವೇರ್)ನ ಹಿಡಿತಕ್ಕೆ ಸಿಲುಕಿವೆ.
ವಿಶೇಷವೆಂದರೆ ಜಗತ್ತಿನಲ್ಲಿ ಬಹಳ ಹಿಂದಿ ನಿಂದಲೂ ಸೈಬರ್ ದಾಳಿಗಳು ನಡೆಯುತ್ತಲೇ ಬಂದಿವೆಯಾದರೂ ಈ ದಾಳಿಯ ರೂಪ ಮಾತ್ರ ಭಯಾನಕವಾಗಿದೆ. “ವನ್ನಾ ಕ್ರೈ ರ್ಯಾನ್ಸಂ ವೇರ್’ ಮೂಲಕ ಕಂಪ್ಯೂಟರ್‌ನಲ್ಲಿನ ದಾಖಲೆ
ಗಳನ್ನೆಲ್ಲ ಲಾಕ್ ಮಾಡುತ್ತಿರುವ ದಾಳಿಕೋರರು ತಾವು ಹೇಳಿದ ಸಮಯದೊಳಗೆ, ಕೇಳಿದಷ್ಟು ಹಣ ಕೊಡದಿದ್ದರೆ ಈ ದಾಖಲೆಗಳನ್ನೆಲ್ಲ ಅಳಿಸಿ ಹಾಕುತ್ತೇವೆ ಎಂಬ ಬೆದರಿಕೆಯೊಡ್ಡುತ್ತಿದ್ದಾರೆ. 3 ದಿನಗಳೊಳಗೆ ಬಿಟ್‌ಕಾಯಿನ್ ರೂಪದಲ್ಲಿ ತಾವು ತಿಳಿಸಿದ ನಂಬರ್‌ಗೆ 300 ಡಾಲರ್ (ಸುಮಾರು 19,000 ರೂ.) ಕೊಡಬೇಕು, ಈ ಅವಧಿ ಮೀರಿದರೆ 600 ಡಾಲರ್(ಸುಮಾರು 38,500 ರೂಪಾಯಿ) ಕೊಡಬೇಕಾಗು ತ್ತದೆ, ಇಲ್ಲದಿದ್ದರೆ ದಾಖಲೆ ಕಳೆದುಕೊಳ್ಳಲು ಸಿದ್ಧರಾಗಿ ಎಂದು ಬೆದರಿಕೆಯೊಡ್ಡುತ್ತಿದ್ದಾರೆ. ಅಪಹರಣಕಾರರು ಒತ್ತೆಯಾಳುಗಳನ್ನಿಟ್ಟುಕೊಂಡು “ಇಷ್ಟು ಹಣ ಕೊಡದಿದ್ದರೆ ನಿಮ್ಮವರನ್ನು ಕೊಂದು ಹಾಕುತ್ತೇವೆ’ ಎಂದು ಅಪಹೃತರ ಮನೆಯವರಿಗೆ ಬೆದರಿಕೆ ಹಾಕಿದಂತೆ!
ಈ ರ್ಯಾನ್ಸಂವೇರ್‌ನ ಹಾವಳಿ ಎರಡೇ ದಿನದಲ್ಲಿ ಎಷ್ಟು ತೀವ್ರವಾಗಿ ಹಬ್ಬಿದೆಯೆಂದರೆ ಬ್ರಿಟನ್‌ನ ರಾಷ್ಟ್ರೀಯ ಆರೋಗ್ಯ ಸೇವೆ (ಎನ್‌ಎಚ್‌ಎಸ್) ವಲಯಕ್ಕೆ ಸೇರಿದ 37ಕ್ಕೂ ಆಸ್ಪತ್ರೆಗಳು ತತ್ತರಿಸಿಹೋಗಿವೆ. ವೈದ್ಯಕೀಯ ಮಾಹಿತಿಯೆಲ್ಲ ಕೈತಪ್ಪಿರುವುದರಿಂದ ರೋಗಿಗಳಿಗೆ ಚಿಕಿತ್ಸೆ ನೀಡಲು ಅವಕ್ಕೆ ಸಾಧ್ಯವಾಗುತ್ತಿಲ್ಲ. ಇನ್ನು ನಿಸ್ಸಾನ್ ಕಾರು ಉತ್ಪಾದನಾ ಘಟಕ, ಜರ್ಮನಿಯ ರೈಲ್ವೇ ಇಲಾಖೆ, ರಷ್ಯಾದ ಆಂತರಿಕ ಸಚಿವಾಲಯ, ಅಮೆರಿಕದ ಫೆಡ್‌ಎಕ್ಸ್ ಕಂಪೆನಿಯ ಕಂಪ್ಯೂಟರ್‌ಗಳೆಲ್ಲ “ಸೈಬರ್ ಅಪಹರಣಕಾರರ’ ಹಿಡಿತಕ್ಕೆ ಸಿಲುಕಿವೆ. ಮುಖ್ಯವಾಗಿ ಮೈಕ್ರೋಸಾಫ್ಟ್ನ ವಿಂಡೋಸ್
ಎಕ್ಸ್‌ಪಿ ಬಳಕೆದಾರರೇ ಇದಕ್ಕೆ ತುತ್ತಾಗುತ್ತಿದ್ದಾರೆ.
ಈ ಮಾಲ್‌ವೇರ್ ದಾಳಿಗೊಳಗಾದವರಲ್ಲಿ ಎಷ್ಟು ಜನ ಹಣ ಪಾವತಿ ಮಾಡಿದ್ದಾರೆ-ಮಾಡುತ್ತಿದ್ದಾರೆ ಎನ್ನುವುದನ್ನು ತಿಳಿದುಕೊಳ್ಳುವುದಕ್ಕೂ ಸಾಧ್ಯ ವಿಲ್ಲ. ಏಕೆಂದರೆ ಬಿಟ್‌ಕಾಯಿನ್ ವ್ಯವಸ್ಥೆ ಯಲ್ಲಿ ಬಳಕೆದಾರರ ವಿವರ ತಿಳಿಯಲು ಸಾಧ್ಯವಿಲ್ಲ, ಅಲ್ಲದೇ ದಾಳಿಕೋರರು ಡಾರ್ಕ್ ನೆಟ್ ಮೂಲಕ ಕಾರ್ಯನಿರ್ವಹಿಸುತ್ತಿರುವ ಸಾಧ್ಯತೆಯಿರುವುದರಿಂದ ಅವರನ್ನು ಪತ್ತೆ ಮಾಡಲೂ ಸಾಧ್ಯವಿಲ್ಲ!
ಆಂಧ್ರ ಪೋಲೀಸರೂ ಬಲೆಗೆ!
“ವನ್ನಾ ಕ್ರೈ ರ್ಯಾನ್ಸಂವೇರ್’ ಬಲೆಗೆ ಆಂಧ್ರಪ್ರದೇಶದ ಪೊಲೀಸ್ ಜಾಲ ಸಿಕ್ಕಿಬಿದ್ದಿದೆ! “ಆಂಧ್ರದ ಪೊಲೀಸ್ ಇಲಾಖೆಯ ಸುಮಾರು 25 ಪ್ರತಿಶತ ಕಂಪ್ಯೂಟರ್‌ಗಳು ಈ ಮಾಲ್‌ವೇರ್‌ನ ಹಿಡಿತಕ್ಕೆ ಸಿಲುಕಿವೆ’ ಎಂದು ಐಜಿಪಿ ಇ. ದಾಮೋದರ್ ತಿಳಿಸಿದ್ದಾರೆ. ವಿಂಡೋಸ್ ಆಪರೇಟಿಂಗ್ ಸಿಸ್ಟಮ್ ಬಳಸುತ್ತಿರುವ ಕಂಪ್ಯೂಟರ್‌ಗಳೇ ತೊಂದರೆಗೀಡಾಗಿವೆಯಂತೆ.
ಕರ್ನಾಟಕವೇ ನಂಬರ್ ಒನ್
ಕ್ಯಾಸ್ಪಸ್ಕೈì ಸೆಕ್ಯುರಿಟಿ ಲ್ಯಾಬ್‌ನ ಪ್ರಕಾರ 2016ರಿಂದ ದೇಶದಲ್ಲಿ ಇಂಥ ರ್ಯಾನ್ಸಂವೇರ್‌ಗಳ ಹಾವಳಿಗೆ ಹೈರಾಣಾಗಿರುವ ರಾಜ್ಯ ಗಳಲ್ಲಿ ಕರ್ನಾಟಕವೇ ನಂಬರ್ 1! ದೇಶದಲ್ಲಿನ ಒಟ್ಟು ಸೈಬರ್ ದಾಳಿಗಳಲ್ಲಿ ಕರ್ನಾಟಕ ಮೊದಲನೆಯ ಸ್ಥಾನದಲ್ಲಿದ್ದರೆ, ತಮಿಳುನಾಡು 2ನೆಯ ಸ್ಥಾನದಲ್ಲಿದೆ. “ಮೊದಲಿನಿಂದಲೂ ಸೈಬರ್ ದಾಳಿಯ ಅತಿದೊಡ್ಡ ಸಂತ್ರಸ್ತನಾಗಿರುವ ಕರ್ನಾಟಕವೇ ಈ ಬಾರಿಯೂ ಹೆಚ್ಚು ಪೆಟ್ಟು ಅನುಭವಿಸಿರಬಹುದು’ ಎನ್ನುವುದು ಸೈಬರ್ ತಜ್ಞರ ಅಭಿಪ್ರಾಯ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Adani; ಆಸೀಸ್ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ
London: ಶಂಕಾಸ್ಪದ ಲಗೇಜ್ ಪತ್ತೆ: ಲಂಡನ್ ಏರ್‌ಪೋರ್ಟ್ ಖಾಲಿ ಮಾಡಿಸಿ ತನಿಖೆ!
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.