ಪಿಒಕೆಯಲ್ಲಿ ಕಾಮಗಾರಿ ಬೇಸರ: ಚೀನ ಶೃಂಗಕ್ಕೆ ಭಾರತ ಬಹಿಷ್ಕಾರ
Team Udayavani, May 14, 2017, 10:55 AM IST
– 68 ರಾಷ್ಟ್ರಗಳು ಸಭೆಯಲ್ಲಿ ಭಾಗಿ
– ಪಿಒಕೆಯಲ್ಲಿ ಚೀನ ಕಾಮಗಾರಿಯಿಂದ ಬೇಸರ
ಬೀಜಿಂಗ್: ಚೀನದ ಮಹತ್ವಾಕಾಂಕ್ಷಿ ಯೋಜನೆ, ಪ್ರಾಚೀನ ವ್ಯಾಪಾರ ಮಾರ್ಗ ಸುಧಾರಣೆಯ “ಒನ್ ಬೆಲ್ಟ್ ಒನ್ ರೋಡ್’ ಯೋಜನೆ ಕುರಿತ ಅಂತಾರಾಷ್ಟ್ರೀಯ ಸಭೆ ರವಿವಾರದಿಂದ ಆರಂಭವಾಗಲಿದೆ.
ಎರಡು ದಿನಗಳ ಈ ಸಭೆಯಲ್ಲಿ ಚೀನದ ಅತ್ಯಾಪ್ತ ರಾಷ್ಟ್ರ ಪಾಕಿಸ್ಥಾನ ಮುಖ್ಯ ಪಾತ್ರ ವಹಿಸಿದ್ದು, ಇದರೊಂದಿಗೆ ನೇಪಾಳವೂ ಭಾಗಿಯಾಗಲಿದೆ. ಜೊತೆಗೆ ದಕ್ಷಿಣ ಕೊರಿಯಾ, ಜರ್ಮನಿ, ಬ್ರಿಟನ್, ಶ್ರೀಲಂಕಾ, ಸರಕಾರಗಳ ಸಚಿವರು ಅಥವಾ ಅಧಿಕಾರಿ ವರ್ಗ ಸೇರಿದಂತೆ ಒಟ್ಟಾರೆ 68 ರಾಷ್ಟ್ರಗಳ ಪ್ರತಿನಿಧಿಗಳು ಈ ಸಭೆಯಲ್ಲಿ ಭಾಗಿಯಾಗುವ ಸಾಧ್ಯತೆ ಇದೆ. ರಷ್ಯಾದಿಂದ ಖುದ್ದು, ಅಲ್ಲಿನ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಭಾಗಿಯಾಗಲಿದ್ದಾರೆ.
ಪಾಕಿಸ್ಥಾನ ಆಕ್ರಮಿತ ಕಾಶ್ಮೀರದಲ್ಲಿ ಚೀನ ನಡೆಸುತ್ತಿರುವ ಚೀನ-ಪಾಕಿಸ್ಥಾನ ಆರ್ಥಿಕ ಕಾರಿಡಾರ್ (ಸಿಪೆಕ್) ಮೂಲಕ ಭಾರತದ ಸಾರ್ವಭೌಮತೆ ವಿಷಯದಲ್ಲಿ ಮೂಗುತೂರಿಸುತ್ತಿದೆ, ಪರೋಕ್ಷವಾಗಿ ಈ ಭಾಗ ಪಾಕಿಸ್ಥಾನದ್ದು ಎಂದು ಬಿಂಬಿಸುತ್ತಿದೆ ಎಂಬ ಕಾರಣಕ್ಕೆ ಈ ಸಮ್ಮೇಳದಲ್ಲಿ ಭಾಗಿಯಾಗಲು ಭಾರತ ಸ್ಪಷ್ಟವಾಗಿ ನಿರಾಕರಿಸಿದೆ.
ಆದರೆ ಭಾರತದ ನಿರಾಕರಣೆಯನ್ನು ಪೂರ್ಣವಾಗಿ ಒಪ್ಪಿಕೊಳ್ಳಲು ಸಿದ್ಧವಿಲ್ಲದ ಚೀನ ದೇಶ, ಭಾರತದ ನಾಯಕರು ಭಾಗಿಯಾಗದೇ ಇರಬಹುದು. ಆದರೆ ಅಲ್ಲಿನ ತಜ್ಞರು ಈ ಸಭೆಯಲ್ಲಿ ಭಾಗಿಯಾಗುತ್ತಿದ್ದಾರೆ ಎಂದು ಚೀನದ ವಿದೇಶಾಂಗ ಸಚಿವ ವಾಂಗ್ ಇ ಹೇಳಿದ್ದಾರೆ. ಸಭೆಯಲ್ಲಿ ಭಾಗಿಯಾಗಲ್ಲ ಎಂಬ ಭಾರತದ ಹೇಳಿಕೆ ಜೊತೆಗೆ ವಿವಿಧ ಪಾಶ್ಚಾತ್ಯ ರಾಷ್ಟ್ರಗಳೂ ಭಾಗಿಯಾಗಲ್ಲ ಎಂದು ಹೇಳಿದ್ದವು. ಆದರೆ ಕೊನೆ ಕ್ಷಣದಲ್ಲಿ ಅವುಗಳು ಚೀನದ ಒತ್ತಡದ ಮೇರೆಗೆ ತಮ್ಮ ಪ್ರತಿನಿಧಿಗಳನ್ನು ಕಳಿಸಲು ಒಪ್ಪಿಕೊಂಡಿವೆ. ಚೀನದ ಸಾಮ್ರಾಜ್ಯಶಾಹಿ ಧೋರಣೆಗೆ ಹಿಂದಿನಿಂದಲೂ ವಿರೋಧಿಸಿಕೊಂಡು ಬಂದಿದ್ದ ಜಪಾನ್ ಕೂಡ ಪ್ರತಿನಿಧಿ ಕಳಿಸಲು ತೀರ್ಮಾನಿಸಿದೆ. ಇನ್ನು ಒಬಿಒಆರ್ ಮೂಲಕ ಚೀನ ಅಧ್ಯಕ್ಷ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚೀನವನ್ನು ಪ್ರಮುಖ ಸ್ಥಾನದಲ್ಲಿ ನಿಲ್ಲಿಸುವುದರ ಜೊತೆಗೆ ದೇಶದಲ್ಲಿ ಇನ್ನೊಂದು ಅವಧಿಗೆ ಮರು ಆಯ್ಕೆಗೆ ಪರೋಕ್ಷಧಿವಾಗಿ ಯತ್ನಿಸುತ್ತಿದ್ದಾರೆ ಎಂಬ ಮಾತುಗಳಿವೆ.
– ಎಷ್ಟು ದೇಶಗಳು ಭಾಗಿಯಾಗುತ್ತವೆ?
ಚೀನದ ಪ್ರಕಾರ ಈ ಯೋಜನೆಯಲ್ಲಿ ಭಾರತವೂ ಸೇರಿದಂತೆ ಸುಮಾರು 68 ದೇಶಗಳು ಭಾಗಿಯಾಗುತ್ತವೆ. ಆದರೆ ಭಾಗವಹಿಸುತ್ತಿರುವ ಬಹುತೇಕ ದೇಶಗಳು ಪ್ರತಿನಿಧಿಗಳನ್ನು ಕಳುಹಿಸಿದ್ದರೆ ಪಾಕಿಸ್ಥಾನದಿಂದ ಮಾತ್ರ ಸ್ವತಃ ಪ್ರಧಾನಿಯೇ ತೆರಳಿದ್ದಾರೆ. ಅದೂ ನಾಲ್ವರು ಮುಖ್ಯಮಂತ್ರಿಗಳುಳ್ಳ ನಿಯೋಗವು ಚೀನಗೆ ತೆರಳಿದೆ.
– ಯಾರಿಗೆ ಹೆಚ್ಚು ಪ್ರಯೋಜನ? ಚೀನಕ್ಕೋ ಬೇರೆ ದೇಶಗಳಿಗೋ?
ಪರಿಣಿತರ ಪ್ರಕಾರ ಚೀನ ತನ್ನ ಕೈಗಾರಿಕೆಗಳು, ರಫ¤ನ್ನು ಜಗತ್ತಿನಾದ್ಯಂತ ವಿಸ್ತರಿಸಲು ಮಾಡಿದ ಒಂದು ಐಡಿಯಾ ಎನ್ನಲಾಗುತ್ತಿದೆ. ಮತ್ತೂಂದೆಧಿಡೆಯಲ್ಲಿ ಒಬಿಒಆರ್‌ನಿಂದ ದೇಶ ದೇಶಗಳ ನಡುವೆ ಮತ್ತಷ್ಟು ಸಂಪರ್ಕ ಏರ್ಪಡಲಿದ್ದು, ಒಪ್ಪಂದದಲ್ಲಿ ಭಾಗಿಯಾಧಿಗುವ ದೇಶಗಳ ಮಧ್ಯೆ ರಸ್ತೆ, ರೈಲು, ಬಂದರು ಸೇರಿದಂತೆ ಮೂಲ ಸೌಕರ್ಯಗಳ ಅಭಿವೃದ್ಧಿ, ಆಮದು-ರಫ್ತು ಹೆಚ್ಚಳಕ್ಕೆ ಕಾರಣವಾಗಲಿದೆ ಎನ್ನಲಾಗಿದೆ.
– ಕೇವಲ ಆರ್ಥಿಕಾಭಿವೃದ್ಧಿ ಉದ್ದೇಶವೇ?
ಒಬಿಒಆರ್ ಆರ್ಥಿಕಾಭಿವೃದ್ಧಿಯ ಉದ್ದೇಶದ್ದೂ ಎಂದು ಚೀನ ಹೇಳುತ್ತಿದ್ದರೂ, ಚೀನದ ನರಿ ಬುದ್ಧಿ ಬಗ್ಗೆ ಚೆನ್ನಾಗಿಗೊತ್ತಿರುವ ಭಾರತ, ಜಪಾನ್, ವಿಯೆಟ್ನಾಂ, ಅಮೆರಿಕ ಇತ್ಯಾದಿ ದೇಶಗಳು ಇದನ್ನು ಸಂಪೂರ್ಣವಾಗಿ ಒಪ್ಪಲು ತಯಾರಿಲ್ಲ. ಚೀನ ಈ ಯೋಜನೆ ಮೂಲಕ ಗುಪ್ತ ಮಿಲಿಟರಿ ಅಜೆಂಡಾವನ್ನು ಸ್ಥಾಪಿಸುವ ಸಾಧ್ಯತೆ ಇದೆ. ಒಬಿಒಆರ್ ಯೋಜನೆಯಲ್ಲಿ ಭಾರೀ ಪ್ರಮಾಣದಲ್ಲಿ ಮೂಲಸೌಕರ್ಯ ಅಭಿವೃದ್ಧಿ ನಡೆಯಲಿದ್ದು, ಈ ವೇಳೆ ಚೀನ ಏಷ್ಯಾ, ಆಫ್ರಿಕಾಗಳಲ್ಲಿ ತನ್ನ ಮಿಲಿಟರಿಯನ್ನೂ ಈ ನೆವದಲ್ಲಿ ನಿಯೋಜಿಸುವ ಮೂಲಕ ಇಡೀ ಪ್ರದೇಶದಲ್ಲಿ ತನ್ನ ಆಧಿಪತ್ಯ ಸ್ಥಾಪಿಸಲು ಹವಣಿಸಲಿದೆ ಎಂದು ಶಂಕಿಸಲಾಗಿದೆ. ಅಲ್ಲದೇ ಯೋಜನೆಯಲ್ಲಿ ಭಾಗಿಯಾಗಿ, ಬಳಿಕ ಹಣ ಮರುಪಾವತಿಗೆ ಸಾಧ್ಯವಾಗದೇ ಇದ್ದ ದೇಶಗಳನ್ನು ತನ್ನ ಕೈಯಾಳಾಗಿಸುವ, ಆರ್ಥಿಕ ಗುಲಾಮಗಿರಿಗೆ ನೂಕುವ ಸಾಧ್ಯತೆ ಇದೆ ಎಂದೂ ಹೇಳಲಾಗಿದೆ.
ಏನಿದು ಒಬಿಒಆರ್?
ಚೀನ ಅಧ್ಯಕ್ಷ ಕ್ಸಿಜಿಂಗ್‌ಪಿಂಗ್ ಅವರ ಮಹತ್ವಾಕಾಂಕ್ಷಿ ಯೋಜನೆ “ಒನ್ ಬೆಲ್ಟ್ ಒನ್ ರೋಡ್’. ಮಧ್ಯಯುಗ ದಲ್ಲಿ ಏಷ್ಯಾ, ಯುರೋಪ್, ಆಫ್ರಿಕಾ ಭಾಗದಲ್ಲಿ ಅಸ್ತಿತ್ವದಲ್ಲಿದ್ದ ವ್ಯಾಪಾರ ಮಾರ್ಗವನ್ನು ಸುಧಾರಿಸುವುದು, ಜಲ, ನೆಲ ಮಾರ್ಗಗಳ ಮೂಲಕ ಸಂಪರ್ಕ ಸುಧಾರಣೆ, ಆರ್ಥಿಕ ಕಾರಿಡಾರ್‌ಗಳನ್ನು ಸ್ಥಾಪಿಸುವುದು ಇದರ ಉದ್ದೇಶ. ಈ ಯೋಜನೆ ಯಿಂದ 440 ಕೋಟಿ ಜನರಿಗೆ ಪ್ರಯೋಜನವಾಗಲಿದೆ ಎನ್ನಲಾಗಿದೆ. ಈ ಯೋಜನೆಗೆ 64 ಲಕ್ಷ ಕೋಟಿ ರೂ.ಗಳನ್ನು ವಿನಿಯೋಗಿಸುವುದಾಗಿ ಚೀನ ಹೇಳಿದೆ.
ಭಾರತ ಯಾಕೆ ಭಾಗಿಯಾಗುತ್ತಿಲ್ಲ?
ಪ್ರಮುಖವಾಗಿ ಒಬಿಒಆರ್ ಯೋಜನೆಯಡಿ ಚೀನ ಈಗಾಗಲೇ ಚೀನ-ಪಾಕ್ ಆರ್ಥಿಕ ಕಾರಿಡಾರ್ (ಸಿಪೆಕ್) ಯೋಜನೆಯನ್ನು ಒಳಗೊಂಡಿದೆ. 3 ಸಾವಿರ ಕಿ.ಮೀ. ವಿಸ್ತಾರದ ಈ ಯೋಜನೆ ಪಾಕ್‌ನ ಗÌದಾರ್ ಬಂದರಿಂದ ಚೀನದ ಕ್ಸಿನ್‌ಜಿಯಾಂಗ್ ಪ್ರಾಂತ್ಯವನ್ನು ಸಂಪರ್ಕಿಸುತ್ತದೆ. ಪಾಕ್ ಆಕ್ರಮಿತ ಕಾಶ್ಮೀರದ ಗಿಲಿYಟ್-ಬಾಲ್ಟಿಸ್ಥಾನ್ ಪ್ರಾಂತ್ಯದಲ್ಲಿ ಯೋಜನೆಯಡಿಯಲ್ಲಿ ಬರುವ ಹೆದ್ದಾರಿ ಹಾದು ಹೋಗುತ್ತದೆ. ಚೀನದಿಂದ ಅರಬ್ಬೀ ಸಮುದ್ರಕ್ಕೆ ನೇರ ದಾರಿ ಇದಾಗಿದೆ. ಚೀನ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಯೋಜನೆ ಮಾಡುವ ಮೂಲಕ ಭಾರತದ ಸಾರ್ವಭೌಮತೆ ಉಲ್ಲಂ ಸಿದೆ ಎಂಬುದು ಭಾರತದ ತಕರಾರು. ಹಿಂದಿನಿಂದಲೂ ಇದಕ್ಕೆ ಭಾರತದ ತೀವ್ರ ಆಕ್ಷೇಪವಿದೆ. ಜೊತೆಗೆ ಪಾಕ್‌ನ ಗÌದಾರ್ ಬಂದರನ್ನು ಚೀನ ತನ್ನ ಹಿಡಿತದಲ್ಲಿ ಇಡುವ ಮೂಲಕ ಈ ಭಾಗದಲ್ಲಿ ಮಿಲಿಟರಿ ಅಧಿಪತ್ಯಕ್ಕೂ ಮುಂದಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
America: ಪ್ರತೀಕಾರ- ಭಾರತದ ನಟೋರಿಯಸ್ ಡ್ರ*ಗ್ಸ್ ಸ್ಮಗ್ಲರ್ ಶೂಟೌಟ್ ನಲ್ಲಿ ಹ*ತ್ಯೆ
Ex-US President: ಅಮೆರಿಕದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಆಸ್ಪತ್ರೆಗೆ ದಾಖಲು
Revival: ಭಾರತಕ್ಕೆ ಬಾಂಗ್ಲಾದೇಶ ಸೆಡ್ಡು: ಪಾಕಿಸ್ಥಾನ ಜತೆ ವಹಿವಾಟಿಗೆ ಸಜ್ಜು!
White House; ಎಐ ಹಿರಿಯ ಸಲಹೆಗಾರರಾಗಿ ಭಾರತ ಮೂಲದ ವ್ಯಕ್ತಿ ನೇಮಕ
Syria ಮಾಜಿ ಅಧ್ಯಕ್ಷ ಅಸಾದ್‌ಗೆ ವಿಚ್ಛೇದನ ಕೊಡಲು ಪತ್ನಿ ಚಿಂತನೆ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಶ್ರೀಕೃಷ್ಣ ಮಠದಲ್ಲಿ ಡಿ.25ಕ್ಕೆ ನ್ಯಾಯಾಂಗದಲ್ಲಿ ಭಗವದ್ಗೀತೆ ಪ್ರಸ್ತುತತೆಯ ವಿಶೇಷ ಸಂವಾದ
New Appointment: ಐದು ರಾಜ್ಯಗಳಿಗೆ ಹೊಸ ರಾಜ್ಯಪಾಲರ ನೇಮಿಸಿದ ಕೇಂದ್ರ ಸರ್ಕಾರ
Derogatory Remark: ಧರ್ಮಸ್ಥಳದಲ್ಲಿ ಆಣೆ, ಪ್ರಮಾಣ ಮುಗಿದ ಕತೆ: ಸಿ.ಟಿ.ರವಿ
Police: ಬಾಂಗ್ಲಾದಿಂದ ಅಕ್ರಮ ವಲಸೆ: ಮುಂಬೈಯಲ್ಲಿ10,ದೆಹಲಿಯಲ್ಲಿ11 ಮಂದಿ ಸೆರೆ
Kashmir: 300 ಅಡಿ ಕಮರಿಗೆ ಸೇನಾ ವಾಹನ ಬಿದ್ದು 5 ಯೋಧರ ಸಾವು; ಹಲವರಿಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.