ನಿಮ್ಮ ವೈದ್ಯರು ಕೈ ತೊಳೆದುಕೊಳ್ಳುತ್ತಿದ್ದಾರೆಯೇ?


Team Udayavani, May 14, 2017, 12:29 PM IST

hand-washing-660.jpg

ಹಿಂದಿನ  ವಾರದಿಂದ-   ಎಚ್‌ಸಿಎಐಗಳ ವಿರುದ್ಧ ಅತ್ಯುತ್ತಮ ರೋಗಿ ಆರೈಕೆ ನೆರವು ಒದಗಿಸಲು ಯಾವುದೇ ಆಸ್ಪತ್ರೆ ಮಾಡಬೇಕಾದುದೇನು? ಪ್ರತೀ ಆಸ್ಪತ್ರೆಯೂ ಅತ್ಯುತ್ತಮ ರೋಗಿ ಆರೈಕೆ ನೆರವನ್ನು ಒದಗಿಸಲು ನಿಸ್ಸಂಶಯವಾಗಿ ಶಕ್ತಿಮೀರಿ ಶ್ರಮಿಸುತ್ತದೆ. ಆದರೂ ಜ್ಞಾನದ ಕೊರತೆ ಅಥವಾ ಮೂಲಸೌಕರ್ಯಗಳ ಕೊರತೆ ಅಥವಾ ಸಿಬಂದಿ ಕೊರತೆಯಿಂದಾಗಿ ಆಗೀಗ ಅವುಗಳು ಅಸಫ‌ಲವಾಗುವುದುಂಟು. ಪ್ರಾಮುಖ್ಯವಾಗಿ, ಬಹುತೇಕ (ಎಲ್ಲವೂ ಅಲ್ಲದಿದ್ದರೂ) ಎಚ್‌ಸಿಎಐಗಳನ್ನು ನಿಯಂತ್ರಿಸಬಹುದು; ಹೇಗೆಂದರೆ – 

-ಹಾಸಿಗೆಯ ಬದಿಯಲ್ಲಿ ಸಮರ್ಪಕ ಕೈಗಳ ನೈರ್ಮಲ್ಯ ಕ್ರಮಗಳನ್ನು ಅನುಸರಿಸಬೇಕು ಹಾಗೂ ದೇಹ ಪ್ರವೇಶಿಕೆಯ ಸಂದರ್ಭದಲ್ಲಿ ಪ್ರಾಥಮಿಕ ಮುನ್ನೆಚ್ಚರಿಕೆಗಳನ್ನು ಸರಿಯಾಗಿ ಅನುಸರಿಸಬೇಕು. 

-ಎಚ್‌ಸಿಎಐ ಅಪಾಯದ ಸ್ಥಳೀಯ ಕಾರಣಗಳನ್ನು ಗುರುತಿಸಿ, ತಡೆ ಕ್ರಮಗಳನ್ನು ತೆಗೆದುಕೊಳ್ಳಬೇಕು.

-ಸ್ಥಳೀಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ವರದಿ ಮಾಡುವಿಕೆ ಮತ್ತು ಸರ್ವೇಕ್ಷಣಾ ವ್ಯವಸ್ಥೆ ಇರಬೇಕು.

-ಮೈಕ್ರೊಬಯಾಲಜಿ ಪ್ರಯೋಗಾಲಯದ ಸಾಮರ್ಥ್ಯ ಸಹಿತ ಸಾಂಸ್ಥಿಕ ಮಟ್ಟದಲ್ಲಿ ಎಚ್‌ಸಿಎಐ ಸರ್ವೇಕ್ಷಣಾ ವ್ಯವಸ್ಥೆಗಳಿಗಾಗಿ ಸಂಪೂರ್ಣ ಸಂಪನ್ಮೂಲಗಳು ಹಾಗೂ ಕನಿಷ್ಟ ಪ್ರಾಥಮಿಕ ಸೌಲಭ್ಯಗಳು ಇರಬೇಕು. 

-ಸಿಬಂದಿಯ ಶಿಕ್ಷಣ ಮತ್ತು ಉತ್ತರದಾಯಿತ್ವ ಕಡ್ಡಾಯವಾಗಿರಬೇಕು.

-ಸರ್ವೇಕ್ಷಣಾ ವಿಧಿವಿಧಾನಗಳನ್ನು ಅಳವಡಿಸಿಕೊಳ್ಳಲು ವಾಸ್ತವ ಸ್ಥಿತಿಗತಿಯ ಆಧಾರದಲ್ಲಿ ಸಂಬಂಧಿ ಸಂಶೋಧನಾ ಚಟುವಟಿಕೆಗಳು ನಡೆಯಬೇಕು; ಎಚ್‌ಸಿಎಐ ವರದಿ ಮತ್ತು ನಿಯಂತ್ರಣ ವಿಚಾರದಲ್ಲಿ ರೋಗಿಗಳು ಹಾಗೂ ಅವರ ಕುಟುಂಬಗಳ ಒಳಗೊಳ್ಳುವಿಕೆಯ ಕುರಿತಾದ ಅಧ್ಯಯನವೂ ಇದರಲ್ಲಿ ಸೇರಿರಬಹುದು. 

ಎಚ್‌ಸಿಎಐ ತಡೆಗೆ ಕೈಗಳ 
ನೈರ್ಮಲ್ಯ ಯಾಕೆ 
ಅಷ್ಟೊಂದು ಮುಖ್ಯ?

ಕೈಗಳನ್ನು ತೊಳೆದುಕೊಳ್ಳುವುದು ಒಂದು “ನಾವೇ ಹಾಕಿಕೊಳ್ಳಬಹುದಾದ’ ಲಸಿಕೆಯಂತೆ – ಎಚ್‌ಸಿಎಐಗಳ ವಿರುದ್ಧ ಅದು ಅಪಾರವಾದ ರಕ್ಷಣೆಯನ್ನು ಒದಗಿಸುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯು ಶಿಫಾರಸು ಮಾಡಿರುವ ಆರು ಹೆಜ್ಜೆಗಳ ಮೂಲಕ ಪ್ರತಿಯೊಬ್ಬ ವೈದ್ಯನೂ ಪ್ರತಿಯೊಬ್ಬ ದಾದಿಯೂ ಕೈಗಳನ್ನು ತೊಳೆದುಕೊಳ್ಳುವ ವಿಧಿಯನ್ನು ಅನುಸರಿಸಲೇ ಬೇಕು- ರೋಗಿಗೆ ಚಿಕಿತ್ಸೆ ನೀಡುವುದಕ್ಕೆ ಮುನ್ನ, ಚಿಕಿತ್ಸೆ ನೀಡುವಾಗ (ಯಾವುದೇ ದೇಹಪ್ರವೇಶಿಕೆ ಕ್ರಮ ಅನುಸರಿಸುವುದಿದ್ದಲ್ಲಿ) ಹಾಗೂ ಚಿಕಿತ್ಸೆ ನೀಡಿದ ಬಳಿಕ – ಆಲ್ಕೊಹಾಲ್‌ ಹ್ಯಾಂಡ್‌ ರಬ್‌ ಮೂಲಕ ಹೀಗೆ ಕೈ ತೊಳೆಯುವುದನ್ನು ಒಂದು ಧಾರ್ಮಿಕ ಕಟ್ಟಳೆಯಂತೆ ಪ್ರತಿದಿನ ಅನುಸರಿಸಲೇಬೇಕು. ಎಚ್‌ಸಿಎಐಗಳ ಅಪಾಯ, ಹೊರೆ ಹೆಚ್ಚುತ್ತಿರುವುದರಿಂದ, ಅನಾರೋಗ್ಯಗಳು ಗಂಭೀರ ರೂಪ ತಾಳುತ್ತಿರುವಾಗ ಮತ್ತು ಚಿಕಿತ್ಸೆಗಳ ಸಂಕೀರ್ಣತೆ ಅಧಿಕವಾಗಿರುವುದರಿಂದ, ಇವೆಲ್ಲದರ ಜತೆಗೆ ಬಹು ಔಷಧಿ ನಿರೋಧಕತೆ ಹೊಂದಿರುವ ಸೂಕ್ಷ್ಮಜೀವಿಗಳ ಸೋಂಕು ಕೂಡ ತೀವ್ರವಾಗಿರುವುದರಿಂದ; ಕೈಗಳನ್ನು ತೊಳೆದುಕೊಳ್ಳುವಂತಹ ಸರಳ ಮತ್ತು ಕನಿಷ್ಟ ವೆಚ್ಚದ ಕ್ರಮವು ಸೋಂಕು ನಿಯಂತ್ರಣ ಚಟುವಟಿಕೆಗಳ ಪೈಕಿ ಅತ್ಯಂತ ಪ್ರಾಮುಖ್ಯವಾದ ಚಟುವಟಿಕೆಯಾಗಿ ಮನ್ನಣೆ ಗಳಿಸಿದೆ.
 
ವೈದ್ಯರು ಮತ್ತು ದಾದಿಯರ ಕೈಗಳಲ್ಲಿ ಅನೇಕ ರೋಗಕಾರಕ ಸೂಕ್ಷ್ಮಜೀವಿಗಳು ಆವಾಸಸ್ಥಾನ ಸ್ಥಾಪಿಸಿಕೊಂಡಿರುತ್ತವೆ. ಅವುಗಳಲ್ಲಿ ಬಹು ಔಷಧಿ ನಿರೋಧಕ ಎಸ್‌. ಆರೆಸ್‌ (ಎಂಆರ್‌ಎಸ್‌ಎ) ಮತ್ತು ಎಂಟೆರೊಕಾಕಸ್‌ (ವಿಆರ್‌ಇ), ಬಹು ಔಷಧಿ ನಿರೋಧಕ ಗ್ರಾಂ ನೆಗೆಟಿವ್‌ ಬ್ಯಾಕ್ಟೀರಿಯಾ, ಶಿಲೀಂಧ್ರ (ಕ್ಯಾಂಡಿಡಾ ಎಸ್‌ಪಿಪಿ) ಮತ್ತು ಕ್ಲೊಸ್ಟ್ರೀಡಿಯಂ ಡಿಫಿಕ್ಲೆ ಸೇರಿದ್ದು, ಇವು 150 ತಾಸುಗಳ ಕಾಲವೂ ಬದುಕಿರಬಲ್ಲವು. ಸಹಜ ಚರ್ಮದಿಂದ ಪ್ರತಿದಿನವೂ ಅಂದಾಜು 10 ಚರ್ಮದ ಎಪಿಥೇಲಿಯಲ್‌ ಜೀವಕೋಶಗಳು ಉದುರಿಬೀಳುತ್ತವೆ, ಇವುಗಳಲ್ಲಿ ಸಜೀವ ಸೂಕ್ಷ್ಮಜೀವಿಗಳು ಇರುತ್ತವೆ. ರೋಗಿಯ ಸುತ್ತಣ ಪರಿಸರದಲ್ಲಿ ನಿಲುವಂಗಿಗಳು, ಹಾಸಿಗೆ ವಸ್ತ್ರಗಳು, ಹಾಸಿಗೆ ಬದಿಯ ಪೀಠೊಪಕರಣಗಳು ಮತ್ತು ಇತರ ವಸ್ತುಗಳನ್ನು ಇವು ಮಲಿನಗೊಳಿಸಬಲ್ಲವು. ಕೈಗಳಲ್ಲಿ ರೋಗಕಾರಕ ಸೂಕ್ಷ್ಮಜೀವಿಗಳಿರುವ ಮಾಲಿನ್ಯ ಅತಿ ಹೆಚ್ಚು ವರದಿಯಾಗುವುದು ತೀವ್ರ ನಿಗಾ ವಿಭಾಗಗಳಿಂದ, ರೋಗಗಳು ಪರಸ್ಪರ ಪ್ರಸಾರವಾಗುವ ಅತಿಹೆಚ್ಚು ಪ್ರಕರಣಗಳು ವರದಿಯಾಗುವುದೂ ಇಲ್ಲಿಂದಲೇ. 

ರಕ್ತದೊತ್ತಡವನ್ನು ಅಳೆಯುವಂತಹ “ಶುದ್ಧ’ ಪ್ರಕ್ರಿಯೆ, ರೋಗಿಯ ಕೊಠಡಿಯಲ್ಲಿರುವ ವಸ್ತುಗಳನ್ನು ಸ್ಪರ್ಶಿಸುವುದು ಅಥವಾ ರೋಗಿಯ ಚರ್ಮವನ್ನು ಸ್ಪರ್ಶಿಸುವಂತಹ ನಗಣ್ಯ ಕ್ರಿಯೆಗಳಿಂದಲೂ ಕೈಗಳು ಸೂಕ್ಷ್ಮಜೀವಿಗಳಿಂದ ಮಲಿನವಾಗಬಲ್ಲವು. ಕೈಗಳಷ್ಟೇ ಅಲ್ಲದೆ, ವೈದ್ಯರ ಏಪ್ರನ್‌, ಮೊಬೈಲ್‌ ಫೋನ್‌, ಟಿಪ್ಪಣಿ ಪುಸ್ತಕ ಮತ್ತು ಸ್ಟೆತೊಸ್ಕೋಪ್‌ ಕೂಡ ಸೋಂಕುಕಾರಕ ಸೂಕ್ಷ್ಮಜೀವಿಗಳನ್ನು ಒಬ್ಬ ರೋಗಿಯಿಂದ ಇನ್ನೊಬ್ಬರಿಗೆ ಪ್ರಸಾರ ಮಾಡುವುದು ಈಗಾಗಲೇ ಸಾಬೀತಾಗಿದೆ. 

ಆಸ್ಪತ್ರೆಗಳಲ್ಲಿ ಕೆಲಸ ಮಾಡುವ ವೈದ್ಯರು ಮತ್ತು ದಾದಿಯರ ಕೈಗಳಲ್ಲಿ ಕಾಣಿಸಿಕೊಳ್ಳುವ ಬಹು ಔಷಧ ನಿರೋಧಕ ಸೂಕ್ಷ್ಮ ಜೀವಿಗಳ ಪ್ರಸಾರವನ್ನು ಕೈಗಳನ್ನು ತೊಳೆದುಕೊಳ್ಳುವುದು ನಿವಾರಿಸುತ್ತದೆ. ತೀವ್ರ ಅನಾರೋಗ್ಯ ಸ್ಥಿತಿಯ ರೋಗಿ ಗಳನ್ನು ಹೊಂದಿರುವ ತೀವ್ರ ನಿಗಾ ಘಟಕಗಳಂತಹ ಹೆಚ್ಚು ಸೋಂಕು ಅಪಾಯದ ಸರಾಸರಿ ಹೊಂದಿರುವ ಸ್ಥಳಗಳಲ್ಲಿಯೂ ಕೈಗಳನ್ನು ತೊಳೆದು ಕೊಳ್ಳುವಿಕೆ ಸೋಂಕು ಸಂಬಂಧಿ ಪರಿಣಾಮಗಳನ್ನು ತಗ್ಗಿಸುವುದು ಶ್ರುತಪಟ್ಟಿದೆ. 

ನಿಮ್ಮ ವೈದ್ಯರು ಯಾವಾಗ ಕೈಗಳನ್ನು ತೊಳೆದುಕೊಳ್ಳಬೇಕು?
ಮುಂದಿನ ಬಾರಿ ನೀವು ನಿಮ್ಮ ವೈದ್ಯರ ಬಳಿಗೆ ಹೋದಾಗ ಅವರು ವಿಶ್ವ ಆರೋಗ್ಯ ಸಂಸ್ಥೆಯು ಶಿಫಾರಸು ಮಾಡಿರುವ ಈ ಕೆಳಗಿನ ಕೈಗಳನ್ನು ತೊಳೆಯುವ ಕ್ರಮಗಳನ್ನು ಅನುಸರಿಸುತ್ತಿದ್ದಾರೆಯೇ ಎಂದು ಗಮನಿಸಿ:
1) ನಿಮ್ಮನ್ನು ಸ್ಪರ್ಶಿಸುವುದಕ್ಕೆ ಮುನ್ನ (ರೋಗಿಯ ನೇರ ಸಂಪರ್ಕಕ್ಕೆ ಮುನ್ನ)
2) ಸೆಂಟ್ರಲ್‌ ಇಂಟ್ರಾವಾಸ್ಕಾಲಾರ್‌ ಕೆಥೆಟರ್‌ ಅಳವಡಿಸುವಾಗ ಸ್ಟೆರೈಲ್‌ ಕೈಗವಸುಗಳನ್ನು ಧರಿಸುವುದಕ್ಕೆ ಮುನ್ನ (ಇಂಟ್ರಾವಾಸ್ಕಾಲಾರ್‌ ಕೆಥೆಟರನ್ನು ರೋಗಿಯ ಕುತ್ತಿಗೆಯ ರಕ್ತನಾಳಕ್ಕೆ ಅಳವಡಿಸುವುದಕ್ಕೆ ವೈದ್ಯರು ಕೈಗವಸುಗಳನ್ನು ಧರಿಸಬೇಕಾಗಬಹುದು, ಆದರೆ ಅದಕ್ಕೆ ಮುನ್ನ ಕೈ ತೊಳೆದುಕೊಳ್ಳಬೇಕು.)
3) ಯಾವುದೇ ದೊಡ್ಡ ಶಸ್ತ್ರಕ್ರಿಯೆಗಳ ಅಗತ್ಯವಿಲ್ಲದೆ ಬಾಹ್ಯ ಪರಿಸರದಲ್ಲಿ ಅಥವಾ ವಾರ್ಡ್‌ನಲ್ಲಿಯೇ ನಡೆಸಬಹುದಾದ ಕ್ರಿಯೆಗಳಾದ ನಿಮ್ಮ ದೇಹದೊಳಕ್ಕೆ ಮೂತ್ರಾಂಗ ಕೆಥೆಟರ್‌, ಪೆರಿಫ‌Åಲ್‌ ವಾಸ್ಕಾಲಾರ್‌ ಕೆಥೆಟರ್‌ ಇತ್ಯಾದಿ ಯಾವುದೇ ಸಲಕರಣೆಗಳನ್ನು ಅಳವಡಿಸುವುದಕ್ಕೆ ಮುನ್ನ.
4) ತಪಾಸಣೆಗಾಗಿ ನಿಮ್ಮನ್ನು ಸ್ಪರ್ಶಿಸಿದ ಬಳಿಕ (ಉದಾಹರಣೆಗೆ, ನಾಡಿ ಅಥವಾ ರಕ್ತದೊತ್ತಡ ಪರೀಕ್ಷಿಸಿದ ಬಳಿಕ)
5) ನಿಮ್ಮಿಂದ ಅಥವಾ ಯಾವುದೇ ರೋಗಿಯಿಂದ ಹೊರಬಿದ್ದ ಯಾವುದೇ ದೇಹ ದ್ರವಗಳನ್ನು  ಅಥವಾ ವಿಸರ್ಜನೆಗಳನ್ನು, ಮ್ಯೂಕಸ್‌ ಮೆಂಬ್ರೇನ್‌ಗಳನ್ನು, ಛೇದಿತ ಚರ್ಮ (ಗಾಯ, ತರಚು, ಬಿರುಕು)ವನ್ನು ಮತ್ತು ಗಾಯಗಳ ಪಟ್ಟಿಯನ್ನು ಉದ್ದೇಶಪೂರ್ವಕವಲ್ಲದೆ ಸ್ಪರ್ಶಿಸಿದ ಬಳಿಕ
6) ನಿಮ್ಮ ಆಸುಪಾಸಿನಲ್ಲಿರುವ ವೈದ್ಯಕೀಯ ಸಲಕರಣೆ, ಮಂಚ, ಹಾಸಿಗೆ ವಸ್ತ್ರ ಇತ್ಯಾದಿ ಯಾವುದೇ ವಸ್ತು(ವೈದ್ಯಕೀಯ ಉಪಕರಣ ಸಹಿತ) ವನ್ನು ಸ್ಪರ್ಶಿಸಿದ ಬಳಿಕ
7) ಕೈಗವಸುಗಳನ್ನು ತೆಗೆದ ಬಳಿಕ – ನಿಮ್ಮನ್ನು ತಪಾಸಿಸಿದ ಮೇಲೆ ಮತ್ತು ಇನ್ನೊಬ್ಬ ರೋಗಿಯನ್ನು ಪರೀಕ್ಷಿಸುವುದಕ್ಕೆ ಮುನ್ನ. ಈ ಕ್ರಮಗಳ ಅನುಸರಣೆ ತಪ್ಪಿರುವುದು ನಿಮ್ಮ ಗಮನಕ್ಕೆ ಬಂದರೆ, ಕೈಗಳನ್ನು ತೊಳೆದುಕೊಳ್ಳುವಂತೆ ನೀವು ನಿಮ್ಮ ವೈದ್ಯರನ್ನು ಕೇಳಬಹುದು. ಅದು ನಿಮ್ಮ ಕರ್ತವ್ಯ ಮತ್ತು ಹಾಗೆ ಮಾಡುವುದರಿಂದ ನೀವು ನಿಮ್ಮನ್ನು, ಇತರ ರೋಗಿಗಳನ್ನು ಹಾಗೂ ಸ್ವಯಂ ವೈದ್ಯರನ್ನು ಕೂಡ ಸೋಂಕುಗಳಿಂದ ರಕ್ಷಿಸಿಕೊಳ್ಳುತ್ತೀರಿ.

ವಿಶ್ವ ಕರ ನೈರ್ಮಲ್ಯ ದಿನ – ಮೇ 5
ಪ್ರತಿವರ್ಷ ಮೇ 5ರಂದು ವಿಶ್ವ ಕರ ನೈರ್ಮಲ್ಯ ದಿನವನ್ನು ಆಚರಿಸಲಾಗುತ್ತದೆ. ಈ ವರ್ಷದ ಕರ ನೈರ್ಮಲ್ಯ ದಿನದ ಘೋಷಣೆ “”ಆ್ಯಂಟಿ ಬಯಾಟಿಕ್‌ ಪ್ರತಿರಕ್ಷಣೆಯ ವಿರುದ್ಧ ಹೋರಾಟ – ಅದು ನಿಮ್ಮ ಕೈಯಲ್ಲಿದೆ”. ವಿಶ್ವ ಆರೋಗ್ಯ ಸಂಸ್ಥೆಯು ವಿಶ್ವ ಕರ ನೈರ್ಮಲ್ಯ ದಿನವನ್ನು ಸಂಯೋಜಿಸಿದೆ. ಆರೋಗ್ಯ ಸಂಸ್ಥಾಪನೆಗಳಲ್ಲಿ ಆ್ಯಂಟಿಬಯಾಟಿಕ್‌ ಪ್ರತಿರಕ್ಷಣೆಯ ಪ್ರಸರಣವನ್ನು ತಡೆಯುವುದು ಮತ್ತು ಆರೋಗ್ಯ ಸೇವಾ ಸಂಬಂಧಿ ಸೋಂಕುಗಳನ್ನು ಕಡಿಮೆ ಮಾಡುವುದು ಕರ ನೈರ್ಮಲ್ಯ ದಿನದ ಉದ್ದೇಶವಾಗಿದೆ. 

“”ಆ್ಯಂಟಿಬಯಾಟಿಕ್‌ ಪ್ರತಿರಕ್ಷಣೆಯನ್ನು ತಡೆಯುವ ಗುರಿ ಹೊಂದಿರುವ ಪರಿಣಾಮಕಾರಿ ಸೋಂಕು ತಡೆ ಕಾರ್ಯಕ್ರಮದ ತಿರುಳು ಕೈಗಳ ನೈರ್ಮಲ್ಯ” ಅನ್ನುತ್ತಾರೆ ಆಯೋಗದ ಸೋಂಕು ತಡೆ ಮತ್ತು ನಿಯಂತ್ರಣ ಕಾರ್ಯಕ್ರಮದ ವೈದ್ಯಕೀಯ ಮುಖ್ಯಸ್ಥ ಡಾ| ಸ್ಯಾಲಿ ರಾಬರ್ಟ್ಸ್. “ಉದ್ಭವಿಸುವ ಯಾವುದೇ ಸನ್ನಿವೇಶದಲ್ಲಿ; ಬಲಿಷ್ಠವಾದ, ಪರಿಣಾಮಕಾರಿ ಆರೋಗ್ಯ ವ್ಯವಸ್ಥೆಯನ್ನು ಕಟ್ಟುವುದಕ್ಕೆ ಕೈಗಳ ಉತ್ತಮ ನೈರ್ಮಲ್ಯ ಅತ್ಯಂತ ನಿರ್ಣಾಯಕವಾಗಿದೆ.’

ಈ ವರ್ಷ ವಿಶ್ವ ಆರೋಗ್ಯ ಸಂಸ್ಥೆಯು ಆರೋಗ್ಯ ಸೇವಾ ವ್ಯವಸ್ಥೆಯ ವಿವಿಧ ಸದಸ್ಯರುಗಳಿಗೆ ನಿರ್ದಿಷ್ಟ ಕರೆಗಳನ್ನು ನೀಡಿದೆ:

-ಆರೋಗ್ಯ ಸೇವಾ ಕಾರ್ಯಕರ್ತರು: “ಸೂಕ್ತ ಸಮಯಗಳಲ್ಲಿ ನಿಮ್ಮ ಕೈಗಳನ್ನು ಶುದ್ಧಗೊಳಿಸಿಕೊಳ್ಳಿರಿ ಮತ್ತು ಆ್ಯಂಟಿಬಯಾಟಿಕ್‌ ಪ್ರತಿರಕ್ಷಣೆಯ ಪ್ರಸರಣವನ್ನು ತಡೆಯಿರಿ’.

-ಮುಖ್ಯ ಕಾರ್ಯನಿರ್ವಾಹಕರು: “ಪ್ರತಿರಕ್ಷಣೆ ಸಮರ್ಥ ಸೋಂಕುಗಳಿಂದ ನಿಮ್ಮ ರೋಗಿಗಳನ್ನು ರಕ್ಷಿಸಲು ಸೋಂಕು ತಡೆ ಮತ್ತು ನಿಯಂತ್ರಣ ಕಾರ್ಯಕ್ರಮವನ್ನು ವರ್ಷದುದ್ದಕ್ಕೂ ಮುನ್ನಡೆಸಿರಿ’.

-ನೀತಿ ರೂಪಕರು: “ಸೋಂಕು ತಡೆ ಮತ್ತು ಕೈಗಳ ನೈರ್ಮಲ್ಯವನ್ನು ಒಂದು ರಾಷ್ಟ್ರೀಯ ಆದ್ಯತೆಯ ನೀತಿಯಾಗಿ ರೂಪಿಸಿಕೊಳ್ಳುವ ಮೂಲಕ ಆ್ಯಂಟಿಬಯಾಟಿಕ್‌ ಪ್ರತಿರಕ್ಷಣೆಯ ಪ್ರಸರಣವನ್ನು ತಡೆಯಿರಿ.’

ನೀವು ವೈದ್ಯರಾಗಿರಿ, ಮುಖ್ಯ ಕಾರ್ಯನಿರ್ವಾಹಕರಾಗಿರಿ, ನೀತಿ ರೂಪಕರಾಗಿರಿ ಅಥವಾ ಒಬ್ಬ ರೋಗಿಯಾಗಿರಿ; ಸೋಂಕುಗಳಿಂದ ನಿಮ್ಮ ಮತ್ತು ಇತರರ ಪ್ರಾಣಗಳನ್ನು ರಕ್ಷಿಸುವ ಮಹಾನ್‌ ಕಾರ್ಯದಲ್ಲಿ ನಿಮಗೂ ಒಂದು ಧ್ವನಿಯಿದೆ ಮತ್ತು ನಿಮಗೂ ಒಂದು ಹೊಣೆಗಾರಿಕೆಯಿದೆ. ನಿಮ್ಮ ಜೀವನದಲ್ಲಿ ನೀವು ಕೈಗಳ ನೈರ್ಮಲ್ಯವನ್ನು ಒಂದು ನಿಯಮಿತ ಅಭ್ಯಾಸವಾಗಿ ರೂಪಿಸಿಕೊಳ್ಳಬೇಕು ಹಾಗೂ ಆ ಮೂಲಕ ಈ ಜಗತ್ತನ್ನು ಭವಿಷ್ಯದ ಪೀಳಿಗೆಗಳಿಗೆ ಒಂದು ಸುಂದರ ಬದುಕಿನ ತಾಣವಾಗಿಸಲು ನೆರವಾಗಬೇಕು. 

ಗ್ರಂಥಋಣ: ಲೇಖನದಲ್ಲಿ ಬಳಸಲಾದ ಎಲ್ಲ ಮಾಹಿತಿಗಳನ್ನು ಡಬ್ಲ್ಯುಎಚ್‌ಒ ಬುಲೆಟಿನ್‌, ಸಿಡಿಸಿ ಪ್ರಕಾಶಿಕೆಗಳು ಮತ್ತು ಪತ್ರಿಕಾ ಹೇಳಿಕೆಗಳಂತಹ ವಿಶ್ವಸನೀಯ ಮೂಲಗಳಿಂದ ತೆಗೆದುಕೊಳ್ಳಲಾಗಿದೆ.

ಟಾಪ್ ನ್ಯೂಸ್

Dharwad: ಬಂದ್ ಹೆಸರಲ್ಲಿ ವ್ಯಾಪಾರಿಗೆ ಕಪಾಳಮೋಕ್ಷ?: ಕಾಲೇಜು ಪ್ರಾಧ್ಯಾಪಕರಿಗೆ ಅವಾಜ್

Dharwad: ಬಂದ್ ಹೆಸರಲ್ಲಿ ವ್ಯಾಪಾರಿಗೆ ಕಪಾಳಮೋಕ್ಷ?: ಕಾಲೇಜು ಪ್ರಾಧ್ಯಾಪಕರಿಗೆ ಅವಾಜ್

ಏನು ಧೈರ್ಯ..! ರೈಲು ಹಳಿ ಮೇಲೆ ಬಂದ ಸಿಂಹವನ್ನು ಸಾಕು ಪ್ರಾಣಿಯಂತೆ ಓಡಿಸಿದ ಅರಣ್ಯ ಸಿಬ್ಬಂದಿ

ಏನು ಧೈರ್ಯ..! ರೈಲು ಹಳಿ ಮೇಲೆ ಬಂದ ಸಿಂಹವನ್ನು ಸಾಕು ಪ್ರಾಣಿಯಂತೆ ಓಡಿಸಿದ ಅರಣ್ಯ ಸಿಬ್ಬಂದಿ

Team India; Bumrah meets Kiwi surgeon: Doubts over Champions Trophy?

Team India; ಕಿವೀಸ್‌ ಸರ್ಜನ್‌ ಭೇಟಿಯಾದ ಬುಮ್ರಾ: ಚಾಂಪಿಯನ್ಸ್‌ ಟ್ರೋಫಿಗೆ ಅನುಮಾನ?

Tirupati Tragedy: ಸಾವಿನ ಸಂಖ್ಯೆ ಹೆಚ್ಚಳ ಸಾಧ್ಯತೆ; ಪ್ರತ್ಯಕ್ಷದರ್ಶಿಗಳು ಹೇಳಿದ್ದೇನು?

Tirupati Tragedy: ಸಾವಿನ ಸಂಖ್ಯೆ ಹೆಚ್ಚಳ ಸಾಧ್ಯತೆ; ಪ್ರತ್ಯಕ್ಷದರ್ಶಿಗಳು ಹೇಳಿದ್ದೇನು?

BBK11: ನೀರು ತುಂಬಿದ ಪೆಟ್ಟಿಗೆಯಲ್ಲಿ ಮುಳುಗಿದ ಮಂಜು – ಮೋಕ್ಷಿತಾ; ಫಿನಾಲೆಗೆ ತೀವ್ರ ಪೈಪೋಟಿ

BBK11: ನೀರು ತುಂಬಿದ ಪೆಟ್ಟಿಗೆಯಲ್ಲಿ ಮುಳುಗಿದ ಮಂಜು – ಮೋಕ್ಷಿತಾ; ಫಿನಾಲೆಗೆ ತೀವ್ರ ಪೈಪೋಟಿ

Shimoga; ಮನೆಯಂಗಳದಿಂದ ನಾಯಿ ಹೊತ್ತೊಯ್ದ ಚಿರತೆ; ಸಿಸಿಕ್ಯಾಮರಾದಲ್ಲಿ ದೃಶ್ಯ ಸೆರೆ

Shimoga; ಮನೆಯಂಗಳದಿಂದ ನಾಯಿ ಹೊತ್ತೊಯ್ದ ಚಿರತೆ; ಸಿಸಿಕ್ಯಾಮರಾದಲ್ಲಿ ದೃಶ್ಯ ಸೆರೆ

Canada Court: ಹರ್ದೀಪ್‌ ನಿಜ್ಜರ್‌ ಹ*ತ್ಯೆ ಪ್ರಕರಣ: ನಾಲ್ವರು ಭಾರತೀಯರಿಗೆ ಜಾಮೀನು ಮಂಜೂರು

Canada Court:ಹರ್ದೀಪ್‌ ನಿಜ್ಜರ್‌ ಹ*ತ್ಯೆ ಪ್ರಕರಣ: ನಾಲ್ವರು ಭಾರತೀಯರಿಗೆ ಜಾಮೀನು ಮಂಜೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4(1

Snuff: ನಶ್ಯ ತಂದಿಟ್ಟ ಸಮಸ್ಯೆ

11-heart

Heart Rate Control: ಹೃದಯ ಬಡಿತದ ನಿಯಂತ್ರಣದಲ್ಲಿ ಆಧುನಿಕ ಹೃದಯ ಲಯ ಸಾಧನಗಳ ಅಗತ್ಯ ಪಾತ್ರ

10–Cosmetic-surgery

Cosmetic surgery:ಸೌಂದರ್ಯವರ್ಧಕ ಶಸ್ತ್ರಚಿಕಿತ್ಸೆ ಮತ್ತು ಭಾರತೀಯ ಜನಸಮುದಾಯದ ಮೇಲೆ ಪರಿಣಾಮ

9-health

Manipal ಪಾಯ್ಸನ್‌ ಇನ್‌ಫಾರ್ಮೇಶನ್‌ ಸೆಂಟರ್; ಸಮುದಾಯಕ್ಕೊಂದು ಉಪಕಾರಿ ಸೇವೆ

20-health

Bronchiolitis: ಮಕ್ಕಳಲ್ಲಿ ಬ್ರೊಂಕೊಲೈಟಿಸ್‌; ಹೆತ್ತವರು ತಿಳಿದಿರಬೇಕಾದ ಅಂಶಗಳು

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Dharwad: ಬಂದ್ ಹೆಸರಲ್ಲಿ ವ್ಯಾಪಾರಿಗೆ ಕಪಾಳಮೋಕ್ಷ?: ಕಾಲೇಜು ಪ್ರಾಧ್ಯಾಪಕರಿಗೆ ಅವಾಜ್

Dharwad: ಬಂದ್ ಹೆಸರಲ್ಲಿ ವ್ಯಾಪಾರಿಗೆ ಕಪಾಳಮೋಕ್ಷ?: ಕಾಲೇಜು ಪ್ರಾಧ್ಯಾಪಕರಿಗೆ ಅವಾಜ್

13-frndshp

Friendship: ಸ್ನೇಹವೇ ಸಂಪತ್ತು

davanage

ಸೇತುವೆ ನಿರ್ಮಾಣಕ್ಕೆ ಆಗ್ರಹಿಸಿ ರಸ್ತೆ ತಡೆದು ಹಳೇ ಕುಂದುವಾಡ ಗ್ರಾಮಸ್ಥರಿಂದ ಪ್ರತಿಭಟನೆ

12-uv-fusion

UV Fusion: ತೆಪ್ಪ ದ್ವೀಪದೂರಿಗೊಂದು ಸಂಪರ್ಕಸೇತು

ಏನು ಧೈರ್ಯ..! ರೈಲು ಹಳಿ ಮೇಲೆ ಬಂದ ಸಿಂಹವನ್ನು ಸಾಕು ಪ್ರಾಣಿಯಂತೆ ಓಡಿಸಿದ ಅರಣ್ಯ ಸಿಬ್ಬಂದಿ

ಏನು ಧೈರ್ಯ..! ರೈಲು ಹಳಿ ಮೇಲೆ ಬಂದ ಸಿಂಹವನ್ನು ಸಾಕು ಪ್ರಾಣಿಯಂತೆ ಓಡಿಸಿದ ಅರಣ್ಯ ಸಿಬ್ಬಂದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.