ಮಾನವ ಗುರಾಣಿ ಬಳಸಿದ ಆರ್ಮಿ ಆಫೀಸರ್‌ಗೆ ಕ್ಲೀನ್ ಚಿಟ್; ಪ್ರಶಂಸೆ
Team Udayavani, May 15, 2017, 3:56 PM IST
ಶ್ರೀನಗರ: ಕಳೆದ ಎ.9ರಂದು ಜಮ್ಮು ಕಾಶ್ಮೀರದ ಬಡಗಾಂವ್‌ನಲ್ಲಿ ಭಾರತೀಯ ಸೇನಾ ಪಡೆಯನ್ನು ಪ್ರತ್ಯೇಕತಾವಾದಿ ಪ್ರತಿಭಟನಕಾರರ ಕಲ್ಲೆಸೆತದಿಂದ ರಕ್ಷಿಸುವ ಸಲುವಾಗಿ ಸೇನೆಯ ಅಧಿಕಾರಿಯೋರ್ವರು ಯುವಕನೊಬ್ಬನನ್ನು ಗುರಾಣಿಯಂತೆ ಬಳಸಿ ಚಲಿಸುವ ಜೀಪಿಗೆ ಕಟ್ಟಿದ್ದ ಪ್ರಕರಣದ ವಿಚಾರಣೆಯನ್ನು ಕೈಗೊಂಡ ನ್ಯಾಯಾಲಯವು ಆರೋಪಿ ಅಧಿಕಾರಿಗೆ ಕ್ಲೀನ್ ಚಿಟ್ ನೀಡಿದೆಯಲ್ಲದೆ, ಯೋಧರ ಜೀವ ಉಳಿಸುವುದಕ್ಕಾಗಿ ಆತನು ಕಂಡುಕೊಂಡ ಈ ಉಪಾಯವನ್ನು ಬಹುವಾಗಿ ಪ್ರಶಂಸಿಸಿದೆ.
ಈ ಘಟನೆಯ ಬಗ್ಗೆ ಜಮ್ಮು ಕಾಶ್ಮೀರ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡದ್ದನ್ನು ಅನುಸರಿಸಿ ಸೇನೆಯು ಆರ್ಮಿ ಕೋರ್ಟ್ ಆಫ್ ಇನ್‌ಕ್ವಯರಿ ಮೂಲಕ ತನಿಖೆಗೆ ಆದೇಶಿಸಿತ್ತು.
ಪ್ರತಿಭಟನಕಾರರು ನಡೆಸುತ್ತಿದ್ದ ಕಲ್ಲು ತೂರಾಟದಿಂದ ಸಹೋದ್ಯೋಗಿ ಯೋಧರನ್ನು ರಕ್ಷಿಸುವುದಕ್ಕಾಗಿ ಮೇಜರ್ ನಿತಿನ್ ಗೋಗೋಲ್ ಕಂಡುಕೊಂಡ ಈ ಉಪಾಯವನ್ನು ಸೇನಾ ನ್ಯಾಯಾಲಯ ಪ್ರಶಂಸಿಸಿತಲ್ಲದೆ ಗೋಗೋಲ್‌ಗೆ ಕ್ಲೀನ್ ಚಿಟ್ ನೀಡಿತು ಎಂದು ಸೇನಾ ಮೂಲಗಳು ತಿಳಿಸಿವೆ.
ಮಾಜಿ ಮುಖ್ಯಮಂತ್ರಿ ಉಮರ್ ಅಬ್ದುಲ್ಲ ಸಹಿತ ಅನೇಕ ರಾಜಕಾರಣಿಗಳು ಸೇನೆಯು ಮಾನವ ಗುರಾಣಿ ಬಳಕೆಯ ಈ ಪ್ರಕರಣವನ್ನು ವ್ಯಾಪಕವಾಗಿ ಖಂಡಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.