ನೀರು-ನೆರಳಿಗೆ ನರಳಾಟ


Team Udayavani, May 15, 2017, 3:57 PM IST

gul1.jpg

ವಾಡಿ: ಈ ರೈಲು ನಿಲ್ದಾಣದಲ್ಲಿ ಎಕ್ಸ್‌ಪ್ರೆಸ್‌ ರೈಲುಗಳು ಸಲೀಸಾಗಿ ನಿಲ್ಲುತ್ತವೆ. ಆದರೆ ರೈಲಿಗಾಗಿ ಕಾಯುವ ಪ್ರಯಾಣಿಕರು ಮಾತ್ರ ನೆರಳು ನೀರಿಗಾಗಿ ಪರದಾಡುತ್ತಾರೆ. ಮೂಲ ಸೌಲಭ್ಯಗಳೆಲ್ಲವೂ ಗಗನಕುಸುಮವಾಗಿದ್ದು, ಇದು ಹೆಸರಿಗೆ ಮಾತ್ರ ರೈಲು ನಿಲ್ದಾಣ ಎನ್ನುವ ಹಣೆಪಟ್ಟಿ ಅಂಟಿಸಿಕೊಂಡಿದೆ. 

ಜಿಲ್ಲೆಯ ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದ ಹೊರ ವಲಯದಲ್ಲಿರುವ ಹಳಕರ್ಟಿ ರೈಲು ನಿಲ್ದಾಣ ಅಭಿವೃದ್ಧಿ ಕಾಣದ್ದಕ್ಕೆ ಹಲವು ದಶಕಗಳ ಇತಿಹಾಸವಿದೆ. ಬೀದರ, ಹೈದ್ರಾಬಾದ, ಚೆನ್ನೆ ಮತ್ತು ಬೆಂಗಳೂರಿಗೆ ಮಾರ್ಗ ಕಲ್ಪಿಸುವ ಈ ನಿಲ್ದಾಣದಲ್ಲಿ ಲಿಂಕ್‌ ಏಕ್ಸ್‌ಪ್ರೆಸ್‌, ರಾಯಲಸೀಮಾ ಸೇರಿದಂತೆ ಐದಾರು ರೈಲುಗಳು ನಿಲುಗಡೆ ಕಾಣುತ್ತವೆ.

ರೈಲು ಹತ್ತೂರಿಗೆ ಟಿಕೆಟ್‌ ವಿತರಣೆ ಮಾಡುವವರಾಗಲಿ ಅಥವಾ ರೈಲು ಇಳಿಯೋರಿಗೆ ಟಿಕೆಟ್‌ ಕೇಳಬೇಕಾದ ಟಿಟಿಇಗಳಾಗಲಿ ಇಲ್ಲಿ ಕಾಣಸಿಗುವುದಿಲ್ಲ. ಅಂದರೆ, ಇದೆಂತಹ ರೈಲು ನಿಲ್ದಾಣ ಎಂದು ನೀವು ಹುಬ್ಬೇರಿಸಿದರೂ ಅಚ್ಚರಿಯಿಲ್ಲ. ಬೇಕಾಬಿಟ್ಟಿ ಎರಡು ಪ್ಲಾಟ್‌ಫಾರ್ಮ್ ನಿರ್ಮಿಸಿ, ನಾಮಫಲಕ ಳವಡಿಸಿ ಜವಾಬ್ದಾರಿ ಕಳಚಿಕೊಂಡಿರುವ ರೈಲ್ವೆ ಅಧಿಕಾರಿಗಳು, ಕುಡಿಯುವ ನೀರು, ಆಸನ, ಸೂಕ್ತ ನೆರಳಿನ ವ್ಯವಸ್ಥೆ ಒದಗಿಸುವಲ್ಲಿ ನಿರ್ಲಕ್ಷé ವಹಿಸಿದ್ದಾರೆ.

ಹಂದಿ ಗೂಡಿನಂತೆ ಬಾಗಿಲಿಲ್ಲದ ನಿರೀಕ್ಷಣಾ ಕೋಣೆಯನ್ನು ಇತ್ತೀಚೆಗೆ ನಿರ್ಮಿಸಲಾಗಿದೆ. ಇದು ಪುಂಡ ಪೋಕರಿಗಳ ಅಡಗುದಾಣವಾಗಿ ಗಬ್ಬು ನಾರುತ್ತಿದೆ. ರೈಲು ನಿಲ್ದಾಣಕ್ಕೆ ಪ್ರವೇಶಿಸುವ ಪ್ರಯಾಣಿಕರಿಗೆ ಸೂಕ್ತವಾದ ರಸ್ತೆ ಸೌಕರ್ಯವಿಲ್ಲ. ಮುಳ್ಳುಕಂಟಿಗಳ ಮಧ್ಯೆಯಿರುವ ಕಾಲುದಾರಿಗೆ ರಾತ್ರಿ ಬೆಳಕಿನ ವ್ಯವಸ್ಥೆಯಿಲ್ಲ. ಹಗಲು ನಿರ್ಜನ ಪ್ರದೇಶದಂತಿದ್ದರೆ, ಹತ್ತಿರವೇ ಸ್ಮಶಾನ ಇರುವುದರಿಂದ ರಾತ್ರಿ ನಿಗೂಢ ತಾಣವಾಗಿ ಪರಿವರ್ತನೆಯಾಗುತ್ತದೆ. 

ಇತರ ರೈಲು ನಿಲ್ದಾಣಗಳಂತೆ ಅಭಿವೃದ್ಧಿ ವೇಗ ಹೆಚ್ಚಿಸಿಕೊಳ್ಳಬೇಕಿದ್ದ ಹಳಕರ್ಟಿ ರೈಲು ನಿಲ್ದಾಣ ರೈಲ್ವೆ ಇಲಾಖೆ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ನಿಷ್ಕಾಳಜಿಗೆ ಸಿಲುಕಿ ಮೌನವಾಗಿ ನಿಂತಿದೆ. ರಸ್ತೆ ಸೌಲಭ್ಯದ ಜತೆಗೆ ಇತರ ಮೂಲಸೌಕರ್ಯ ಒದಗಿಸುವ ಮೂಲಕ ನಿಲ್ದಾಣವನ್ನು ಅಭಿವೃದ್ಧಿಪಡಿಸಬೇಕು ಎಂಬುದು ಈ ಭಾಗದ ಜನರ ಆಗ್ರಹವಾಗಿದೆ.

* ಮಡಿವಾಳಪ್ಪ ಹೇರೂರ

ಟಾಪ್ ನ್ಯೂಸ್

Bangladeshದಲ್ಲಿ ಮುಂದುವರಿದ ಸಂಘರ್ಷ, ಮೂರು ಹಿಂದೂ ದೇವಾಲಯ ಧ್ವಂಸ

Bangladeshದಲ್ಲಿ ಮುಂದುವರಿದ ಸಂಘರ್ಷ, ಮೂರು ಹಿಂದೂ ದೇವಾಲಯ ಧ್ವಂಸ

BGT 2024-25: Australia’s leading pacer ruled out of Adelaide Test

BGT 2024-25: ಅಡಿಲೇಡ್‌ ಟೆಸ್ಟ್‌ ನಿಂದ ಹೊರಬಿದ್ದ ಆಸ್ಟ್ರೇಲಿಯಾದ ಪ್ರಮುಖ ವೇಗಿ

2-bng-crime

Bengaluru Crime: ಅತಿಯಾಗಿ ಮೊಬೈಲ್‌ ಬಳಸಿದಕ್ಕೆ ಪ್ರೇಯಸಿ ಹತ್ಯೆ?

Maharashtra; Gondia bus accident: PM announces compensation

Maharashtra; ಗೊಂಡಿಯಾ ಬಸ್‌ ಅಪಘಾತ: 11ಕ್ಕೇರಿದ ಸಾವಿನ ಸಂಖ್ಯೆ, ಪರಿಹಾರ ಘೋಷಿಸಿದ ಪ್ರಧಾನಿ

ಮುಳುಗಿದ 200 ಪ್ರಯಾಣಿಕರಿದ್ದ ಬೋಟ್;‌ ಮಹಿಳೆಯರು ಸೇರಿ ಹಲವರ ಸಾವು

Nigeria: ಮುಳುಗಿದ 200 ಪ್ರಯಾಣಿಕರಿದ್ದ ಬೋಟ್;‌ ಮಹಿಳೆಯರು ಸೇರಿ ಹಲವರ ಸಾವು

Man arrested for giving Coast Guard information to Pakistan for Rs 200

Gujarat: 200 ರೂ ಆಸೆಗಾಗಿ ಪಾಕಿಸ್ತಾನಕ್ಕೆ ನೌಕಾಪಡೆ ಮಾಹಿತಿ ನೀಡಿದಾತನ ಬಂಧನ

Dharwad: ಅಪ್ಪ ಪಡೆದ 1 ಲಕ್ಷ ರೂ. ಸಾಲಕ್ಕೆ ಮಗನ ಕಾಲಿಗೆ ಸರಪಳಿ!Dharwad: ಅಪ್ಪ ಪಡೆದ 1 ಲಕ್ಷ ರೂ. ಸಾಲಕ್ಕೆ ಮಗನ ಕಾಲಿಗೆ ಸರಪಳಿ!

Dharwad: ಅಪ್ಪ ಪಡೆದ 1 ಲಕ್ಷ ರೂ. ಸಾಲಕ್ಕೆ ಮಗನ ಕಾಲಿಗೆ ಸರಪಳಿ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kalaburagi: ಅನುಭವ ಮಂಟಪ ಸ್ಥಳ ಮರಳಿ ಪಡೆಯಲು ದೆಹಲಿ ಚಲೋ

Kalaburagi: ಅನುಭವ ಮಂಟಪ ಸ್ಥಳ ಮರಳಿ ಪಡೆಯಲು ದೆಹಲಿ ಚಲೋ

Kalaburagi: 6 acres of sugarcane crop caught fire after being struck by an electric wire

Kalaburagi: ವಿದ್ಯುತ್​ ತಂತಿ ತಗುಲಿ 6 ಎಕರೆ ಕಬ್ಬಿನ ಬೆಳೆ ಬೆಂಕಿಗಾಹುತಿ

ಜಮೀನು ವ್ಯಾಜ್ಯ: ಪೆಟ್ರೋಲ್ ಸುರಿದು ಕುಟುಂಬಸ್ಥರ ಸಾಮೂಹಿಕ ಹತ್ಯೆಗೆ ಯತ್ನ

Kalaburagi: ಜಮೀನು ವ್ಯಾಜ್ಯ; ಪೆಟ್ರೋಲ್ ಸುರಿದು ಕುಟುಂಬಸ್ಥರ ಸಾಮೂಹಿಕ ಹತ್ಯೆಗೆ ಯತ್ನ

1-kims

Kalaburagi; 36 ಗಂಟೆಯಲ್ಲಿ ತಾಯಿ ಮಡಿಲು ಸೇರಿದ ಮಗು: ಪೊಲೀಸರ ಭರ್ಜರಿ ಕಾರ್ಯಾಚರಣೆ

ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್‌ ಯತ್ನಾಳ್‌

ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್‌ ಯತ್ನಾಳ್‌

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

4-bng

Bengaluru: ಒಂಟಿ ಮಹಿಳೆಯರನ್ನು ಟಾರ್ಗೆಟ್‌ ಮಾಡಿ ಸರಗಳ್ಳತನ

Jalandhara movie review

Jalandhara Movie Review; ನದಿಯ ಸುಳಿಯಲ್ಲಿ ಸಾವಿನ ಸೆಲೆ

Bangladeshದಲ್ಲಿ ಮುಂದುವರಿದ ಸಂಘರ್ಷ, ಮೂರು ಹಿಂದೂ ದೇವಾಲಯ ಧ್ವಂಸ

Bangladeshದಲ್ಲಿ ಮುಂದುವರಿದ ಸಂಘರ್ಷ, ಮೂರು ಹಿಂದೂ ದೇವಾಲಯ ಧ್ವಂಸ

BGT 2024-25: Australia’s leading pacer ruled out of Adelaide Test

BGT 2024-25: ಅಡಿಲೇಡ್‌ ಟೆಸ್ಟ್‌ ನಿಂದ ಹೊರಬಿದ್ದ ಆಸ್ಟ್ರೇಲಿಯಾದ ಪ್ರಮುಖ ವೇಗಿ

3-bng

Bengaluru: ಮರಕ್ಕೆ ಬೈಕ್‌ ಡಿಕ್ಕಿ : 2 ವಿದ್ಯಾರ್ಥಿಗಳು ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.