ICJ ವಿಚಾರಣೆ : ಜಾಧವ್ ಗಲ್ಲು ಅಮಾನತಿಗೆ ಭಾರತ ಆಗ್ರಹ; ಪಾಕ್ ವಿರೋಧ
Team Udayavani, May 15, 2017, 7:08 PM IST
ದ ಹೇಗ್ : ‘ಭಾರತೀಯ ಬೇಹುಗಾರನೆಂದು ಪಾಕಿಸ್ಥಾನದಿಂದ ಆರೋಪಿಸಲ್ಪಟ್ಟು ಅಲ್ಲಿನ ಮಿಲಿಟರಿ ಕೋರ್ಟ್‌ನಿಂದ ಮರಣ ದಂಡನೆ ಶಿಕ್ಷೆಗೆ ಗುರಿಯಾಗಿರುವ ಕುಲಭೂಷಣ್ ಜಾಧವ್ ಅವರ ಗಲ್ಲು ಶಿಕ್ಷೆಯನ್ನು ಈ ಕೂಡಲೇ ಅಮಾನತುಗೊಳಿಸಬೇಕು; ಅಂತಾರಾಷ್ಟ್ರೀಯ ನ್ಯಾಯಾಲಯ ಈ ಕುರಿತ ವಿಚಾರಣೆಯನ್ನು ಮುಗಿಸುವ ಮೊದಲೇ ಜಾಧವ್‌ನನ್ನು ಗಲ್ಲಿಗೇರಿಸಿ ಮುಗಿಸಿಬಿಡುವ ಭೀತಿ ತನಗಿದೆ’ ಎಂದು ಭಾರತ ‘ದ ಹೇಗ್’ ನ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ತನ್ನ ವಾದವನ್ನು ಮಂಡಿಸಿದೆ.
ಇದಕ್ಕೆ ಉತ್ತರವಾಗಿ ತನ್ನ ಪ್ರತಿವಾದ ಮಂಡನೆ ಆರಂಭಿಸಿರುವ ಪಾಕಿಸ್ಥಾನ, “ಜಾಧವ್ ವಿಷಯದಲ್ಲಿ ಅಂತಾರಾಷ್ಟ್ರೀಯ ನ್ಯಾಯಾಲವನ್ನು ಭಾರತ ಸಂಪರ್ಕಿಸಿರುವುದು ಅನಗತ್ಯವೂ ಅನಪೇಕ್ಷಿತವೂ, ತಪ್ಪು ಗ್ರಹಿಕೆಯಿಂದ ಕೂಡಿರುವುದೂ ಆಗಿದೆ ಎಂದು ಖಂಡತುಂಡವಾಗಿ ಹೇಳಿದೆ.
ಭಾರತ ಈ ಮೊದಲಿನ ತನ್ನ ವಾದ ಮಂಡನೆಯಲ್ಲಿ “46ರ ಹರೆಯದ ಮಾಜಿ ಭಾರತೀಯ ನೌಕಾಪಡೆಯ ಅಧಿಕಾರಿ ಜಾಧವ್ ಅವರನ್ನು ಕಳೆದ ವರ್ಷ ಮಾರ್ಚ್ 3ರಂದು ಪಾಕಿಸ್ಥಾನ, ಇರಾನ್‌ನಲ್ಲಿ ಬಂಧಿಸಿತ್ತು. ಪಾಕ್ ಸೇನಾ ಕಸ್ಟಡಿಯಲ್ಲಿದ್ದ ಆತನಿಂದ ಬಲವಂತದ ತಪ್ಪೊಪ್ಪಿಗೆ ಹೇಳಿಕೆಯನ್ನು ಪಡೆದು ಅದರ ಆಧಾರದಲ್ಲಿ ಪಾಕಿಸ್ಥಾನದಲ್ಲಿ ಬೇಹುಗಾರಿಕೆ ನಡೆಸಿದ, ವಿಧ್ವಂಸಕ ಕೃತ್ಯಗಳನ್ನು ಆಯೋಜಿಸಿದ ಆರೋಪ ಹೊರಿಸಿ ಆತನಿಗೆ ಮರಣದಂಡನೆಯ ಶಿಕ್ಷೆಯನ್ನು ವಿಧಿಸಿತ್ತು’ ಎಂದು ಹೇಳಿತ್ತು.
“ಜಾಧವ್ ಅವರನ್ನು ಬಂಧಿಸಿದ ಬಗ್ಗೆ ಪಾಕಿಸ್ಥಾನ ಭಾರತಕ್ಕೆ ಯಾವುದೇ ಮಾಹಿತಿ ಕೊಟ್ಟಿರಲಿಲ್ಲ. ಆತನಿಗೆ ಪಾಕ್ ಮಿಲಿಟರಿ ಕೋರ್ಟ್ ಅಪಾರದರ್ಶಕ ವಿಚಾರಣೆ ನಡೆಸಿ ಮರಣದಂಡನೆ ವಿಧಿಸಿದೆ. ಭಾರತ ಹಲವು ಬಾರಿ ಕೋರಿ ಕೊಂಡರೂ ಪಾಕಿಸ್ಥಾನ, ಮಾನವ ಹಕ್ಕುಗಳಿಗೆ ಅನುಗುಣವಾಗಿ, ಆತನಿಗೆ ದೂತಾವಾಸ ಸಂಪರ್ಕಾವಕಾಶವನ್ನು ನೀಡಿಲ್ಲ. ಪಾಕಿಸ್ಥಾನದಲ್ಲಿ ಆತನ ಜೀವಕ್ಕೆ ಗಂಭೀರ ಅಪಾಯ ಇರುವುದನ್ನು ಮನಗಂಡು ಆತನಿಗೆ ತುರ್ತು ರಕ್ಷಣೆ ದೊರಕಿಸುವ ಉದ್ದೇಶದಿಂದ ಭಾರತ ಅಂತಾರಾಷ್ಟ್ರೀಯ ನ್ಯಾಯಾಲಯವನ್ನು ಸಂಪರ್ಕಿಸಿತು’ ಎಂದು ಭಾರತ ತನ್ನ ವಾದದಲ್ಲಿ ಹೇಳಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Elon Musk: ಭಾರತದಲ್ಲಿ 1 ದಿನದಲ್ಲಿ 6.4 ಕೋಟಿ ಮತ ಎಣಿಕೆ: ಉದ್ಯಮಿ ಮಸ್ಕ್ ಮೆಚ್ಚುಗೆ!
Sheikh Hasina, ಅದಾನಿ ನಡುವಿನ ಒಪ್ಪಂದದ ಪರಿಶೀಲನೆಗೆ ಸಮಿತಿ ರಚಿಸಿದ ಬಾಂಗ್ಲಾದೇಶ!
Nijjar ಹ*ತ್ಯೆಗೆ ಮೋದಿ ನಂಟು ವರದಿ: “ಗುಪ್ತಚರರ’ ವಿರುದ್ಧ ಟ್ರಾಡೊ ಗರಂ
Pakistan: ಪಾಕ್‌ನಲ್ಲಿ ಹಿಂಸಾಚಾರ; ಒಟ್ಟು 37 ಮಂದಿ ಸಾವು
Adani; ಆಸೀಸ್ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Mangaluru: ಅಕ್ರಮ ಮರಳುಗಾರಿಕೆ; ಪ್ರಶ್ನಿಸಿದ ಯುವಕನಿಗೆ ಗಂಭೀರ ಹಲ್ಲೆ
Congress Government: ಮೇಲ್ಮನೆ ನಾಮನಿರ್ದೇಶನ: ಕಾಂಗ್ರೆಸ್‌ನಲ್ಲಿ ಲಾಬಿ ಆರಂಭ
Maharashtra Election: ಅಘಾಡಿ ಸೋಲಿಗೆ ಉದ್ಧವ್,ಶರದ್ ಕಾರಣ: ಕಾಂಗ್ರೆಸ್
Mann Ki Baat: ಮೈಸೂರಿನ ‘ಅರ್ಲಿ ಬರ್ಡ್’ಗೆ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ
Amaravati: ತಿರುಪತಿಯಲ್ಲಿ ಮುರಿದಿದ್ದ ರಾಮನ ಬೆರಳು ದುರಸ್ತಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.