ಕಂಬದ ಮನೆ


Team Udayavani, May 16, 2017, 12:55 AM IST

Kambada-Mane.jpg

ಬೇಲೂರು, ಹಳೇಬೀಡು ದೇವಸ್ಥಾನಗಳಲ್ಲಿ ಕಂಡುಬರುವ ಹೊಯ್ಸಳ ಮಾದರಿಯ ಕಂಬಗಳನ್ನು ಆಗಿನಕಾಲದಲ್ಲೇ ತಿರುಗಿಸಿ ತಿರುಗಿಸಿ, ವಿವಿಧ ವಿನ್ಯಾಸಗಳಲ್ಲಿ ಕಡೆದು, ನಂತರ ಕನ್ನಡಿಯ ಹಾಗೆ ಹೊಳೆಯುವಂತೆ ಫಿನಿಷ್‌ ನೀಡಿರುವುದನ್ನು ಇಂದಿಗೂ ಕಾಣಬಹುದು. ಈಗ ನಮಗಿರುವ ಆಧುನಿಕ ಯಂತ್ರ-ತಂತ್ರಗಳು ಸುಮಾರು ಏಳುನೂರು ವರ್ಷಗಳ ಹಿಂದೆ ಇರದಿದ್ದರೂ ಆ ಕಾಲದ ಶಿಲ್ಪಿಗಳು, ಸರಳ ವಿಧಾನಗಳಿಂದ ನಾಲ್ಕಾರು ಟನ್‌ ತೂಗುವ ಕಲ್ಲಿನ ದಿಮ್ಮಿಗಳನ್ನು ಕೆತ್ತಿ, ಸುಂದರ ಕಂಬಗಳನ್ನಾಗಿ ಪರಿವರ್ತಿಸಿದ್ದಾರೆ. ಹೀಗೆ ತಿರುಗಿಸಿ ಕಡೆದು ಫಿನಿಶ್‌ ಮಾಡುವುದು ಮರದಲ್ಲಿ ಹೆಚ್ಚಿಗೆ ರೂಢಿಯಲ್ಲಿದ್ದರೂ, ಕಲ್ಲು ಹಾಗೂ ಲೋಹದಲ್ಲಿ, ಹಾಗೆಯೇ ಸಿಮೆಂಟ್‌ ಕಾಂಕ್ರಿಟ್‌ನಲ್ಲಿಯೂ ಮಾಡುವುದು ಎಲ್ಲ ಕಾಲದಲ್ಲೂ ಜನಪ್ರಿಯವಾಗಿದೆ. ಮನೆಯ ಅಂದ ಚೆಂದ ಹೆಚ್ಚಿಸಬೇಕೆನ್ನುವವರು ಇಂದಿಗೂ ಲೇತ್‌ಗಳಲ್ಲಿ ತಿರುಗಿಸಿ ತಯಾರಾದ ನಾಲ್ಕಾರು ಉರುಳುಗಳನ್ನು ಅಳವಡಿಸಿದರೆ, ಎಲಿವೇಷನ್‌ಗೆ ತನ್ನದೇ ಅದ ಸೊಬಗೊಂದು ಬರುತ್ತದೆ.

ಮರದಲ್ಲಿ ಲೇತ್‌ ವರ್ಕ್‌
ಸಣ್ಣ ಅಂದರೆ, ಸುಮಾರು ಒಂದು ಇಂಚಿಗೆ, ಒಂದು ಇಂಚಿನ ಮರದ ರಿಪೀಸಿನಿಂದ ಹಿಡಿದು ಮನೆಯ ಪೋರ್ಟಿಕೊ ಅಥವಾ ಪೂಜಾರೂಮಿಗೆಂದು ಒಂದು ಅಡಿಯವರೆಗಿನ ದಪ್ಪದ ಮರದಿಂದ ಲೇತ್‌ ವರ್ಕ್‌ ಮಾಡಿ ಬಳಸುವುದು ರೂಢಿಯಲ್ಲಿದೆ. ಈ ಹಿಂದೆ ಕಿಟಕಿಗಳಿಗೆ ಗಾಜನ್ನು ಬಳಸುವ ಮೊದಲು, ಸ್ವಲ್ಪ ಹತ್ತಿರ ಹತ್ತಿರ ಅಳವಡಿಸಿ, ಒಳಗಿನಿಂದ ಹೊರಗೆ ಕಾಣುವಹಾಗೆ, ಆದರೆ ಹೊರಗಿನಿಂದ ಒಳಗೆ ಅಷ್ಟು ಸ್ಪಷ್ಟವಾಗಿ ಕಾಣದ ರೀತಿಯಲ್ಲಿ ವಿನ್ಯಾಸ ಮಾಡುತ್ತಿದ್ದರು. ಇಂದಿಗೂ ನೀವು ಹಳೆಯ ಮನೆಗಳಲ್ಲಿ ಈ ರೀತಿಯಾಗಿ ಮರದ ಉರುಳುಗಳು ಬಳಕೆಯಲ್ಲಿರುವುದನ್ನು ಕಾಣಬಹುದು. ಕೆಲವೊಮ್ಮೆ ನಾಲ್ಕು ಅಡಿ ಕಿಟಕಿಯಲ್ಲಿ, ಕೆಳಗಿನ ಒಂದು ಅಡಿಗೆ ಲೇತ್‌ವರ್ಕ್‌ ಮಾಡಿದ ಮರದ ಉರುಳುಗಳನ್ನು ಜಾಲರಿಯಂತೆ ಬಳಸಿ, ಅದರ ಮೇಲೆ ಲೋಹದ ಸರಳುಗಳನ್ನು ಅಳವಡಿಸುವ ಪರಿಪಾಠವೂ ಇದ್ದಿತು.

ಮೆಟ್ಟಿಲು ರೇಲಿಂಗ್‌ಗಳಲ್ಲಿ ಮರದ ಉರುಳುಗಳು ಅತಿ ಹೆಚ್ಚು ಬಳಕೆಯಲ್ಲಿ ಇರುವುದನ್ನು ನಾವು ನೋಡಬಹುದು. ಇತ್ತೀಚಿನ ದಿನಗಳಲ್ಲಿ ಸ್ಟೈನ್‌ಲೆಸ್‌ ಸ್ಟೀಲ್‌ ರೇಲಿಂಗ್‌ಗಳ ಭರಾಟೆ ಹೆಚ್ಚಿದ್ದರೂ, ಮರದ ಸೌಂದರ್ಯ ವಿಶೇಷವಾಗಿರುವ ಕಾರಣ, ಕೆಲವನ್ನಾದರೂ ಮರದಲ್ಲಿ ಮಾಡುವ ರೂಢಿ ಈಗಲೂ ಇದೆ. ಮುಖ್ಯವಾಗಿ ಮೆಟ್ಟಿಲು ಶುರುವಾಗುವಾಗ, ಸ್ವಲ್ಪ ದಪ್ಪ ಎನ್ನಬಹುದಾದ ಅಂದರೆ ಸುಮಾರು ನಾಲ್ಕು ಇಂಚಿಗೆ ನಾಲ್ಕು ಇಂಚಿನಷ್ಟು ಇರುವ ಮರದಿಂದ ತಯಾರಾದ ಉರುಳುಗಳನ್ನು ಹಾಕಲಾಗುತ್ತದೆ. ಇಡೀ ರೇಲಿಂಗ್‌ ಲೋಹದಿಂದ ಮಾಡಿರುವುದಕ್ಕಿಂತ, ಸ್ವಲ್ಪ ಮರದ ಟಚ್‌ ನೀಡಿದರೆ, ಅದರ ಸೌಂದರ್ಯ ಇಮ್ಮಡಿಯಾಗುತ್ತದೆ ಎಂದು ವಿಶೇಷ ವಿನ್ಯಾಸ ಮಾಡಬಯಸುವವರು, ಕೆಲವಾದರೂ ಭಾಗವನ್ನು ಮರದಿಂದ ಮಾಡಿರುತ್ತಾರೆ.

ಪೋರ್ಟಿಕೋ ಎಲಿವೇಷನ್‌ಗೆಂದೇ ಸಾಂಪ್ರದಾಯಿಕ ನೋಟ ನೀಡಬಯಸುವವರು ಸುಮಾರು ಒಂಬತ್ತು ಇಂಚು ದಪ್ಪದ ಮರದ ದಿಮ್ಮಿಯಿಂದ ಸಾಮಾನ್ಯವಾಗಿ ಎರಡು ಕಂಬಗಳನ್ನು ಲೇತ್‌ಗೆ ಕೊಟ್ಟು ತಿರುಗಿಸಿ ಫಿನಿಶ್‌ ಮಾಡಿಸಿ, ಕಲ್ಲಿನ ಬೇಸ್‌ -‘ಬೋದೆಯ’ ಮೇಲೆ ಕೂರಿಸುತ್ತಾರೆ. ಕೆಲವೊಮ್ಮೆ ಮರದ ಮಧ್ಯಭಾಗವನ್ನು ಆರು ಇಂಚು ಕೊರೆದು, ಕಬ್ಬಿಣದ ಸರಳನ್ನು ಹುದುಗಿಸಿ, ಅದು ಒಂದು ಇಂಚು ಹೊರಗಿರುವಂತೆ ಮಾಡಿ, ಈ ಹೊರಚಾಚು ಕಲ್ಲಿನಲ್ಲಿ ಮಾಡಿದ ರಂಧ್ರಕ್ಕೆ ಸೇರಿಸಿ ಫಿಕ್ಸ್‌ ಮಾಡುವುದು ವಾಡಿಕೆ. ಈ ಮಾದರಿಯ ಕಂಬಗಳನ್ನು ಎಲ್ಲ ಮಾದರಿಯ ಎಲಿವೇಷನ್‌ಗಳಿಗೆ ಅಳವಡಿಸಬಹುದಾದರೂ, ಪೋರ್ಟಿಕೋಗೆ ಹೆಂಚು ಹಾಕ ಬಯಸುವವರಿಗೆ ಹೇಳಿ ಮಾಡಿಸಿದಂತಿರುತ್ತವೆ. ಪೂಜೆಯ ಕೋಣೆಗೆ ಕೆತ್ತನೆ ಮಾಡಿರುವ ಬಾಗಿಲುಗಳನ್ನು ವಿನ್ಯಾಸ ಮಾಡುವುದು ಜನಪ್ರಿಯವಾಗಿದೆ. ಇಂಥ ಸ್ಥಳಗಳಲ್ಲಿ ಮಾಮೂಲಿ ಚೌಕಟ್ಟಿಗೆ ಬದಲು ಲೇತ್‌ಗಳಲ್ಲಿ ತಿರುಗಿಸಿ ವಿನ್ಯಾಸ ಮಾಡಿದ ವಿವಿಧ ನಮೂನೆಯ ಕಂಬಗಳು ಹೆಚ್ಚು ಸೂಕ್ತ ಹಾಗೂ ಕೆತ್ತನೆ ಮಾಡಿದ ಬಾಗಿಲುಗಳ ಮೆರುಗನ್ನು ಹೆಚ್ಚಿಸುತ್ತವೆ.

ಪೂಜಾ ರೂಮಿಗೆ ಅಳವಡಿಸುವ ಕಂಬಗಳು ಪೂರ್ತಿಯಾಗಿ ಗುಂಡಗೆ ಇರಬೇಕು ಎಂದೇನೂ ಇಲ್ಲ. ಒಂದು ಕಂಬವನ್ನು ತಯಾರು ಮಾಡಿ, ಅದನ್ನು ಅರ್ಧಕ್ಕೆ ಕತ್ತರಿಸಿ, ಬಾಗಿಲಿನ ಎರಡೂ ಕಡೆಗೆ ಸಿಗಿಸಿದರೂ ಸುಂದರವಾಗಿ, ಸಣ್ಣ ದೇವಾಲಯವೇನೋ ಎಂಬಂತೆ ಕಂಡುಬರುತ್ತದೆ! ಈ ಹಿಂದೆ ಬಾಲ್ಕನಿಗಳಲ್ಲೂ ಮರದ ಉರುಳುಗಳನ್ನು ಹಾಕುವುದು ಸಾಮಾನ್ಯವಾಗಿದ್ದರೂ ಈಗ ಮರ ದುಬಾರಿ ಬಾಬತ್ತಿನ ವಿಷಯವಾದ ಕಾರಣ, ಅಷ್ಟೊಂದು ಬಳಕೆಯಲ್ಲಿ ಇಲ್ಲ. ಆದರೆ ನಿಮ್ಮ ಮನೆಗೆ ಎಲಿವೇಷನ್‌ನಲ್ಲಿ ಹೆಚ್ಚು ಟೈಲ್ಸ್‌ ಹಾಗೂ ಇತರೆ ಸಾಂಪ್ರದಾಯಿಕ ಎನ್ನಬಹುದಾದ ವಸ್ತುಗಳನ್ನು ಅಳವಡಿಸಿದ್ದರೆ, ರೇಲಿಂಗ್‌ಗಳಿಗೂ ಮರದ ನಿಲುವು ಉರುಳುಗಳನ್ನು ಬಳಸಬಹುದು. ಮರದಿಂದ ಮಾಡಿರುವ ಕಾರಣ ಇಂತಹ ವಿನ್ಯಾಸಗಳಿಗೆ ಮೇಂಟನೆನ್ಸ್‌ ಅನಿವಾರ್ಯ. ಒಂದೆರಡು ವರ್ಷಕ್ಕಾದರೂ ಸೂಕ್ತ ರೀತಿಯಲ್ಲಿ ಬಣ್ಣ ಹೊಡೆಯುವುದು ಇಲ್ಲ ಪಾಲಿಶ್‌ ಮಾಡುವುದನ್ನು ಬಿಡದೆ ಅನುಸರಿಸಿದರೆ, ಕಬ್ಬಿಣದ ರೇಲಿಂಗ್‌ಗಿಂತ ಹೆಚ್ಚು ಕಾಲ ಬಾಳಿಕೆ ಬರಬಲ್ಲದು.

ಕಾಂಕ್ರಿಟ್‌ ಉರುಳುಗಳು
ಎಲ್ಲಕ್ಕಿಂತ ಕಡಿಮೆ ದರದ್ದು ಹಾಗೂ ಹೆಚ್ಚು ಕಾಲ ಬಾಳಿಕೆ ನಿರಾಯಾಸವಾಗಿ ಬರುವಂಥ ವಸ್ತು ಆರ್‌ಸಿಸಿ ಉರುಳುಗಳೇ. ಶತಮಾನಗಳ ಹಿಂದಿನಿಂದಲೂ ಗಾರೆಯಲ್ಲಿ ಮಾಡಿದ ಉರುಳುಗಳು ಜನಪ್ರಿಯವಾಗಿವೆ. ಇಂದಿಗೂ ಹಳೆಯ ಕಟ್ಟಡಗಳಲ್ಲಿ ರಾರಾಜಿಸುತ್ತಿವೆ. ಆರ್‌ ಸಿಸಿ ಲೇತ್‌ ಟರ್ನ್ ಮಾಡಿದ ಉರುಳುಗಳು ದಶಕದ ಹಿಂದೆ ಅತಿ ಹೆಚ್ಚು ಜನಪ್ರಿಯವಾಗಿದ್ದು ಇತ್ತೀಚಿನ ದಿನಗಳಲ್ಲಿ ಕಡಿಮೆ ಬಳಕೆಯಲ್ಲಿದೆ. ಆದರೆ ಇಂದಿಗೂ ನಮ್ಮಲ್ಲಿ ‘ನ್ಯುಯೋ ಕ್ಲಾಸಿಕಲ್‌’ ಅಂದರೆ ಗ್ರೀಕ್‌ ಮತ್ತು ರೋಮನ್‌ ಕಾಲದ ವಿನ್ಯಾಸಗಳನ್ನು ಹೊಸರೂಪದಲ್ಲಿ ಮಾಡಿ ಸ್ವಲ್ಪ ಶ್ರೀಮಂತ ನೋಟ ಕೊಡುವುದು ಚಾಲ್ತಿಯಲ್ಲಿದೆ. ಇಂಥ ಎಲಿವೇಷನ್‌ಗಳಿಗೆ ಕಾಂಕ್ರಿಟ್‌ ಉರುಳುಗಳು ಸೂಕ್ತ. ಹೆಚ್ಚು ಖರ್ಚು ಮಾಡದೆ, ನೋಡಲು ಸುಂದರವಾಗಿ ಕಾಣಲು ಇಂದಿಗೂ ನೀವು ಆರ್‌ಸಿಸಿ ಉರುಳಗಳನ್ನು ಬಳಸಬಹುದು!

ಸಾಮಾನ್ಯವಾಗಿ ಮರ ಹಾಗೂ ಕಲ್ಲಿನಲ್ಲಿ ಉರುಳು ವಿನ್ಯಾಸ ಮಾಡುವಾಗ ಲೇತ್‌ ಮನ್‌ ಸಹಾಯ ಪಡೆಯುವುದು ಅನಿವಾರ್ಯವಾದರೂ, ಆರ್‌ಸಿಸಿಯಲ್ಲಿ ತಯಾರು ಮಾಡುವಾಗ ಮೌಲ್ಡ್‌ ಅಂದರೆ ಮರ ಇಲ್ಲವೆ ಫೈಬರ್‌ ಅಚ್ಚನ್ನು ಬಳಸಿ, ಉಕ್ಕಿನ ಸರಳನ್ನು ಮಧ್ಯ ಇಟ್ಟು, ಆರ್‌ಸಿಸಿ ಎರಕ ಹೋಯ್ದು ತಯಾರು ಮಾಡಬಹುದು. ಆದರೆ, ಆರ್‌ಸಿಸಿ ಯನ್ನು ಮೂಲವಸ್ತುವನ್ನಾಗಿಟ್ಟುಕೊಂಡು, ಅದಕ್ಕೆ ಫಿನಿಶ್‌ ಕೊಡುವಾಗ, ಸರಳ ಲೇತ್‌ಗಳೆಂಬಂತೆ, ಬಾಕ್ಸ್‌ ಒಂದನ್ನು ತಯಾರುಮಾಡಿ, ಅದಕ್ಕೆ ನಮಗೆ ಬೇಕಾದ ವಿನ್ಯಾಸದ ‘ಮಾಲು’- ಟೆಂಪ್ಲೇಟ್‌ ಸಿಗಿಸಿ, ಸಿಮೆಂಟ್‌ ಗಾರೆ ಮೆತ್ತುತ್ತ ತಿರುಗಿಸಿದರೆ, ನಿರಾಯಾಸವಾಗಿ ಸಿಮೆಂಟ್‌ ಉರುಳುಗಳು ತಯಾರಾಗುತ್ತವೆ. ಈ ಮಾದರಿಯಾಗಿ ತಯಾರಾದ ಉರುಳುಗಳು ಹೆಚ್ಚು ಫಿನಿಶ್‌ ಹೊಂದಿರುವುದರ ಜೊತೆಗೆ ಹೆಚ್ಚು ಕಾಲ ಬಾಳಿಕೆಯೂ ಬರುತ್ತದೆ.

– ಆರ್ಕಿಟೆಕ್ಟ್ ಕೆ. ಜಯರಾಮ್‌ ; ಹೆಚ್ಚಿನ ಮಾಹಿತಿಗೆ: 9844132826

ಟಾಪ್ ನ್ಯೂಸ್

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು

Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು

Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು

Government scraps ‘no-detention policy’ for Classes 5 and 8 in central schools

Rule; 5, 8ನೇ ತರಗತಿಯಲ್ಲಿ ಫೈಲ್‌ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!

1-biren

Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು

Team India; A spinner from the Karnataka coast who joined Team India as a replacement for Ashwin

Team India; ಅಶ್ವಿನ್‌ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್‌

1-cris

Kerala; ಸರಕಾರಿ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಗೆ ಅಡ್ಡಿ,ಗೋದಲಿ ಧ್ವಂಸ: ವ್ಯಾಪಕ ಆಕ್ರೋಶ

Kambli-health

Kambli Health: ಮಾಜಿ ಕ್ರಿಕೆಟಿಗ ವಿನೋದ್‌ ಕಾಂಬ್ಳಿ ಆರೋಗ್ಯ ಸ್ಥಿತಿ ಗಂಭೀರ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು

Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು

Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು

Government scraps ‘no-detention policy’ for Classes 5 and 8 in central schools

Rule; 5, 8ನೇ ತರಗತಿಯಲ್ಲಿ ಫೈಲ್‌ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!

1-biren

Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು

Team India; A spinner from the Karnataka coast who joined Team India as a replacement for Ashwin

Team India; ಅಶ್ವಿನ್‌ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.