ಹೇಗ್‌ನಲ್ಲಿ ಪಾಕ್‌ಗೆ ಮುಖಭಂಗ :ಸಮರ್ಥವಾಗಿ ವಾದ ಮಂಡಿಸಿದ ನ್ಯಾ.ಸಾಳ್ವೆ


Team Udayavani, May 16, 2017, 3:45 AM IST

AP5_15_2017_000048A.jpg

ಹೇಗ್‌(ನೆದರ್ಲೆಂಡ್‌): ಭಾರತದ ಮೇಲೆ ಹಗೆ ತೀರಿಸಲು ಹೊರಟ ಪಾಕಿಸ್ತಾನಕ್ಕೆ ಹೇಗ್‌ನಲ್ಲಿ ತೀವ್ರ ಮುಖಭಂಗವಾಗಿದೆ. ಭಾರತದ ನೌಕಾಪಡೆ ನಿವೃತ್ತ ಅಧಿಕಾರಿ ಕುಲಭೂಷಣ್‌ ಜಾಧವ್‌ ಅವರ ತಪ್ಪೊಪ್ಪಿಗೆ ವಿಡಿಯೋವನ್ನು ನೋಡಲ್ಲ ಎಂದು ಪಾಕಿಸ್ತಾನಕ್ಕೆ ಅಂತಾರಾಷ್ಟ್ರೀಯ ಕೋರ್ಟ್‌ ಖಡಕ್ಕಾಗಿ ಹೇಳಿದೆ. ಇದೇ ವಿಡಿಯೋವನ್ನು ಇಟ್ಟುಕೊಂಡೇ ಪಾಕಿಸ್ತಾನದ ಸೇನಾ ಕೋರ್ಟ್‌, ಜಾಧವ್‌ಗೆ ಗಲ್ಲುಶಿಕ್ಷೆ ವಿಧಿಸಿತ್ತು!

ಕೆಲ ದಿನಗಳ ಹಿಂದೆ ಜಾಧವ್‌ ಅವರ ಗಲ್ಲು ಶಿಕ್ಷೆಗೆ ತಡೆ ನೀಡಿದ್ದ ಅಂತಾರಾಷ್ಟ್ರೀಯ ನ್ಯಾಯಾಲಯ, ಸೋಮವಾರ ಮಧ್ಯಾಹ್ನ ಪ್ರಕರಣದ ವಿಚಾರಣೆ ಆರಂಭಿಸಿತು. ರೋನಿ ಅಬ್ರಾಹಾಂ ನೇತೃತ್ವದ 16 ನ್ಯಾಯಮೂರ್ತಿಗಳ ಪೀಠದ ಮುಂದೆ ವಾದ ಮಾಡಲು ಭಾರತ ಮತ್ತು ಪಾಕಿಸ್ತಾನಕ್ಕೆ ತಲಾ 90 ನಿಮಿಷಗಳ ಸಮಯ ನೀಡಲಾಗಿತ್ತು. ಅಲ್ಲದೆ ವಿಚಾರಣೆ ಶುರುವಾಗುವ ಮುನ್ನವೇ ಪಾಕಿಸ್ತಾನ ಕುಲಭೂಷಣ್‌ ಜಾಧವ್‌ ಅವರ ತಪ್ಪೊಪ್ಪಿಗೆ ವಿಡಿಯೋ ನೋಡಬೇಕು ಎಂದು ಮನವಿ ಮಾಡಿತು. ಇದಕ್ಕೆ ವಿರೋಧಿಸಿದ ಭಾರತ, ಅದೊಂದು ತಿರುಚಲಾದ ವಿಡಿಯೋ ಎಂದು ಹೇಳಿತು. ಭಾರತದ ವಾದ ಮನ್ನಿಸಿದ ಅಂತಾರಾಷ್ಟ್ರೀಯ ನ್ಯಾಯಾಲಯ ವಿಡಿಯೋ ನೋಡಲ್ಲ ಎಂದು ಖಂಡತುಂಡವಾಗಿ ಹೇಳಿತು. 

ಅನ್ಯಾಯ ತಪ್ಪಿಸಿ: 
ಮೊದಲಿಗೆ ವಾದ ಮಂಡಿಸಿದ ಭಾರತದ ವಕೀಲ ಹರೀಶ್‌ ಸಾಳ್ವೆ ಅವರು, ತುರ್ತಾಗಿ ಕುಲಭೂಷಣ್‌ ಜಾಧವ್‌ಗೆ ವಿಧಿಸಲಾಗಿರುವ ಗಲ್ಲುಶಿಕ್ಷೆಯನ್ನು ಅಮಾನತು ಮಾಡಬೇಕು. ಇಲ್ಲಿ ವಿಚಾರಣೆ ನಡೆಯುವ ಸಂದರ್ಭದÇÉೇ ಪಾಕಿಸ್ತಾನ ಅವರನ್ನು ಗಲ್ಲಿಗೇರಿಸುವ ಸಾಧ್ಯತೆ ಇದೆ ಎಂಬ ಆತಂಕ ವ್ಯಕ್ತಪಡಿಸಿದರು. ಪರಿಸ್ಥಿತಿ ತುಂಬಾ ಚಿಂತಾಜನಕವಾಗಿದ್ದು, ತುರ್ತಾಗಿ ವಿಚಾರಣೆ ನಡೆಸುವ ಅಗತ್ಯವಿದೆ. ಹೀಗಾಗಿ, ನಾವು ತತ್‌ಕ್ಷಣಕ್ಕೆ ಅರ್ಜಿ ಸಲ್ಲಿಸಿದೆವು ಎಂದು ತುರ್ತಾಗಿ ಅರ್ಜಿ ಸಲ್ಲಿಸಿದ ಕಾರಣವನ್ನು ವಿವರಿಸಿದರು. 

ವಿಯೆನ್ನಾ ಒಪ್ಪಂದವನ್ನು ಉಲ್ಲಂ ಸಿರುವ ಪಾಕಿಸ್ತಾನದ ಕ್ರಮದ ಬಗ್ಗೆ ಪ್ರಸ್ತಾಪಿಸಿದ ಸಾಳ್ವೆ ಅವರು, ಜಾಧವ್‌ಗೆ ಕಾನೂನಿನ ನೆರವು ನೀಡುವ ಸಲುವಾಗಿ ಭಾರತ 16 ಬಾರಿ ಸಂಪರ್ಕಿಸಿದರೂ ಪಾಕಿಸ್ತಾನ ಉತ್ತರ ನೀಡಲೇ ಇಲ್ಲ ಎಂದರು. ಒಂದು ರೀತಿ ಪಾಕಿಸ್ತಾನ ಕಿವುಡನಂತೆ ವರ್ತಿಸಿತು ಎಂದು ಹೇಳಿದರು. ಇದಷ್ಟೇ ಅಲ್ಲ, ಪಾಕಿಸ್ತಾನ ಮಿಲಿಟರಿ ಕೋರ್ಟ್‌ ಕೂಡ ಒಂದೇ ಕಡೆಯ ವಾದ ಆಲಿಸಿ ತೀರ್ಪು ನೀಡಿದೆ. ಇದು ಅನ್ಯಾಯದ ವಿಚಾರಣೆ. ನಾವು ವಕೀಲರನ್ನು ಕಳುಹಿಸುತ್ತೇವೆ ಎಂದರೂ ಅವಕಾಶ ಕೊಡಲಿಲ್ಲ ಎನ್ನುವ ಮೂಲಕ ಸಾಳ್ವೆ ಅವರು ಪಾಕಿಸ್ತಾನದ ಅಕ್ರಮವನ್ನು ಪಾಯಿಂಟ… ಟು ಪಾಯಿಂಟ… ಬಯಲಿಗೆಳೆದರು. 

ನಿರಪರಾಧಿಯ ಉಳಿಸಲು:
1971ರಿಂದ ಈಚೆಗೆ ನಾವು ಯಾವುದೇ ಪ್ರಕರಣವನ್ನು ಮುಂದಿಟ್ಟುಕೊಂಡು ಅಂತಾರಾಷ್ಟ್ರೀಯ ನ್ಯಾಯಾಲಯದ ಮೆಟ್ಟಿಲೇರಿಲ್ಲ. ಆದರೆ ಈಗ ಒಬ್ಬ ನಿರಪರಾಧಿಯನ್ನು ಉಳಿಸುವ ಸಲುವಾಗಿ ಕೋರ್ಟ್‌ ಮುಂದೆ ಬರಬೇಕಾದ ಅನಿವಾರ್ಯತೆ ಸೃಷ್ಟಿಯಾಯಿತು ಎಂದು ವಕೀಲರು ಹೇಳಿದರು. ಜಾಧವ್‌ ಪ್ರಕರಣದಲ್ಲಿ ಪಾಕಿಸ್ತಾನ ಮಾನವ ಹಕ್ಕುಗಳನ್ನು ಕಿಟಕಿಯಿಂದ ಆಚೆಗೆ ತೂರಿದೆ. ಕಳೆದ ವರ್ಷವೇ ಬಂಧಿಸಿ, ಜಾಧವ್‌ರನ್ನು ಸೇನಾ ವಶಕ್ಕೆ ಒಪ್ಪಿಸಿ ಬಲವಂತವಾಗಿ ತಪ್ಪೊಪ್ಪಿಗೆ ಹೇಳಿಕೆ ಪಡೆಯಲಾಗಿದೆ. ಇಂಥ ಹೇಳಿಕೆಗಳನ್ನು ಒಪ್ಪಲು ಸಾಧ್ಯವಿಲ್ಲ ಎಂದು ಸಾಳ್ವೆ ಅವರು ನ್ಯಾಯಪೀಠದ ಮುಂದೆ ಸಮರ್ಥವಾಗಿ ವಾದ ಮಂಡಿಸಿದರು.
ಇದಷ್ಟೇ ಅಲ್ಲ, ವಕೀಲರ ಭೇಟಿಗೆ ಅವಕಾಶ ನೀಡದ ಪಾಕಿಸ್ತಾನ, ಈಗ ಜಾಧವ್‌ ಅವರನ್ನು ಯಾವುದೇ ಕ್ಷಣದಲ್ಲಿ ಬೇಕಾದರೂ ಗಲ್ಲಿಗೇರಿಸಬಹುದು. ಗಲ್ಲಿಗೇರಿಸಿದ್ದೇ ಆದರೆ ಅದು ಯುದ್ಧಾಪರಾಧವಾಗುತ್ತದೆ. ಮಾನವ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯಾಗುತ್ತದೆ ಎಂದರು. ಜತೆಗೆ, ಜಾಧವ್‌ ಅವರ ವಿರುದ್ಧದ ಆರೋಪಪಟ್ಟಿಯನ್ನೂ ಪಾಕಿಸ್ತಾನ ಭಾರತಕ್ಕೆ ಕೊಟ್ಟಿಲ್ಲ ಎಂಬುದನ್ನು ಸಾಳ್ವೆ ಕೋರ್ಟ್‌ ಗಮನಕ್ಕೆ ತಂದರು. ಇರಾನ್‌ನಲ್ಲಿದ್ದ ಜಾಧವ್‌ರನ್ನು ಅಕ್ರಮವಾಗಿ ಅಪಹರಣ ಮಾಡಿಕೊಂಡು ಪಾಕಿಸ್ತಾನಕ್ಕೆ ತರಲಾಗಿದೆ ಎಂದರು. 

ಜರ್ಮನಿ, ಮೆಕ್ಸಿಕೋ ಮತ್ತು ನಿಕಾರಾಗುವಾ ದೇಶಗಳು ತಮ್ಮ ದೇಶದ ಪ್ರಜೆಗಳನ್ನು ರಕ್ಷಿಸಿಕೊಳ್ಳಲು ಅಂತಾರಾಷ್ಟ್ರೀಯ ಕೋರ್ಟ್‌ ಮುಂದೆ ಬಂದದ್ದು, ಹಾಗೆಯೇ ಕೋರ್ಟ್‌ ಇವುಗಳಿಗೆ ಪೂರಕವಾಗಿ ಸ್ಪಂದಿಸಿರುವ ಪ್ರಕರಣಗಳನ್ನು ಸಾಳ್ವೆ ಅವರು ನ್ಯಾಯಾಲಯದ ಗಮನಕ್ಕೆ ತಂದರು. 

ಪಾಕಿಸ್ತಾನದ ನೀರಸ ವಾದ:
ರಾಜಕಾರಣಿಗಳ ಆರೋಪ- ಪ್ರತ್ಯಾರೋಪದಂತೆ ಈ ವಾದವನ್ನು ಪರಿಗಣಿಸಿದ ಪಾಕಿಸ್ತಾನ, ಪೇಲವವಾಗಿ ತನ್ನ ವಾದ ಮುಂದಿಟ್ಟಿತು. ಅದರ ವಾದ ನಿಂತಿದ್ದು ಒಂದು ವಾಕ್ಯದಲ್ಲೇ. ನಾವು ಕುಲಭೂಷಣ್‌ ಜಾಧವ್‌ ಅವರ ಪಾಸ್‌ಪೋರ್ಟ್‌ನಲ್ಲಿ ಮುಸ್ಲಿಂ ಹೆಸರು ಏಕಿದೆ ಎಂಬ ಕುರಿತು ಭಾರತದಿಂದ ವಿವರಣೆ ಕೇಳಿದ್ದೆವು. ಆದರೆ ಭಾರತ ಇದಕ್ಕೆ ವಿವರಣೆ ನೀಡಲೇ ಇಲ್ಲ. ಹೀಗಾಗಿ ನಾವು ಜಾಧವ್‌ಗೆ ವಕೀಲರ ಸಹಕಾರ ನೀಡಲಿಲ್ಲ ಎಂದಿತು. ಪಾಕಿಸ್ತಾನದ ಪರ ಅಲ್ಲಿನ ಅಟಾರ್ನಿ ಜನರಲ… ಖರ್ವಾ ಖುರೇಷಿ ನೇತೃತ್ವದಲ್ಲಿ ವಾದ ಮಂಡನೆ ನಡೆಯಿತು.

ಭಾರತದ ವಕೀಲ ಸಾಳ್ವೆ ಅವರು ಎತ್ತಿದ್ದ ವಿಷಯಗಳಿಗೆ ಪ್ರತ್ಯುತ್ತರ ನೀಡುವುದಕ್ಕಿಂತ ಹೆಚ್ಚಾಗಿ, ಪಾಕಿಸ್ತಾನ ಭಾರತವನ್ನು ತೆಗಳುವುದಕ್ಕಾಗಿಯೇ ಕೋರ್ಟ್‌ ಕೊಠಡಿಯನ್ನು ಬಳಸಿಕೊಂಡಿತು. ಭಾರತ ರಾಜಕೀಯ ಕಾರಣಕ್ಕಾಗಿ ಈ ಕೇಸನ್ನು ಇಲ್ಲಿವರೆಗೆ ತಂದಿದೆ ಎಂಬುದು ಅದರ ಪ್ರಮುಖ ಆರೋಪ. ಅಲ್ಲದೆ ಜಾಧವ್‌ರನ್ನು ಇರಾನ್‌ನಲ್ಲಿ ಅಪಹರಿಸಲಾಗಿದೆ ಎಂದು ಭಾರತ ಹೇಳುತ್ತಿದೆ. ಇದು ಸುಳ್ಳು. ನಾವು ಅವರನ್ನು ಬಲೂಚಿಸ್ತಾನದಲ್ಲಿ ಬಂಧಿಸಿದ್ದೇವೆ. ಭಾರತ ಜಾಧವ್‌ರನ್ನು ಪಾಕಿಸ್ತಾನದಲ್ಲಿ ಹಿಂಸಾಚಾರ ನಡೆಸುವುದಕ್ಕಾಗಿಯೇ ಕಳುಹಿಸಿದೆ ಎಂದು ಖುರೇಷಿ ಹೇಳಿದರು.

ಜಾಧವ್‌ ತಪ್ಪೊಪ್ಪಿಗೆ ಹೇಳಿಕೆಯನ್ನು ಸ್ವಯಂ ಪ್ರೇರಿತರಾಗಿ ನೀಡಿ¨ªಾರೆ. ಜತೆಗೆ ಅವರದ್ದು ಗೂಢಾಚಾರಿಕೆ ಪ್ರಕರಣವಾದ್ದರಿಂದ ವಕೀಲರ ಸಹಕಾರ ನೀಡಲು ಸಾಧ್ಯವಿಲ್ಲ. ಅಲ್ಲದೆ ತತ್‌ಕ್ಷಣಕ್ಕೆ ಜಾಧವ್‌ರನ್ನು ಗಲ್ಲಿಗೇರಿಸುವುದಿಲ್ಲ. ಕ್ಷಮಾದಾನಕ್ಕಾಗಿ 90 ದಿನಗಳ ಸಮಯ ನೀಡಿದ್ದೇವೆ. ಅವರು ಎರಡು ಸ್ಟಾರ್‌ಗಳ ಮಾನ್ಯತೆಯುಳ್ಳ ಮಿಲಿಟರಿ ಅಧಿಕಾರಿಗಳ ಬಳಿ ಕ್ಷಮಾದಾನ ಕೇಳಬಹುದು ಎಂದರು. ಜತೆಗೆ, ಇವರನ್ನು ಕಾಂಗರೂ ಕೋರ್ಟ್‌ನಲ್ಲಿ ವಿಚಾರಣೆ ನಡೆಸಿಲ್ಲ ಎಂದು ಸ್ಪಷ್ಟಪಡಿಸಿದರು. 

ಭಾರತದ ಅರ್ಜಿಗೆ ಪಾಕ್‌ ಕಿಡಿ:
1999ರಲ್ಲಿ ಭಾರತ, ಪಾಕಿಸ್ತಾನದ ಯುದ್ಧ ವಿಮಾನ ಹೊಡೆದುರುಳಿಸಿದಾಗ ಅಂತಾರಾಷ್ಟ್ರೀಯ ನ್ಯಾಯಾಲಯದ ವ್ಯಾಪ್ತಿಗೆ ನಾವು ಬರಲ್ಲ ಎಂದು ವಾದಿಸಿ ಅದರಲ್ಲಿ ಗೆದ್ದಿತ್ತು. ಇದಕ್ಕೆ ಕಾಮನ್‌ವೆಲ್ತ್‌ ದೇಶಗಳು ನ್ಯಾಯಾಲಯದ ಹೊರಗಿವೆ ಎಂದು ವಾದಿಸಿತ್ತು. ಆದರೆ ಈಗ ರಾಜಕೀಯ ಕಾರಣಕ್ಕಾಗಿ ಭಾರತ ಇಲ್ಲಿವರೆಗೆ ಬಂದಿದೆ. ಆಗ ಅಂತಾರಾಷ್ಟ್ರೀಯ ನ್ಯಾಯಾಲಯದ ವ್ಯಾಪಿಗೆ ಬರದ ಭಾರತ, ಈಗ ಅದು ಹೇಗೆ ಅರ್ಜಿ ಸಲ್ಲಿಸಿತು ಎಂದು ಖುರೇಷಿ ಪ್ರಶ್ನಿಸಿದರು. ಜತೆಗೆ ಈ ಪ್ರಕರಣ ಪಾಕಿಸ್ತಾನದ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ವಿಷಯವಾದ್ದರಿಂದ ಅಂತಾರಾಷ್ಟ್ರೀಯ ನ್ಯಾಯಾಲಯ ಮಧ್ಯಪ್ರವೇಶಿಸಬಾರದು ಎಂದಿತು. ಅರ್ಜಿಯನ್ನು ತಕ್ಷಣವೇ ರದ್ದುಗೊಳಿಸಬೇಕು ಎಂದು ಕೋರಿತು. ಇದಷ್ಟೇ ಅಲ್ಲ, ಕಳೆದ ವಾರ ಕೋರ್ಟ್‌ ಪಾಕಿಸ್ತಾನಕ್ಕೆ ಬರೆದಿದ್ದ ಪತ್ರವನ್ನೇ ಭಾರತ ಗಲ್ಲು ಶಿಕ್ಷೆಗೆ ತಡೆ ಎಂದು ಬಿಂಬಿಸಿತು. ಅಲ್ಲದೆ ಮಾಧ್ಯಮಗಳ ಮೂಲಕ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯಲು ನೋಡಿತು ಎಂಬ ಆರೋಪವನ್ನೂ ಖುರೇಷಿ ಮಾಡಿದರು.ಎರಡೂ ಕಡೆಯ ವಾದ -ಪ್ರತಿವಾದ ಆಲಿಸಿದ 16 ನ್ಯಾಯಮೂರ್ತಿಗಳ ಪೀಠ, ಅತೀ ಶೀಘ್ರದಲ್ಲಿ ತೀರ್ಪು ಪ್ರಕಟಿಸುವುದಾಗಿ ಹೇಳಿತು. ಆದರೆ ನಿಖರ ದಿನಾಂಕ ಪ್ರಕಟಿಸಲಿಲ್ಲ. 

ಅಂತಾರಾಷ್ಟ್ರೀಯ ನ್ಯಾಯಾಲಯಕ್ಕೆ ಪಾಕ್‌ ಸೇರಿದ್ದು 2017ರಲ್ಲಿ!
ವಿಶೇಷವೆಂದರೆ ಪಾಕಿಸ್ತಾನ ಇದುವರೆಗೆ ಅಂತಾರಾಷ್ಟ್ರೀಯ ನ್ಯಾಯಾಲಯದ ವ್ಯಾಪ್ತಿಗೆ ಒಳಪಟ್ಟಿರಲಿಲ್ಲ. ಅದು 2017ರ ಮಾರ್ಚ್‌ 29ರಂದು ಇದರ ವ್ಯಾಪ್ತಿಗೆ ಸೇರಿದೆ. ಅಲ್ಲದೆ ಸೋಮವಾರದ ವಿಚಾರಣೆಯನ್ನು ವ್ಯಾಪ್ತಿಯಿಂದ ಹೊರಗಿಡಬೇಕು ಎಂದು ಸೇರುವಾಗ ಮಾಡಿಕೊಂಡಿರುವ ಒಪ್ಪಂದ ಪತ್ರದಲ್ಲಿಯೇ ಹೇಳಿಕೊಂಡಿದೆ. ಜತೆಗೆ ದೇಶದ ಹಿತಾಸಕ್ತಿಗೆ ಧಕ್ಕೆಯಾಗುವಂಥ ಪ್ರಕರಣಗಳಲ್ಲಿ ಅಂತಾರಾಷ್ಟ್ರೀಯ ನ್ಯಾಯಾಲಯ ಮಧ್ಯ ಪ್ರವೇಶಿಸಬಾರದು ಎಂದು ಕೇಳಿಕೊಂಡಿದೆ.

ಟಾಪ್ ನ್ಯೂಸ್

Sambhal Violence: ಮೃತರ ಸಂಖ್ಯೆ ನಾಲ್ಕಕ್ಕೆ, ಇಂಟರ್ನೆಟ್ ಸ್ಥಗಿತ, ನಿಷೇಧಾಜ್ಞೆ ಜಾರಿ

Sambhal Violence: ಮೃತರ ಸಂಖ್ಯೆ ನಾಲ್ಕಕ್ಕೆ, ಇಂಟರ್ನೆಟ್ ಸ್ಥಗಿತ, ನಿಷೇಧಾಜ್ಞೆ ಜಾರಿ

Parliament winter session: ಇಂದಿನಿಂದ ಸಂಸತ್‌ ಅಧಿವೇಶನ.. ವಕ್ಫ್ ಸೇರಿ 16 ಮಸೂದೆ ಮಂಡನೆ?

Parliament Winter Session: ಇಂದಿನಿಂದ ಸಂಸತ್‌ ಅಧಿವೇಶನ.. ವಕ್ಫ್ ಸೇರಿ 16 ಮಸೂದೆ ಮಂಡನೆ?

Nalatawad: ವಿದ್ಯುತ್ ಶಾಕ್‌ನಿಂದ ಮೃತಪಟ್ಟ ಕೋತಿಗೆ ಸ್ಥಳೀಯ ನಿವಾಸಿಗಳಿಂದ ಅಂತ್ಯಸಂಸ್ಕಾರ

Nalatawad: ವಿದ್ಯುತ್ ಶಾಕ್‌ನಿಂದ ಮೃತಪಟ್ಟ ಕೋತಿಗೆ ಸ್ಥಳೀಯ ನಿವಾಸಿಗಳಿಂದ ಅಂತ್ಯಸಂಸ್ಕಾರ

Puttur: ಮೃ*ತದೇಹವನ್ನು ರಸ್ತೆ ಬದಿ ಇರಿಸಿ ಹೋದ ಪ್ರಕರಣ; ಪ್ರಮುಖ ಆರೋಪಿ ಸಹಿತ ಮೂವರ ಬಂಧನ

Puttur: ಮೃ*ತದೇಹವನ್ನು ರಸ್ತೆ ಬದಿ ಇರಿಸಿ ಹೋದ ಪ್ರಕರಣ; ಪ್ರಮುಖ ಆರೋಪಿ ಸಹಿತ ಮೂವರ ಬಂಧನ

ಗೂಗಲ್ ಮ್ಯಾಪ್ ನಂಬಿ ನಿರ್ಮಾಣ ಹಂತದ ಸೇತುವೆಯಲ್ಲಿ ಚಲಿಸಿ ನದಿಗೆ ಬಿದ್ದ ಕಾರು, ಮೂವರು ಮೃತ್ಯು

ಗೂಗಲ್ ಮ್ಯಾಪ್ ನಂಬಿ ಸೇತುವೆಯಿಂದ ನದಿಗೆ ಬಿದ್ದ ಕಾರು, ಮದುವೆಗೆ ಹೊರಟಿದ್ದ ಮೂವರು ಮೃತ್ಯು

GTD

JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ

moon

Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್‌’ಗೆ ಗುಡ್‌ ಬೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

moon

Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್‌’ಗೆ ಗುಡ್‌ ಬೈ

Elon Musk: ಭಾರತದಲ್ಲಿ 1 ದಿನದಲ್ಲಿ 6.4 ಕೋಟಿ ಮತ ಎಣಿಕೆ: ಉದ್ಯಮಿ ಮಸ್ಕ್ ಮೆಚ್ಚುಗೆ!

Elon Musk: ಭಾರತದಲ್ಲಿ 1 ದಿನದಲ್ಲಿ 6.4 ಕೋಟಿ ಮತ ಎಣಿಕೆ: ಉದ್ಯಮಿ ಮಸ್ಕ್ ಮೆಚ್ಚುಗೆ!

Sheikh Hasina, ಅದಾನಿ ನಡುವಿನ ಒಪ್ಪಂದದ ಪರಿಶೀಲನೆಗೆ ಸಮಿತಿ ರಚಿಸಿದ ಬಾಂಗ್ಲಾದೇಶ!

Sheikh Hasina, ಅದಾನಿ ನಡುವಿನ ಒಪ್ಪಂದದ ಪರಿಶೀಲನೆಗೆ ಸಮಿತಿ ರಚಿಸಿದ ಬಾಂಗ್ಲಾದೇಶ!

Nijjar ಹ*ತ್ಯೆಗೆ ಮೋದಿ ನಂಟು ವರದಿ: “ಗುಪ್ತಚರರ’ ವಿರುದ್ಧ ಟ್ರಾಡೊ ಗರಂ

Nijjar ಹ*ತ್ಯೆಗೆ ಮೋದಿ ನಂಟು ವರದಿ: “ಗುಪ್ತಚರರ’ ವಿರುದ್ಧ ಟ್ರಾಡೊ ಗರಂ

7

Pakistan: ಪಾಕ್‌ನಲ್ಲಿ ಹಿಂಸಾಚಾರ; ಒಟ್ಟು 37 ಮಂದಿ ಸಾವು

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Arrested: ಹೊಯ್ಸಳ ಪೊಲೀಸ್‌ ಮೇಲೆ ಹಲ್ಲೆ; ಬಂಧನ

Arrested: ಹೊಯ್ಸಳ ಪೊಲೀಸ್‌ ಮೇಲೆ ಹಲ್ಲೆ; ಬಂಧನ

Sambhal Violence: ಮೃತರ ಸಂಖ್ಯೆ ನಾಲ್ಕಕ್ಕೆ, ಇಂಟರ್ನೆಟ್ ಸ್ಥಗಿತ, ನಿಷೇಧಾಜ್ಞೆ ಜಾರಿ

Sambhal Violence: ಮೃತರ ಸಂಖ್ಯೆ ನಾಲ್ಕಕ್ಕೆ, ಇಂಟರ್ನೆಟ್ ಸ್ಥಗಿತ, ನಿಷೇಧಾಜ್ಞೆ ಜಾರಿ

Bengaluru: ಮನೆಯ ಮುಂದೆ ಕುಳಿತು ಮೊಬೈಲ್‌ ನೋಡುತ್ತಿದ್ದ ವ್ಯಕ್ತಿಗೆ ಕಾರು ಡಿಕ್ಕಿ!

Bengaluru: ಮನೆಯ ಮುಂದೆ ಕುಳಿತು ಮೊಬೈಲ್‌ ನೋಡುತ್ತಿದ್ದ ವ್ಯಕ್ತಿಗೆ ಕಾರು ಡಿಕ್ಕಿ!

Bengaluru: ಪಾರ್ಕ್‌ನಲ್ಲಿ ಮಲಗಿದ್ದಾಗ ಮರ ಬಿದ್ದು ಬಿಬಿಎಂಪಿ ಕಸದ ಲಾರಿ ಚಾಲಕ ಸಾವು

Bengaluru: ಪಾರ್ಕ್‌ನಲ್ಲಿ ಮಲಗಿದ್ದಾಗ ಮರ ಬಿದ್ದು ಬಿಬಿಎಂಪಿ ಕಸದ ಲಾರಿ ಚಾಲಕ ಸಾವು

Fraud: ಸೈಟ್‌ ಮಾರುವುದಾಗಿ ನಂಬಿಸಿ 56 ಲಕ್ಷ ರೂ. ವಂಚನೆ

Fraud: ಸೈಟ್‌ ಮಾರುವುದಾಗಿ ನಂಬಿಸಿ 56 ಲಕ್ಷ ರೂ. ವಂಚನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.