ಮೊದಲ ಭಾಷಣದಂತೆ ನಡೆಯುವೆ
Team Udayavani, May 16, 2017, 11:58 AM IST
ಬೆಂಗಳೂರು: ಪ್ರಧಾನಿಯಾಗಿ ಸಂಸತ್‌ನಲ್ಲಿ ಮೊದಲ ಬಾರಿ ಭಾಷಣ ಮಾಡಿದಾಗ ನಾಡಿಗಾಗಿ ದುಡಿಯುತ್ತೇನೆ ಎಂದಿದ್ದ. ಹಾಗೆಯೇ ನನ್ನುಸಿರು ಇರುವ ವರೆಗೆ ರಾಜ್ಯದ ಜನರಿಗಾಗಿ ಶ್ರಮಿಸುತ್ತೇನೆ,’ ಎಂದು ಮಾಜಿ ಪ್ರಧಾನಮಂತ್ರಿ ಎಚ್.ಡಿ.ದೇವೇಗೌಡ ಹೇಳಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ತು ಸೋಮವಾರ ನಗರದಲ್ಲಿ ಆಯೋಜಿಸಿದ್ದ ಶ್ರೀ ಶಿವ ರಹಸ್ಯ ಹಾಗೂ ಇತರ 11 ಕೃತಿಗಳ ಲೋಕಾರ್ಪಣೆ ಸಮಾರಂಭದಲ್ಲಿ ಮಾತನಾಡಿದ ಅವರು, “ಕಾವೇರಿ, ಕೃಷ್ಣಾ ನದಿಗಳ ವಿಚಾರದಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗಿದೆ. ನೀರಾವರಿ ವಿಷಯವಾಗಿ ನಾನು 3 ಸಲ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದೇನೆ.
ಕಾವೇರಿ ವಿಚಾರವಾಗಿ ಪ್ರಧಾನಮಂತ್ರಿಗೆ ವಿಸ್ತಾರವಾಗಿ ಪತ್ರ ಬರೆದಿದ್ದೆ. ಸಂಸತ್ತಿನಲ್ಲಿ ಪ್ರಧಾನಿಯಾಗಿ ಭಾಷಣ ಮಾಡಿದ ಮೊದಲ ದಿನ ನಾನೆಷ್ಟು ದಿನ ಅಧಿಕಾರದಲ್ಲಿ ಇರುತ್ತೇನೋ ಗೊತ್ತಿಲ್ಲ. ಆದರೆ ಅಧಿಕಾರದಲ್ಲಿ ಇರುವಷ್ಟು ದಿನ ದೇಶಕ್ಕಾಗಿ ದುಡಿಯುತ್ತೇನೆ ಎಂದಿದ್ದೆ. ಅದೇ ರೀತಿ ಕೊನೆ ಉಸಿರು ಇರುವವರೆಗೂರಾಜ್ಯದ ಜನರ ಹಿತಕ್ಕಾಗಿ ದುಡಿಯುತ್ತೇನೆ,’ ಎಂದರು.
ಮನಸ್ಸಿಗೆ ಸಮಾಧಾನ: “ರಾಜಕೀಯದ ಒತ್ತಡದಲ್ಲಿ ಗ್ರಂಥಗಳು ನನ್ನ ಮನಸ್ಸಿಗೆ ಸಮಾಧಾನ ನೀಡುತ್ತವೆ. ಅದಕ್ಕಾಗಿಯೇ ಒಂದಷ್ಟು ಗ್ರಂಥಗಳನ್ನು ಓದುವುದನ್ನು ಅಭ್ಯಾಸ ಮಾಡಿಕೊಂಡಿದ್ದೇನೆ. ಶಿವ ರಹಸ್ಯ ಕೃತಿಯ ಎಲ್ಲ 30 ಸಂಪುಟಗಳನ್ನು ಮರು ಮದ್ರಣ ಮಾಡಿಸಿ, ಮುಂದಿನ ಪೀಳಿಗೆಗೆ ತಲುಪಿಸುವುದು ಒಳ್ಳೆಯದು. ಹೀಗಾಗಿ, ಮರು ಮುದ್ರಿಸಲು ಕನ್ನಡ ಸಾಹಿತ್ಯ ಪರಿಷತ್ತಿಗೆ ತಿಳಿಸಿದ್ದೇನೆ,’ ಎಂದರು.
“ಪ್ರಳಯದ ನಂತರ ಜಗತ್ತು ಮತ್ತೆ ಸೃಷ್ಟಿಯಾಗುತ್ತೆ ಅಂತಾರೆ ಅವೆಲ್ಲಾ ನಮಗೆ ಗೊತ್ತಾಗುವುದಿಲ್ಲ. ತಂದೆ, ತಾಯಿ ಶಿವಭಕ್ತರಾಗಿದ್ದರು. ಅವರಂತೆ ನಾನು ಕೂಡ ಶಿವನನ್ನು ನಂಬಿದ್ದೇನೆ. ಈ ಇಳಿವಯಸ್ಸಿನಲ್ಲಿ ಸ್ವಲ್ಪವನ್ನಾದರು ತಿಳಿದುಕೊಳ್ಳಬೇಕೆಂದುಕೊಂಡಿದ್ದೇನೆ,’ ಎಂದು ಹೇಳಿದರು.
ಸಮಾರಂಭದಲ್ಲಿ ಒಟ್ಟು 11 ಕೃತಿಗಳ ಬಿಡುಗಡೆ
“ಉದಯವಾಣಿ’ಯ ಹಿರಿಯ ಮುಖ್ಯ ಉಪ ಸಂಪಾದಕ ಹಾಗೂ ಲೇಖಕ ಮಹಬಲೇಶ್ವರ ಹೊನ್ನೆ°ಮಡಿಕೆ ಅವರ “ನೀರ ಹನಿ ಮಧುರ ಹನಿ’ ಸೇರಿದಂತೆ ವಿವಿಧ ಲೇಖಕರ ಹನ್ನೊಂದು ಕೃತಿಗಳನ್ನು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಬಿಡುಗಡೆ ಮಾಡಿದರು. ಸಮಾರಂಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ.ಮನುಬಳಿಗಾರ್ ಉಪಸ್ಥಿತರಿದ್ದರು.
ತಲೆ ಚಚ್ಚಿಕೊಳ್ಳಬೇಕೆನಿಸುತ್ತದೆ !
ರಾಜ್ಯದಲ್ಲಿ ನೀರಿಗಾಗಿ ಈಗ ಪಾತಾಳ ಗಂಗೆ ತರುತ್ತಾರಂತೆ. ಅದೆಲ್ಲಿಂದ ತರುತ್ತಾರೋ ಗೊತ್ತಿಲ್ಲ. ನನಗೆ ನಗು ಬರುತ್ತದೆ. ಈ ಬಗ್ಗೆ ಯಾರು ಸಲಹೆ ಕೊಟ್ರೋ ಗೊತ್ತಿಲ್ಲ. ಸಾವಿರ ಅಡಿ ಕೊರೆದರೂ ನೀರಿಲ್ಲ. ಇಂತಹ ಮಾತುಗಳಿಗೆ ಹಣೆ ಚಚ್ಚಿಕೊಳ್ಳಬೇಕು ಎನಿಸುತ್ತದೆ.
ಕುಮಾರಸ್ವಾಮಿ ಸಿಎಂ ಆಗಿದ್ದಾಗ ಒಂದು ರೂಪಾಯಿ ಕೂಡ ಮೈನಿಂಗ್‌ನಲ್ಲಿ ರಾಜ್ಯಕ್ಕೆ ನಷ್ಟವಾಗಿಲ್ಲ. ಧರ್ಮಸಿಂಗ್ ಅವಧಿಯಲ್ಲಿ 33 ಕೋಟಿ ರೂ. ವಸೂಲಿ ಮಾಡಬೇಕು ಎಂದು ನ್ಯಾ.ಸಂತೋಷ್ ಹೆಗ್ಡೆ ಗಣಿ ಹಗರಣದ ತನಿಖಾ ವರದಿಯಲ್ಲಿ ಹೇಳಿದ್ದರು. ಎಸ್‌ಐಟಿ ವರದಿಯನ್ನು ನೇರವಾಗಿ ಸುಪ್ರೀಂ ಕೊಡಬೇಕು ಅಂತಾ ಇದೆ. ಕುಮಾರಸ್ವಾಮಿ ಯಾವುದೇ ತಪ್ಪು ಮಾಡಿಲ್ಲ ಎಂದು ಲೋಕಾಯುಕ್ತ ವರದಿಯಲ್ಲಿಯೇ ಉಲ್ಲೇಖ ಮಾಡಲಾಗಿದೆ.
-ಎಚ್.ಡಿ.ದೇವೇಗೌಡ, ಮಾಜಿ ಪ್ರಧಾನಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಠಾಣೆಯಲ್ಲಿ ಪೊಲೀಸ್ ಸಿಬ್ಬಂದಿ ನಡುವೆ ಜಗಳ: ವಿಡಿಯೋ ವೈರಲ್
Bengaluru: ಹನಿಟ್ರ್ಯಾಪ್: ಪ್ರೊಫೆಸರ್‌ಗೆ 3 ಕೋಟಿ ಸುಲಿಗೆ; ಉಡುಪಿ, ಕಾರ್ಕಳ ಮೂಲದವರ ಬಂಧನ
Bengaluru: ಬಸ್‌ಗಳಲ್ಲಿ ಮೊಬೈಲ್ ಕಳ್ಳತನ: ಇಬ್ಬರು ಆರೋಪಿಗಳ ಸೆರೆ, 60 ಫೋನ್ ಜಪ್ತಿ
Bengaluru: ಕಾರು ಅತಿವೇಗವಾಗಿ ಬಂದು ಬೇರು ಕಾರುಗಳಿಗೆ ಡಿಕ್ಕಿ: ಸರಣಿ ಅಪಘಾತ
Bengaluru: 3.25 ಕೋಟಿ ರೂ. ಗಾಂಜಾ ಜಪ್ತಿ: ಮೂವರ ಸೆರೆ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.