ವರ್ಷದಲ್ಲಿ ಬೆಂಗಳೂರಿನ ಚಿತ್ರಣ ಬದಲಿಸ್ತೇವೆ
Team Udayavani, May 16, 2017, 12:11 PM IST
ಬೆಂಗಳೂರು: ಒಂದು ವರ್ಷದಲ್ಲಿ ಬೆಂಗಳೂರು ಅಭಿವೃದ್ಧಿಯ ವಿಚಾರದಲ್ಲಿ ಹೊಸ ರೂಪ ಪಡೆದುಕೊಳ್ಳಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಬೆಂಗಳೂರು ಜಲಮಂಡಳಿಯಿಂದ ಸೋಮವಾರ ಕೋರಮಂಗಲ – ಚಲ್ಲಘಟ್ಟ ಕಣಿವೆಯ ಬಿ.ನಾಗಸಂದ್ರದಲ್ಲಿ ನಿರ್ಮಿಸಿರುವ 60 ಎಂಎಲ್‌ಡಿ ಸಾಮರ್ಥಯದ ತ್ಯಾಜ್ಯನೀರು ಸಂಸ್ಕರಣಾ ಘಟಕಕ್ಕೆ ಚಾಲನೆ ನೀಡಿದರು.
“ರಾಜ್ಯ ಸರ್ಕಾರದಿಂದ ನಗರದ ಅಭಿವೃದ್ಧಿಗೆ ಸಾಕಷ್ಟು ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದ್ದು ಹಣಕಾಸು ನೆರವನ್ನೂ ಕಲ್ಪಿಸಲಾಗಿದೆ. ಹೀಗಾಗಿ, ಇನ್ನೊಂದು ವರ್ಷದಲ್ಲಿ ಬೆಂಗಳೂರು ಅಭಿವೃದ್ದಿಯಲ್ಲಿ ಮಾದರಿಯಾಗಲಿದೆ,’ ಎಂದು ಹೇಳಿದರು.
“ನಗರದ ಅಭಿವೃದ್ಧಿಗೆ ಸರ್ಕಾರದಿಂದ 7300 ಕೋಟಿ ರೂ. ಅನುದಾನ ನೀಡಲಾಗಿದೆ. ಈಗಾಗಲೇ 2 ಸಾವಿರ ಕೋಟಿ ರೂ. ವೆಚ್ಚದ ವಿವಿಧ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದ್ದು, ಉಳಿದ 5 ಸಾವಿರ ಕೋಟಿ ರೂ. ವೆಚ್ಚದ ಯೋಜನೆಗಳಿಗೆ ಚಾಲನೆ ಸಿಕ್ಕಿದೆ,’ ಎಂದು ತಿಳಿಸಿದರು.
“ನಗರದ ಜನತೆಗೆ ಅನುಕೂಲವಾಗುವ ಯೋಜನೆಗಳು ಮತ್ತು ನಗರದ ಅಭಿವೃದ್ಧಿಗಾಗಿ ಎಷ್ಟು ಅನುದಾನ ಬೇಕಾದರೂ ನೀಡಲು ಸರ್ಕಾರ ಸಿದ್ಧ. ಅದರ ಹಿನ್ನೆಲೆಯಲ್ಲಿ ನಗರದ 110 ಹಳ್ಳಿಗಳಿಗೆ ಕುಡಿಯುವ ನೀರು ಒದಗಿಸಲು 5052 ಕೋಟಿ ರೂ. ಸಾಲವನ್ನು ಜೈಕಾ ಬ್ಯಾಂಕ್‌ನಿಂದ ಕೋರಲಾಗಿದೆ. ಆಗಸ್ಟ್ – ಸೆಪ್ಟಂಬರ್ ವೇಳೆಗೆ ಸಾಲ ಒದಗಿಸಲು ಬ್ಯಾಂಕ್‌ನಿಂದ ಅನುಮೋದನೆ ದೊರೆಯಲಿದೆ,’ ಎಂದರು.
“ಬಿಬಿಎಂಪಿ ವ್ಯಾಪ್ತಿಗೆ 110 ಹಳ್ಳಿಗಳು, ಏಳು ನಗರಸಭೆ ಮತ್ತು ಒಂದು ಪುರಸಭೆ ಸೇರ್ಪಡೆಗೊಂಡ ನಂತರ ಆ ಭಾಗಗಳಲ್ಲಿ ಕುಡಿಯುವ ನೀರು ಸೇರಿದಂತೆ ಹಲವಾರು ಸಮಸ್ಯೆಗಳು ಸೃಷ್ಟಿಯಾಗಿವೆ. ಆ ಹಿನ್ನೆಲೆಧಿಯಲ್ಲಿ ಕಾವೇರಿ 4ನೇ ಹಂತ ಎರಡನೇ ಘಟ್ಟದ ಯೋಜಧಿಯಡಿ 110 ಹಳ್ಳಿಗೆ 10 ಟಿಎಂಸಿ ನೀರು ಒದಗಿಸಲು ಪೈಪ್‌ಲೈನ್ ಅಳವಡಿಕೆ ಕಾರ್ಯ ಆರಂಭವಾಗಿದೆ. ಜೈಕಾ ಬ್ಯಾಂಕ್ ಹಣಕಾಸು ನೆರವು ನೀಡಲು ಒಪ್ಪಿಗೆ ಸೂಚಿಸಿದ ಕೂಡಲೇ 5ನೇ ಹಂತದ ಕಾಮಗಾರಿಗೂ ಚಾಲನೆ ದೊರೆಯಲಿದೆ,’ ಎಂದು ಹೇಳಿದರು.
ಎನ್‌ಜಿಟಿ ಆದೇಶಕ್ಕೂ ಮೊದಲೇ ಕೆಲಸಕ್ಕೆ ಕೈ ಇಟ್ಟಿತ್ತು ಸರ್ಕಾರ: ಸಚಿವ ಕೆ.ಜೆ.ಜಾರ್ಜ್ ಮಾತಾಡಿ, “ಬೆಳ್ಳಂದೂರು ಕೆರೆ ಸಂರಕ್ಷಣೆಗಾಗಿ ಸರ್ಕಾರ ಎಂಟು ತಿಂಗಳ ಹಿಂದೆಯೇ ತಜ್ಞರ ಸಮಿತಿ ರಚಿಸಿತ್ತು. ತಜ್ಞರ ಸಮಿತಿಯು ಕೆರೆ ಸಂರಕ್ಷಣೆ ಹಾಗೂ ಅಭಿವೃದ್ದಿಗೆ ಕೈಗೊಳ್ಳಬೇಕಾದ ಹಲವು ಶಿಫಾರಸ್ಸುಗಳನ್ನು ನೀಡಿತ್ತು. ಅದರ ಆಧಾರದಲ್ಲಿ ಸರ್ಕಾರ ಕ್ರಿಯಾ ಯೋಜನೆಗಳನ್ನು ರೂಪಿಸಿ ಕಾರ್ಯಾರಂಭ ಮಾಡುವ ವೇಳೆಗೆ ಎನ್‌ಜಿಟಿ ಆದೇಶ ನೀಡಿದೆ,’ ಎಂದು ಹೇಳಿದರು.
ವೇದಿಕೆಯಲ್ಲಿಯೇ ತಿರುಗೇಟು: ಕಾರ್ಯಕ್ರಮದಲ್ಲಿ ಶಾಸಕ ಅರವಿಂದ ಲಿಂಬಾವಳಿ ಮಾತನಾಡುತ್ತ, “ಮಹದೇವಪುರ ಕ್ಷೇತ್ರದಿಂದ ಪಾಲಿಕೆಗೆ ಅತಿ ಹೆಚ್ಚು ತೆರಿಗೆ ಸಂಗ್ರಹವಾಗುತ್ತದೆ. ಮಹದೇವಪುರದ ಐಟಿ ಬಿಟಿ ಕಂಪೆನಿಗಳಿಗೆ ತೆರಿಗೆ ಜತೆಗೆ ದಂಡ ಹಾಕಿದ್ದರಿಂದ ಕಂಪೆನಿಗಳು ಬೇರೆಡೆಗೆ ಸ್ಥಳಾಂತರವಾಗುತ್ತಿವೆ. ಇನ್ನು ಇದೇ ಕ್ಷೇತ್ರ ತ್ಯಾಜ್ಯ ಹಾಕಲಾಗುತ್ತಿದೆ. ಕೊಳಚೆ ನೀರನ್ನೂ ಇಲ್ಲಿಗೆ ಹರಿಸಲಾಗುತ್ತಿದೆ,’ ಎಂದು ದೂರಿದರು.
ಇದಕ್ಕೆ ಸಚಿವ ಕೆ.ಜೆ.ಜಾರ್ಜ್ ತಿರುಗೇಟು ನೀಡಿದರು. “ಈ ಹಿಂದಿನ ಸರ್ಕಾರ ದೂರದೃಷ್ಟಿ ಇಟ್ಟುಕೊಂಡು ಕೆಲಸ ಮಾಡಿದ್ದರೆ ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ. 110 ಹಳ್ಳಿಗಳಿಗೆ ಕುಡಿಯುವ ನೀರು ನೀಡುವ ಯೋಜನೆಯಲ್ಲಿ ಮಹದೇಪುರ ಕ್ಷೇತ್ರದ 34 ಹಳ್ಳಿಗಳು ಸೇರಿವೆ,’ ಎಂದರು. ನಂತರ ಮಾತನಾಡಿದ ಸಿಎಂ ಸಿದ್ದರಾಮಯ್ಯ, ದೇಶಕ್ಕೆ ಬೆಂಗಳೂರು ಮಾಹಿತಿ ತಂತ್ರಜ್ಞಾನದ ರಾಜಧಾನಿ.
ಪೂರಕ ವಾತಾವರಣವಿರುವ ಕಾರಣಕ್ಕೇ ಹೆಚ್ಚು ಕಂಪೆನಿಗಳು ಇಲ್ಲಿಗೆ ಬರುತ್ತಿವೆ. ಶಾಸಕರು ಸುಮ್ಮನೆ ಹೇಳಿಕೆಗಳನ್ನು ನೀಡಬಾರದು. ಪಾಲಿಕೆಗೆ ತೆರಿಗೆ ಪಾವತಿಸುವುದು ಎಲ್ಲರ ಕರ್ತವ್ಯ, ಬಹುಶಃ ಕಂಪೆನಿಗಳು ಹಳ್ಳಿಗಳ ಭಾಗದಲ್ಲಿ ಕಡಿಮೆ ತೆರಿಗೆ ಎಂದು ಆ ಕಡೆ ಹೋಗುತ್ತಿರಬಹುದೇನೂ ಎಂದು ಲೇವಡಿ ಮಾಡಿದರು.
ನೀರು ಸಂಸ್ಕರಣಾ ಘಟಕದಲ್ಲಿ ವಿದ್ಯುತ್ ಉತ್ಪಾದನೆ
ಬಿ.ನಾಗಸಂದ್ರ ಬಳಿ 250 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಘಟಕ 60 ಎಂಎಲ್‌ಡಿಯಷ್ಟು ನೀರನ್ನು ಶುದ್ದೀಕರಿಸುವ ಸಾಮರ್ಥಯ ಹೊಂದಿದೆ. ಇಲ್ಲಿ ಶುದ್ಧೀಕರಿಸಿದ ನೀರನ್ನು ಕೋಲಾರ ಮತ್ತು ಚಿಕ್ಕಬಳ್ಳಾಪುರ ಕೆರೆಗಳಿಗೆ ಹರಿಸಲಾಗುತ್ತದೆ. ಜತೆಗೆ ನೀರಿನಲ್ಲಿನ ತ್ಯಾಜ್ಯದಿಂದ ಬಯೋಗ್ಯಾಸ್ ಮೂಲಕ ವಿದ್ಯುತ್ ಉತ್ಪಾದಿಸಲಾಗುತ್ತದೆ. ಇಲ್ಲಿ 1 ಮೇಗಾವ್ಯಾಟ್ ಸಾಮರ್ಥಯದ ವಿದ್ಯುತ್ ಉತ್ಪಾದನಾ ಘಟಕ ನಿರ್ಮಿಸಲಾಗಿದ್ದು, ಉತ್ಪಾದನೆಯಾಗುವ ಶೇ.50ರಷ್ಟು ವಿದ್ಯುತ್ ಘಟಕಕ್ಕೆ ಬಳಸಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬೆಂಗಳೂರಿನ ಸಂಚಾರ ದಟ್ಟಣೆ ನಿಯಂತ್ರಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಕೈಗೆತ್ತಿಕೊಳ್ಳಲು ಮುಂದಾಗಿರುವ ಪೆರಿಫೆರಲ್ ವರ್ತುಲ ರಸ್ತೆಗಳ ನಿರ್ಮಾಣಕ್ಕಾಗಿ ಸರ್ಕಾರ ಹಣಕಾಸು ನೆರವು ಕೋರಿದೆ. ಹಣಕಾಸು ನೆರವು ನೀಡುವ ಕುರಿತು ಚರ್ಚಿಸಲಾಗಿದ್ದು, ಶೀಘ್ರದಲ್ಲಿಯೇ ಈ ಕುರಿತು ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು.
-ಟಾಕಾಯುಕಿ ಕಿಟಾಗಾವ, ಜಪಾನ್ ಕಾನ್ಸುಲೆಟ್
ಬೆಂಗಳೂರು ಜಲಮಂಡಳಿ ಹಾಗೂ ಸರ್ಕಾರದೊಂದಿಗೆ ಜೈಕಾ ಬ್ಯಾಂಕ್ ಉತ್ತಮ ಸಂಬಂಧ ಹೊಂದಿದೆ. ಈವರೆಗೆ ಜೈಕಾ ಬ್ಯಾಂಕ್ 6 ಸಾವಿರ ಕೋಟಿ ರೂ. ಗಳಷ್ಟು ಹಣಕಾಸು ನೆರವನ್ನು ಸರ್ಕಾರಕ್ಕೆ ನೀಡಿದೆ. ನಗರದಲ್ಲಿ ನಿರ್ಮಿಸಲು ಉದ್ದೇಶಿಸಿರುವ 9 ತ್ಯಾಜ್ಯ ಸಂಸ್ಕರಣೆ ಘಟಕಗಳಿಗೆ ಬ್ಯಾಂಕ್‌ನಿಂದ ಹಣಕಾಸು ನೆರವು ನೀಡಲಾಗುವುದು.
-ಸಕಾಮತ್, ಜೈಕಾ ಬ್ಯಾಂಕ್ ಪ್ರತಿನಿಧಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Lakkundi: ಹೊಸದಾಗಿ 5 ಬಾವಿ, 5 ಶಾಸನಗಳು, ಸಾವಿರಕ್ಕೂ ಹೆಚ್ಚು ಶಿಲ್ಪಕಲೆಗಳ ಅನ್ವೇಷಣೆ
Madikeri: ಹಾಡಹಗಲೇ ಹಾರ್ಡ್ ವೇರ್ ಅಂಗಡಿಗೆ ನುಗ್ಗಿ ಒಂಟಿ ಮಹಿಳೆಯ ಸರಗಳ್ಳತನ
Commissioner: ಗೂಂಡಾ ವರ್ತನೆ ತೋರಿದರೆ ಕ್ರಮ; ಕಮಿಷನರ್ ಎಚ್ಚರಿಕೆ
ಪತ್ರಕರ್ತರಿಂದ…ಪತ್ರಕರ್ತರಿಗಾಗಿ… ಕಷ್ಟದಲ್ಲಿ ಕೈಹಿಡಿಯುವ ಆಪದ್ಭಾಂಧವ!
Someshwara: ಸಮುದ್ರಕ್ಕೆ ಹಾರಿದ ಯುವತಿಯ ರಕ್ಷಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.