ಕರಕುಶಲ ಕಲೆ ಬೆಳೆಸಲು ಸರ್ಕಾರ ಬದ್ಧ
Team Udayavani, May 16, 2017, 12:16 PM IST
ಬೆಂಗಳೂರು: ಕರಕುಶಲ ಕಲೆಯನ್ನು ಉಳಿಸಿ, ಪ್ರೋತ್ಸಾಹಿಸಿ, ಸೂಕ್ತ ಮಾರುಕಟ್ಟೆ ವ್ಯವಸ್ಥೆ ಒದಗಿಸಲು ರಾಜ್ಯ ಸರ್ಕಾರ ಬದ್ಧ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದಿಂದ ಸೋಮವಾರ ಎಂ.ಜಿ.ರಸ್ತೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕಾವೇರಿ ಸುವರ್ಣ ಮಹೋತ್ಸವ ಭವನ, ನೂತನ ವಾಣಿಜ್ಯ ಸಂಕೀರ್ಣದ ಶಂಕುಸ್ಥಾಪನೆ ನೆರವೇರಿಸಿದರು.
“ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ವಿಶ್ವೇಶ್ವರಯ್ಯ ಅವರ ಕಾಲದಿಂದಲೂ ಕರ್ನಾಟಕ ಕೈಗಾರಿಕೆಯಲ್ಲಿ ಮುಂದಿದೆ. 1913ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಆರ್ಟ್ ಮತ್ತು ಕ್ರಾಫ್ಟ್ ಸಂಸ್ಥೆ ಆರಂಭಿಸಿದ್ದರು. 1964ರಲ್ಲಿ ಆರ್ಟ್ ಮತ್ತು ಕ್ರಾಫ್ಟ್ ಸಂಸ್ಥೆ ರಾಜ್ಯ ಕರಕುಲಶ ಅಭಿವೃದ್ಧಿ ನಿಗಮವಾಗಿ ಮರುನಾಮಕರಣಗೊಂಡಿದೆ. ಕರಕುಶಲ ಕಲೆಯನ್ನು ಉಳಿಸಿ, ಬೆಳಸಲು ಬೇಕಾದ ಪ್ರೋತ್ಸಾಹ ಹಾಗೂ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲು ರಾಜ್ಯ ಸರ್ಕಾರ ಸಿದ್ಧವಿದೆ,’ಎಂದರು.
“ನಿಗಮದ ಸುವರ್ಣ ಮಹೋತ್ಸವದ ಅಂಗವಾಗಿ 6 ಕೋಟಿ ವೆಚ್ಚದಲ್ಲಿ ಸುವರ್ಣ ಮಹೋತ್ಸವ ಭವನ ನಿರ್ಮಿಸಲಾಗುತ್ತಿದೆ. ರಾಜ್ಯದಲ್ಲಿ ಕರಕುಶಲ ಕಲೆಯಲ್ಲಿ ಬದುಕು ಕಟ್ಟಿಕೊಂಡಿರುವ ಎಲ್ಲರೂ ಗೌರವದಿಂದ ಜೀವನ ನಡೆಸುವಂತಾಗಬೇಕು. ಕರಕುಶಲ ವಸ್ತುಗಳಿಗೆ ನ್ಯಾಯಯುತ ಬೆಲೆ ಸಿಗುವಂತಾಗಬೇಕು. ಮೈಸೂರು ಭಾಗದಲ್ಲಿ ಕರಕುಲಶ ಕರ್ಮಿಗಳು ಹೆಚ್ಚಾಗಿದ್ದಾರೆ,’ ಎಂದು ಹೇಳಿದರು.
ನಿಗಮದ ಅಧ್ಯಕ್ಷೆ ಕಮಲಮ್ಮ ಮಾತನಾಡಿ, “ನಿಗಮದಿಂದ ನಡೆಯುವ ಅಭಿವೃದ್ಧಿ ಚಟುವಟಿಕೆಗೆ ಸರ್ಕಾರ 100 ಕೋಟಿ ವಿಶೇಷ ಅನುದಾನ ನೀಡಬೇಕು. ರಾಜ್ಯದ ಶ್ರೀಗಂಧದ ಡಿಪೋಗಳಲ್ಲಿರುವ ಕರಕುಲಶ ಕರ್ಮಿಗಳಿಗೆ ಯೋಗ್ಯವಾದ ಶ್ರೀಗಂಧ ಪೂರೈಕೆ ಮಾಡುವ ಬಗ್ಗೆ ಅರಣ್ಯ ಇಲಾಖೆಗೆ ಆದೇಶಿಸಬೇಕು,’ ಎಂದು ಸಿಎಂ ಸಿದ್ದರಾಮಯ್ಯ ಅವರಲ್ಲಿ ಮನವಿ ಮಾಡಿದರು.
“ಪ್ರಮುಖ ಮಾರುಕಟ್ಟೆ ಪ್ರದೇಶದಲ್ಲಿ ಕಾವೇರಿ ಮಳಿಗೆ ತೆರೆಯಲು ವಾಣಿಜ್ಯ ಜಾಗವನ್ನು ನಿಗಮಕ್ಕೆ ಬಿಟ್ಟುಕೊಡಬೇಕು. ಮೈಸೂರು ಅರಮನೆ ಜಾಗದಲ್ಲಿ ಈ ಹಿಂದೆ ಇದ್ದ ಸ್ಥಳಕ್ಕೆ ಕಾವೇರಿ ಮಳಿಗೆ ಸ್ಥಳಾಂತರಿಸಲು ಅನುಮತಿ ನೀಡಬೇಕು. ಮೈಸೂರು ಮೃಗಾಲಯ, ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಾವೇರಿ ಮಳಿಗೆ ತೆರೆಯಲು ಅವಕಾಶ ಕಲ್ಪಿಸುವುದು ಮತ್ತು ಸರ್ಕಾರಿ ಕಾರ್ಯಕ್ರಮಗಳಲ್ಲಿ ನೀಡುವ ಉಡುಗೊರೆಯನ್ನು ನಿಗಮದಿಂದಲೇ ಖರೀದಿಸುವ ಸಂಬಂಧ ಸೂಕ್ತ ಸುತ್ತೋಲೆ ಹೊರಡಿಸಬೇಕು,’ ಎಂದು ಬೇಡಿಕೆ ಇಟ್ಟರು.
“ನಿಗಮದಲ್ಲಿ ಖಾಲಿ ಇರುವ 164 ಹುದ್ದೆಭರ್ತಿಗೆ ಅನುಮತಿ ನೀಡುವುದು, ವಿದೇಶಗಳಲ್ಲಿ ಆಯೋಜಿಸುವ ವಸ್ತು ಪ್ರದರ್ಶನದಲ್ಲಿ ಭಾಗವಹಿಸಿ, ನಿಗಮದ ಉತ್ಪನ್ನ ಪ್ರಚಾರಕ್ಕೆ ಅನುಮತಿ ನೀಡುವುದು ಮತ್ತು ಸರ್ಕಾರಿ ಕಚೇರಿಯ ನಿರ್ಮಾಣದ ಸಂದರ್ಭದಲ್ಲಿ ಕೆತ್ತನೆ ಮತ್ತು ಮರಗೆಲಸದ ಸಾಮಗ್ರಿಗಳನ್ನು ನಿಗಮದಿಂದಲೇ ಪಡೆಯುವಂತೆ ಮಾಡಬೇಕು,’ ಎಂಬ ಮನವಿಯನ್ನು ಸಿಎಂಗೆ ಸಲ್ಲಿಸಿದರು.
ಪೀಣ್ಯ ಬಳಿ ಕ್ರಾಫ್ಟ್ ವಿಲೇಜ್
ಬೆಂಗಳೂರು: ಕರಕುಶಲ ಕಲೆಯ ಅಭಿವೃದ್ಧಿಗಾಗಿ ಪೀಣ್ಯಾ ಸಮೀಪದ ದೊಡ್ಡ ಬಿದರಕಲ್ಲಿನ 20 ಎಕರೆ ಪ್ರದೇಶದಲ್ಲಿ “ಕ್ರಾಫ್ಟ್ ವಿಲೇಜ್’ ನಿರ್ಮಿಸಲಾಗುತ್ತಿದೆ ಎಂದು ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಾಗಡಿ ಕಮಲಮ್ಮ ತಿಳಿಸಿದ್ದಾರೆ. ನಿಗಮದ ಸುವರ್ಣ ಮಹೋತ್ಸವ ಶಂಕುಸ್ಥಾಪನಾ ಕಾರ್ಯಕ್ರಮದ ನಂತರ ಸುದ್ದಿಗಾರಧಿರೊಂದಿಗೆ ಮಾತನಾಡಿದ ಅವರು, “ದೊಡ್ಡಬಿದಧಿರಕಲ್ಲಿನಲ್ಲಿ ಲಭ್ಯವಾಗಿರುವ ಜಾಗದಲ್ಲಿ ಈಗಾಗಲೇ ಶ್ರೀಗಂಧದ ಸಸಿಗಳನ್ನು ನೆಟ್ಟಿದ್ದೇವೆ. ಕರಕುಶಲ ಕಲೆ ಮತ್ತು ಸಂಸ್ಕೃತಿಯ ಪುನಶ್ಚೇತನ ಮಾಡುವ ಕಾಯಕ ಇದಾಗಿದೆ,’ ಎಂದು ತಿಳಿಸಿದರು.
“ಕರಕುಶಲ ಕಲೆಯಲ್ಲಿ ಸಾಧನೆ ಮಾಡಿದಧಿವರಿಗೆ ಶಿಲ್ಪಕಲಾ ರಾಷ್ಟ್ರಪ್ರಶಸ್ತಿ ನೀಡುತ್ತಿದ್ದೇವೆ. ಶಿಲ್ಪಗುರು ಪ್ರಶಸ್ತಿಯನ್ನು ಈ ವರ್ಷದಿಂದ ಆರಂಭಿಸಲಿದ್ದೇವೆ. ಬೆಂಗಳೂರಿನಲ್ಲಿ 3, ಮೈಸೂರಿನಲ್ಲಿ 2 ಹಾಗೂ ಮಡಿಕೇರಿ, ಹುಬ್ಬಳ್ಳಿ, ಮಂಗಳೂರು, ಚೆನ್ನೈ ಹಾಗೂ ಸಿಖಂದರಬಾದ್‌ನಲ್ಲಿ ತಲಾ ಒಂದೊಂದು ಕಾವೇರಿ ಕರಕುಶಲ ವ್ಯಾಪಾರ ಮಳಿಗೆ ಇದೆ. ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಕರಕುಶಲ ಕಲಾವಿದರಿಗೆ 2 ವರ್ಷದ ಉಚಿತ ತರಬೇತಿ ನೀಡಲು ಶ್ರೀಗಂಧ ಕಲಾ ಸಂಕೀರ್ಣ ಗುರುಕುಲ ಆರಂಭಿಸಿದ್ದೇವೆ,’ ಎಂದು ಮಾಹಿತಿ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.