ಕೂಡಿ ಬಾಳುವುದೇ ಬಸವ ಸಂಸ್ಕೃತಿ


Team Udayavani, May 16, 2017, 12:35 PM IST

mys5.jpg

ಪಿರಿಯಾಪಟ್ಟಣ: ಕೂಡಿಬಾಳುವ ಸಂಸ್ಕೃತಿಯೇ ಬಸವ ಸಂಸ್ಕೃತಿಯಾಗಿದೆ ಆದ್ದರಿಂದ ಬಸವತತ್ವ ಇಂದಿಗೂ ಪ್ರಸ್ತುತ ಎಂದು ಬೇಬಿ ಮಠದ ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮೀಜಿ ಹೇಳಿದರು.

ತಾಲೂಕಿನ ರಾವಂದೂರು ಗ್ರಾಮದಲ್ಲಿ ನಡೆದ ಬಸವಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಸಹಜವಾಗಿ ಬದುಕುವುದನ್ನು ಬಸವಣ್ಣ ಸಿದ್ಧಾಂತಗಳ ತಿರುಳಾಗಿದ್ದು. ಒಂದು ಸಿದ್ಧಾಂತವನ್ನು ಅಳವಡಿಸಿಕೊಂಡರು ಜೀವನ ಸಾರ್ಥಕ. ಚಿಂತೆಗಳಲ್ಲಿ ಜೀವನವನ್ನು ಕಳೆಯುತ್ತಿದ್ದೇವೆ. ಅದರಿಂದ ಹೊರಬಂದು ಚಿಂತನೆ ಮಾಡಬೇಕು. ಸ್ವಾರ್ಥತೆಯಿಂದ ಎಲ್ಲವನ್ನು ಕಳೆದುಕೊಳ್ಳುತ್ತಿದ್ದೇವೆ.  ಆದ್ದರಿಂದ ಭಗವಂತನ ಚಿಂತನೆಯೂ ಅಗತ್ಯ ಎಂದರು.

ಚನ್ನಬಸವದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಬೆಟ್ಟದಪುರ ಮಠ ಸಂಕಷ್ಟವಿದ್ದ ಸಂದರ್ಭದಲ್ಲಿ ಹಲವರು ಕೈ ಹಿಡಿದಿದ್ದಾರೆ. ಧಾರ್ಮಿಕ ಮನೋಭಾವನೆ ಯುಳ್ಳ ಭಕ್ತರಿಂದ ಸರಕಾರದ ಹಣ ಅಪಮೌಲಿÂàಕರಣವಾದರೂ ಕೊಡುಗೈ ದಾನ ಕಡಿಮೆಯಾಗಿಲ್ಲ. ಪ್ರಪಂಚಕ್ಕೆ ಆಧ್ಯಾತ್ಮಕದ ಬೆಳಕು ನೀಡಿರುವುದು ಭಾರತ. ಬಡವರಾಗಲಿ ಶ್ರೀಮಂತರಾಗಲಿ ಆದರಣೀಯ ಗುಣಗಳನ್ನು ಬೆಳೆಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಬಸವ ಶರಣ ವಿಚಾರಧಾರೆಗಳನ್ನು ನಾಡಿನಾದ್ಯಂತ ಪಸರಿಸಲಿ ಎಂದು ತಿಳಿಸಿದರು.

ಶಾಸಕ ಕೆ.ವೆಂಕಟೇಶ್‌ ಮಾತನಾಡಿ, ಮಹಾತ್ಮರ ಆದರ್ಶಗಳನ್ನು ಬದುಕಿನಲ್ಲಿ ಅಳವಡಿಸಕೊಂಡಾಗ ಮಾತ್ರ ಬದುಕು ಸಾರ್ಧಕತೆ ಕಾಣುತ್ತದೆ ಎಂದರು. ಗುಂಡ್ಲುಪೇಟೆ ಶಾಸಕಿ ಡಾ.ಗೀತಾಮಹದೇವ್‌ಪ್ರಸಾದ್‌ ಮಾತನಾಡಿ, ದಯವೇ ಧರ್ಮದ ಮೂಲವೆಂಬ ಸಕಲ ಪ್ರಾಣಿಗಳ ಬಗ್ಗೆ ಮಾತನಾಡಿದವರು ಬಸವಣ್ಣನವರು. ಯಾವ ಧರ್ಮಕ್ಕೆ ಸೀಮಿತ ಸಂಕುಚಿತ ಮನೋಭಾವನೆ ಹೊಂದಿರುತ್ತದೆ ಅದು ಬಹುದಿನ ಉಳಿಯಲಾರದು. ವಿಶಾಲವಾದ ಮನೋಭಾವನೆಯುಳ್ಳದ್ದು ಬಸವ ತತ್ವ ಆದ್ದರಿಂದ ಪ್ರಪಂಚದಾದ್ಯಂದ ಪಸರಿಸಿದೆ ಎಂದು ತಿಳಿಸಿದರು. 

ಮಾಜಿ ಸಚಿವ ಸಿ.ಎಚ್‌.ವಿಜಯಶಂಕರ್‌ ಮಾತನಾಡಿ,  12ನೇ ಶತಮಾನದಲ್ಲಿ ಜಾತಿಯತೆಯ ವಿರುದ್ಧ ಧ್ವನಿಎತ್ತಿದವರು ವಚನಕಾರರು. ದೇವಾಲಯಗಳಲ್ಲಿ ಅನ್ಯಜಾತಿಯವರಿಗೆ ಪ್ರವೇಶ ಇರದ ಸಂದರ್ಭದಲ್ಲಿ ಶರೀರವೇ ದೇವಾಲಯ ಎಂಬ ಪರಿಕಲ್ಪನೆ ನೀಡಿದವರೇ ವಚನಕಾರರು ಎಂದು ಹೇಳಿದರು.

ಮಾಜಿ ಶಾಸಕ ಎಚ್‌.ಸಿ.ಬಸವರಾಜು, ಎಂಟುನೂರು ವರ್ಷಗಳ ಹಿಂದೆಯೇ ಸಮಾನತೆ ಸಾರಿದವರು ಬಸವಣ್ಣ. ಇದೇ ರೀತಿ ಸಮಾಜದ ಪಿಡುಗಳನ್ನು ಹೋಗಲಾಡಿಸಲು ದುಡಿದವರು ಡಾ.ಬಿ.ಆರ್‌.ಅಂಬೇಡ್ಕರ್‌ ಇವರಿಬ್ಬರು ಸಮಾಜದ ಕಣ್ಣುಗಳು, ಜಾತಿ ವ್ಯವಸ್ಥೆ ತೊಲಬೇಕು ರಾಜಕೀಯ ತತ್ವಗಳು ಜಾತಿಯಾದಾರದ ಮೇಲೆ ಹೋಗುವುದು ತಡೆಯಬೇಕು ಎಂದು ತಿಳಿಸಿದರು.

ಸನ್ಮಾನ: ಕಾರ್ಯಕ್ರಮದಲ್ಲಿ ಗುಂಡ್ಲುಪೇಟೆ ಶಾಸಕಿ ಡಾ.ಗೀತಾಮಹದೇವಪ್ರಸಾದ್‌, ತಂಬಾಕು ಮಂಡಳಿ ಉಪಾಧ್ಯಕ್ಷ ಪಿ.ವಿ.ಬಸವರಾಜಪ್ಪ, ವೈದ್ಯರಾದ ಡಾ.ಜೆ.ಅರವಿಂದ, ಡಾ.ಆರ್‌.ಎಸ್‌.ಪ್ರತಿಮ ಅರವಿಂದ, ಶಿಕ್ಷಕ ಕೆ.ಸಿ.ಸತೀಶ್‌, ವೀರಯೋಧರನ್ನು ಮತ್ತು ಅತಿಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು  ಸನ್ಮಾನಿಸಲಾಯಿತು.

ಎರೆಹೊಸಹಳ್ಳಿ ಮಠದ ಡಾ.ಬಸವಕುಮಾರ ಸ್ವಾಮಿ, ದಿಂಡಗಾಡು ಅಪ್ಪಾಜಿಸ್ವಾಮಿ, ವೀರಶೈವ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಕವನ ಬಸವಕುಮಾರ, ಆರ್‌.ಟಿ.ಸತೀಶ್‌, ಬಿಜೆಪಿ ರಾಜ್ಯಪರಿಷತ್‌ ಸದಸ್ಯ, ಎಚ್‌.ಡಿ.ಕೋಟೆ ಅಖೀಲಭಾರ ವೀರಶೈವ ಮಹಾಸಭಾದ ಎಚ್‌.ಡಿ.ಕೋಟೆ ಅಧ್ಯಕ್ಷ ಪಿ.ವಿ.ಬಸವರಾಜು,  ಶಶಿಕಲಾ ಗಿರೀಶ್‌, ಗ್ರಾಪಂ ಅಧ್ಯಕ್ಷೆ ರಾವಂದೂರು, ತಹಶೀಲ್ದಾರ್‌ ಜೆ.ಮಹೇಶ್‌, ಪರಿಸರಹೋರಾಟಗಾರ ಕೆ.ಎನ್‌.ಸೋಮಶೇಖರ್‌,

ಮುಖ್ಯಮಂತ್ರಿಗಳ ಮಾಜಿ  ಪತ್ರಿಕಾಕಾರ್ಯದರ್ಶಿ ಆರ್‌.ಪಿ.ಜಗದೀಶ್‌, ತಾಪಂ ಅಧ್ಯಕ್ಷೆ ಕೆ.ಆರ್‌.ನಿರೂಪ, ಕೆಪಿಸಿಸಿ ಸದಸ್ಯ ಡಿ.ಟಿ.ಸ್ವಾಮಿ, ನಿವೃತ್ತ ಅಬಕಾರಿ ಆಯುಕ್ತ ಈàರಪ್ಪ, ಬಿಇಒ ಆರ್‌.ಕರಿಗೌಡ, ಮುಖಂಡರಾದ ಕೆ.ಹೊಲದಪ್ಪ, ಆರ್‌.ಎಲ್‌.ಮಣಿ, ಆರ್‌.ಎಸ್‌.ವಿಜಯಕುಮಾರ್‌, ಕುಮಾರವಿಜಯ್‌, ಆರ್‌.ಎಸ್‌. ಮಹೇಶ್‌, ಬಿ.ವಿ.ಅನಿತಾ, ಬಿ.ಜೆ.ಜಗದೀಶ್‌, ಎಚ್‌.ಎನ್‌.ಪಾಲಾಕ್ಷ, ಶಿವಸ್ವಾಮಿ, ಆನಂದ್‌, ಮಂಜುಳ ಮಂಜುನಾಥ್‌ ಸೇರಿದಂತೆ ಮತ್ತಿತರರು ಹಾಜರಿದ್ದರು.

ಟಾಪ್ ನ್ಯೂಸ್

“ಪಿಲಿಪಂಜ” ಹೊಸ ತುಳು ಸಿನಿಮಾದ ಶಿರ್ಷಿಕೆ ಬಿಡುಗಡೆ

Tulu Cinema: “ಪಿಲಿಪಂಜ” ಹೊಸ ತುಳು ಸಿನಿಮಾದ ಶಿರ್ಷಿಕೆ ಬಿಡುಗಡೆ

Defence Secretary: ರಕ್ಷಣಾ ಕಾರ್ಯದರ್ಶಿಯಾಗಿ ರಾಜೇಶ್ ಕುಮಾರ್ ಸಿಂಗ್ ಅಧಿಕಾರ ಸ್ವೀಕಾರ

Defence Secretary: ರಕ್ಷಣಾ ಕಾರ್ಯದರ್ಶಿಯಾಗಿ ರಾಜೇಶ್ ಕುಮಾರ್ ಸಿಂಗ್ ಅಧಿಕಾರ ಸ್ವೀಕಾರ

16-skin

Deepawali: ಪಟಾಕಿ ಅವಘಡ: ಚರ್ಮ ಕಸಿ ಶಸಚಿಕಿತ್ಸೆಗೆ ಸಜ್ಜು

Shocking: ದೀಪಾವಳಿ ಸಂಭ್ರಮದಲ್ಲಿದ್ದ ಚಿಕ್ಕಪ್ಪ- ಸೋದರಳಿಯನನ್ನು ಗುಂಡಿಕ್ಕಿ ಹತ್ಯೆ…

Shocking: ದೀಪಾವಳಿ ಸಂಭ್ರಮದಲ್ಲಿದ್ದ ಚಿಕ್ಕಪ್ಪ- ಸೋದರಳಿಯನನ್ನು ಗುಂಡಿಕ್ಕಿ ಹತ್ಯೆ…

ಪಿಎಂ ಆರ್ಥಿಕ ಸಲಹಾ ಮಂಡಳಿಯ ಅಧ್ಯಕ್ಷ ಡಾ.ಬಿಬೇಕ್ ಡೆಬ್ರಾಯ್ ನಿಧನ

Dr Bibek Debroy: ಪಿಎಂ ಆರ್ಥಿಕ ಸಲಹಾ ಮಂಡಳಿಯ ಅಧ್ಯಕ್ಷ ಡಾ.ಬಿಬೇಕ್ ಡೆಬ್ರಾಯ್ ನಿಧನ

Sandalwood: ಗೆಲುವಿನ ಓಟದಲ್ಲಿ ಮಂಕಾದ ಹೊಸಬರು; ಕೈ ಹಿಡಿಯದ ಪ್ರೇಕ್ಷಕ

Sandalwood: ಗೆಲುವಿನ ಓಟದಲ್ಲಿ ಮಂಕಾದ ಹೊಸಬರು; ಕೈ ಹಿಡಿಯದ ಪ್ರೇಕ್ಷಕ

Ignoring MES is better than banning it: Satish Jarakiholi

Belagavi; ಎಂಇಎಸ್‌ ನಿಷೇಧಕ್ಕಿಂತ ನಿರ್ಲಕ್ಷ್ಯ ಮಾಡುವುದು ಉತ್ತಮ: ಸತೀಶ್‌ ಜಾರಕಿಹೊಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4

Hunsur: ಆಟೋ-ಬೈಕ್ ಡಿಕ್ಕಿ; ಸವಾರ ಸಾವು

ED-Raid

MUDA Case: ಜಾರಿ ನಿರ್ದೇಶನಾಲಯದಿಂದ ನೂರಾರು ಪುಟಗಳ ದಾಖಲೆ ವಶ

JDS

By Election: ಜೆಡಿಎಸ್‌ ಸ್ಟಾರ್‌ ಪ್ರಚಾರಕರ ಪಟ್ಟಿ: ಜಿಟಿಡಿ ಹೆಸರು ಔಟ್‌, ಪುತ್ರ ಎಂಟ್ರಿ 

Hunasuru-Women

Hunasur: ವರದಕ್ಷಿಣೆ ಕಿರುಕುಳಕ್ಕೆ ಬಲಿಯಾದ ತಿಪಟೂರಿನ ಮಹಿಳೆ!

Prathap-Simha

Waqf Property: ವಕ್ಫ್ ಆಸ್ತಿ ಅಕ್ಬರ್, ಔರಂಗಜೇಬ್‌ ಬಿಟ್ಟುಹೋದ ಆಸ್ತಿಯಾ?: ಪ್ರತಾಪ್‌ ಸಿಂಹ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

“ಪಿಲಿಪಂಜ” ಹೊಸ ತುಳು ಸಿನಿಮಾದ ಶಿರ್ಷಿಕೆ ಬಿಡುಗಡೆ

Tulu Cinema: “ಪಿಲಿಪಂಜ” ಹೊಸ ತುಳು ಸಿನಿಮಾದ ಶಿರ್ಷಿಕೆ ಬಿಡುಗಡೆ

Defence Secretary: ರಕ್ಷಣಾ ಕಾರ್ಯದರ್ಶಿಯಾಗಿ ರಾಜೇಶ್ ಕುಮಾರ್ ಸಿಂಗ್ ಅಧಿಕಾರ ಸ್ವೀಕಾರ

Defence Secretary: ರಕ್ಷಣಾ ಕಾರ್ಯದರ್ಶಿಯಾಗಿ ರಾಜೇಶ್ ಕುಮಾರ್ ಸಿಂಗ್ ಅಧಿಕಾರ ಸ್ವೀಕಾರ

19-bng

Bengaluru: ಕಾವೇರಿ ನೀರು 6ನೇ ಹಂತದ ಯೋಜನೆಗೆ ಸಿದ್ಧತೆ

18-bng

ಆಟೋದಲ್ಲಿ ಗಾಂಜಾ ಮಾರುತ್ತಿದ್ದ ಚಾಲಕನ ಬಂಧನ

aaram aravinda swamy movie song hudukuta hoda

Aaram Aravinda Swamy: ಹುಡುಕತ್ತಾ ಹೋದ ಅರವಿಂದ್‌ ಸ್ವಾಮಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.