ಟೀ ಕುಡಿಯೋದೇ ಕೆಲ್ಸ, ಚಹಾ ಹೀರಿಯೇ, ಸಂಬಳ ಎಣಿಸ್ತಾರೆ!
Team Udayavani, May 16, 2017, 1:04 PM IST
ಇದು “ಟೀ ಟೇಸ್ಟರ್’ ಹುದ್ದೆಯ ಸಮಾಚಾರ. ಟೀ ಟೇಸ್ಟಿಂಗ್ ಎಂಬ ಇಂಟೆರೆಸ್ಟಿಂಗ್ ಕ್ಷೇತ್ರದಲ್ಲಿ ಇವರು ಇರ್ತಾರೆ. ಬೆಳಗ್ಗೆ ಎದ್ದೊಡನೆ ಏನನ್ನೂ ಕುಡಿಯದೆ, ಸೇವಿಸದೆ, ಶುದ್ಧ ನಾಲಿಗೆಯಯಲ್ಲಿ ಕಂಪನಿಯ ಲ್ಯಾಬ್ ತಲುಪುತ್ತಾರೆ. ಅಲ್ಲಿ ನಾನಾ ವಿಧದ ಚಹಾದ ಸ್ಯಾಂಪಲ್ ಇಟ್ಟಿರುತ್ತಾರೆ. ಅವುಗಳ ಪರಿಮಳ, ರುಚಿ ಹೇಗಿದೆ? ಸ್ವಾದದಲ್ಲಿ ಏನು ಕೊರತೆಯಿದೆ? ಎಂಬುದನ್ನು ವಿವರಿಸುವುದೇ ಇವಕ ಕೆಲ್ಸ…
ಚಹಾ, ಚೈತನ್ಯ ಉಕ್ಕಿಸುವ ಪೇಯ. ಬೆಳಗ್ಗೆ ಎದ್ದೊಡನೆ ಇಲ್ಲವೇ ಉಪಾಹಾರ ಮುಗಿದಾಗ, ಇನ್ನಾéರೋ ಗೆಳೆಯನನ್ನು ಭೇಟಿ ಆದಾಗ, ಹೊರಗೆ ಒಂದು ಮಳೆ ಬಿದ್ದಾಗ, ತಲೆನೋವಾದಾಗ, ಕೆಲ್ಸ ಜಾಸ್ತಿ ಇರೋವಾಗ, ಮನಸ್ಸಿಗೆ ತೀರಾ ಬೋರ್ ಆದಾಗ, ಮನಸ್ಸು ಏಕಾಂತ ಬಯಸಿದಾಗ… ಹೀಗೆ, ಯಾವಾಗ ಬೇಕೋ ಆವಾಗ್ಗ ಚಹಾ ನಮಗೆಲ್ಲ ಸ್ನೇಹಿತ. ಒಂದು ಗುಟುಕು ಹೀರಿಬಿಟ್ಟರೆ ಮನಸ್ಸು ಅರಳುತ್ತದೆ. ಇರುವ ನೋವೆಲ್ಲ ಆವಿ ಆಗುತ್ತದೆಂಬ ನಂಬಿಕೆಯಲ್ಲಿ ಜಗತ್ತಿದೆ.
ಆದರೆ, ಚಹಾವನ್ನೇ ನಂಬಿಕೊಂಡ ಕೆಲವರು ಅಲ್ಲಲ್ಲಿ ಇರುತ್ತಾರೆ. ಅವರು ಚಹಾ ಕುಡಿಯುವುದು ಆಂತರ್ಯದ ಆರಾಮಕ್ಕಾಗಲೀ, ಬಾಹ್ಯ ವಾತಾವರಣದ ಪ್ರಭಾವಕ್ಕಾಗಲೀ ಅಲ್ಲ. ಕೇವಲ ದುಡ್ಡೆಣಿಸಲು! ಕಂಪನಿ ನೀಡುವ ಚಹಾದ ಟೇಸ್ಟನ್ನು ಅವರು ಹೇಗಿದೆ ಎಂದು ಹೇಳಿದರೆ, ತಿಂಗಳ ಕೊನೆಯಲ್ಲಿ ಅವರಿಗೆ ಭರ್ಜರಿ ಸ್ಯಾಲರಿ ಬರುತ್ತೆ!
ಯೆಸ್… ಇದು “ಟೀ ಟೇಸ್ಟರ್’ ಹುದ್ದೆಯ ಸಮಾಚಾರ. ಟೀ ಟೇಸ್ಟಿಂಗ್ ಎಂಬ ಇಂಟೆರೆಸ್ಟಿಂಗ್ ಕ್ಷೇತ್ರದಲ್ಲಿ ಇವರು ಇರ್ತಾರೆ. ಬೆಳಗ್ಗೆ ಎದ್ದೊಡನೆ ಏನನ್ನೂ ಕುಡಿಯದೆ, ಸೇವಿಸದೆ, ಶುದ್ಧ ನಾಲಿಗೆಯಯಲ್ಲಿ ಕಂಪನಿಯ ಲ್ಯಾಬ್ ತಲುಪುತ್ತಾರೆ. ಅಲ್ಲಿ ನಾನಾ ವಿಧದ ಚಹಾದ ಸ್ಯಾಂಪಲ್ ಇಟ್ಟಿರುತ್ತಾರೆ. ಅವುಗಳ ಪರಿಮಳ, ರುಚಿ ಹೇಗಿದೆ? ಸ್ವಾದದಲ್ಲಿ ಏನು ಕೊರತೆಯಿದೆ? ಎಂಬುದನ್ನೆಲ್ಲ ಇವರು ವಿವರಿಸಬೇಕು. ಮಾರುಕಟ್ಟೆಯಲ್ಲಿ ಗ್ರಾಹಕ ಇಷ್ಟಪಡುವ ಚಹಾ ಯಾವುದು? ಚಹಾದಲ್ಲಿನ ಬಣ್ಣದ ಗುಟ್ಟೇನು? ಪರಿಮಳದ ಆಕರ್ಷಣೆ ಏಕೆ ಮುಖ್ಯ? ಎಂಬ ಸಂಗತಿಗಳನ್ನು ಇವರು ಚೆನ್ನಾಗಿ ಬಲ್ಲರು.
ಸಾದಾ ಟೀ, ಕೋಲ್ಡ್ ಟೀ, ಜಿಂಜರ್ ಟೀ, ಗ್ರೀನ್ ಟೀ, ಲೆಮನ್ ಟೀ… ಹೀಗೆ ವೈವಿಧ್ಯ ಟೀಯ ಸ್ವಾದಗಳನ್ನು ಬಲ್ಲ ಇವರಿಗೆ ಚಹಾ ಕೃಷಿಯೂ ಗೊತ್ತಿರುತ್ತೆ. ಡಾರ್ಜಿಂಲಿಂಗ್ ಟೀ, ಕಾಶ್ಮೀರಿ ಕಾವಾ, ಕಣ್ಣಂದೇವನ್ ಬೆಟ್ಟದಲ್ಲಿ ಚಹಾದ ಎಲೆಗಳನ್ನು ಹೇಗೆ ಪೋಷಿಸುತ್ತಾರೆ? ಯಾವ ವಾತಾವರಣದಲ್ಲಿ ಬೆಳೆಯುತ್ತವೆ? ಚಹಾ ಮಾಡುವಾಗ ಇವುಗಳಿಗೆ ಏನನ್ನು ಸೇರಿಸ್ಬೇಕು? ಇವೆಲ್ಲದರ ಮಾಹಿತಿ ಅವರಲ್ಲಿರುತ್ತೆ.
ಅರ್ಹತೆ ಏನೇನು?
– ರುಚಿ ವೈವಿಧ್ಯತೆ ಕುರಿತು ಸಂಪೂರ್ಣ ಜ್ಞಾನ, ಪರಿಮಳ ಹೀರಿಕೊಳ್ಳುವ ಕಲೆ, ಬಣ್ಣದ ಬಗೆಗಳನ್ನು ಚೆನ್ನಾಗಿ ತಿಳಿದಿರಬೇಕು.
– ಟೀ ಟೇಸ್ಟಿಂಗ್ ಕೋರ್ಸ್ ಅನ್ನು ಪೂರೈಸಿರಬೇಕು. (3 ತಿಂಗಳಿಂದ 1 ವರ್ಷದ ತನಕ ಡಿಪ್ಲೋಮಾ ಕೋರ್ಸ್‌ಗಳಿವೆ)
– ಚಹಾದಲ್ಲಿನ ವೈವಿಧ್ಯತೆಗಳ ಬಗ್ಗೆ ಜ್ಞಾನ ಹೊಂದಿರಬೇಕು.
– ಪರಿಣತ ಟೀ ಟೇಸ್ಟರ್ ಆಗಲು 6 ವರ್ಷ ಅನುಭವ ಆಗಬೇಕು. ಅಲ್ಲಿಯ ತನಕ ತಾಳ್ಮೆ ಅಗತ್ಯ.
– ತಂಬಾಕು ಸೇವನೆ, ಮಧ್ಯಪಾನ, ಧೂಮಪಾನ ಚಟ ಇರಬಾರದು. ಚೂÂಯಿಂಗ್ ಗಮ್ ಸೇವಿಸುವ ಅಭ್ಯಾಸ ಇರಬಾರದು.
– ಟೀ ತೋಟದಿಂದ ಚಹಾದ ಮಾರುಕಟ್ಟೆ ತನಕದ ಆಗುಹೋಗುಗಳನ್ನು ಬಲ್ಲವರಾಗಿರಬೇಕು.
ಸ್ಯಾಲರಿ ಹೇಗಿರುತ್ತೆ?
ಭಾರತ ಸೇರಿದಂತೆ, ಶ್ರೀಲಂಕಾ, ಚೀನಾ, ಅಮೆರಿಕ, ಐರೋಪ್ಯ ರಾಷ್ಟ್ರಗಳಲ್ಲಿ ಟೀ ಟೇಸ್ಟರ್‌ಗಳಿಗೆ ಹೆಚ್ಚು ಬೇಡಿಕೆ ಇದೆ. ಭಾರತದಲ್ಲಿ ಟ್ರೈನಿ ಹುದ್ದೆಯಲ್ಲೇ 8- 10 ಸಾವಿರ ಸಂಬಳ ಎಣಿಸಬಹುದು. 6 ವರ್ಷದ ಅನುಭವ ಮೇಲ್ಪಟ್ಟವರಿಗೆ 30 ಸಾವಿರ ರೂ.ಗಳಿಗೂ ಅಧಿಕ ಸಂಬಳವಿದೆ. ಅನುಭವ ಆಗುತ್ತಿದ್ದಂತೆ ಸ್ಪೆಷೆಲ್ ಟೀ ಟೇಸ್ಟರ್ ಎಂಬ ಬಡ್ತಿ ಸಿಗುತ್ತೆ. ಆಗ ಸಂಬಳವೂ 60 ಸಾವಿರ ರೂ. ದಾಟುವ ಸಾಧ್ಯತೆ ಇರುತ್ತೆ.
ಕೋರ್ಸ್ ಎಲ್ಲೆಲ್ಲಿವೆ?
– ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಪ್ಲಾಂಟೇಶನ್ ಮ್ಯಾನೇಜ್‌ಮೆಂಟ್, ಬೆಂಗಳೂರು
– ಅಸ್ಸಾಂ ಅಗ್ರಿಕಲ್ಚರಲ್ ಯುನಿವರ್ಸಿಟಿ, ಗುವಾಹಟಿ
– ಡಾರ್ಜಿಲಿಂಗ್ ಟೀ ರಿಸರ್ಚ್ ಆ್ಯಂಡ್ ಮ್ಯಾನೇಜ್‌ಮೆಂಟ್ ಅಸೋಸಿಯೇಶನ್
– ಯುನಿವರ್ಸಿಟಿ ಆಫ್ ನಾರ್ತ್ ಬೆಂಗಾಲ್, ಡಾರ್ಜಿಲಿಂಗ್
– ಬಿರ್ಲಾ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್, ಕೋಲ್ಕತ್ತಾ
– ದಿಪ್ರಾಸ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಸ್ಟಡೀಸ್, ಕೋಲ್ಕತ್ತಾ
– ಸೌರಭ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Charmadi: ಮೃತ್ಯುಂಜಯ ನದಿಯಲ್ಲಿ ಕಾಣಿಸಿಕೊಂಡ ಒಂಟಿ ಸಲಗ
Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು
Kerala govt: ಶಬರಿಮಲೆ ವರ್ಚುವಲ್ ಕ್ಯೂ ಬುಕ್ಕಿಂಗ್ ಮಿತಿ ಹೆಚ್ಚಳ
Uttar Pradesh: ಝಾನ್ಸಿ ಅಗ್ನಿ ಅವಘಡ: ಗುರುತೇ ಸಿಗದಂತೆ ಕರಕಲಾದ ಹಸುಳೆಗಳು
G20 Leaders Summit: ಪ್ರಧಾನಿ ಮೋದಿ ನೈಜೀರಿಯಾ, ಬ್ರೆಜಿಲ್, ಗಯಾನಾ ಪ್ರವಾಸ ಶುರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.