ನಿರುದ್ಯೋಗ ನಿವಾರಣೆಗೆ ಕೌಶಲ ತರಬೇತಿ


Team Udayavani, May 16, 2017, 4:15 PM IST

gul5.jpg

ಚಿಂಚೋಳಿ: ನಿರುದ್ಯೋಗ ಸಮಸ್ಯೆ ದೇಶದ ಪ್ರಧಾನ ಸಮಸ್ಯೆಯಾಗಿದೆ. ಇದನ್ನು ಬಗೆಹರಿಸುವುದರಲ್ಲಿ ರಾಜ್ಯದ ಪಾಲು ಸಹಾ ಸೇರಿರುತ್ತದೆ. ರಾಜ್ಯದ ನಿರುದ್ಯೋಗಿ ಯುವಕ- ಯುವತಿಯರಿಗೆ ಕೌಶಲ ತರಬೇತಿ ನೀಡುವುದು ನಮ್ಮ ಸರಕಾರದ ಮುಖ್ಯ ಉದ್ದೇಶವಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಂಸದೀಯ ಕಾರ್ಯದರ್ಶಿ ಡಾ| ಉಮೇಶ ಜಾಧವ ಹೇಳಿದರು.

ಪಟ್ಟಣದ ತಹಶೀಲ್ದಾರ ಕಚೇರಿ ಆವರಣದಲ್ಲಿ ಕೌಶಲ್ಯ ಅಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ತಾಲೂಕು ಆಡಳಿತ, ತಾಪಂ, ಪುರಸಭೆ ಇವುಗಳ ಸಹಯೋಗದಲ್ಲಿ ಸೋಮವಾರ ಆಯೋಜಿಸಲಾಗಿದ್ದ ನಿರುದ್ಯೋಗಿ ಯುವ ಜನರ ಬೇಡಿಕೆ ಸಮೀಕ್ಷೆ ಮತ್ತು ನೋಂದಣಿ ಕಾರ್ಯಕ್ರಮ ಕೌಶಲ ವೆಬ್‌ ಪೋರ್ಟಲ್‌ಗೆ ಚಾಲನೆ ನೀಡಿ ಅವರು ಮಾತನಾಡಿದರು. 

ನಮ್ಮ ರಾಜ್ಯದಲ್ಲಿ ಪ್ರತಿ ವರ್ಷ 6.85 ಲಕ್ಷ ಯುವಕರು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಹಾಗೂ 3. 69 ಲಕ್ಷ ಯುವ ಜನರು ಪಿಯುಸಿ ಪರೀಕ್ಷೆ ಮತ್ತು 3.66 ಲಕ್ಷ ಯುವಕ ಯುವತಿಯರು ಪದವಿ ಪರೀಕ್ಷೆ ತೇರ್ಗಡೆಯಾಗಿ ಉದ್ಯೋಗ ಮಾರುಕಟ್ಟೆಗೆ ಸೇರ್ಪಡೆಯಾಗುತ್ತಿದ್ದಾರೆ. ಆದರೆ ಅಗತ್ಯ ನೈಪುಣ್ಯತೆಗಳ ಕೊರತೆಗಳಿಂದ ಸೂಕ್ತ ಉದ್ಯೋಗ ಪಡೆಯಲು ತಮ್ಮ ಶೈಕ್ಷಣಿಕ ಅರ್ಹತೆ ಬಳಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ.

ಆದ್ದರಿಂದ ಬಹುತೇಕ ಯುವ ಜನರಿಗೆ ತಮ್ಮ ನಿರೀಕ್ಷಿತ ಮಟ್ಟದಲ್ಲಿ ಸೂಕ್ತ ಉದ್ಯೋಗ ಪಡೆದುಕೊಳ್ಳಲು ಅಥವಾ ಸಬಲೀಕರಣ ಹೊಂದಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಸರಕಾರ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯಿಂದ ಯುವ ಜನತೆಗೆ ಅಗತ್ಯ ಕೌಶಲ ತರಬೇತಿ ನೀಡಲು ಉದ್ದೇಶಿಸಿದೆ. 

ನಮ್ಮ ವಿವಿಧ ಯೋಜನೆ ಅಡಿ 5 ಲಕ್ಷ ಯುವ ಜನತೆಗೆ ತರಬೇತಿ ನೀಡಲಾಗುತ್ತಿದೆ ಎಂದು ಹೇಳಿದರು. ಅಧಿಕಾರಿಗಳು ಹಳ್ಳಿಗಳಲ್ಲಿ ವ್ಯಾಪಕ ಪ್ರಚಾರ ಮಾಡಿ ಯೋಜನೆ ಯಶಸ್ವಿಗೊಳಿಸಬೇಕು ಎಂದು ಹೇಳಿದರು. ಮುಖ್ಯಾಧಿಕಾರಿ ಮನೋಜಕುಮಾರ ಗುರಿಕಾರ, ಸಿಡಿಪಿಒ ಜಗನ್ನಾಥ ಗಾದಾ, ಬಿಇಒ ಜರ್ನಾಧನರೆಡ್ಡಿ ಮಾಲಿಪಾಟೀಲ, ಶಿವಯೋಗಿ ಮಠಪತಿ, ತಾಪಂ ಅಧ್ಯಕ್ಷೆ ರೇಣುಕಾ ಚವ್ಹಾಣ, ಪುರಸಭೆ ಅಧ್ಯಕ್ಷೆ ಇಂದುಮತಿ ದೇಗಲಮಡಿ ಭಾಗವಹಿಸಿದ್ದರು.

ತಾಲೂಕಿನ ಅನೇಕ ಗ್ರಾಮಗಳಿಂದ ನಿರುದ್ಯೋಗಿ ಯುವಕ ಯುವತಿಯರು ನೋಂದಣಿಗಾಗಿ ಆಗಮಿಸಿದ್ದರು. ತಹಶೀಲ್ದಾರ ಪ್ರಕಾಶ ಕುದುರೆ ಸ್ವಾಗತಿಸಿದರು. ಬಸವರಾಜ ಐನೋಳಿ ನಿರೂಪಿಸಿದರು. ತಾಪಂ ಅಧಿಕಾರಿ ಅನೀಲಕುಮಾರ ರಾಠೊಡ ವಂದಿಸಿದರು.  

ಟಾಪ್ ನ್ಯೂಸ್

Rabakavi-Yatnal

Waqf Issue: ಬಸವಣ್ಣನವರ ಕುರಿತ ಹೇಳಿಕೆಗೆ ಬಸನಗೌಡ ಯತ್ನಾಳ್‌ ಕೊಟ್ಟ ಸಮರ್ಥನೆ ಏನು?

HDK (3)

Vokkaliga ಸ್ವಾಮೀಜಿ ವಿರುದ್ಧ ಕೇಸ್‌; ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಅರಾಜಕತೆ:ಎಚ್ ಡಿಕೆ

Mahayuti

Maharashtra; ಡಿ.5 ರಂದು ಪ್ರಧಾನಿ ಸಮ್ಮುಖದಲ್ಲಿ ನೂತನ ಸರಕಾರ ಪ್ರಮಾಣ ವಚನ

ಕಾಂಗ್ರೆಸ್ ಏಜೆಂಟ್ ಆಗಿ ಬಿಜೆಪಿ ದುರ್ಬಲಗೊಳಿಸುತ್ತಿರುವ ಯತ್ನಾಳ್: ಸ್ವಪಕ್ಷ ನಾಯಕರ ಆಕ್ರೋಶ

ಕಾಂಗ್ರೆಸ್ ಏಜೆಂಟ್ ಆಗಿ ಬಿಜೆಪಿ ದುರ್ಬಲಗೊಳಿಸುತ್ತಿರುವ ಯತ್ನಾಳ್: ಸ್ವಪಕ್ಷ ನಾಯಕರ ಆಕ್ರೋಶ

pratap-Simha

Waqf Issue: ಪಕ್ಷದ ಕಾರ್ಯಕರ್ತನಾಗಿ ಯಾರೇ ಹೋರಾಟಕ್ಕೆ ಕರೆದರೂ ಹೋಗ್ತಿನಿ: ಪ್ರತಾಪ್‌ ಸಿಂಹ

Chikkamagaluru: ಆನೆ ದಾಳಿಗೆ ವ್ಯಕ್ತಿ ಸಾ*ವು… ಅರಣ್ಯ ಇಲಾಖೆ ವಿರುದ್ಧ ಆಕ್ರೋಶ

Chikkamagaluru: ಕಾಡಾನೆ ದಾಳಿಗೆ ವ್ಯಕ್ತಿ ಸಾ*ವು… ಅರಣ್ಯ ಇಲಾಖೆ ವಿರುದ್ಧ ಆಕ್ರೋಶ

BJP 2

BJP;ಯತ್ನಾಳ್ ವಿರುದ್ಧ ಕ್ರಮ ಕೈಗೊಳ್ಳುವ ಮುನ್ನ ಆ ಇಬ್ಬರ ಮೇಲೆ ಕೈಗೊಳ್ಳಬೇಕಲ್ಲ?!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kalaburagi: ಅನುಭವ ಮಂಟಪ ಸ್ಥಳ ಮರಳಿ ಪಡೆಯಲು ದೆಹಲಿ ಚಲೋ

Kalaburagi: ಅನುಭವ ಮಂಟಪ ಸ್ಥಳ ಮರಳಿ ಪಡೆಯಲು ದೆಹಲಿ ಚಲೋ

Kalaburagi: 6 acres of sugarcane crop caught fire after being struck by an electric wire

Kalaburagi: ವಿದ್ಯುತ್​ ತಂತಿ ತಗುಲಿ 6 ಎಕರೆ ಕಬ್ಬಿನ ಬೆಳೆ ಬೆಂಕಿಗಾಹುತಿ

ಜಮೀನು ವ್ಯಾಜ್ಯ: ಪೆಟ್ರೋಲ್ ಸುರಿದು ಕುಟುಂಬಸ್ಥರ ಸಾಮೂಹಿಕ ಹತ್ಯೆಗೆ ಯತ್ನ

Kalaburagi: ಜಮೀನು ವ್ಯಾಜ್ಯ; ಪೆಟ್ರೋಲ್ ಸುರಿದು ಕುಟುಂಬಸ್ಥರ ಸಾಮೂಹಿಕ ಹತ್ಯೆಗೆ ಯತ್ನ

1-kims

Kalaburagi; 36 ಗಂಟೆಯಲ್ಲಿ ತಾಯಿ ಮಡಿಲು ಸೇರಿದ ಮಗು: ಪೊಲೀಸರ ಭರ್ಜರಿ ಕಾರ್ಯಾಚರಣೆ

ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್‌ ಯತ್ನಾಳ್‌

ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್‌ ಯತ್ನಾಳ್‌

MUST WATCH

udayavani youtube

ಶ್ರೀ ಕೃಷ್ಣನ ಸೇವೆಗೆ ಬದುಕನ್ನೇ ಮುಡಿಪಾಗಿಟ್ಟ ಪ್ರಭಾಕರ ಉಳ್ಳೂರು

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

ಹೊಸ ಸೇರ್ಪಡೆ

Rabakavi-Yatnal

Waqf Issue: ಬಸವಣ್ಣನವರ ಕುರಿತ ಹೇಳಿಕೆಗೆ ಬಸನಗೌಡ ಯತ್ನಾಳ್‌ ಕೊಟ್ಟ ಸಮರ್ಥನೆ ಏನು?

21

Udupi: ಬೈಕ್‌ಗೆ ಇನ್ನೋವಾ ಢಿಕ್ಕಿ; ಸವಾರನಿಗೆ ಗಾಯ

Syed Modi International 2024:  ಹೂಡಾಗೆ ಸೋಲು; ಸಿಂಧು ಫೈನಲಿಗೆ

Syed Modi International 2024: ಹೂಡಾಗೆ ಸೋಲು; ಸಿಂಧು ಫೈನಲಿಗೆ

World Chess Championship: ಗುಕೇಶ್‌-ಲಿರೆನ್‌ 5ನೇ ಪಂದ್ಯ ಡ್ರಾ

World Chess Championship: ಗುಕೇಶ್‌-ಲಿರೆನ್‌ 5ನೇ ಪಂದ್ಯ ಡ್ರಾ

ACC U19 Asia Cup 2024: ಭಾರತ ವಿರುದ್ಧ ಪಾಕ್‌ಗೆ ಜಯ

ACC U19 Asia Cup 2024: ಭಾರತ ವಿರುದ್ಧ ಪಾಕ್‌ಗೆ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.