ಸೆಲಬ್ರಿಟಿ ಟಾಕ್‌ : ಪ್ರತಿಭಾ ಪಂಚ್‌ಗೆ ಅಪರಾಧಿಗಳೆಲ್ಲಾ ಅಂದರ್‌


Team Udayavani, May 17, 2017, 3:25 AM IST

Avalu-Prathibha.jpg

ಪತ್ತೇದಾರಿಗಳೆಂದರೆ ಕರಿ ನೀಳ ಕೋಟು, ತಲೆ ಮೇಲೆ ಟೊಪ್ಪಿ, ಗಂಭೀರ ವದನ, ಬಾಯಲ್ಲೊಂದು ಸಿಗಾರ್‌ ಇಟ್ಟುಕೊಂಡ ವ್ಯಕ್ತಿಯ ಚಿತ್ರಣ ಕಣ್ಮುಂದೆ ಬರುತ್ತಿತ್ತು. ಈಗ ಈ ಡೆಫ‌ನಿಷನ್‌ ಅನ್ನು ಬದಲಾಯಿಸುತ್ತಿರುವ ಕೀರ್ತಿ ಪ್ರತಿಭಾಳದ್ದು. ಯಾವ ಪ್ರತಿಭಾ ಎಂದಿರಾ? ‘ಪತ್ತೇದಾರಿ ಪ್ರತಿಭಾ’ ಕಣ್ರೀ… ಈಕೆ ಗೃಹಿಣಿ. ಸೀರೆಯುಟ್ಟುಕೊಂಡು ಮನೆಗೆಲಸಗಳನ್ನು ಮಾಡಿಕೊಂಡೇ ಅಪರಾಧಿ ಕೃತ್ಯಗಳನ್ನು ಬಯಲಿಗೆಳೆಯುತ್ತಿದ್ದಾಳೆ. ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಪತ್ತೇದಾರಿ ಪ್ರತಿಭಾ’ ಧಾರಾವಾಹಿಯ ಶರ್ಮಿಳಾ ಈಗ ಪ್ರತಿಭಾ ಎಂದೇ ಚಿರಪರಿಚಿತರಾಗಿದ್ದಾರೆ. ಧಾರಾವಾಹಿಯಲ್ಲೇನೋ ಪತ್ತೇದಾರಿಕೆ ಮಾಡುವ ಇವರು ಅದನ್ನೇ ತಮ್ಮ ಮನೆಯಲ್ಲೂ ಮಾಡುತ್ತಾರಾ ಎಂದು ತಿಳಿಯಲು ಅವರನ್ನೇ ಮಾತಿಗೆಳೆದೆವು…

ಹೋದಲ್ಲೆಲ್ಲಾ ಪ್ರತಿಭಾ ಅಂತಲೇ ನಿಮ್ಮನ್ನು ಜನ ಕರೆಯುತ್ತಿದ್ದಾರಂತೆ!?
ಹೌದು. ಕಲಾವಿದೆಯಾಗಿ ನನಗೆ ಪ್ರತಿಭಾ ಪಾತ್ರ ಒಂಥರಾ ಮರುಹುಟ್ಟು ಇದ್ದ ಹಾಗೆ. ಏಕೆಂದರೆ ನಾನು ‘ಸೀತೆ’ ಧಾರಾವಾಹಿಯಲ್ಲಿ ನಟಿಸುತ್ತಿದ್ದ ವೇಳೆ ಎಲ್ಲರೂ ಸೀತೆ ಅಂತಲೇ ಕರೆಯುತ್ತಿದ್ದರು. ‘ಪಲ್ಲವಿ ಅನುಪಲ್ಲವಿ’ ಧಾರಾವಾಹಿಯಿಂದ ‘ನಂದಿನಿ’ ಎಂಬ ಹೆಸರು ಸಿಕ್ಕಿತು. ಆದರೆ ಜನ ಈಗ ಅದೆಲ್ಲವನ್ನೂ ಮರೆತು ‘ಪ್ರತಿಭಾ’ ಅಂತ ಕರೆಯುತ್ತಿದ್ದಾರೆ. ಒಂದು ಪಾತ್ರ ಜನರ ಮನಸ್ಸಿನಲ್ಲಿ ಅಚ್ಚೊತ್ತಿದರೆ ಮಾತ್ರ ಕಲಾವಿದರಿಗೆ ಈ ರೀತಿಯ ಗುರುತು ಸಿಗುತ್ತದೆ. 

ಸಾಮಾಜಿಕ ಜಾಲತಾಣಗಳಲ್ಲಿ ಪತ್ತೇದಾರಿ ಪ್ರತಿಭಾಳ ಅನೇಕ ಟ್ರೋಲ್‌ಗ‌ಳು ಹರಿದಾಡುತ್ತಿವೆಯಲ್ಲ?
ಹೌದು. ದೊಡ್ಡ ಖುಷಿ ಏನೆಂದರೆ ಟ್ರೋಲ್‌ಗ‌ಳು ಪಾಸಿಟಿವ್‌ ಆಗಿಯೇ ಇವೆ. ನನ್ನ ಸ್ನೇಹಿತರು ನನಗಿಂತ ಮೊದಲೇ ಇವುಗಳನ್ನು ನೋಡಿ ನನಗೆ ವಾಟ್ಸ್‌ಆ್ಯಪ್‌ ಮಾಡುತ್ತಾರೆ. ನಾನು ತಲೆ ಮೇಲೆ ಕೈ ಹೊತ್ತಂತಿರುವ ಇಮೋಜಿ ಕಳಿಸುತ್ತೇನೆ. ಇಂಥ ಸಣ್ಣಪುಟ್ಟ ಸಂತಸಗಳಿಂದಲೇ ಬದುಕು ರೂಪಿತವಾಗುತ್ತವೆ ಅನ್ನೋದು ನನ್ನ ಅಭಿಪ್ರಾಯ.

ಇತ್ತೀಚೆಗೆ ಮಲ್ಯ ಕೇಸನ್ನು ಪ್ರತಿಭಾಗೆ ಕೊಡಿ ಎಂಬಂಥ ಟ್ರೋಲ್‌ ಹರಿದಾಡುತ್ತಿತ್ತು. ಮಲ್ಯ ಕೇಸ್‌ ಕೊಟ್ಟರೆ ಏನು ಮಾಡ್ತೀರ?
ಅಂಥದ್ದೊಂದು ಕೆಲಸ ನಿಜ ಜೀವನದಲ್ಲೂ ಮಾಡುವ ಅವಕಾಶ ಸಿಕ್ಕರೆ ಜೀವನ ಸಾರ್ಥಕವಾಯಿತು ಎಂದು ಭಾವಿಸುತ್ತೇನೆ. ನಾನು ಕಾನೂನನ್ನು ಕೈಗೆ ತೆಗೆದುಕೊಳ್ಳುವ ಗೋಜಿಗಂತೂ ಹೋಗುವುದಿಲ್ಲ.

ಪತ್ತೇದಾರಿ ಕಾದಂಬರಿ, ಸಿನಿಮಾ ನೋಡುವ ಆಸಕ್ತಿ ಇದೆಯಾ?
ಇದೆ. ನಾನು ಪುಸ್ತಕಗಳನ್ನು ಓದುತ್ತೇನೆ ಮತ್ತು ಸಿನಿಮಾ ನೋಡುತ್ತೇನೆ. ಶೆರ್ಲಾಕ್‌ ಹೋಮ್ಸ್‌ ಬಿಟ್ಟು ಬೇರೆ ಪತ್ತೇದಾರಿ ಪುಸ್ತಕಗಳನ್ನು ಓದಿಲ್ಲ. ನನಗೆ ಆತ್ಮಕಥೆ ಓದುವುದೆಂದರೆ ಬಹಳಾ ಇಷ್ಟ. ನಮ್ಮ ಕೆಲಸದ ಮೇಲೆ ಪ್ರೀತಿ ಇದ್ದರೆ ಪಾತ್ರವನ್ನು ಆವಾಹಿಸಿಕೊಳ್ಳುವುದು ಸಾಧ್ಯ.

ಶರ್ಮಿಳಾ, ಪ್ರತಿಭಾ ಥರಾನೆ ತುಂಬಾ ಬೋಲ್ಡ್‌ ಇದ್ದಾಳಾ?
ಪ್ರತಿಭಾ ಬೋಲ್ಡ್‌ ಹುಡುಗಿ ಅಂತ ಯಾರು ಹೇಳಿದ್ದು? ಪ್ರತಿಭಾ ಪಾಪದವಳು. ಅತ್ತೆಯ ಎಲ್ಲಾ ಶರತ್ತುಗಳಿಗೆ ಒಪ್ಪಿಕೊಂಡೇ ಆ ಮನೆಗೆ ಸೊಸೆಯಾಗಿ ಬಂದಿರುತ್ತಾಳೆ. ಬಂದ ಮೇಲೆ ಅಪ್ಪಟ ಗೃಹಿಣಿಯಂತೆ ಜೀವನ ನಡೆಸುತ್ತಾಳೆ. ನಂತರ ಆಕೆಯ ಗಂಡ ಮತ್ತು ತಮ್ಮ ಅವಳನ್ನು ಬೋಲ್ಡ್‌ ಮಾಡುತ್ತಾರೆ. ಅವಳೊಳಗಿರುವ ಪ್ರತಿಭೆಯನ್ನು ಹೊರತರುತ್ತಾರೆ. ನಾನು ನಿಜ ಜೀವನದಲ್ಲಿ ಪ್ರತಿಭಾಳಂತೆಯೇ ತುಂಬಾ ಎಮೋಷನಲ್‌ ಹುಡುಗಿ. ಎಲ್ಲರನ್ನೂ ಪ್ರೀತಿ ಕಾಳಜಿಯಿಂದ ನೋಡಿಕೊಳ್ಳುವ ‘ಗೃಹಿಣಿ’. ಸಮಯ ಬಂದಾಗ ಬೋಲ್ಡಾಗಿ ಪರಿಸ್ಥಿತಿಯನ್ನು ಎದುರಿಸುವ ಗಟ್ಟಿಗಿತ್ತಿ. 

ನಿಮ್ಮ ಒಂದು ಉತ್ತಮ ಗುಣ?
ನಾನು ಸೋಮಾರಿ ಖಂಡಿತಾ ಅಲ್ಲ. ಒಂದು ಕ್ಷಣವನ್ನೂ ಹಾಳು ಮಾಡುವುದಿಲ್ಲ. ಪ್ರತಿ ಕ್ಷಣವೂ ಏನಾದರೂ ಕೆಲಸ ಮಾಡುತ್ತಿರುತ್ತೇನೆ.

ಧಾರಾವಾಹಿಯ ಎಲ್ಲಾ ಪೋಸ್ಟರ್‌, ಪ್ರೋಮೋಗಳಲ್ಲಿ ಸೀರೆಯುಟ್ಟ ನಿಮ್ಮ ಪೋಟೋಗಳೆ ಕಾಣಿಸುತ್ತಿವೆ. ಮನೆಯಲ್ಲೂ ಹೀಗೇನಾ?
ನಾನು ತುಂಬಾ ಟ್ರೆಡಿಷನಲ್‌. ಸೀರೆ ಎಂದರೆ ಇಷ್ಟ. ಆದರೆ ಕಾಲಕ್ಕೆ ತಕ್ಕಂತೆ ನಮ್ಮ ಉಡುಗೆ ತೊಡುಗೆಗಳು ಇರಬೇಕು ಎನ್ನುವುದನ್ನೂ ಒಪ್ಪುತ್ತೇನೆ. ಆಚೆ ನನ್ನನ್ನು ಸೆಟ್‌ನಲ್ಲಿ ನೋಡಿದವರು ಹೊರಗಡೆ ಸುಲಭಕ್ಕೆ ಪತ್ತೆ ಮಾಡಲಾಗುವುದಿಲ್ಲ. ಬೇರೆಯ ಶರ್ಮಿಳಾಳನ್ನೇ ನೀವು ನೋಡುತ್ತೀರ. ಸೀರೆ ಒಂದೇ ಅಲ್ಲ, ಇಷ್ಟವಾದ ಮಾಡರ್ನ್ ಉಡುಗೆಗಳೆಲ್ಲವನ್ನೂ ತೊಡುತ್ತೀನಿ.  


ಶರ್ಮಿಳಾ ಕಿಚನ್‌ ಕಾರ್ನರ್‌ 

ಶೂಟಿಂಗ್‌ಗೆ ಹೋಗುವ ಗಡಿಬಿಡಿಯಲ್ಲಿರುತ್ತೀರಿ, ಆಗ ಏನೆಲ್ಲಾ ಅಡುಗೆ ತಯಾರು ಮಾಡಿ ಹೋಗುತ್ತೀರಿ?
ಬಿಡುವಿನಲ್ಲಿ ಇಡ್ಲಿ ಹಿಟ್ಟು, ದೋಸೆ ಹಿಟ್ಟು ತಯಾರಿಸಿಡುತ್ತೇನೆ. ಕಾಯಿ ತುರಿದಿಡುವುದು, ಕಡ್ಲೆ ಹುರಿದಿಡುವುದು ಮುಂತಾದ ಕೆಲಸಗಳನ್ನು ಮಾಡುತ್ತೀನಿ. ಶೂಟಿಂಗ್‌ಗೆ ಅವಸರದಲ್ಲಿ ಹೊರಡುವಾಗ ಇಡ್ಲಿ ಚಟ್ನಿ ಮಾಡುತ್ತೇನೆ. ಮಧ್ಯಾಹ್ನಕ್ಕೆ ಟೊಮೆಟೊ ಬಾತ್‌ ಮತ್ತು ಸಲಾಡ್‌ ಮಾಡಿಟ್ಟು ಹೊರಡುತ್ತೇನೆ. ಕೆಲವೊಮ್ಮೆ ಚಿಕನ್‌ ಬಿರಿಯಾನಿಯನ್ನೂ ಮಾಡಿಟ್ಟು ಹೋಗುತ್ತೇನೆ.

ಹಾಗಾದರೆ ನೀವು ಯಾವತ್ತೂ ಹೋಟೆಲ್‌ಗೆ ಹೋಗಿಯೇ ಇಲ್ಲವೆ?
ಹಾಗೇನಿಲ್ಲ, ಹೋಗಿದ್ದೀನಿ. ಆದರೆ ನಾವು ಆಚೆ ಹೋಗಿ ತಿನ್ನುವುದು ಬಹಳ ಕಡಿಮೆ. ಅಮ್ಮ ಮನೆಯಲ್ಲಿದ್ದರೆ ಹೋಟೆಲ್ಲೇ ಮನೆಯಲ್ಲಿದ್ದಂತೆ. ಅಷ್ಟು ಬಗೆಯ ಅಡುಗೆಯನ್ನು ಅವರೊಬ್ಬರೇ ಮಾಡುತ್ತಾರೆ. ಇತ್ತೀಚೆಗೆ ರಾಜರಾಜೇಶ್ವರಿ ನಗರದಲ್ಲಿ ಆಂಧ್ರ ಸ್ಪೈಸ್‌ ಎಂಬ ಹೋಟೆಲ್‌ಗೆ ಹೋಗಿದ್ದೆ. ಅಲ್ಲಿನ ಚೈನೀಸ್‌ ಫ‌ುಡ್‌ ತುಂಬಾ ಇಷ್ಟ ಆಯ್ತು.

25 ನಿಮಿಷದಲ್ಲಿ ಚಿಕನ್‌ ಬಿರಿಯಾನಿ!
ನಮ್ಮನೆಯಲ್ಲಿ ಅಡುಗೆ ನಾನೇ ಮಾಡ್ತೀನಿ. ಶೂಟಿಂಗ್‌ಗೇನಾದರೂ ಅವಸರವಾದರೆ ಸುಲಭವಾಗಿ ಮಾಡಿಬಿಡಬಹುದಾದ ಇಡ್ಲಿ- ಚಟ್ನಿ, ಟೊಮೆಟೋ ಬಾತ್‌- ಸಲಾಡ್‌  ಅನ್ನು ಮಾಡಿಟ್ಟು ಹೋಗ್ತೀನಿ. ಕೆಲವೊಮ್ಮೆ ಚಿಕನ್‌ ಬಿರಿಯಾನಿಯನ್ನೂ ಮಾಡಿಟ್ಟು ಹೋಗ್ತೀನಿ. ಸಮಯವಿಲ್ಲದಿದ್ದರೂ ಅದನ್ನು ಹೇಗೆ ತಯಾರಿಸುತ್ತೀರಿ ಅಂತ ಕೆಲವರಿಗೆ ಅನ್ನಿಸಬಹುದು. ನಿಮಗೆ ಗೊತ್ತಿರಲಿಕ್ಕಿಲ್ಲ. ಬರಿ 25 ನಿಮಿಷದಲ್ಲಿ ರುಚಿ ರುಚಿಯಾದ ಚಿಕನ್‌ ಬಿರಿಯಾನಿ ತಯಾರಿಸ್ತೀನಿ. ನಾನು ಬರೀ ಪತ್ತೇದಾರಿ ಕೆಲಸಗಳನ್ನು ಮಾತ್ರ ಬೇಗನೆ ಪರಿಹರಿಸೋಲ್ಲ, ಅಡುಗೆ ಮನೆಯ ಕೆಲಸಗಳನ್ನೂ ಫ‌ಟಾಫ‌ಟ್‌ ಮಾಡಿಬಿಡ್ತೀನಿ!

ಪಾರ್ಲರ್‌ಗೆ ಹೋಗಲ್ವಾ?
ತುಂಬಾ ನೀರು ಕುಡಿಯುತ್ತೇನೆ. ಆದಷ್ಟು ಉಗುರು ಬೆಚ್ಚಗಿನ ನೀರನ್ನೇ ಕುಡಿಯಬೇಕು. ಅದು ದೇಹದಲ್ಲಿರುವ ಕಲ್ಮಶವನ್ನು ಹೊರಹಾಕಿ ಸೌಂದರ್ಯ ಒಳಗಿನಿಂದಲೇ ಬರುವಂತೆ ಮಾಡುತ್ತದೆ. ನಾನು ಪಾರ್ಲರ್‌ಗೆ ಹೋಗುವುದೇ ಇಲ್ಲ. ಉತ್ತಮ ಬ್ರಾಂಡ್‌ನ‌ ಸೋಪು ಮತ್ತು ಫೇಸ್‌ವಾಶ್‌ ಬಳಸುತ್ತೇನೆ. ಹಣ್ಣು ತರಕಾರಿಗಳನ್ನು ಊಟಕ್ಕಿಂತಲೂ ಹೆಚ್ಚಾಗಿ ಸೇವಿಸುತ್ತೇನೆ. ಸದಾ ಸಂತೋಷದಿಂದ ಇರುತ್ತೇನೆ.

ಗೋಳು ಹೊಯ್ದುಕೊಳ್ಳುವ ಸಿನಿಮಾಗಳನ್ನು ನೋಡಲ್ಲ.
ನಾನು 6ನೇ ತರಗತಿಯಲ್ಲಿದ್ದಾಗ ಸಿನಿಮಾ ಮೇಲೆ ಆಸಕ್ತಿ ಬೆಳೆಯಿತು. ಇಂಗ್ಲಿಷ್‌ ಆಕ್ಷನ್‌ ಸಿನಿಮಾಗಳನ್ನು ಬಿಟ್ಟ ಕಣ್ಣು ಬಿಟ್ಟಂತೆ ನೋಡುತ್ತಿದ್ದೆ. ಅದರಲ್ಲೂ ಪೊಲೀಸ್‌ ಸಿನಿಮಾಗಳೆಂದರೆ ನನಗೆ ವಿಶೇಷ ಆಸಕ್ತಿ. ಕೆಲ ಪೊಲೀಸ್‌ ಮಿಸ್ಟರಿ ಸಿನಿಮಾಗಳನ್ನೆಲ್ಲ ನೋಡಿ ಪೊಲೀಸರು ಇಷ್ಟೆಲ್ಲಾ ತಲೆ ಓಡಿಸುತ್ತಾರಾ ಎಂದು ಆಶ್ಚರ್ಯಪಟ್ಟಿದ್ದೂ ಇದೆ. ಕಣ್ಣೀರಿಡುವ, ಮರ ಸುತ್ತುವ ಸಿನಿಮಾಗಳೆಂದರೆ ನನಗೆ ಅಲರ್ಜಿ. ನಿಜ ಜೀವನದಲ್ಲಿ ಗೋಳಿನ ಕಥೆಗಳನ್ನು ಸಾಕಷ್ಟು ಕೇಳುತ್ತೇವೆ. ಸಿನಿಮಾದಲ್ಲೂ ಅದನ್ನೇ ನೋಡಬೇಕಾ?

ಝೀರೊ ಸೈಝ್ ಮೇಲೆ ಆಸಕ್ತಿ ಝೀರೋ!
ನನಗೆ ಝೀರೊ ಸೈಝ್ ಅಗತ್ಯವಿಲ್ಲ. ಜನ ನಮ್ಮಲ್ಲಿ ಅವರ ಮನೆ ಹುಡುಗಿಯನ್ನು ಕಾಣಬೇಕು. ಆದರೆ ಹಾಗಂತ ತೂಕ ಹೆಚ್ಚು ಮಾಡಿಕೊಳ್ಳುವಂತೆಯೂ ಇಲ್ಲ. ಅದಕ್ಕಾಗಿ ವಿಶೇಷವಾದ ಡಯಟ್‌ ಅನುಸರಿಸದಿದ್ದರೂ ನನ್ನ ಪ್ರತಿದಿನದ ಆಹಾರದಲ್ಲಿ ಎಚ್ಚರ ವಹಿಸುತ್ತೇನೆ. ನಮ್ಮ ಮನೆಯಲ್ಲಿ ಮೊದಲಿನಿಂದಲೂ ಅಡುಗೆಗೆ ಎಣ್ಣೆ ಬಹಳ ಕಡಿಮೆ ಬಳಸುತ್ತಾರೆ. ಹೆಚ್ಚಾಗಿ ಎಣ್ಣೆ ರಹಿತ ಅಡುಗೆಗಳಾದ ಇಡ್ಲಿ, ಓಟ್ಸ್‌ ತಿನ್ನುತ್ತೇನೆ. ಅನ್ನದ ಬದಲು ಬ್ರೌನ್‌ ರೈಸ್‌, ನವಣೆ ಬಳಸುತ್ತೇನೆ. ಮಲಗುವಾಗ ಕಡ್ಡಾಯವಾಗಿ 2 ಗ್ಲಾಸ್‌ ಬಿಸಿನೀರು ಸೇವಿಸುತ್ತೇನೆ. ನಾನು ಭರತನಾಟ್ಯ ಕಲಾವಿದೆಯಾಗಿರುವುದರಿಂದ ಪ್ರತಿದಿನದ 45 ನಿಮಿಷ ನೃತ್ಯ ಅಭ್ಯಾಸ ನನ್ನನ್ನು ದೈಹಿಕವಾಗಿಯೂ, ಮಾನಸಿಕವಾಗಿಯೂ ಫಿಟ್‌ ಆಗಿರಿಸುತ್ತದೆ.

– ಚೇತನ ಜೆ. ಕೆ.

ಟಾಪ್ ನ್ಯೂಸ್

Marriage: ಕ್ರಿಸ್ಮಸ್‌ಗೆ ಅಮೆಜಾನ್‌ ಸಿಇಒ ಅದ್ಧೂರಿ ವಿವಾಹ?

Marriage: ಕ್ರಿಸ್ಮಸ್‌ಗೆ ಅಮೆಜಾನ್‌ ಸಿಇಒ ಅದ್ಧೂರಿ ವಿವಾಹ?

ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್‌ ಮುಖ್ಯಸ್ಥೆ

Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್‌ ಮುಖ್ಯಸ್ಥೆ

1-horoscope

Daily Horoscope: ಉದ್ಯೋಗಾಸಕ್ತರಿಗೆ ಹೊಸ ಅವಕಾಶಗಳು ಗೋಚರ, ಸ್ವರ್ಣೋದ್ಯಮಕ್ಕೆ ಲಾಭ

Media powerhouse: ರಿಲಯನ್ಸ್‌- ಡಿಸ್ನಿ ಕಂಪನಿ ವಿಲೀನ ಈಗ ಅಧಿಕೃತ

Media powerhouse: ರಿಲಯನ್ಸ್‌- ಡಿಸ್ನಿ ಕಂಪನಿ ವಿಲೀನ ಈಗ ಅಧಿಕೃತ

Yadiyurappa (2)

B. S. Yediyurappa ವಿರುದ್ಧ ಎಫ್ಐಆರ್‌ಗೆ ಸಚಿವರ ಒತ್ತಡ

PM ನರೇಂದ್ರ ಮೋದಿಗೆ ಡೊಮಿನಿಕಾದ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಗೌರವ

PM ನರೇಂದ್ರ ಮೋದಿಗೆ ಡೊಮಿನಿಕಾದ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಗೌರವ

K L RAhul

K.L. Rahul; ಕುಡ್ಲದ ಜನರ ಬೆಂಬಲವೇ ಸಾಧನೆಗೆ ಕಾರಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

Marriage: ಕ್ರಿಸ್ಮಸ್‌ಗೆ ಅಮೆಜಾನ್‌ ಸಿಇಒ ಅದ್ಧೂರಿ ವಿವಾಹ?

Marriage: ಕ್ರಿಸ್ಮಸ್‌ಗೆ ಅಮೆಜಾನ್‌ ಸಿಇಒ ಅದ್ಧೂರಿ ವಿವಾಹ?

ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್‌ ಮುಖ್ಯಸ್ಥೆ

Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್‌ ಮುಖ್ಯಸ್ಥೆ

1-horoscope

Daily Horoscope: ಉದ್ಯೋಗಾಸಕ್ತರಿಗೆ ಹೊಸ ಅವಕಾಶಗಳು ಗೋಚರ, ಸ್ವರ್ಣೋದ್ಯಮಕ್ಕೆ ಲಾಭ

POLICE-5

Kinnigoli: ಪಕ್ಷಿಕೆರೆ; ಕೊಲೆ ಪ್ರಕರಣ ಮತ್ತಷ್ಟು ಸಂಗತಿಗಳು ಬೆಳಕಿಗೆ?

Media powerhouse: ರಿಲಯನ್ಸ್‌- ಡಿಸ್ನಿ ಕಂಪನಿ ವಿಲೀನ ಈಗ ಅಧಿಕೃತ

Media powerhouse: ರಿಲಯನ್ಸ್‌- ಡಿಸ್ನಿ ಕಂಪನಿ ವಿಲೀನ ಈಗ ಅಧಿಕೃತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.