ಶಿಲೀಂಧ್ರದಿಂದ ಸೆರೆ ಸಿಕ್ಕ ಮಹಿಳೆ ಕೊಲೆಗಾರ!
Team Udayavani, May 17, 2017, 11:29 AM IST
ಬೆಂಗಳೂರು: ಇತ್ತೀಚೆಗೆ ಜಯನಗರದ ಅಪಾರ್ಟ್‌ಮೆಂಟ್‌ವೊಂದರಲ್ಲಿ ನಡೆದಿದ್ದ ಮಣಿ ಎಂಬ ಮಹಿಳೆಯ ಹತ್ಯೆ ಪ್ರಕರಣವನ್ನು ತಿಲಕನಗರ ಪೊಲೀಸರು ಯಶಸ್ವಿ ಯಾಗಿ ಬೇಧಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿ ಸಿದಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಚಿನ್ನಾಭರಣಗಳಿಗಾಗಿ ಕೊಲೆ ನಡೆದಿತ್ತು ಎಂದು ಪೊಲೀಸರು ಹೇಳಿದ್ದಾರೆ.
ಆದರೆ, ಪೊಲೀಸರ ತನಿಖಾ ವೈಖರಿ ಮತ್ತು ಪೊಲೀಸರ ನೆರವಿಗೆ ನಿಂತ ತಂತ್ರಜ್ಞಾನವೇ ಈ ಪ್ರಕರಣದ ವಿಶೇಷತೆ. ಕೃತ್ಯ ನಡೆಯುವಾಗ ದುಷ್ಕರ್ಮಿಗಳ ಕೈಯಿಂದ ಗೋಡೆಗೆ ಅಂಟಿದ್ದ ಕೊಳಕು ಮತ್ತು ಅದರಿಂದ ಬೆಳೆದ ಶಿಲೀಂದ್ರಗಳು ಈ ಪ್ರಕರಣದ ದಿಕ್ಕನ್ನೇ ಬದಲಿಸಿ, ಕೊಲೆಗಾರರನ್ನು ಪೊಲೀಸರ ಬಳಿಗೇ ಕರೆದೊಯದ್ದು ನಿಲ್ಲಿಸಿದೆ.
ಜಯನಗರ ನಿವಾಸಿ, ಚಿಂದಿ ಆಯುವವ ಗಣೇಶ್ (19), ಗುಜರಿ ವ್ಯಾಪಾರಿ ಕೆ.ಜೆ.ನಗರದ ಚಿನ್ನರಾಜು (30) ಮತ್ತು ಆಟೋ ಚಾಲಕ, ಜೀಮ್ ತರಬೇತುದಾರ ಶಕ್ತಿವೇಲು (31) ಬಂಧಿತರು. ಇದರಲ್ಲಿ ಗಣೇಶ್ ಎಂಬಾತನೇ ಮಹಿಳೆಯ ಕೊಲೆ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತರಿಂದ 28 ಲಕ್ಷ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಹೇಮಂತ್ ನಿಂಬಾಳ್ಕರ್ ತಿಳಿಸಿದ್ದಾರೆ.
ದೊಂಗ ದೊಂಗ ಎಂಬ ತಾಯಿ ಕೂಗು ಕೇಳದ ಮಗ: ಏ.4ರಂದು ಆರೋಪಿ ಗಣೇಶ್ ಚಿಂದಿ ಆಯ್ದು ಬಳಿಕ ಸಲ್ಯೂಷನ್(ಮಾದಕ ದ್ರವ್ಯ) ತೆಗೆದುಕೊಂಡು, ರಾತ್ರಿ ಜಯನಗರದ ಎರಡು ಬಾರ್‌ಗಳಲ್ಲಿ ಮದ್ಯ ಸೇವಿಸಿದ್ದಾನೆ. ನಂತರ ಜೆ.ಪಿ.ನಗರದ ಈಸ್ಟ್ ಎಂಡ್ ಬಿ ಮುಖ್ಯರಸ್ತೆಯ ಮನೆಯೊಂದಕ್ಕೆ ನುಗ್ಗಲು ಯತ್ನಿಸಿದ್ದ. ಮನೆಯಲ್ಲಿ ದೀಪ ಉರಿಯುತ್ತಿದ್ದರಿಂದ ಅಲ್ಲಿಂದ ಹಾರಿ ಪಕ್ಕದ ಅಪಾರ್ಟ್‌ಮೆಂಟ್ ನುಗ್ಗಿದ್ದ.
ಅಲ್ಲಿಂದ ಮಣಿಯವರಿದ್ದ ಮನೆಗೆ ಬಂದ ಕೊಲೆಗಾರ ಗಣೇಶ್, ಕಿಟಕಿಯಿಂದ ಕೈ ಹಾಕಿ ಬಾಗಿಲು ತೆಗೆದು ಒಳ ಹೋಗಿದ್ದ. ಮಹಿಳೆಯ ಪುತ್ರ ಕಿಶೋರ್ ಅವರಿದ್ದ ಕೋಣೆಯ ಬಾಗಿಲನ್ನು ಹೊರಗಿನಿಂದ ಲಾಕ್ ಮಾಡಿದ್ದ. ಬಳಿಕ ಮಣಿ ಅವರ ಕೊಠಡಿಗೆ ಹೋದ ಆರೋಪಿ, ಅವರ ಕುತ್ತಿಗೆಯಲ್ಲಿದ್ದ ಸರ ಕಸಿದು, ಕೈಯಲ್ಲಿನ ಬಳೆಗಳನ್ನು ತೆಗೆಯಲು ಜಗ್ಗಾಡುತ್ತಿದ್ದ. ಆಗ ಎಚ್ಚರಗೊಂಡ ಮಣಿ ಅವರು “ದೊಂಗ ದೊಂಗ’ ಎಂದು ಕೂಗಿಕೊಂಡಿದ್ದರು.
ಆದರೆ, ಅತೀ ವೇಗವಾಗಿ ಫ್ಯಾನ್ ಹಾಕಿಕೊಂಡಿದ್ದ ಕಿಶೋರ್‌ಗೆ ತಾಯಿ ಕೂಗು ಕೇಳಿಸಿಲ್ಲ. ಮಹಿಳೆ ಎಚ್ಚರಗೊಂಡಿದ್ದರಿಂದ ಆರೋಪಿ ಗಣೇಶ್ ಆಕೆಯ ತಲೆಗೆ ಕಬ್ಬಿಣದ ರಾಡ್‌ನಿಂದ ಹೊಡೆದು ಕೊಂದಿದ್ದ. ನಂತರ ಬಳೆಗಳನ್ನು ಕದೊಯ್ದಿದ್ದ ಎಂದು ಡಿಸಿಪಿ ಬೋರಲಿಂಗಯ್ಯ ತಿಳಿಸಿದರು. ಬಳಿಕ ಗುಜರಿ ವ್ಯಾಪಾರಿ ಚಿನ್ನರಾಜುಗೆ ಆಭರಣ ಕೊಟ್ಟಿದ್ದ ಗಣೇಶ್.
ನಂತರ ಶಕ್ತಿವೇಲು ಎಂಬಾತನ ಮೂಲಕ ಮುತ್ತೂಟ್ ಫೈನಾನ್ಸ್ ಮತ್ತು ಮಣಪುರ ಗೋಲ್ಡ್‌ನಲ್ಲಿ ಗಿರವಿ ಇಟ್ಟು ಹಣ ಪಡೆಯಲಾಗಿತ್ತು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಆಂಧ್ರದ ತಿರುಪತಿ ಶ್ರೀವೆಂಕಟೇಶ್ವರ ವಿಶ್ವವಿದ್ಯಾಲಯದಲ್ಲಿ ನೌಕರರಾಗಿದ್ದ ಮಣಿ ಅವರ ಪತಿ ನರಸಿಂಹರಾವ್ ಅವರು ಕ್ಯಾನ್ಸರ್‌ನಿಂದ ನಿಧನರಾಗಿದ್ದರು. ಬಳಿಕ ಪುತ್ರಿ ಉಷಾ ಅವರನ್ನು ಮದುವೆ ಮಾಡಿಕೊಟ್ಟು, ಪುತ್ರ ಕಿಶೋರ್ ಜತೆ ನಗರದಲ್ಲೇ ವಾಸವಾಗಿದ್ದರು.
ಪ್ರಕರಣಕ್ಕೆ ಹೊಸ ತಿರುವು: ಪ್ರಕರ ಣದಲ್ಲಿ ಯಾವುದೇ ಸುಳಿವು ಸಿಗದ ಹಿನ್ನೆಲೆಯಲ್ಲಿ ಮತ್ತೂಮ್ಮೆ ಖಾಸಗಿ ವಿಧಿ ವಿಜ್ಞಾನ ತಜ್ಞರ ನೆರವು ಪಡೆದಿದ್ದ ಪೊಲೀಸರು, ಮನೆಯ ಮುಂಬಾಗಿಲು, ಕಿಟಕಿಗಳ ಪಕ್ಕ, ಗೋಡೆಗಳ ಮೇಲೆ ಕೈ ನಿಂದ ಆಗಿದ್ದ ಕಲೆಗಳನ್ನು ಹೆ-ಇನ್‌ಟೆನ್ಸಿಟಿ ಎಕ್ಸ್‌ರೇ ಮೂಲಕ ಶೋಧನೆ ಮಾಡಿಸಿದ್ದರು.
ಪ್ರಯೋಗಾಲಯದಲ್ಲಿ ರಾಸಾಯನಿಕ ಪರೀಕ್ಷೆ ನಡೆಸಿದಾಗ ಪತ್ತೆಯಾದ ಬೆರಳಚ್ಚು ಗಳಲ್ಲಿ ಶಿಲೀಂಧ್ರ ಅಥವಾ ಜೀವಾಣು ಗಳಿರುವುದು ಗೊತ್ತಾಗಿತ್ತು. ಇದನ್ನು ಪರೀಕ್ಷೆ ನಡೆಸಿದ ಜೈನ್ ಕಾಲೇಜಿನ ವಿಧಿ ವಿಜ್ಞಾನ ಪ್ರಯೋಗಾಲಯದ ಪ್ರೊ ಸುಜಯ್‌ರಾಜ್, ಇಂತಹ ಶಿಲೀಂದ್ರಗಳು ಕೊಳೆತ ವಸ್ತುಗಳನ್ನು ಮುಟ್ಟುವ, ಚಿಂದಿ ಆಯುವವರ ಕೈಗಳಲ್ಲಿ ಹೆಚ್ಚು ಕಂಡು ಬರುತ್ತವೆ ಎಂದು ವರದಿ ನೀಡಿದ್ದರು.
230 ಜನ ಚಿಂದಿ ಆಯುವವರ ವಿಚಾರಣೆ: ತಿಲಕನಗರ, ಜಯನಗರ ಸುತ್ತಾಮುತ್ತ ಕಟ್ಟಡ ನಿರ್ಮಾಣ ಕಾರ್ಮಿ ಕರು, ಚಿಂದಿ ಆಯುವವರು ಸೇರಿದಂತೆ ಸುಮಾರು 230 ಮಂದಿಯನ್ನು ಕರೆಸಿ ಪೊಲೀಸರು ಬೆರಳಚ್ಚು ಪಡೆದು ವಿಚಾರಣೆ ನಡೆಸಿದ್ದರು. ಈ ನಡುವೆ ಜೆ.ಪಿ.ನಗರದ ಅಪಾರ್ಟ್ ಮೆಂಟ್‌ವೊಂದರ ಕೆಳಗೆ ಮಲಗಿದ್ದ ಆರೋಪಿ ಗಣೇಶ್‌ನನ್ನು ವಿಚಾ ರಣೆ ನಡೆಸಿದಾಗ ಆರೋಪಿ, ಕೆಲ ಕಳವು ಕೃತ್ಯ ಬಗ್ಗೆ ಹೇಳಿಕೆ ನೀಡಿದ್ದ. ಬಳಿಕ ವಿಚಾರಣೆ ತೀವ್ರಗೊಳಿಸಿದಾಗ ಮಣಿ ಅವರನ್ನು ಹತ್ಯೆಗೈದಿರುವುದಾಗಿ ತಪ್ಪೊಪ್ಪಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಶ್ವಾನ ದಳದಿಂದಲೂ ಸಿಕ್ಕಿತ್ತು ಸುಳಿವು
ಘಟನೆ ನಡೆದ ದಿನ ಸ್ಥಳಕ್ಕೆ ಬಂದಿದ್ದ ಶ್ವಾನದಳ ಮೃತ ದೇಹ ಪತ್ತೆಯಾದ ಸ್ಥಳವನ್ನು ಪರಿಶೀಲಿಸಿ ತಿರುಮಲ ಬಾರ್ ಕಡೆಗೆ ತೆರಳಿತ್ತು. ಹೀಗಾಗಿ ಹತ್ತಿರದ ಸುಮಾರು 8 ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪೊಲೀಸರು ಸಂಗ್ರಹಿಸಿದ್ದರು. ಆದರೂ ಆರೋಪಿಯ ಪತ್ತೆಯಾಗಿರಲಿಲ್ಲ. ಆಗ ಕೃತ್ಯ ನಡೆದ ಕೆಲ ಗಂಟೆಗಳ ಹಿಂದೆ, ಮುಂದೆ ಈ ಬಾರ್‌ಗೆ ಬಂದು ಹೋಗಿರುವ ವ್ಯಕ್ತಿಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಗಿತ್ತು ಎಂದು ಡಿಸಿಪಿ ಬೋರಲಿಂಗಯ್ಯ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
R. B. Timmapur: ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು
8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ
Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ
Ballari District Hospital: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’
ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್‌ಎಫ್ ಮಾದರಿಯಲ್ಲಿ ವಿಶೇಷ ಪೊಲೀಸ್ ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.