ಬಸ್‌ಸ್ಟಾಂಡ್ ಮೇಲೆ ಮಾಲ್, ಥಿಯೇಟರ್
Team Udayavani, May 17, 2017, 11:33 AM IST
ಬೆಂಗಳೂರು: ಬಸ್ ನಿಲ್ದಾಣ, ಮಾಲ್ ಮತ್ತು ಮಲ್ಟಿಪ್ಲೆಕ್ಸ್ ಥಿಯೇಟರ್, ಒಳಾಂಗಣ ಕ್ರೀಡಾಂಗಣ… ಇದೆಲ್ಲವೂ ಒಂದೇ ಸೂರಿನಡಿ ಸಿಕ್ಕರೆ ಹೇಗಿರುತ್ತದೆ? ಹೌದು, ಬಿಎಂಟಿಸಿ ಬಸ್ ಟಿಟಿಎಂಸಿಗಳ ಮೇಲ್ಛಾವಣಿಯಲ್ಲಿ ಶಾಪಿಂಗ್ ಮಾಲ್, ಮಲ್ಟಿಪ್ಲೆಕ್ಸ್ ಥಿಯೇಟರ್, ಶೆಟಲ್ ಬ್ಯಾಡ್ಮಿಂಟನ್ ಕೋರ್ಟ್, ಹೋಟೆಲ್ ಈ ಎಲ್ಲ ಸೌಲಭ್ಯಗಳನ್ನು ಕಲ್ಪಿಸಲು ಬಿಎಂಟಿಸಿ ಚಿಂತನೆ ನಡೆಸಿದ್ದು, ಶೂನ್ಯ ಬಂಡವಾಳದಲ್ಲಿ ಆದಾಯ ವೃದ್ಧಿಯ ಜತೆಗೆ ಪ್ರಯಾಣಿಕರ ಸಂಖ್ಯೆ ಹೆಚ್ಚಿಸಲು ನಿಗಮವು ಈ ಐಡಿಯಾ ಮಾಡಿದೆ.
ಅದರಂತೆ ಟಿಟಿಎಂಸಿ ಮೇಲ್ಛಾವಣಿಯಲ್ಲಿ ಕನಿಷ್ಠ 4 ಸಾವಿರ ಚದರಡಿಯಿಂದ ಗರಿಷ್ಠ 36 ಸಾವಿರ ಚದರಡಿ ಜಾಗ ಇದೆ. ಅಲ್ಲಿ ಈ “ಆಸ್ತಿ ಸೃಜನೆ’ (ಪ್ರಾಪರ್ಟಿ ಡೆವಲಪ್‌ಮೆಂಟ್)ಗೆ ನಿಗಮ ಮುಂದಾಗಿದ್ದು, ಈ ಸಂಬಂಧ ಟೆಂಡರ್ ಪ್ರಕ್ರಿಯೆಗೆ ಸಿದ್ಧತೆ ನಡೆಸಿದೆ.
ಇದರ ಉದ್ದೇಶ ಜನರಿಗೆ ಹಲವು ಸೇವೆಗಳು ಒಂದೇ ಕಡೆ ಕಲ್ಪಿಸುವುದು. ಉದಾಹರಣೆಗೆ ಈಗಿರುವ ವ್ಯವಸ್ಥೆಯಲ್ಲಿ ಬಸ್ ನಿಲ್ದಾಣಕ್ಕೆ ಬಂದಿಳಿಯುವ ಪ್ರಯಾಣಿಕರು ಥಿಯೇಟರ್‌ಗೆ ಹೋಗಬೇಕಾದರೆ, ಮತ್ತೂಂದು ದಿಕ್ಕಿಗೆ ತೆರಳಬೇಕು. ಕೆಲವರು ಇದೇ ಕಾರಣಕ್ಕೆ ನೇರವಾಗಿ ಆಟೋ ಅಥವಾ ಆ್ಯಪ್ ಆಧಾರಿತ ಟ್ಯಾಕ್ಸಿ ಬುಕ್ ಮಾಡಿ, ನೇರವಾಗಿ ಮಲ್ಟಿಪ್ಲೆಕ್ಸ್ ಅಥವಾ ಶಾಪಿಂಗ್ ಮಾಲ್‌ಗೆ ತೆರಳುತ್ತಾರೆ. ಇದೆಲ್ಲವೂ ಒಂದೇ ಕಡೆ ಸಿಕ್ಕರೆ ಜನ ಸಾರ್ವಜನಿಕ ಸಾರಿಗೆಯತ್ತ ಮುಖಮಾಡುತ್ತಾರೆ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ತಿಳಿಸುತ್ತಾರೆ.
ಎಲ್ಲೆಲ್ಲಿ ಯೋಜನೆ?: ವಿಜಯನಗರ, ಬನಶಂಕರಿ, ಕೆಂಗೇರಿ, ಯಶವಂತಪುರ, ಯಲಹಂಕ ಓಲ್ಡ್ ಟೌನ್, ಇಸ್ರೋ ಲೇಔಟ್‌ನಲ್ಲಿರುವ ಟಿಟಿಎಂಸಿಗಳ ಮೇಲ್ಛಾವಣಿಯಲ್ಲಿ ಖಾಲಿ ಇರುವ ಜಾಗದಲ್ಲಿ ಈ ಯೋಜನೆ ಅನುಷ್ಠಾನಕ್ಕೆ ಚಿಂತನೆ ನಡೆದಿದೆ. ಈಗಾಗಲೇ ಇಸ್ರೋ ಲೇಔಟ್‌ನಲ್ಲಿ ಶೆಟಲ್ ಬ್ಯಾಡ್ಮಿಂಟನ್ ಕೋರ್ಟ್ ಹಾಗೂ ಉಳಿದೆಡೆ ಮಲ್ಟಿಪ್ಲೆಕ್ಸ್ ಥಿಯೇಟರ್ ನಿರ್ಮಿಸಲು ಉದ್ಯಮಿಗಳು ಮುಂದೆಬಂದಿದ್ದಾರೆ.
ಟೆಂಡರ್ ಮೂಲಕ 12 ವರ್ಷಗಳ ಮಟ್ಟಿಗೆ ಗುತ್ತಿಗೆ ನೀಡಲಾಗುವುದು. ಇದರಲ್ಲಿ ನಿಗಮದ ಯಾವುದೇ ಬಂಡವಾಳ ಇರುವುದಿಲ್ಲ. ಬದಲಿಗೆ ಖಾಲಿ ಇರುವ ಜಾಗದಲ್ಲಿ ಈ ಸೇವೆಗಳು ಲಭ್ಯವಾಗುವುದರಿಂದ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತದೆ. ಜತೆಗೆ ಆದಾಯವೂ ಹರಿದುಬರುತ್ತದೆ ಎಂದೂ ಅಧಿಕಾರಿಗಳು ಹೇಳಿದರು.
ನಗರದಲ್ಲಿ ಹತ್ತು ಟಿಟಿಎಂಸಿಗಳು ಸೇರಿದಂತೆ ಎಲ್ಲ ನಿಲ್ದಾಣಗಳಲ್ಲಿರುವ ಮಳಿಗೆಗಳಿಂದ ಬರುವ ಬಾಡಿಗೆ ವಾರ್ಷಿಕ 5 ಕೋಟಿ ರೂ. ಹಾಗೊಂದು ವೇಳೆ ಉದ್ದೇಶಿತ ಆರು ಟಿಟಿಎಂಸಿ ಮೇಲ್ಛಾವಣಿಯಲ್ಲಿ ಹೂಡಿಕೆ ಮಾಡಿದರೆ, ಹೆಚ್ಚು-ಕಡಿಮೆ ಇಷ್ಟೇ ಆದಾಯ ಬರುವ ಸಾಧ್ಯತೆ ಇದೆ. ಆದರೆ, ಈಗಲೇ ಈ ಬಗ್ಗೆ ನಿಖರವಾಗಿ ಹೇಳುವುದು ಕಷ್ಟ ಎಂದು ವಾಣಿಜ್ಯ ವಿಭಾಗದ ಅಧಿಕಾರಿಯೊಬ್ಬರು ತಿಳಿಸುತ್ತಾರೆ.
ಮೆಟ್ರೋ ಪ್ರೇರಣೆ?
ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿ)ವು “ನಮ್ಮ ಮೆಟ್ರೋ’ ನಿಲ್ದಾಣಗಳಲ್ಲಿ ಹೋಟೆಲ್, ಕಾಫಿ ಡೇ ಸೇರಿದಂತೆ ಹತ್ತುಹಲವು ವಾಣಿಜ್ಯ ಚಟುವಟಿಕೆಗಳಿಗೆ ಅವಕಾಶ ಮಾಡಿ ಕೊಟ್ಟಿದೆ. ಇದರಿಂದ ಪ್ರಸಕ್ತ ಸಾಲಿನಲ್ಲಿ ಸುಮಾರು 25 ಕೋಟಿ ರೂ. ಆದಾಯ ಹರಿದುಬಂದಿದೆ. ಮುಂದಿನ ದಿನಗಳಲ್ಲಿ ನಿಗಮವು ಇನ್ನೂ ಒಂದು ಹೆಜ್ಜೆ ಮುಂದೆಹೋಗಿ ಮಾಲ್, ಥಿಯೇಟರ್‌ನಂತಹ ವಿವಿಧ ಯೋಜನೆಗಳಿಗೆ ಕೈಹಾಕಲು ಉದ್ದೇಶಿಸಿದೆ. ಈ ಪ್ರಯೋಗವನ್ನು ಬಿಎಂಟಿಸಿ ಕೂಡ ತನ್ನ ಟಿಟಿಎಂಸಿಗಳಲ್ಲಿ ಮಾಡಲು ಮುಂದಾಗಿದೆ ಎನ್ನಲಾಗಿದೆ.
ಪ್ರಯೋಗ ಹೊಸದು
ಈ ಹಿಂದೆ ಬಿಎಂಟಿಸಿಯು ಜಯನಗರ ಮತ್ತಿತರ ಟಿಟಿಎಂಸಿಗಳನ್ನು ಬಿಗ್ ಬಜಾರ್ ಸೇರಿದಂತೆ ಹಲವು ವಾಣಿಜ್ಯ ಚಟುವಟಿಕೆಗಳಿಗೆ ನೀಡಿದೆ. ಹಾಗಾಗಿ, ಬಿಎಂಆರ್‌ಸಿಯ ಪ್ರೇರಣೆ ಎನ್ನಲಾಗದು. ಆದರೆ, ಮೇಲ್ಛಾವಣಿಯಲ್ಲಿ ಈ ಪ್ರಯೋಗ ಹೊಸದು. ಅಷ್ಟಕ್ಕೂ ಸುಮಾರು ದಿನಗಳಿಂದ ಈ ಚಿಂತನೆ ನಡೆದಿದೆ. ಇದುವರೆಗೆ ಮಂಡಳಿಯಲ್ಲಿ ಅನುಮೋದನೆಗೊಂಡಿಲ್ಲ ಎಂದೂ ಅಧಿಕಾರಿಯೊಬ್ಬರು ಅನುಮಾನ ವ್ಯಕ್ತಪಡಿಸುತ್ತಾರೆ.
* ವಿಜಯಕುಮಾರ್ ಚಂದರಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ
Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್’ಗೆ ಗುಡ್ ಬೈ
Result: ಮಹಾರಾಷ್ಟ್ರ ಚುನಾವಣೆ ಗೆಲ್ಲಲು ಇವಿಎಂ ಹ್ಯಾಕ್ ಕಾರಣ: ಗೃಹ ಸಚಿವ ಡಾ.ಪರಮೇಶ್ವರ್
Fish Farming: ಲಾಭದಾಯಕ ಪಂಜರ ಮೀನು ಕೃಷಿ ಯೋಜನೆಯೇ ಸ್ತಬ್ಧ
India: ಅರ್ಮೇನಿಯಾಗೆ ದೇಶಿ ನಿರ್ಮಿತ ಪಿನಾಕಾ ರಾಕೆಟ್ ಪೂರೈಕೆ ಶುರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.