ವಿಶ್ವಸಂಸ್ಥೆ ಗಮನಿಸುತ್ತಿದೆ ಭಾರತ-ಪಾಕ್ ಉದ್ವಿಗ್ನತೆ: ಡ್ಯುಜಾರಿಕ್
Team Udayavani, May 17, 2017, 11:38 AM IST
ವಿಶ್ವಸಂಸ್ಥೆ : ಭಾರತ ಮತ್ತು ಪಾಕಿಸ್ಥಾನ ನಡುವಿನ ಉದ್ವಿಗ್ನತೆಯನ್ನು ವಿಶ್ವಸಂಸ್ಥೆಯು ಅತ್ಯಂತ ನಿಕಟವಾಗಿ ಗಮನಿಸುತ್ತಿದೆ ಎಂದು ವಿಶ್ವಸಂಸ್ಥೆಯ ಮಹಾ ಕಾರ್ಯದರ್ಶಿ ಅಂಟೋನಿಯೋ ಗುಟೆರಿಸ್ ಹೇಳಿದ್ದಾರೆ.
ದಕ್ಷಿಣ ಏಶ್ಯದ ಈ ಎರಡು ನೆರೆಕರೆಯ ದೇಶಗಳು ತಮ್ಮೊಳಗಿನ ಯಾವತ್ತೂ ಭಿನ್ನಾಭಿಪ್ರಾಯ, ಭಿನ್ನಮತ, ಗಡಿ ವಿವಾದ ಮುಂತಾದವುಗಳನ್ನು ಪರಸ್ಪರ ಮಾತುಕತೆಯ ಮೂಲಕ ಶಾಂತಿಯುತವಾಗಿ ಪರಿಹರಿಸಿಕೊಳ್ಳುವ ಅಗತ್ಯವಿದೆ ಎಂದು ಗುಟೆರಿಸ್ ಹೇಳಿದ್ದಾರೆ.
ಭಾರತ – ಪಾಕ್ ನಡುವಿನ ಬಿಕ್ಟಟ್ಟು, ಉದ್ವಿಗ್ನತೆಗೆ ವಿಶ್ವ ಸಂಸ್ಥೆ ಮಹತ್ವ ಕೊಡುತ್ತಿಲ್ಲ ಅಥವಾ ಹಾಗೆ ಮಾಡಲು ಅದು ನಿರಾಕರಿಸುತ್ತಿದೆ ಎಂಬ ಆರೋಪವನ್ನು ಗುಟೆರಿಸ್ ವಕ್ತಾ ಡ್ಯುಜಾರಿಕ್ ಅವರು ದೈನಂದಿನ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡುತ್ತಾ ಹೇಳಿದರು.
ಇತಿಹಾಸದ ಒಬ್ಬ ಒಳ್ಳೆಯ ವಿದ್ಯಾರ್ಥಿಯಾಗಿರುವ ವಿಶ್ವಸಂಸ್ಥೆಯ ಮಹಾಕಾರ್ಯದಶಿ ಗುಟೆರಿಸ್ ಅವರು ಭಾರತ ಪಾಕ್ ನಡುವಿನ ಬಿಕ್ಕಟ್ಟು ಮತ್ತು ಉದ್ವಿಗ್ನತೆಯನ್ನು ನಿಕಟವಾಗಿ ಗಮನಿಸುತ್ತಿದ್ದು ಇದೇ ಬಗೆಯ ಸನ್ನಿವೇಶಗಳಿರುವ ವಿಶ್ವದ ಇತರೆಡೆಯಲ್ಲಿ ಬೆಳವಣಿಗೆಗಳ ಮೇಲೆ ಕೂಡ ಕಣ್ಣಿಟ್ಟಿದ್ದಾರೆ. ಭಾರತ – ಪಾಕ್ ನಡುವಿನ ವಿವಾದದ ವಿಷಯವಾಗಿರುವ ಕಾಶ್ಮೀರದ ಬಗ್ಗೆ ಉಭಯ ದೇಶಗಳು ಶಾಂತಿಯುತ ಮಾತುಕತೆಗೆ ಮುಂದಾಗುವುದೇ ಸದ್ಯಕ್ಕಿರುವ ಉಪಾಯವಾಗಿದೆ ಎಂದು ಗುಟೆರಿಸ್ ಅಭಿಪ್ರಾಯಪಟ್ಟಿರುವುದಾಗಿ ವಕ್ತಾರ ಡ್ಯುಜಾರಿಕ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bangla:ಬಂಧನಕ್ಕೊಳಗಾದ ಇಸ್ಕಾನ್ ನ ಕೃಷ್ಣದಾಸ್ ಗೆ ಜಾಮೀನು ನಿರಾಕರಿಸಿದ ಬಾಂಗ್ಲಾ ಕೋರ್ಟ್
Census: ಇರಾಕ್ನಲ್ಲಿ 37 ವರ್ಷಗಳ ಬಳಿಕ ಗಣತಿ… 4.54 ಕೋಟಿ ಜನಸಂಖ್ಯೆ
Tensions Grip: ಬಾಂಗ್ಲಾದೇಶ ಸರಕಾರದಿಂದ ಹಿಂದೂ ನಾಯಕ, ಇಸ್ಕಾನ್ನ ಕೃಷ್ಣದಾಸ್ ಸೆರೆ
warrant: ಇಸ್ರೇಲಿ ನಾಯಕರಿಗೆ ವಾರಂಟ್ ಬೇಡ, ಗಲ್ಲು ವಿಧಿಸಿ: ಇರಾನ್
Israel; ಹೆಜ್ಬುಲ್ಲಾ ಜತೆ ‘ತಾತ್ವಿಕವಾಗಿ’ ಕದನ ವಿರಾಮ ಒಪ್ಪಂದ :ವರದಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.