ಗೋವುಗಳ ಬದಲಾಗಿ ವಾಹನಗಳ ಸಂಖ್ಯೆ ಹೆಚ್ಚಳ
Team Udayavani, May 17, 2017, 12:48 PM IST
ಹುಬ್ಬಳ್ಳಿ: ದೇಶಾದ್ಯಂತ ಗೋಮಾತೆ ರಕ್ಷಣೆಗಾಗಿ ಆಂದೋಲನಗಳನ್ನು ಮಾಡಲಾಗುತ್ತಿದೆ. ಆದರೆ, ಬಹುತೇಕರ ಮನೆಗಳಲ್ಲಿ ಗೋವುಗಳೇ ಇಲ್ಲ. ಅದರ ಬದಲು ವಾಹನಗಳ ಸಂಖ್ಯೆಯೇ ಹೆಚ್ಚಾಗುತ್ತಿದೆ ಎಂದು ರಾಷ್ಟ್ರಸಂತ ಲಲಿತಪ್ರಭಾ ಸಾಗರ ಮಹಾರಾಜರು ವಿಷಾದ ವ್ಯಕ್ತಪಡಿಸಿದರು.
ವರೂರಿನ ಶ್ರೀ ನವಗ್ರಹ ತೀರ್ಥಕ್ಷೇತ್ರದ ಎಜಿಎಂ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಮಂಗಳವಾರ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಶ್ರೀಗಳು, ಮನುಷ್ಯನ ಆರೋಗ್ಯ ಹಾಗೂ ಆರ್ಥಿಕತೆಗೆ ಪೂರಕವಾದ ಗೋವುಗಳನ್ನು ಸಲಹುವವರ ಸಂಖ್ಯೆ ಕ್ಷೀಣಿಸುತ್ತಿದೆ.
ಎಲ್ಲರೂ ವಾಹನಗಳನ್ನೆ ಬಯಸುತ್ತಿದ್ದಾರೆ. ಗೋವು ತಾನಾಗಿಯೇ ಹಾಲು ಕೊಡುವುದಿಲ್ಲ. ಬದಲಾಗಿ ನಾವು ಪಡೆದುಕೊಳ್ಳಬೇಕು. ಶ್ರಮಪಟ್ಟಾಗ ಮಾತ್ರ ಫಲ ಪಡೆಯಲು ಸಾಧ್ಯ ಎಂದರು. ಆತ್ಮವಿಶ್ವಾಸ ದೃಢವಾಗಿದ್ದರೆ ಕೆಟ್ಟ ಸಮಯದಲ್ಲೂ ಅದು ನಮ್ಮನ್ನು ಎತ್ತಿ ಹಿಡಿಯುತ್ತದೆ.
ಸಮಯಕ್ಕೆ ಸರಿಯಾಗಿ ಬುದ್ಧಿಶಕ್ತಿ ಬಳಸಿಕೊಳ್ಳಬೇಕು. ಅಂದಾಗಲೇ ಯಶಸ್ಸು ಕಾಣಲು ಸಾಧ್ಯ. ಪರಿಶ್ರಮದಿಂದ ಪಡೆದ ಯಶಸ್ಸು, ಲಾಭದಿಂದ ಸಂತೃಪ್ತಿಯ ಪರಿಣಾಮ ಕಾಣಬಹುದು ಎಂದು ಹೇಳಿದರು.
ರಾಷ್ಟ್ರಸಂತ ಚಂದ್ರಪ್ರಭ ಸಾಗರ ಮಹಾರಾಜರು ಮಾತನಾಡಿ, ದೇವಸ್ಥಾನ, ಮಂದಿರ, ಮಸೀದಿ, ಚರ್ಚ್, ಗುರುದ್ವಾರ ಕಟ್ಟಿದರೆ ಅವುಗಳಿಗೆ ಆಯಾ ಧರ್ಮದವರು ಮಾತ್ರ ಪ್ರವೇಶ ಮಾಡುತ್ತಾರೆ. ಅದೇ ಶಿಕ್ಷಣ ಸಂಸ್ಥೆ ನಿರ್ಮಿಸಿದರೆ ಜಾತಿ, ಧರ್ಮವೆಂಬ ಬೇಧವಿಲ್ಲದೆ ಎಲ್ಲ ವರ್ಗದವರೂ ಪ್ರವೇಶಿಸುತ್ತಾರೆ. ಶಿಕ್ಷಣವಂತರಾಗುತ್ತಾರೆ.
ವಿದ್ಯಾರ್ಥಿಗಳು ಶಿಕ್ಷಣದ ಜೊತೆ ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು. ರಾಷ್ಟ್ರಸಂತ ಗುಣಧರ ನಂದಿ ಮಹಾರಾಜರು ಮಾತನಾಡಿ, ಕಲಿಯಲೇಬೇಕೆಂಬ ಆಸೆಯುಳ್ಳ ಪಾಲಕರಿಲ್ಲದ ಅನಾಥ ಮಕ್ಕಳಿಗೆ ವರೂರಿನ ಎಜಿಎಂ ಸಂಸ್ಥೆಯಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಎಲ್‌ಕೆಜಿಯಿಂದ ಪಿಯುಸಿ ವರೆಗೆ ಉಚಿತವಾಗಿ ಶಿಕ್ಷಣ ನೀಡಲಾಗುವುದು. ಜೊತೆಗೆ ವಸತಿ, ಊಟ ಕೊಡಲಾಗುವುದು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
ಮಾಣಿಪ್ಪಾಡಿ ಪ್ರಕರಣವನ್ನು ಸರಕಾರ ಸಿಬಿಐ ಗೆ ನೀಡಲಿ, ಸತ್ಯಾಸತ್ಯತೆ ಹೊರಬರುತ್ತೆ: ಈಶ್ವರಪ್ಪ
Hubli: ಬಿಜೆಪಿಯವರಿಗೆ ಯಾವುದೇ ಆಸಕ್ತಿ ಇಲ್ಲ. ಅವರಿಗೆ ರಾಜಕಾರಣವೇ ಮುಖ್ಯ :ಡಿ.ಕೆ.ಶಿ
Hubballi: ಸಿಎಂ ಸಿದ್ದರಾಮಯ್ಯ ಮುಸ್ಲಿಮರಿಗೆ ಮುತ್ತು ಕೊಡ್ತಾರೆ, ನಮಗೆ ಲಾಠಿ ಏಟು: ಬೆಲ್ಲದ್
Hubli: ಕ್ರಿಮಿನಲ್ ಜತೆಯೇ ಪೊಲೀಸ್ ಪೇದೆ ಎಸ್ಕೇಪ್! ಹುಬ್ಬಳ್ಳಿಯಲ್ಲಿ ಪೊಲೀಸ್ ಕಾರ್ಯಾಚರಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.