ವರನ ಅಪಹರಣ: ಮದುವೆ ಮನೆಯಿಂದಲೇ ಕಿಡ್ನಾಪ್ ಮಾಡಿದ ಯುವತಿ
Team Udayavani, May 18, 2017, 11:21 AM IST
ಬುಂದೇಲ್‌ಖಂಡ: ಪ್ರೀತಿಸಿದ ಹುಡುಗ ತನಗೆ ಕೈಕೊಟ್ಟು ಬೇರೊಂದು ಮದುವೆ ಮಾಡಿಕೊಳ್ಳಲು ಸಿದ್ಧನಾದರೆ ಮೋಸಹೋದ ಹುಡುಗಿ ಏನು ಮಾಡುತ್ತಾಳೆ? ಈ ಪ್ರಶ್ನೆಗೆ ನೀವು ಕೊಡುವ ಎಲ್ಲ ಉತ್ತರಗಳಿಗಿಂತಲೂ ಹೊರತಾದ ಘಟನೆಯೊಂದು ಉತ್ತರಪ್ರದೇಶದಲ್ಲಿ ನಡೆದಿದೆ.
ಬುಂದೇಲ್‌ಖಂಡದಲ್ಲಿ ಯುವತಿಯೊಬ್ಬಳು ಸಿನಿಮೀಯ ರೀತಿಯಲ್ಲಿ ಮದುವೆ ಮನೆಗೇ ನುಗ್ಗಿ ರಿವಾಲ್ವರ್ ತೋರಿ ವರನನ್ನು ಅಪಹರಿಸಿದ್ದಾಳೆ. ಈ ಕಿಡ್ನಾಪ್ ಪ್ರಹಸನ ಯಾರನ್ನಾದರೂ ತಬ್ಬಿಬ್ಬು ಮಾಡದೇ ಇರದು. ಮಂಗಳವಾರ ರಾತ್ರೋರಾತ್ರಿ ಇಬ್ಬರು ಯುವಕರ ಜೊತೆ ಬಂದೂಕು ಹಿಡಿದು ಎಸ್‌ಯುವಿಯಲ್ಲಿ ಬಂದಿಳಿದ ಆಕೆ, ಮದುವೆ ಮಂಟಪಕ್ಕೆ ನುಗ್ಗಿ ಹುಡುಗನ ತಲೆಗೆ ಬಂದೂಕು ಗುರಿ ಇರಿಸಿದ್ದಾಳೆ. “ಈತ ನನ್ನನ್ನು ಪ್ರೀತಿಸಿದ್ದ. ಈಗ ಮತ್ತೂಂದು ಹುಡುಗಿಯನ್ನು ಮದುವೆಯಾಗುವ ಮೂಲಕ ನನಗೆ ಮೋಸ ಮಾಡುತ್ತಿದ್ದಾನೆ. ಇದಕ್ಕೆ ನಾನು ಅವಕಾಶ ನೀಡಲಾರೆ’ ಎಂದು ಹೇಳುತ್ತಾ, ಆತನನ್ನು ಎಳೆದುಕೊಂಡು ಅಜ್ಞಾತ ಸ್ಥಳಕ್ಕೆ ಕೊಂಡೊಯ್ದಿದ್ದಾಳೆ. ಇನ್ನೂ ವರ ಅಶೋಕ್ ಯಾದವ್ ಪತ್ತೆಯಾಗಿಲ್ಲ.
ಒಂದೆಡೆ, “ಅಶೋಕ್‌ಗೆ ಈ ಮೊದಲೇ ಆ ಮಹಿಳೆಯ ಜೊತೆ ಗುಟ್ಟಾಗಿ ಮದುವೆಯಾಗಿದೆ. ಆದರೆ ಹೆತ್ತವರ ಒತ್ತಡಕ್ಕೆ ಮಣಿದು ಆತ ಇನ್ನೊಂದು ಮದುವೆಗೆ ಸಿದ್ಧನಾಗಿದ್ದ’ ಎಂದು ಸ್ಥಳೀಯರು ಗುಸು ಗುಸು ಮಾತನಾಡುತ್ತಿದ್ದಾರೆ. ಮತ್ತೂಂದೆಡೆ, ವಧುವಿನ ಕುಟುಂಬದವರು ವರನನ್ನು ಅಪಹರಿಸಿದ ಯುವತಿ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ವಿಶೇಷವೆಂದರೆ, ಪೊಲೀಧಿಸರು, “ಆಕೆ ಮೋಸ ಮಾಡಿದ ಹುಡುಗನಿಗೆ ಸರಿಯಾಗಿ ಪಾಠ ಕಲಿಸಿದ್ದಾಳೆ’ ಎಂದು ರಿವಾಲ್ವರ್ ರಾಣಿಯನ್ನೇ ಶ್ಲಾ ಸಿದ್ದಾರಂತೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Havyaka Sammelana; ಅಡಿಕೆ ಬೆಳೆಗಾರರ ಹಿತ ಕಾಯಲು ಕೇಂದ್ರ ಬದ್ಧ: ಶೋಭಾ ಕರಂದ್ಲಾಜೆ
Havyaka ಭಾಷೆಗೆ ಅಕಾಡೆಮಿ ಅಥವಾ ಅಧ್ಯಯನ ಪೀಠ ಅಗತ್ಯ: ರವಿಶಂಕರ್ ಭಟ್
Ramnagar; 30ಕ್ಕೂ ಅಧಿಕ ಊರುಗಳಲ್ಲಿ ಆತಂಕ ಹುಟ್ಟಿಸಿದ್ದ ಕಾಡಾನೆ ಸೆರೆ
Yakshagana;ಅಧ್ಯಯನ, ಪಾತ್ರ ಜ್ಞಾನದಿಂದಷ್ಟೇ ಕಲಾವಿದ ರಂಗಸ್ಥಳದಲ್ಲಿ ಮೆರೆಯಲು ಸಾಧ್ಯ
Drugs; ಮಾರಾಟ, ಸೇವನೆ : ಮಂಗಳೂರು 1,090, ಉಡುಪಿ 116 ಪ್ರಕರಣ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.