ನ್ಯಾಯ ಸಿಗದಿದ್ದರೆ suicide: SC,ಮೋದಿಗೆ ತ್ರಿವಳಿ ತಲಾಕ್ ಸಂತ್ರಸ್ತೆ
Team Udayavani, May 19, 2017, 12:19 PM IST
ಡೆಹರಾಡೂನ್ : ಉತ್ತರಾಖಂಡದ ತ್ರಿವಳಿ ತಲಾಕ್ ಸಂತ್ರಸ್ತೆಯೋರ್ವಳು ತನಗೆ ನ್ಯಾಯಾಂಗ ವ್ಯವಸ್ಥೆಯಿಂದ ನ್ಯಾಯ ದೊರಕದಿದ್ದರೆ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದಾಳೆ.
ತನ್ನ ಪತಿಯಿಂದ ತ್ರಿವಳಿ ತಲಾಕ್ ಪಡೆದಿರುವ ಈ ಸಂತ್ರಸ್ತೆಯು ಪ್ರಧಾನಿ ನರೇಂದ್ರ ಮೋದಿ ಮತ್ತು ಸುಪ್ರೀಂ ಕೋರ್ಟಿಗೆ ನ್ಯಾಯಕ್ಕಾಗಿ ಮೊರೆ ಇಟ್ಟಿದ್ದಾಳೆ; ತನಗೆ ನ್ಯಾಯ ಸಿಗದಿದ್ದರೆ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿಯೂ ಹೇಳಿದ್ದಾಳೆ.
ವರಿಷ್ಠ ನ್ಯಾಯಮೂರ್ತಿ ಜಸ್ಟಿಸ್ ಜೆ ಎಸ್ ಖೇಹರ್ ನೇತೃತ್ವದ ಐವರು ನ್ಯಾಯಾಧೀಶರ ಸಾಂವಿಧಾನಿಕ ಪೀಠವು ತ್ರಿವಳಿ ತಲಾಕ್‌ನ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಲಾದ ಅರ್ಜಿಗಳ ಮೇಲಿನ ಆರು ದಿನಗಳ ಸುದೀರ್ಘ ವಿಚಾರಣೆಯನ್ನು ನಿನ್ನೆ ಗುರುವಾರ ಮುಗಿಸಿದ್ದು ಈಗಿನ್ನು ತೀರ್ಪು ಕೊಡಲಿದೆ.
ಆರು ದಿನಗಳ ವಿಚಾರಣೆಯ ಕಾಲದಲ್ಲಿ ಸುಪ್ರೀಂ ಕೋರ್ಟ್, ತ್ರಿವಳಿ ತಲಾಕ್ ಇಸ್ಲಾಂ ಧರ್ಮದಲ್ಲಿ ಮೂಲಭೂತವಾಗಿದೆಯೇ ಎಂಬ ಪ್ರಶ್ನೆಯನ್ನು ಮುಖ್ಯವಾಗಿ ಮುಂದಿಟ್ಟಿತ್ತು.
‘ಮುಸ್ಲಿಂ ಸಮುದಾಯದಲ್ಲಿನ ವಿವಾಹವು ಒಂದು ಒಪ್ಪಂದವಾಗಿದ್ದು ಮಹಿಳೆಯು ತನ್ನ ಘನತೆ, ಗೌರವಗಳನ್ನು ರಕ್ಷಿಸಲು ನಿಕಾಹ್‌ನಾಮಾದಲ್ಲಿ ಕೆಲವು ಶರತುಗಳಿಗೆ ಹೆಚ್ಚಿನ ಮಹತ್ವ ಕೊಡಬಹುದು. ಆಕೆ ಕೂಡ ತನ್ನ ಪತ್ಯಿ ವಿರುದ್ಧ ತ್ರಿವಳಿ ತಲಾಕ್ ಘೋಷಿಸಬಹುದು ಮತ್ತು ವಿಚ್ಛೇದನ ಪ್ರಕರಣದಲ್ಲಿ ಅತ್ಯಧಿಕ ಮೆಹರ್ ಆಗ್ರಹಿಸಬಹುದು’ ಎಂದು ಅಖೀಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಇಂದು ಬುಧವಾರ ಸುಪ್ರೀಂ ಕೋರ್ಟಿಗೆ ಹೇಳಿತ್ತು.
‘ತ್ರಿವಳಿ ತಲಾಕ್ ಒಂದು ಪಾಪ ಕೃತ್ಯವಾಗಿದ್ದು ಆ ಕೃತ್ಯವನ್ನು ಎಸಗುವ ವ್ಯಕ್ತಿಗೆ ಮುಸ್ಲಿಂ ಸಮುದಾಯದಿಂದ ಬಹಿಷ್ಕಾರ ಹಾಕಬೇಕು’ ಎಂದು 2017ರ ಎಪ್ರಿಲ್ 14ರಂದು ಕೈಗೊಳ್ಳಲಾದ ಠರಾವಿನ ಪ್ರತಿಯನ್ನು ಮಂಡಳಿಯು ಸುಪ್ರೀಂ ಕೋರ್ಟಿ ಗೆ ತೋರಿಸಿತ್ತು.
ನಿಕಾಹ್‌ನಾಮಾದ ಸಂದರ್ಭದಲ್ಲಿ ತ್ರಿವಳಿ ತಲಾಕ್‌ಗೆ ಒಲ್ಲೆನೆಂದು ಹೇಳುವ ಹಕ್ಕು ಮುಸ್ಲಿಂ ಮಹಿಳೆಗೆ ಇದೆಯೇ ಮತ್ತು ಈ ಶರತ್ತನ್ನು ನಿಕಾಹ್‌ನಾಮಾದಲ್ಲಿ ಕಾಣಿಸುವಂತೆ ಎಲ್ಲ ಕಾಝಿಗಳನ್ನು ಕೇಳಿಕೊಳ್ಳಬಹುದೇ ಎಂದು ಸುಪ್ರೀಂ ಕೋರ್ಟ್ ಕೇಳಿದ ಪ್ರಶ್ನೆಗೆ ಮಂಡಳಿಯು ಈ ರೀತಿಯ ಉತ್ತರ ನೀಡಿತ್ತು. ಮಂಡಳಿಯ ಪರವಾಗಿ ಮಾಜಿ ಕೇಂದ್ರ ಸಚಿವ, ಹಿರಿಯ ವಕೀಲ ಕಪಿಲ್ ಸಿಬಲ್ ವಾದಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pollution: ದಿಲ್ಲಿಯಲ್ಲಿ ಈಗ ನಿರ್ಮಾಣಕ್ಕೆ ಬ್ರೇಕ್, ಬಸ್‌ಗಳಿಗೆ ನಿರ್ಬಂಧ
Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Media powerhouse: ರಿಲಯನ್ಸ್- ಡಿಸ್ನಿ ಕಂಪನಿ ವಿಲೀನ ಈಗ ಅಧಿಕೃತ
PM ನರೇಂದ್ರ ಮೋದಿಗೆ ಡೊಮಿನಿಕಾದ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಗೌರವ
MUST WATCH
ಹೊಸ ಸೇರ್ಪಡೆ
Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು
Mangaluru: ಪಂಪ್‌ವೆಲ್-ಪಡೀಲ್ ನಡುವಿನ ಚತುಷ್ಪಥ ಕಾಮಗಾರಿ 3 ವರ್ಷ ಕಳೆದರೂ ಅಪೂರ್ಣ
Thirthahalli: ಶಾಸಕ ಸ್ಥಾನವನ್ನು ಗಿರವಿ ಇಟ್ಟರಾ ಆರಗ ಜ್ಞಾನೇಂದ್ರ ?
Kundapura: ಅಕಾಲಿಕ ಮಳೆ; ಭತ್ತ ಕಟಾವಿಗೆ ಅಡ್ಡಿ; ಬೆಳೆ ನಾಶದ ಭೀತಿಯಲ್ಲಿ ರೈತರು
Ullal: ತೊಕ್ಕೊಟ್ಟು-ಮುಡಿಪು ರಸ್ತೆಗೆ ತೇಪೆ ಕಾಮಗಾರಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.