ರಸ್ತೆ ದುರಸ್ತಿಗಿಂತ ಅಗೆತವೇ ಹೆಚ್ಚು!
Team Udayavani, May 19, 2017, 3:21 PM IST
ಹುಬ್ಬಳ್ಳಿ: ಉತ್ತಮ ರಸ್ತೆಗಳಲ್ಲಿ ಓಡಾಡಬೇಕೆಂಬ ಮಹಾನಗರದ ಜನರ ಕನಸು ಸದ್ಯಕ್ಕಂತೂ ನನಸಾಗುವ ಲಕ್ಷಣಗಳು ಗೋಚರಿಸುತ್ತಿಲ್ಲ. ಒಳಚರಂಡಿ ಕಾಮಗಾರಿ, 24/7 ಕುಡಿಯುವ ನೀರು ಪೂರೈಕೆ ಯೋಜನೆ, ಬಿಆರ್‌ಟಿಎಸ್, ಅಡುಗೆ ಅನಿಲ ಪೈಪ್‌ಲೈನ್ ಜೋಡಣೆ ಯೋಜನೆಗಳಿಂದಾಗಿ ರಸ್ತೆಗಳ ಸ್ಥಿತಿ ಅಧ್ವಾನವಾಗಿದೆ.
ಮಹಾನಗರದ ಪ್ರಥಮ ಪ್ರಜೆ ಡಿ.ಕೆ. ಚವ್ಹಾಣ ಅವರ ವಾರ್ಡ್ ಕೂಡ ಇದಕ್ಕೆ ಹೊರತಾಗಿಲ್ಲ. ಒಂದಾದ ಮೇಲೊಂದು ಯೋಜನೆಗಳನ್ನು ಅನುಷ್ಠಾನ ಗೊಳಿಸುತ್ತಿರುವ ಕಾರಣ ರಸ್ತೆಗಳಲ್ಲಿ ತಗ್ಗು ತೋಡುವ ಕಾರ್ಯ ನಿರಂತರವಾಗಿದೆ. ಅವಳಿನಗರ ಸ್ಮಾರ್ಟ್ ಸಿಟಿ ಆಗುವತ್ತ ಹೆಜ್ಜೆ ಹಾಕುತ್ತಿದ್ದರೂ, ರಸ್ತೆಗಳಲ್ಲಿ ಬಿದ್ದಿರುವ ಹೊಂಡಗಳನ್ನು ಮುಚ್ಚಲು ಮಾತ್ರ ಪಾಲಿಕೆ ಮುಂದಾಗುತ್ತಿಲ್ಲ.
ಅವಳಿ ನಗರದಲ್ಲಿ ನಡೆಯುವ ವಿವಿಧ ಕಾಮಗಾರಿಗಳಿಗೆ ರಸ್ತೆ ಅಗೆತ ಮಾಡಲಾಗುತ್ತದೆ. ರಸ್ತೆ ಅಗೆತಕ್ಕೆ ಪಾಲಿಕೆ ನಿರ್ದಿಷ್ಟ ಶುಲ್ಕ ಭರಿಸಿಕೊಂಡಿರುತ್ತದೆ. ಆದರೆ ಕಾಮಗಾರಿ ಮುಗಿದರೂ ಶುಲ್ಕ ಭರಿಸಿಕೊಂಡ ಪಾಲಿಕೆ ಮಾತ್ರ ಸಂಬಂಧವೇ ಇಲ್ಲದವರಂತೆ ವರ್ತಿಸಿ, ರಸ್ತೆ ದುರಸ್ತಿಯನ್ನು ಕಡೆಗಣಿಸಿದೆ.
ರಸ್ತೆಯೆಲ್ಲ ಹೊಂಡಮಯ: ಮಹಾಪೌರ ಡಿ.ಕೆ. ಚವ್ಹಾಣ ಅವರು ಪ್ರತಿನಿಧಿಸುವ ಇಲ್ಲಿನ ಜನತಾ ಬಜಾರ್ ಮುಖ್ಯರಸ್ತೆಯಲ್ಲಿ ಗುಂಡಿಗಳು ಬಿದ್ದು ಸಾರ್ವಜನಿಕರು ಪರಿತಪಿಸುತ್ತಿದ್ದರೂ, ಪಾಲಿಕೆಯಿಂದ ಯಾವುದೇ ಸ್ಪಂದನೆ ಇಲ್ಲ. ಮಹಾನಗರ ಪಾಲಿಕೆ ಕೇಂದ್ರ ಕಚೇರಿಯಿಂದ ಅನತಿ ದೂರದಲ್ಲಿರುವ ಮುಖ್ಯರಸ್ತೆಯಲ್ಲಿ ಇತ್ತೀಚೆಗೆ ಕುಡಿಯುವ ನೀರು ಹಾಗೂ ಒಳಚರಂಡಿ ಕಾಮಗಾರಿಗೆಂದು ರಸ್ತೆ ಅಗೆಯಲಾಯಿತು.
ಕಾಮಗಾರಿ ಮುಗಿದ ಮೇಲೆ ಅಲ್ಲಿ ತೇಪೆ ಕಾರ್ಯ ಮಾಡದೆ ಹಾಗೇ ಬಿಟ್ಟಿದ್ದು, ಆ ಸ್ಥಳ ಡಾಂಬರ್ ರಸ್ತೆಗಿಂತ ಅರ್ಧ ಅಡಿಗೂ ಹೆಚ್ಚು ಕುಸಿದಿದೆ. ಇದರಿಂದ ಈ ರಸ್ತೆಯಲ್ಲಿ ಸಂಚರಿಸುವ ನೂರಾರು ವಾಹನ ಸವಾರರು ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಸಾಗುವ ಸ್ಥಿತಿ ನಿರ್ಮಾಣವಾಗಿದೆ.
ಕಟ್ಟಡದ ತಾಜ್ಯ ರಸ್ತೆಗಳ ಗುಂಡಿಗೆ: ಹಲವು ದಿನಗಳಿಂದ ಕೆಲವರು ಕಟ್ಟಡದ ತ್ಯಾಜ್ಯಗಳಾದ ಇಟ್ಟಂಗಿ, ಖಡಿಯನ್ನು ರಸ್ತೆ ಗುಂಡಿಗಳಿಗೆ ಹಾಕುವ ಮೂಲಕ ಅದನ್ನು ಮುಚ್ಚುವ ಕೆಲಸ ಮಾಡಿದ್ದಾರೆ. ಡಾಂಬರ್ ರಸ್ತೆಗೆ ತೇಪೆ ಕಾರ್ಯ ಮಾಡಲು ಮುಂದಾಗದ ಪಾಲಿಕೆಗೆ ಹಿಡಿ ಶಾಪ ಹಾಕುತ್ತಾ ದಿನನಿತ್ಯವೂ ಸಾವಿರಾರು ವಾಹನಗಳು ಸಂಚರಿಸುವ ರಸ್ತೆಯಲ್ಲಿ ವಾಹನ ಸ್ಕಿಡ್ ಆಗಿ ಬಿದ್ದು ಸವಾರರು ಗಾಯಗೊಳ್ಳುತ್ತಿದ್ದಾರೆ.
ಈ ಕುರಿತು ಸಂಬಂಧಪಟ್ಟವರ ಗಮನಕ್ಕೂ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಕಟ್ಟಡದ ತ್ಯಾಜ್ಯವನ್ನು ರಸ್ತೆಗೆ ಹಾಕುವ ಮೂಲಕ ಸಮತಟ್ಟು ಮಾಡಲಾಗುತ್ತಿದೆ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ.
* ಬಸವರಾಜ ಹೂಗಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
NABARD ನಿರ್ಧಾರದಿಂದ ಕೃಷಿಗೆ ಹಿನ್ನಡೆ; ಸಾಲದ ಮೊತ್ತ ಕಡಿತ ಮಾಡದಿರಲು ಸಚಿವ ಪಾಟೀಲ ಆಗ್ರಹ
ಸಿಎಂ ಆಗಿದ್ದವರು ಈ ರೀತಿ ಹೇಳಿಕೆ ನೀಡುವ ಬದಲು, ಸ್ಪಷ್ಟ ಹೇಳಿಕೆ ನೀಡಲಿ: ಸಚಿವ ಶಿವಾನಂದ
dharwad: ಪೊಲೀಸ್ ಪೇದೆ ಮೇಲೆ ಕೈ ಮುಖಂಡ ತಮಟಗಾರ ಸಹೋದರ ಬ್ಲೇಡ್ ನಿಂದ ಹಲ್ಲೆ
Covid Scam: ಸಚಿವ ಸಂಪುಟದಲ್ಲಿ ಚರ್ಚಿಸಿ ಮುಂದಿನ ಕ್ರಮ: ಸಿಎಂ ಸಿದ್ದರಾಮಯ್ಯ
By Election: ಹಣ ಕೊಟ್ಟರೂ ಸಿಎಂ ಕಾರ್ಯಕ್ರಮಕ್ಕೆ ಜನ ಬರುತ್ತಿಲ್ಲ: ಬಿಎಸ್ ವೈ
MUST WATCH
ಹೊಸ ಸೇರ್ಪಡೆ
Siraguppa: ಮುಂಜಾನೆ ತಾಲೂಕಿನಲ್ಲಿ ದಟ್ಟ ಮಂಜು… ವಾಹನ ಸವಾರರ ಪರದಾಟ
IPL Mega Auction: ಅದೃಷ್ಟ ಪರೀಕ್ಷೆಯಲ್ಲಿ ಕರ್ನಾಟಕದ 24 ಮಂದಿ ಆಟಗಾರರು; ಇಲ್ಲಿದೆ ಪಟ್ಟಿ
Bengaluru: ಉದ್ಯೋಗ, ಹೂಡಿಕೆ ನೆಪದಲ್ಲಿ ಜನರಿಗೆ ವಂಚನೆ: ನಾಲ್ವರ ಸೆರೆ
Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು
Jamia Millia Islamia: ಇಸ್ಲಾಂಗೆ ಮತಾಂತರಗೊಳ್ಳಿ ಅಥವಾ ಅತ್ಯಾಚಾರಕ್ಕೆ ಒಳಗಾಗಿ: ಭಾರಿ ಆರೋಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.