ಮಕ್ಕಳ ಇಚ್ಛೆಗೆ ಮುಕ್ತ ಅವಕಾಶ ಕೊಡಿ
Team Udayavani, May 19, 2017, 5:00 PM IST
ಕಲಬುರಗಿ: ಪಾಲಕರು ತಮ್ಮ ಮಕ್ಕಳ ಮನದ ಇಚ್ಛೆ ಅರಿತು ಮುಕ್ತವಾಗಿ ಆಯ್ಕೆ ಮತ್ತು ಬೆಳವಣಿಗೆ ಅವಕಾಶಗಳನ್ನು ನೀಡಬೇಕು. ಇದರಿಂದ ಮಕ್ಕಳಲ್ಲಿನ ನೈಜ ಸಾಮರ್ಥ್ಯ ಪ್ರದರ್ಶನ ಸಾಧ್ಯವಾಗುತ್ತದೆ ಎಂದು ರಂಗ ಸಮಾಜದ ಸದಸ್ಯೆ ಹಾಗೂ ನಾಟಕಕಾರ್ತಿ ಡಾ| ಸುಜಾತಾ ಜಂಗಮಶೆಟ್ಟಿ ಹೇಳಿದರು.
ನಗರದ ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ರಂಗಾಯಣ ಕಲಬುರಗಿ ವತಿಯಿಂದ ಗುರುವಾರ ಆಯೋಜಿಸಿದ್ದ ಮಕ್ಕಳ ಬೇಸಿಗೆ ಶಿಬಿರ ಚಿಣ್ಣರ ನಾಟಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ಇವತ್ತಿನ ದಿನಗಳಲ್ಲಿ ಇಂತಹ ಮುಕ್ತವಾದ ಅವಕಾಶಗಳಿಂದ ವಂಚಿತರಾಗಿ ಪಾಲಕರ ಮತ್ತು ಪರಿಸರದಲ್ಲಿನ ಒತ್ತಡಗಳಿಗೆ ತಲೆ ಕೊಟ್ಟು ತಡಕಾಡುತ್ತಿದ್ದ ಮಕ್ಕಳಿಗೆ ರಂಗಾಯಣ ಆರಂಭಿಸಿರುವ ಬೇಸಿಗೆ ಶಿಬಿರ ಉತ್ತಮ ಸಂಸ್ಕಾರವಲ್ಲದೆ, ಸ್ವತಂತ್ರ ಮನೋಭಾವ ಕಲಿಸಿದೆ.
ಇದು ಅವರ ವ್ಯಕ್ತಿತ್ವ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದು ಹೇಳಿದರು. ನಾಟಕೋತ್ಸವ ಉದ್ಘಾಟಿಸಿದ ಹಿರಿಯ ರಂಗಕರ್ಮಿ ಡಾ| ಸ್ವಾಮಿರಾವ ಕುಲಕರ್ಣಿ ಮಾತನಾಡಿ, ಮಕ್ಕಳ ಮನಸ್ಸು ಸಂಪೂರ್ಣ ಬಿಳಿ ಹಾಳೆ ಇದ್ದಂತೆ.
ಆ ಹಾಳೆಯಲ್ಲಿ ನಾವು ಏನನ್ನು ಮೂಡಿಸುವ ಪ್ರಯತ್ನ ಮಾಡುತ್ತೇವೆ ಎನ್ನುವುದನ್ನು ಪಾಲಕರು ಸರಿಯಾಗಿ ಮನಗಾಣಬೇಕು. ಅಲ್ಲದೆ, ಮಕ್ಕಳಿಗೆ ಒತ್ತಡ ಮುಕ್ತ ಪರಿಸರದಲ್ಲಿ ಇರುವಂತೆ ನೋಡಿಕೊಳ್ಳುವ ಹೊಣೆ ಹೊರಬೇಕು ಎಂದು ಹೇಳಿದರು. ಕಲಬುರಗಿ ರಂಗಾಯಣ ಆಯೋಜಿಸಿದ್ದ ಚಿಣ್ಣರ ಮೇಳ-2017 ಯಶಸ್ವಿಯಾಗಿದೆ.
ಮಕ್ಕಳ ಪ್ರತಿಭೆಗೆ ಇದು ಉತ್ತಮ ವೇದಿಕೆ ಎಂದು ಹೇಳಿದರು. ಕಲಬುರಗಿ ರಂಗಾಯಣಕ್ಕೆ ಸರ್ಕಾರ ಸ್ವತಂತ್ರ ನಿರ್ದೇಶಕರನ್ನು ನೇಮಕ ಮಾಡುವ ಮೂಲಕ ಈ ಭಾಗದ ಪ್ರತಿಭೆಗಳಿಗೆ ಮುಕ್ತ ಅವಕಾಶ ನೀಡಬೇಕು. ಅಂದಾಗ ಮಾತ್ರ ಈ ಭಾಗದಲ್ಲಿ ಸಾಂಸ್ಕೃತಿಕ ವಾತಾವರಣ ನಿರ್ಮಾಣವಾಗಲು ಸಾಧ್ಯ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿದ್ದ ಪತ್ರಕರ್ತ ಶಿವರಂಜನ್ ಸತ್ಯಂಪೇಟೆ ಮಾತನಾಡಿದರು. ಕಲಬುರಗಿ ರಂಗಾಯಣದ ಆಡಳಿತಾಧಿಕಾರಿ ದತ್ತಪ್ಪ ಸಾಗನೂರ ಅಧ್ಯಕ್ಷತೆ ವಹಿಸಿದ್ದರು. ಶಿಬಿರದ ಸಂಚಾಲಕ ಸಂದೀಪ ಬಿ. ಪ್ರಾಸ್ತಾವಿಕವಾಗಿ ಮಾತನಾಡಿದರು. ವಾಣಿಶ್ರೀ ಕಾರ್ಯಕ್ರಮ ನಿರೂಪಿಸಿದರು.
ಜಿಲ್ಲಾ ಕಸಾಪ ಅಧ್ಯಕ್ಷ ವೀರಭದ್ರ ಸಿಂಪಿ, ಡಾ| ಶ್ರೀಶೈಲ ಘೂಳಿ, ಗಿರಿಜಾ ಕರ್ಪೂರ, ಡಾ| ಶಿವರಾಮ ಅಸುಂಡಿ, ಡಾ| ಕಾಶಿನಾಥ ಅಂಬಲಗಿ, ಶಂಕ್ರಯ್ಯ ಆರ್. ಘಂಟಿ ಇದ್ದರು. ಮೈನಾ ಚಿಣ್ಣರ ತಂಡ ಪ್ರಸ್ತುತಪಡಿಸಿದ ಆರ್. ಕೆ. ಶ್ಯಾನಬೋಗ ರಚಿಸಿದ ಸಾಜೀದ್ ಶೇಖ್ ನಿರ್ದೇಶನದ ಸೋಮಾರಿ ಕಾಗೆ ನಾಟಕ ಪ್ರೇಕ್ಷರನ್ನು ಹಿಡಿದಿಡುವಲ್ಲಿ ಯಶಸ್ವಿಯಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Covid Scam: ಕೋವಿಡ್ ಹಗರಣ ತಾರ್ಕಿಕ ಅಂತ್ಯ: ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್
Kalaburagi: ಭಾರತೀಯ ಸಂಸ್ಕೃತಿ ಉತ್ಸವ ಯಶಸ್ಸಿಗೆ ಸಕಲ ಸಿದ್ದತೆ
Kalaburagi: ಶಾರ್ಟ್ ಸರ್ಕ್ಯೂಟ್ ನಿಂದಾಗಿ ಹೊತ್ತಿ ಉರಿದ ಕಾಫಿಜಾ ಕೆಫೆ
ಸಿದ್ಧಗಂಗಾ ಮಠದ ಶ್ರೀಸಿದ್ದಲಿಂಗ ಹೆಸರಿನಲ್ಲಿ ದೇಣಿಗೆ ವಸೂಲಿ: ಹಳೆ ವಿದ್ಯಾರ್ಥಿಗಳ ಬೇಸರ
Agriculture: ನೆಟೆರೋಗದಿಂದ ತೊಗರಿ ಸಂಪೂರ್ಣ ನಾಶ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.