26/11 ಮುಂಬೈ ದಾಳಿ ಪಾಕ್ ವಿಚಾರಣೆ; 8 ವರ್ಷ 9 ನ್ಯಾಯಾಧೀಶರು!
Team Udayavani, May 19, 2017, 5:26 PM IST
ಲಾಹೋರ್:2008ರ ಮುಂಬೈ ದಾಳಿ ಪ್ರಕರಣದ ವಿಚಾರಣೆ ನಡೆಸಲು ಪಾಕಿಸ್ತಾನದ ವಿಶೇಷ ಕೋರ್ಟ್ ಮತ್ತೊಬ್ಬ ನ್ಯಾಯಾಧೀಶರನ್ನು ನೇಮಕ ಮಾಡಿದೆ. ಮುಂಬೈ ದಾಳಿ ಪ್ರಕರಣದ ವಿಚಾರಣೆಗಾಗಿ ಪಾಕ್ ಕಳೆದ 8 ವರ್ಷಗಳಲ್ಲಿ 9 ಬಾರಿ ನ್ಯಾಯಾಧೀಶರನ್ನು ಬದಲಾಯಿಸಿದೆ.
ಮುಂಬೈ ದಾಳಿ ಸಂಬಂಧ ಶಾಮೀಲಾಗಿರುವ 7 ಮಂದಿ ಶಂಕಿತರ ವಿರುದ್ಧ ಭಯೋತ್ಪಾದನಾ ನಿಗ್ರಹ ಕೋರ್ಟ್ ವಿಚಾರಣೆ ನಡೆಸುತ್ತಿದ್ದು, ಇತ್ತೀಚೆಗೆ ಮತ್ತೆ ನ್ಯಾಯಾಧೀಶರನ್ನು ಬದಲಾಯಿಸಿರುವುದಾಗಿ ವರದಿ ವಿವರಿಸಿದೆ.
ಕಳೆದ 2 ವರ್ಷಗಳಿಂದ ಮುಂಬೈ ದಾಳಿ ಪ್ರಕರಣದ ವಿಚಾರಣೆಯನ್ನು ಭಯೋತ್ಪಾದನಾ ನಿಗ್ರಹ ಕೋರ್ಟ್ ನ ನ್ಯಾಯಾಧೀಶರಾದ ಸೋಹೈಲ್ ಅಕ್ರಮ್ ಅವರು ನಡೆಸುತ್ತಿದ್ದು, ಅವರನ್ನು ಈಗ ಪಂಜಾಬ್ ನ್ಯಾಯಾಂಗ ಸೇವೆಗೆ ವರ್ಗಾವಣೆಗೆ ಮಾಡಿರುವುದಾಗಿ ಕೋರ್ಟ್ ಅಧಿಕಾರಿಗಳು ತಿಳಿಸಿರುವುದಾಗಿ ಪಿಟಿಐ ವರದಿ ಮಾಡಿದೆ.
ಇದು ನ್ಯಾಯಾಧೀಶರ ಸಹಜ ವರ್ಗಾವಣೆ ಪ್ರಕ್ರಿಯೆಯಾಗಿದೆ ಎಂದು ಪ್ರಶ್ನೆಯೊಂದಕ್ಕೆ ಕೋರ್ಟ್ ಅಧಿಕಾರಿಗಳು ಸಮಜಾಯಿಷಿ ನೀಡಿದ್ದಾರೆ. ಇನ್ನು 26/11 ದಾಳಿ ಪ್ರಕರಣದ ವಿಚಾರಣೆ ನ್ಯಾಯಾಧೀಶರಾದ ಕೌಸರ್ ಅಬ್ಬಾಸ್ ಜೈದಿ ಅವರು ನಡೆಸಲಿದ್ದಾರೆ. 2009ರಿಂದ 26/11 ದಾಳಿ ವಿಚಾರಣೆಯನ್ನು ನ್ಯಾ.ಅತ್ತಿಖರ್ ರೆಹಮಾನ್, ಶಾಹಿದ್ ರಫೀಖ್, ಮಲಿಕ್ ಮುಹಮ್ಮದ್ ಅಕ್ರಮ್ ಅವಾನ್, ಪರ್ವೆಜ್ ಅಲಿ ಶಾ ನಡೆಸಿದ್ದರು.
2008ರ ಮುಂಬೈ ದಾಳಿ ಮಾಸ್ಟರ್ ಮೈಂಡ್ ಝಾಕೀ ಉರ್ ರೆಹಮಾನ್ ಲಖ್ವಿಗೆ 2014ರಲ್ಲಿ ನ್ಯಾಯಾಧೀಶ ಜೈದಿ ಜಾಮೀನು ಮಂಜೂರು ಮಾಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 50 ಬ*ಲಿ
MUST WATCH
ಹೊಸ ಸೇರ್ಪಡೆ
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Sagara: ಟ್ರಾಫಿಕ್ ಜಾಮ್ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು
Siruguppa: ತೆಕ್ಕಲಕೋಟೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶ
Mangaluru Airport; ಕೆ 9 ಹೀರೋ ಜಾಕ್ ಇನ್ನಿಲ್ಲ: ಭಾವನಾತ್ಮಕ ವಿದಾಯ
Kottigehara: ಅಪಘಾತದಿಂದ ಗಾಯಗೊಂಡ ನಾಗರಹಾವಿಗೆ ಚಿಕಿತ್ಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.