ಬೆಂಗ್ಳೂರಿಗೆ ಇಸುಜು ಎಂಯು-ಎಕ್ಸ್ ಎಸ್‌ಯುವಿ ಪ್ರವೇಶ
Team Udayavani, May 20, 2017, 12:22 PM IST
ಬೆಂಗಳೂರು: ಇಸುಜು ಮೋಟಾರ್ ಇಂಡಿಯಾ ಸಂಸ್ಥೆ ವಿನೂತನವಾಗಿ ಅಭಿವೃದ್ಧಿಪಡಿಸಿರುವ ಶಕ್ತಿಶಾಲಿ ಹಾಗೂ ಆಕರ್ಷಕ ವಿನ್ಯಾಸದ ಎಸ್‌ಯುವಿ “ಎಂಯು- ಎಕ್ಸ್’ ವಾಹನವನ್ನು ಬೆಂಗಳೂರಿನ ಮಾರುಕಟ್ಟೆಗೆ ಶುಕ್ರವಾರ ಬಿಡುಗಡೆಯಾಗಿದೆ.
ವ್ಯಾಘ್ರದ ಪರಿಕಲ್ಪನೆಯಡಿ ರೂಪುಗೊಂಡಿರುವ ಹೊರವಿನ್ಯಾಸ, ಏಳು ಮಂದಿ ಆರಾಮವಾಗಿ ಕೂರಬಹುದಾದ ಒಳಾಂಗಣ ವಿನ್ಯಾಸದ “ಎಂಯು-ಎಕ್ಸ್’ ತಾಂತ್ರಿಕವಾಗಿಯೂ ವೈವಿಧ್ಯ ವಾಗಿದೆ. ವೇಗ, ಕಾರ್ಯಕ್ಷಮತೆ, ಸುರಕ್ಷತೆ ಜತೆಗೆ ಚಾಲನೆಯನ್ನು ಆನಂದಿಸಲು ಪೂರಕ ವ್ಯವಸ್ಥೆ ಯನ್ನು ಇದು ಹೊಂದಿದೆ ಎನ್ನುತ್ತದೆ ಸಂಸ್ಥೆ.
ನಗರದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮ ದಲ್ಲಿ ನೂತನ ಎಸ್‌ಯುವಿ “ಎಂಯು-ಎಕ್ಸ್’ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಅನಾವರಣಗೊಂಡ ಶ್ವೇತ ವರ್ಣದ ಎಸ್‌ಯುವಿ ನೋಡುಗರ ಕಣ್ಮನ ಸೆಳೆಯುವಂತಿತ್ತು.
ಇಸುಜು ಮೋಟಾರ್ ಇಂಡಿಯಾದ ಉಪ ವ್ಯವಸ್ಥಾಪಕ ನಿರ್ದೇಶಕ ಹಿತೋಷಿ ಕೊನೊ, “ಭಾರತದ ಎಸ್‌ಯುವಿ ಪ್ರಿಯರಿಗೆ ಸೂಕ್ತವಾದ ಅತ್ಯಾಧುನಿಕ, ಸುಸಜ್ಜಿತ ಸೌಲಭ್ಯ ಒಳಗೊಂಡ, ಕುಟುಂಬದವರೆಲ್ಲಾ ಆರಾಮವಾಗಿ ಪ್ರಯಾಣಿಸ ಬಹುದಾದ ಎಸ್‌ಯುವಿಯನ್ನು ಪರಿಚಯಿಸ ಲಾಗಿದೆ. ಹಾಲಿ ಎಸ್‌ಯುವಿಗಳಿಗಿಂತ ಭಿನ್ನ ಸೌಲಭ್ಯಗಳನ್ನು ಇದರಲ್ಲಿ ಕಲ್ಪಿಸಲಾಗಿದ್ದು, ಎಸ್‌ಯುವಿ ಪ್ರಿಯರ ಮನಗೆಲ್ಲುವ ವಿಶ್ವಾಸವಿದೆ’ ಎಂದು ಹೇಳಿದರು.
“ಇಸುಜು ಮೋಟಾರ್ನ ಟ್ರಕ್‌ಗಳು ಜಗತ್ತಿ ನಾದ್ಯಂತ ಗುಣಮಟ್ಟ ಹಾಗೂ ಕಾರ್ಯಕ್ಷಮ ತೆಗೆ ಹೆಸರಾಗಿವೆ. ಸಂಸ್ಥೆಯ ಎಲ್ಲ ವಾಹನಗಳ ಮಾದರಿ ಅಭಿವೃದ್ಧಿಪಡಿಸುವಾಗ ಆಕರ್ಷಕ ವಿನ್ಯಾಸ, ಸೌಲಭ್ಯಗಳ ಜತೆಗೆ ಸುರಕ್ಷತೆ ಹಾಗೂ ಕಾರ್ಯಕ್ಷಮತೆಗೆ ಒತ್ತು ನೀಡುತ್ತದೆ. ಅದರಂತೆ ನಾನಾ ಮಾದರಿಯ ವಾಹನಗಳು ತಯಾರಾಗುತ್ತಿದ್ದು, ಅದಕ್ಕೆ ಎಂಯು- ಎಕ್ಸ್ ಹೊಸ ಸೇರ್ಪಡೆ,’ ಎಂದು ಹೇಳಿದರು.
nನೆವರ್ ಸ್ಟಾಪ್!: “ವಿನೂತನ “ಎಂಯು-ಎಕ್ಸ್’ ಎಂತಹ ದುರ್ಗಮ ಹಾದಿಯಲ್ಲೂ ಸುಗಮವಾಗಿ ಸಾಗುವ ವಿನ್ಯಾಸ ಹೊಂದಿದೆ. ಆಂಧ್ರಪ್ರದೇಶದ ಶ್ರೀ ಸಿಟಿಯಲ್ಲಿ ವಾಹನ ಉತ್ಪಾದನಾ ಘಟಕ ಸ್ಥಾಪನೆಯಾಗಿದ್ದು, ಆ ಘಟಕದಲ್ಲೇ ಎಸ್‌ಯುವಿ ತಯಾರಾಗುತ್ತಿದೆ,’ ಎಂದರು .
ಟ್ರೈಡೆಂಟ್ ಆಟೊಮೊಬೈಲ್‌ನ ವ್ಯವಸ್ಥಾಪಕ ನಿರ್ದೇಶಕ ಸಮೀರ್ ಚೌಧರಿ, “ಟ್ರೈಡೆಂಟ್ ಸಂಸ್ಥೆಯು ಇಸುಜು ಬ್ರಾಂಡ್‌ನ ಪ್ರತಿನಿಧಿಯಾಗಿ ರುವುದು ಹೆಮ್ಮೆಯ ಸಂಗತಿ. ಇಸುಜು ಎಂಯು- ಎಸ್ ಎಸ್‌ಯುವಿಯು “ಆಫ್ ರೋಡ್’ನಲ್ಲಿನ (ಡಾಂಬರು/ ಕಾಂಕ್ರಿಟ್ ಇಲ್ಲದ ಕಚ್ಚಾರಸ್ತೆ) ಚಾಲನೆ ಥ್ರಿಲ್ಲಿಂಗ್ ಅನುಭವ ನೀಡುತ್ತದೆ ಎಂದರು.
ಇಸುಜು ಮೋಟಾರ್ ಇಂಡಿಯಾ ಸಂಸ್ಥೆಯ ಹಿರಿಯ ಪ್ರಧಾನ ವ್ಯವಸ್ಥಾಪಕ ಕ್ಯಾಪ್ಟನ್ ಜೆ. ಶಂಕರ್ ಶ್ರೀನಿವಾಸ್, “ಲೀಟರ್‌ಗೆ 13.8 ಕಿ.ಮೀ. ಮೈಲೇಜ್ ನೀಡಲಿದೆ. ಈ ಎಸ್‌ಯುವಿಯು 4 ಮತ್ತು 4 ವೇರಿಯಂಟ್ ಹಾಗೂ 4 ಮತ್ತು 2 ವೇರಿಯಂಟ್ ಮಾದರಿ ಯಲ್ಲಿ ಲಭ್ಯವಿದೆ. ವಾಹನವು ಗಂಟೆಗೆ 100 ಕಿ.ಮೀ. ವೇಗದಲ್ಲಿ ಚಲಿಸುವಾಗ 4 ಮತ್ತು 2 ವೇರಿಯಿಂಟ್‌ನಿಂದ 4 ಮತ್ತು 4 ವೇರಿಯಂಟ್‌ಗೆ ವಾಹನವನ್ನು ನಿಲುಗಡೆ ಮಾಡದೆಯೇ ತಕ್ಷಣ ಬದಲಾಯಿಸಿಕೊಳ್ಳಲು ಅವಕಾಶವಿದೆ.
ಇದ ರಿಂದ ತಕ್ಷಣ ಪಿಕ್‌ಅಪ್ ಪಡೆಯಲು ಅನುಕೂಲ ವಾಗಲಿದೆ,’ ಎಂದು ಹೇಳಿದರು.ಬೆಂಗಳೂರಿನಲ್ಲಿ ಎಸ್‌ಯುವಿ ಎಂಯು- ಎಕ್ಸ್‌ನ 4 ಮತ್ತು 2 ಎಟಿ ವೇರಿಯಂಟ್ ಮಾದ ರಿಯ ಎಕ್ಸ್‌ಶೋರೂಂ ಬೆಲೆ 24,36,269 ರೂ. ಹಾಗೂ 4 ಮತ್ತು 4 ವೇರಿಯಂಟ್ ಮಾದರಿಯ ಎಕ್ಸ್ ಶೋರೂಂ ಬೆಲೆ 26,39,376 ರೂ. ಇದೆ.
ವೈಶಿಷ್ಟವೇನು?: ಎಸ್‌ಯುವಿ 3.0 ಲೀಟರ್ ಇಸುಜು ಡಿಡಿಐ ವಿಜಿಎಸ್ ಟಬೊì ಹೈ-ಪವರ್ ಎಂಜಿನ್, 5 ಸ್ಪೀಡ್ ಸೀಕ್ವೆನ್ಷಿಯಲ್ ಶಿಫ್ಟ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ವ್ಯವಸ್ಥೆ ಹೊಂದಿದೆ. 4 ಮತ್ತು 4 ವೇರಿಯಂಟ್ ಮಾದರಿಯಲ್ಲಿ “ಶಿಫ್ಟ್ ಆನ್ ದಿ ಫ್ಲೈ’ ಶ್ರೇಣಿ ವ್ಯವಸ್ಥೆ ಇದೆ. ಹೈಟೆನ್ಷಿಯಲ್ ಸ್ಟೀಲ್ ಬಾಡಿಯ ಹೊರಮೈ ವಾಹನದ ದೃಢತೆ ಹೆಚ್ಚಿಸಿದೆ. ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಟ್ರ್ಯಾಕ್ಷನ್ ಕಂಟ್ರೋಲ್ ಸಿಸ್ಟಂ,
-ಎಮರ್ಜೆನ್ಸಿ ಬ್ರೇಕ್ ಅಸೆಸ್ಟ್ ಹಾಗೂ ಎಲೆಕ್ಟ್ರಾನಿಕ್ ಬ್ರೇಕ್ ಫೋರ್ಸ್ ಡಿಸ್ಟ್ರಿಬ್ಯೂಷನ್‌ನೊಂದಿಗೆ ಆ್ಯಂಟಿ ಲಾಕ್ ಬ್ರೇಕ್ ಸಿಸ್ಟ್‌ಮ್ ಹೊಂದಿದೆ. ಸಂದಿಗ್ಧ ಪರಿಸ್ಥಿತಿಯಲ್ಲಿ ಸೂಕ್ತ ಸುರಕ್ಷತೆ ಒದಗಿಸಲಿದೆ. ಮೂರನೇ ಸಾಲಿನ ಎರಡು ಆಸನಗಳಲ್ಲಿ ಆರಾಮವಾಗಿ ಕುಳಿತುಕೊಳ್ಳುವ ವ್ಯವಸ್ಥೆ ಇದೆ. ಮೂರನೇ ಸಾಲಿನ ಆಸನಕ್ಕೆ ಹತ್ತಿಳಿಯಲು ಅನುಕೂಲವಾಗುವಂತೆ ಒಂದು ಗುಂಡಿ ಒತ್ತಿದರೆ ಎರಡನೇ ಸಾಲಿನ ಅಷ್ಟೂ ಆಸನಗಳು ಸಂಪೂರ್ಣ ಮುಂದಕ್ಕೆ ಭಾಗುವ ವ್ಯವಸ್ಥೆ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Gautam Adani;ಯುಎಸ್ ದೋಷಾರೋಪಣೆಯ ತನಿಖೆ ಕೋರಿ ಸುಪ್ರೀಂ ನಲ್ಲಿ ಹೊಸ ಮನವಿ
Siddakatte Kodange Kambala: ಈ ಸೀಸನ್ ನ ಮೊದಲ ಕಂಬಳದ ಫಲಿತಾಂಶ ಇಲ್ಲಿದೆ
Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ ಒಂದು ವರ್ಷದ ಮರಿ ಚಿರತೆ ರಕ್ಷಣೆ
Maharashtra polls; ದೇಶ ಒಡೆಯುವ ಮಾತನಾಡುವವರಿಗೆ ತಕ್ಕ ಪಾಠ: ಕಂಗನಾ
IPL 2025 Auction: ಮೊದಲ ಎರಡು ಸುತ್ತಿನಲ್ಲಿ ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ..
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.