ಪ್ರೇಮ ವೈಫಲ್ಯಕ್ಕೆ ನೊಂದು ಸಾವಿಗೆ ಶರಣಾದ ಟೆಕ್ಕಿ
Team Udayavani, May 21, 2017, 11:31 AM IST
ಬೆಂಗಳೂರು: ಪ್ರೇಮ ವೈಫಲ್ಯದಿಂದ ಮನನೊಂದ ಸಾಫ್ಟ್ವೇರ್ ಉದ್ಯೋಗಿ ಸ್ನೇಹಿತನ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೆಬ್ಟಾಳದಲ್ಲಿ ನಡೆದಿದೆ. ಹಳಿಯಾಳ ಮೂಲದ ಸುನೀಲ್ಕುಮಾರ್(28) ಮೃತ. ಹೆಬ್ಟಾಳದ ಆನಂದಗಿರಿಯ ಸ್ನೇಹಿತ ವೀರೇಶ್ ಮನೆಯಲ್ಲಿ ಮೇ 19 ರಂದು ಮಧ್ಯಾಹ್ನ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.
ಸಂಜೆ ವೀರೇಶ್ ಕಚೇರಿಯಿಂದ ಬಂದಾಗ ಘಟನೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಎಂಬಿಎ ಸ್ನಾತಕೋತ್ತರ ಪದವೀಧರ ಸುನೀಲ್ 4 ವರ್ಷಗಳಿಂದ ಸಾಫ್ಟ್ವೇರ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಜೆ.ಪಿ.ನಗರದ ಶಾಕಾಂಬರಿನಗರದಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು.
ಈ ಮಧ್ಯೆ ತಮಿಳುನಾಡು ಮೂಲದ ಯವತಿ, ಸಹೋದ್ಯೋಗಿ ಜತೆ ಪ್ರೇಮಾಂಕುರವಾಗಿದೆ. ಆದರೆ, ಮದುವೆ ವಿಚಾರವಾಗಿ ಇಬ್ಬರ ನಡುವೆ ಜಗಳವಾಗಿದೆ. ಈ ಹಿನ್ನೆಲೆಯಲ್ಲಿ ರಾಜಿ ಮಾಡಿಕೊಳ್ಳಲು ಮೇ 18ರಂದು ಸ್ನೇಹಿತ ವೀರೇಶ್ ಮನೆಗೆ ಬರುವಂತೆ ಸುನೀಲ್ ಸೂಚಿಸಿದ್ದ. ಅದರಂತೆ ಯುವತಿ ಬಂದಿದ್ದಳು.
ಬಳಿಕ ಯುವತಿ “ನಿನ್ನೊಂದಿಗೆ ಹೆಚ್ಚು ಸಮಯ ಕಳೆಯಲು ಸಾಧ್ಯವಿಲ್ಲ. ಕೆಲಸಕ್ಕೆ ಹೋಗಬೇಕೆಂದು’ ಹೇಳಿ ಹೋಗಿದ್ದಾಳೆ. ಇದರಿಂದ ಬೇಸರಗೊಂಡ ಸುನೀಲ್, ರಾತ್ರಿಯೆಲ್ಲ ಕಣ್ಣೀರಿಡುತ್ತಿದ್ದ. ಶುಕ್ರವಾರ ಬೆಳಗ್ಗೆ ಸ್ನೇಹಿತ ವೀರೇಶ್ ಕೆಲಸಕ್ಕೆ ಹೋಗುತ್ತಿದ್ದಂತೆ, ಕೊಠಡಿಗೆ ತೆರಳಿ ಸುನೀಲ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಘಟನೆ ಸಂಬಂಧ ಯುವತಿ ವಿರುದ್ಧ ದೂರು ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…
T20: ತಿಲಕ್ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219
Ranaji Trophy: ಉತ್ತರ ಪ್ರದೇಶ ವಿರುದ್ಧ ಕರ್ನಾಟಕಕ್ಕೆ ಮುನ್ನಡೆ
Alert: ವಾಟ್ಸ್ಆ್ಯಪ್ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್ ತೆರೆದೀರಿ ಜೋಕೆ!
Vitla:ಮಾಣಿ -ಮೈಸೂರು ರಾಜ್ಯ ಹೆದ್ದಾರಿಯಲ್ಲಿ ಲಾರಿ ಮೇಲೆ ಮರ ಬಿದ್ದು ರಸ್ತೆ ಸಂಪೂರ್ಣ ಬ್ಲಾಕ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.