ಒಝಿಮಾಂಡಿಯಾಸ್‌ ಮತ್ತು ಇತರರು


Team Udayavani, May 21, 2017, 4:58 PM IST

gombe.jpg

I met a traveller from an antique land Who said: “Two vast and trunkless legs of stone Stand in the desert. Near them on the sand, Half sunk, a shattered visage lies, whose frown And wrinkled lip and sneer of cold command Tell that its sculptor well those passions read Which yet survive, stamped on these lifeless things, The hand that mocked them and the heart that fed.And on the pedestal these words appear: My name is Ozymandias, King of Kings: Look on my works, ye mighty, and despair!’ Nothing beside remains. Round the decay Of that colossal wreck, boundless and bare, The lone and level sands stretch far away”.
(P,B, Shelley, Ozymandias)

ಇಂಗ್ಲಿಷ್‌  ರೊಮ್ಯಾಂಟಿಕ್‌ ಯುಗದ ಪ್ರಮುಖ ಕವಿ ಪರ್ಸಿ ಬೆಸ್ಸಿ ಶೆಲ್ಲಿಯ (1792-1822) ಸುಪ್ರಸಿದ್ಧ ಕವಿತೆ ಇದು, “ಒಝಿಮಾಂಡಿಯಾಸ್‌’. ಈ ಹೆಸರೇ ಭೀತಿ ಹುಟ್ಟಿಸುವಂಥದು; ಕವಿತೆಯ ವಸ್ತು ಇನ್ನಷ್ಟು ಗಂಭೀರ. “ನನ್ನ ಹೆಸರು ಒಝಿಮಾಂಡಿಯಾಸ್‌, ರಾಜರ ರಾಜ ನಾನು, ನನ್ನ ಕೆಲಸಗಳನ್ನು ನೋಡಿರಿ, ಮಹಾ ಬಲಶಾಲಿಗಳೇ, ನೋಡಿ ಹತಾಶರಾಗಿ !’ ಎನ್ನುತ್ತಾನೆ ಒಝಿಮಾಂಡಿಯಾಸ್‌. ಏನು ಕೆಲಸಗಳು? ಮರುಭೂಮಿ ಮತ್ತು ಕೆಲವು ಭಗ್ನಾವಶೇಷಗಳು. ಆದರೆ ಯಾರೀ ಒಝಿಮಾಂಡಿಯಾಸ್‌? ಚರಿತ್ರೆಯಲ್ಲಿ ಅಂಥವನೊಬ್ಬ ಇದ್ದನೇ? ಒಬ್ಬನಲ್ಲ, ಹಲವರಿದ್ದರು, ಒಝಿಮಾಂಡಿಯಾಸ್‌ ಚರಿತ್ರೆಯ ಎಲ್ಲಾ ಬಲಶಾಲಿ ಮತ್ತು ದುರಹಂಕಾರಿ ರಾಜಾಧಿರಾಜರುಗಳಿಗೂ ಒಂದು ರೂಪಕಅಲೆಕಾlಂಡರ್‌, ಡೇರಿಯಸ್‌, ಚೆಂಗಿಶ್‌ ಖಾನ್‌, ತೈಮೂರ್‌ ಲಂಗ್‌.  ಈ ಒಝಿಮಾಂಡಿಯಾಸ್‌ನ ಕುರಿತು, ಅರ್ಥಾತ್‌ ಆತನ ಭಗ್ನ ಪ್ರತಿಮೆಯ ಕುರಿತು ತನಗೆ ಹೇಳಿದುದು ಒಬ್ಬ ಪ್ರಾಚೀ ದೇಶದ ಪ್ರವಾಸಿ ಎನ್ನುತ್ತಾನೆ ಶೆಲ್ಲಿ; ಅದೊಂದು ಕಥನ ತಂತ್ರ. ಈ ಪ್ರವಾಸಿ ವರ್ಣಿಸುವ ಪ್ರತಿಮೆಯ ಅವಶೇಷಗಳನ್ನು ನೋಡಿ: ದೇಹವಿಲ್ಲದ ಕಲ್ಲಿನ ಮಹಾಪಾದಗಳು ಮರಳಿನಲ್ಲಿ ಅರ್ಧ ಹುಗಿದು ನಿಂತಿವೆ; ಪಕ್ಕದಲ್ಲಿ ಒಡೆದು ಬಿದ್ದ ಮುಖವೂ ಭಾಗಶಃ ಮರಳಲ್ಲಿ ಹೂತಿದೆ. ಆದರೆ ಅದರ ಹುಬ್ಬುಗಂಟು, ಸುಕ್ಕುಗಟ್ಟಿದ ತುಟಿ ಮತ್ತು ಕ್ರೂರ ಅಧಿಕಾರದರ್ಪದಿಂದ ಬರುವ ಅವಹೇಳನ  ಇವನ್ನೆಲ್ಲ ಶಿಲ್ಪಿ ಆ ನಿರ್ಜೀವ ವಸ್ತುಗಳ ಮೇಲೆ ಕೆತ್ತಿದ್ದು ಹಾಗೇ ಇವೆ. ಅಂಥ ವಸ್ತುಗಳನ್ನು ಒಂದು ಕಾಲದಲ್ಲಿ ಗೇಲಿ ಮಾಡಿದವನು ಈ ಒಝಿಮಾಂಡಿಯಾಸ್‌. ಪ್ರತಿಮೆಯ ಪೀಠದಲ್ಲಿ ಬರೆದ ಮಾತುಗಳೇ.

My name is Ozymandias, King of Kings: Look on my works, ye mighty, and despair
ಎಂಬವು. ಒಝಿಮಾಂಡಿಯಾಸ್‌ ತನ್ನಂಥವರಿಗೆ ಸ್ವತಃ ಸಾರಿ ಹೇಳುವಂತೆ ಕೆತ್ತಲಾಗಿರುವಂಥ ಮಾತುಗಳು ಅವು.  ಇದೇನೂ ಶೆಲ್ಲಿಯ ಮಾದರಿ ಕವಿತೆಯಲ್ಲದಿದ್ದರೂ ಅತ್ಯಂತ ಜನಪ್ರಿಯವಾದುದು ಎಂಬುದರಲ್ಲಿ ಸಂಶಯವಿಲ್ಲ; ಸಾನೆಟ್‌ ಶೈಲಿಯಲ್ಲಿ ರಚಿತವಾದ ಈ ಕವಿತೆ ಅತೀ ಹೆಚ್ಚಿನ ಸಂಗ್ರಹಗಳಲ್ಲಿ ಸೇರಿದಂಥದು ಕೂಡ. ರಾಜಾಡಳಿತವನ್ನು ದ್ವೇಷಿಸುತ್ತಿದ್ದ ಈ ಸ್ವಾತಂತ್ರ್ಯಪ್ರಿಯ ಕವಿ ತನ್ನ 29ನೆಯ ವಯಸ್ಸಿನಲ್ಲಿ ಇಟೆಲಿಯ ಸಮುದ್ರದಲ್ಲಿ ನೌಕಾಘಾತದಲ್ಲಿ ತೀರಿಕೊಂಡ ಎನ್ನುವುದು ಇತಿಹಾಸದ ಒಂದು ವ್ಯಂಗ್ಯ. 

ಶೆಲ್ಲಿಯ ಕವಿತೆಯಷ್ಟು ಪ್ರಸಿದ್ಧವಲ್ಲದೆ ಇದ್ದರೂ ಸರಿಸುಮಾರು ಇಂಥದೇ ವಿಷಯವನ್ನು ಒಳಗೊಂಡ ನನ್ನ ಇಷ್ಟದ ಇನ್ನೊಂದು ಕವಿತೆ ಆರ್ಥರ್‌ ಗಿಟರ್‌ಮನ್‌ನ  On the Vanity of Earthly Greatness(ಲೌಕಿಕ ಕೀರ್ತಿಯ ಒಣ ಅಹಂಕಾರದ ಕುರಿತು). 
The tusks that clashed in mighty brawls Of mastadons, are billiard balls. The sword of Charlemagne the Just Is ferric oxide, known as rust. The grizzly bear whose potent hug Was feared by all, is now a rug Great Caesar’s bust is on the shelf,And I don’t feel so well myself.
(Arthur Guiterman, On the Vanity of Earthly
Greatness)

ಅಮೇರಿಕನ್‌ ಕವಿ ಆರ್ಥರ್‌ ಗಿಟರ್‌ಮನ್‌ (1871-1943) ಒಬ್ಬ ಹಾಸ್ಯ ಕವಿಯೆಂದು ಪ್ರಸಿದ್ಧ, ಆದರೆ ಈ ಮೇಲಿನ ಕವಿತೆ ತೋರಿಸುವಂತೆ ಅವನ ಹಾಸ್ಯದಲ್ಲಿ ಗಾಂಭೀರ್ಯವೂ ಇದೆ. ಇದು ಕೂಡ ಶೆಲ್ಲಿಯ ಕವಿತೆಯಂತೆ ಮಾನುಷ ನಶ್ವರತೆಯನ್ನು ಎತ್ತಿ ತೋರಿಸುತ್ತದೆ; ಕೇವಲ ಮಾನುಷ ನಶ್ವರತೆಯನ್ನು ಮಾತ್ರವಲ್ಲ, ಸಕಲ ಜೀವಿಗಳ ನಶ್ವರತೆಯನ್ನು ಕೂಡ. ಪ್ರಾಸಬದ್ಧವಾದ ದ್ವಿಪದಿಗಳ ಒಟ್ಟು ಎಂಟು ಸಾಲುಗಳ ಈ ಕವಿತೆ ಕೆಲವು ಸ್ವಾರಸ್ಯಕರ ಉದಾಹರಣೆಗಳನ್ನು ಕೊಡುತ್ತದೆ. ಹಣಾಹಣಿಗಳಲ್ಲಿ ಸೆಣಸಿದ ಆನೆಗಳ ದಂತಗಳೇನಾಗಿವೆ ಎಂದು ಕೇಳುತ್ತದೆ? ಬಿಲಿಯರ್ಡ್ಸ್‌ ಚೆಂಡುಗಳಾಗಿವೆ ಎಂದು ಉತ್ತರಿಸುತ್ತದೆ ! ಮಹಾ ಚಾರ್ಲೆಮೇನ್‌ನ ಖಡ್ಗ ಫೆರ್ರಿಕ್‌ ಆಕ್ಸೆçಡ್‌ ಆಗಿದೆ, ಸಾಮಾನ್ಯ ಭಾಷೆಯಲ್ಲಿ ತುಕ್ಕು ! (ಫ್ರಾಂಕರ ಅರಸ ಚಾರ್ಲೆಮೇನ್‌ ಅಥವಾ ಚಾರ್ಲ್ಸ್‌ ಮಧ್ಯಕಾಲೀನ ಯುರೋಪಿನ ಅಪ್ರತಿಮ ಮಹಾರಾಜನಾಗಿದ್ದವ, ಹೋಲಿ ರೋಮನ್‌ ಸಾಮ್ರಾಜ್ಯದ ಸಾಮ್ರಾಟನೆಂದೂ ಪ್ರಸಿದ್ಧ.) ಯಾರ ಬಲಿಷ್ಠ ಆಲಿಂಗನಕ್ಕೆ ಜನ ಭಯಪಡುತ್ತಿದ್ದರೋ ಅಂಥ ಮೈತುಂಬ ಸುಕ್ಕುಕೂದಲಿನ ಕರಡಿ ಈಗ ಕಂಬಳಿಯಾಗಿದೆ! ಮಹಾ ಸೀಸರನ ಮೂರ್ತಿ ಶೆಲ್ಫಿನ ಮೇಲೆ ಕೂತಿದೆ! (ಇದು ರೋಮಿನ ಜೂಲಿಯಸ್‌ ಸೀಸರಿಗೆ ಉಲ್ಲೇಖ.) ಇನ್ನು ನಾನೂ ಅಷ್ಟೊಂದು ಸ್ವಸ್ಥನೇನಲ್ಲ ಎಂದು ಕವಿ ಹೇಳುವುದರೊಂದಿಗೆ ಕವಿತೆ ಮುಗಿಯುತ್ತದೆ. ಇದೊಂದು ಬಹು ಅರ್ಥಗರ್ಭಿತವಾದ ಸಾಲು; ಎಂದರೆ ಈ ಮರಣ ಎನ್ನುವುದು ತನ್ನನ್ನೂ ಸಮೀಪಿಸುತ್ತಿದೆ ಎಂದು ಕವಿ ಹೇಳಿಕೊಳ್ಳುವುದು: ಅದಕ್ಕೆ ಪ್ರಾಣಿಗಳು ಮನುಷ್ಯರು ಎಂಬ ಭೇದವಿಲ್ಲ, ಪ್ರಬಲರು ಸಾಮಾನ್ಯರು ಎಂಬ ವ್ಯತ್ಯಾಸವೂ ಇಲ್ಲ. ಗಿಟರ್‌ಮನ್‌ ಉಪಯೋಗಿಸುವ ಪ್ರಾಸ ನಮಗೆ ಮುದ ನೀಡುತ್ತದೆಯೇನೋ ನಿಜ, ಆದರೆ “ಅನಾಯಾಸ’ವಾಗಿ ಎಂಬಂತೆ ಬರುವ ಈ ಪ್ರಾಸಗಳು ಏನೇನು ಅಸಮಂಜತೆಗಳನ್ನು ಹತ್ತಿರ ತರುತ್ತವೆ ನೋಡಿ! “ಬ್ರಾಲ್ಸ್‌ ‘ (ಜಗಳಗಳು) ಜತೆ “ಬಾಲ್ಸ್‌ ‘ (ಚೆಂಡುಗಳು), “ಜಸ್ಟ್‌’ನ (ಮಹಾನ್‌ ನ್ಯಾಯವಂತ ಎಂಬ ಅರ್ಥದಲ್ಲಿ) ಜತೆ “ರಸ್ಟ್‌’ (ತುಕ್ಕು) ಇತ್ಯಾದಿ; ಅದರಲ್ಲೂ ಫೆರ್ರಿಕ್‌ ಆಕ್ಸೆçಡ್‌ ಎಂಬ ಅಲಿಪ್ತ ವೈಜ್ಞಾನಿಕ ಪದ ಬಳಸಿ, ತಕ್ಷಣವೇ ಹಾಗಂದರೆ ಇನ್ನೇನಲ್ಲ, ತುಕ್ಕು ಎಂದು ಸಾಮಾನ್ಯ ಪದ ನೀಡಿ ಲಘುವಾಗಿಸುವುದು ಇದೆಯಲ್ಲ, ಅದು ಕೂಡ ಅರ್ಥವತ್ತಾಗಿದೆ. ಇನ್ನು “ಶೆಲ್ಫ್’ ನ ಜತೆ “ಮೈಸೆಲ್ಫ್’ ಬಂದಿರುವುದಂತೂ ಕವಿಯನ್ನು ಸ್ವಂತ ವಾಸ್ತವತೆಗೆ (ಎಂದರೆ ನಮ್ಮನ್ನು ನಮ್ಮ ವಾಸ್ತವತೆಗೆ) ತಂದಿರಿಸಿ ಬೆಚ್ಚುವಂತೆ ಮಾಡುತ್ತದೆ. 

ಹೀಗೆ ಮರಣದ ಕುರಿತು ಬರೆದವರು ಸಾಕಷ್ಟು ಕವಿಗಳಿದ್ದಾರೆ. ಆದರೆ, ಅದಕ್ಕೆ ಸವಾಲೆಸೆದು ಬರೆದವರು ಕಡಿಮೆ. ಆ ರೀತಿ ಬರೆದವರಲ್ಲಿ ಪ್ರಸಿದ್ಧನೆಂದರೆ ಹದಿನೇಳನೆಯ ಶತಮಾನದ ಇಂಗ್ಲಿಷ್‌ ಕವಿ ಜಾನ್‌ ಡನ್‌ (1572-1631). ಕವಿ ಮತ್ತು ಆಂಗ್ಲಿಕನ್‌ ಚರ್ಚಿನ ಪಾದ್ರಿ ಕೂಡ ಆಗಿದ್ದ ಡನ್‌ ಇಂಗ್ಲಿಷ್‌ನ “ಮೆಟಾಫಿಸಿಕಲ್‌’ ಕವಿಗಳಲ್ಲಿ ಅಗ್ರಗಣ್ಯನೆಂದು ಲೆಕ್ಕ. (“ಮೆಟಾಫಿಸಿಕಲ್‌’ ಎಂದರೆ ಅಸಾಮಾನ್ಯವಾದ ಉಪಮೆ, ರೂಪಕಗಳನ್ನು, ವಿದ್ವತ್ತನ್ನು ಬಳಸುವ ಒಂದು ರೀತಿ ಎಂದು ಈ ಸಂದರ್ಭದಲ್ಲಿ ಅರ್ಥ; ಸಾಮ್ಯುವೆಲ್‌ ಜಾನ್ಸನ್‌ ಉಪಯೋಗಿಸಿದ ಪದ.) ಡನ್‌ನ ಈ ಕೆಳಗಿನ ಸಾನೆಟ್‌ನ ನೋಡಿ: 

Death, be not proud, though some have called thee Mighty and dreadful, for thou art not so; For those whom thou think’st thou dost overthrow Die not, poor Death, nor yet canst thou kill me. From rest and sleep, which but thy pictures be, Much pleasure; then from thee much more must  ow, And soonest our best men with thee do go, Rest of their bones, and soul’s delivery. Thou art slave to fate, chance, kings, and desperate men, And dost with poison, war, and sickness dwell, And poppy or charms can make us sleep as well And better than thy stroke; why swell’st thou then? One short sleep past, we wake eternally And death shall be no more; Death, thou shalt die.
(John Donne, Death be not Proud)

ಕವಿ ಇಲ್ಲಿ ಮರಣವನ್ನು ಬೈಯುತ್ತಾನೆ: ನೀನು ಬೆರೆಯುವ ಬಳಗ ಸರಿಯಿಲ್ಲ ಎನ್ನುತ್ತಾನೆ; ವಿಶ್ರಾಂತಿ ಮತ್ತು ನಿದ್ರೆ ನಿನ್ನದೇ ರೂಪುಗಳು, ಅವೇನೂ ನಮ್ಮನ್ನು ಕೊಲ್ಲುವುದಿಲ್ಲ; ಇನ್ನು ಶಾಶ್ವತವಾದ ಸಾವು ಎಂದರೆ ಪುಟ್ಟದೊಂದು ನಿದ್ರೆ, ನಂತರ ನಾವು ಚೇತರಿಸುವುದು ಚಿರಂತನವಾದ ಎಚ್ಚರಕ್ಕೆ! ಆದ್ದರಿಂದ  Death, thou shalt die.. ಹೀಗೆಂದು ಡನ್‌.  

ಹಾಗಿದ್ದರೆ ಆತ್ಮಹತ್ಯೆ ಯಾಕೆ ಮಾಡಿಕೊಳ್ಳಬಾರದು ಎಂಬ ಪ್ರಶ್ನೆಯೇಳುತ್ತದೆ. ಇದಕ್ಕೆ ಶೇಕ್ಸ್‌ಪಿಯರ್‌ನ ಹ್ಯಾಮ್ಲೆಟ್‌ ನಾಟಕದಲ್ಲಿದೆ ಉತ್ತರ. ಅದರಲ್ಲಿನ ಟು ಬಿ ಓರ್‌ ನಾಟ್‌ ಟು ಬಿ ಎಂಬ ಸಾಲುಗಳನ್ನು ಗಮನಿಸಿ:

To die, to sleep No more- and by a sleep to say we end The heartache and the thousand natural shocks That  esh is heir to-’tis a consummation Devoutly to be wished! To die, to sleep. To sleep, perchance to dream—ay, there’s the rub, For in that sleep of death what dreams may come
When we have shuf ed off this mortal coil, Must give us pause.
(Shakespeare, Hamlet, Act iii, Scene i)

ಹ್ಯಾಮ್ಲೆಟ್‌ನ ಪ್ರಸಿದ್ಧ ಸ್ವಗತದ ಭಾಗ ಇದು. ಆಂಗ್ಲಿಕನ್‌ ಪಾದ್ರಿ ಡನ್‌ “ವೇಕ್‌ ಇಟರ್ನಲಿ’ (ಶಾಶ್ವತ ಎಚ್ಚರ) ಎಂಬ ಕಲ್ಪನೆಯನ್ನು ನಂಬಿರಬಹುದು; ಆದರೆ ಮಧ್ಯಕಾಲೀನ ರಾಜಕುಮಾರ ಹ್ಯಾಮ್ಲೆಟ್‌ಗೆ ಅಂಥ ನಂಬಿಕೆಯಿಲ್ಲ. ಅವನೊಬ್ಬ ಅಜ್ಞೆàಯವಾದಿ, ಅರ್ಥಾತ್‌ ಅಗ್ನಾಸ್ಟಿಕ್‌. ಮರಣಾನಂತರ ಏನು ಎಂಬುದರ ಬಗ್ಗೆ ಅವನಿಗೆ ಸ್ಪಷ್ಟವಾದ ಕಲ್ಪನೆಯಿಲ್ಲ. ಆದ್ದರಿಂದಲೇ “ಟು ಬಿ ಓರ್‌ ನಾಟ್‌ ಟು ಬಿ’ (ಇರಲೆ, ಇಲ್ಲದಿರಲೆ) ಎನ್ನುವುದೊಂದು ಸಮಸ್ಯೆಯಾಗುತ್ತದೆ. ಹೇಗಿದ್ದರೂ ಡನ್‌ ಬಳಸುವ ನಿದ್ರೆಯ ರೂಪಕ ಕೂಡ ಒಂದು ಕವಿಸಮಯವಲ್ಲದೆ ಇನ್ನೇನಲ್ಲ ಎನ್ನುವುದು ನಮಗೆ ಗೊತ್ತಿರುವ ವಿಷಯ. ಅದರೆ ಈ ಕವಿಸಮಯ ಎಷ್ಟು ಕಾಲದಿಂದ ಅದೆಷ್ಟು ಸಂಸ್ಕƒತಿಗಳಲ್ಲಿ ಹರಿದು ಬಂದಿದೆ ಎನ್ನುವುದು ಆಶ್ಚರ್ಯಕರ. ಶೇಕ್ಸ್‌  ಪಿಯರನ ವಿಶೇಷತೆಯೆಂದರೆ, ಮರಣವೊಂದು ನಿದ್ರೆಯಾದರೆ, ಆ ನಿದ್ರೆಯಲ್ಲಿ ನಮಗೆ ಬೀಳುವ ಸ್ವಪ್ನಗಳು ಹೇಗಿರುತ್ತವೆ ಎಂಬ ಪ್ರಶ್ನೆಯನ್ನು ಅವನು ಹ್ಯಾಮ್ಲೆಟ್‌ ಮೂಲಕ ಎತ್ತುವುದು; ಇದರಲ್ಲೊಂ
ದು ಹೊಸತನವಿದೆ. 

– ಕೆ. ವಿ. ತಿರುಮಲೇಶ್‌

ಟಾಪ್ ನ್ಯೂಸ್

Theft Case ಜುವೆಲರಿಯಿಂದ ಕಳವು: ಆರೋಪಿಗಳಿಗೆ ಜೈಲು

Theft Case ಜುವೆಲರಿಯಿಂದ ಕಳವು: ಆರೋಪಿಗಳಿಗೆ ಜೈಲು

Fraud Case ಹಣ ದ್ವಿಗುಣ ಮೆಸೇಜ್‌: 7.76 ಲಕ್ಷ ರೂ.ವಂಚನೆ

Fraud Case ಹಣ ದ್ವಿಗುಣ ಮೆಸೇಜ್‌: 7.76 ಲಕ್ಷ ರೂ.ವಂಚನೆ

Ashwin Vaishnav

Railway; 2 ವರ್ಷದಲ್ಲಿ 50 ಅಮೃತ್‌ ಭಾರತ ರೈಲು ಉತ್ಪಾದನೆ: ಅಶ್ವಿ‌ನಿ ವೈಷ್ಣವ್‌

Fraud Case: ವೈದ್ಯಕೀಯ ಸೀಟ್‌ ಕೊಡಿಸುವುದಾಗಿ ನಂಬಿಸಿ ವಂಚನೆ

Fraud Case: ವೈದ್ಯಕೀಯ ಸೀಟ್‌ ಕೊಡಿಸುವುದಾಗಿ ನಂಬಿಸಿ ವಂಚನೆ

Mangaluru: ಶ್ರೀ ಸುಧೀಂದ್ರ ಸ್ಮರಣ ಗುರು ವಂದನ ಕಾರ್ಯಕ್ರಮ, ಭಾವಚಿತ್ರ ಪಲ್ಲಕಿ ಉತ್ಸವ

Mangaluru: ಶ್ರೀ ಸುಧೀಂದ್ರ ಸ್ಮರಣ ಗುರು ವಂದನ ಕಾರ್ಯಕ್ರಮ, ಭಾವಚಿತ್ರ ಪಲ್ಲಕಿ ಉತ್ಸವ

Madhugiri

Irrigation Development: ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರದಿಂದ ಅನುದಾನ: ವಿ.ಸೋಮಣ್ಣ

HDK-DKS

Power Prayers: ಡಿಸಿಎಂ ಟೆಂಪಲ್‌ ರನ್‌ ವಿಚಾರ; ಎಚ್‌ಡಿಕೆ ವ್ಯಂಗ್ಯ, ಡಿಕೆಶಿ ಪ್ರತ್ಯುತ್ತರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

ಕೊಡುವುದರಿಂದ ಕೊರತೆಯಾಗದು!

ಕೊಡುವುದರಿಂದ ಕೊರತೆಯಾಗದು!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

256

ಶಾಲ್ಮಲಾ ನಮ್ಮ ಶಾಲ್ಮಲಾ!

Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ

Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Theft Case ಜುವೆಲರಿಯಿಂದ ಕಳವು: ಆರೋಪಿಗಳಿಗೆ ಜೈಲು

Theft Case ಜುವೆಲರಿಯಿಂದ ಕಳವು: ಆರೋಪಿಗಳಿಗೆ ಜೈಲು

Fraud Case ಹಣ ದ್ವಿಗುಣ ಮೆಸೇಜ್‌: 7.76 ಲಕ್ಷ ರೂ.ವಂಚನೆ

Fraud Case ಹಣ ದ್ವಿಗುಣ ಮೆಸೇಜ್‌: 7.76 ಲಕ್ಷ ರೂ.ವಂಚನೆ

Ashwin Vaishnav

Railway; 2 ವರ್ಷದಲ್ಲಿ 50 ಅಮೃತ್‌ ಭಾರತ ರೈಲು ಉತ್ಪಾದನೆ: ಅಶ್ವಿ‌ನಿ ವೈಷ್ಣವ್‌

Fraud Case: ವೈದ್ಯಕೀಯ ಸೀಟ್‌ ಕೊಡಿಸುವುದಾಗಿ ನಂಬಿಸಿ ವಂಚನೆ

Fraud Case: ವೈದ್ಯಕೀಯ ಸೀಟ್‌ ಕೊಡಿಸುವುದಾಗಿ ನಂಬಿಸಿ ವಂಚನೆ

1-wqewqeqwe

Cardiac arrest: ಗುಜರಾತ್‌ ಶಾಲೆಯಲ್ಲಿ 3ನೇ ತರಗತಿ ವಿದ್ಯಾರ್ಥಿನಿ ಸಾ*ವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.