ಹೊಸ ಬ್ಯಾಕ್ಟೀರಿಯಾಗೆ ಕಲಾಂ ಹೆಸರಿಟ್ಟ ನಾಸಾ!
Team Udayavani, May 22, 2017, 11:42 AM IST
ಲಾಸ್ ಏಂಜಲೀಸ್: ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ಐಎಸ್ಎಸ್) ದಲ್ಲಿ ಪತ್ತೆಯಾದ ಹೊಸ ಬ್ಯಾಕ್ಟೀರಿಯಾಗೆ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ, ಮಹೋನ್ನತ ವಿಜ್ಞಾನಿ ಡಾ| ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಹೆಸರಿಡುವ ಮೂಲಕ ತನ್ನ ನೆಚ್ಚಿನ ವಿಜ್ಞಾನಿಗೆ ಗೌರವ ಸಲ್ಲಿಸಿದೆ.
ಐಎಸ್ಎಸ್ನಲ್ಲಿರುವ ನಾಸಾದ ಪ್ರಮುಖ ಪ್ರಯೋಗಾಲಯ, ಜೆಟ್ ಪ್ರೊಪಲ್ಶನ್ ಲ್ಯಾಬೊರೇಟರಿ (ಜೆಪಿಎಲ್) ಸಂಶೋಧಕರು ಐಎಸ್ಎಸ್ ಫಿಲ್ಟರ್ನಲ್ಲಿ ಹೊಸ ಬ್ಯಾಕ್ಟೀರಿಯಾ ಒಂದನ್ನು ಪತ್ತೆ ಮಾಡಿದ್ದು, ಅದಕ್ಕೆ “ಸೋಲಿಬಾ ಸಿಲಸ್ ಕಲಾಮೀ’ ಎಂದು ನಾಮಕರಣ ಮಾಡುವ ಮೂಲಕ ದೇಶದ ಮಾಜಿ ರಾಷ್ಟ್ರಪತಿ, ಶ್ರೇಷ್ಠ ಬಾಹ್ಯಾಕಾಶ ವಿಜ್ಞಾನಿ ದಿ| ಎ.ಪಿ.ಜೆ. ಅಬ್ದುಲ್ ಕಲಾಂ ಅವರಿಗೆ ಗೌರವ ಸಲ್ಲಿಸಿದ್ದಾರೆ. “ಸೋಲಿಬಾಸಿಲಸ್ ಸ್ವತಂತ್ರವಾಗಿ ಬೆಳೆಯಬಲ್ಲ ಬ್ಯಾಕ್ಟೀರಿಯಾ ಆಗಿದ್ದು, ಅದಕ್ಕೆ ನಮ್ಮೆಲ್ಲರ ಪ್ರೀತಿಪಾತ್ರರಾಗಿ ರುವ ಡಾ| ಅಬ್ದುಲ್ ಕಲಾಂ ಅವರ ಹೆಸರಿಡಲಾಗಿದೆ’ ಎಂದು ಜೆಪಿಎಲ್ನ ಬಯೋ ಟೆಕ್ನಾಲಜಿ ಆ್ಯಂಡ್ ಪ್ಲಾನೆಟರಿ ಪ್ರೊಟೆಕ್ಷನ್ ಗ್ರೂಪ್ನ ಹಿರಿಯ ಸಂಶೋಧನಾ ವಿಜ್ಞಾನಿ ಡಾ. ಕಸ್ತೂರಿ ವೆಂಕಟೇಶ್ವರನ್ ಅವರು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Patna: ಆಸ್ಪತ್ರೆಯಲ್ಲಿ ಮೃತಪಟ್ಟ ರೋಗಿಯ ಕಣ್ಣೇ ಮಾಯಾ… ಇಲಿ ತಿಂದಿದೆ ಎಂದ ವೈದ್ಯರು
Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು
Kerala govt: ಶಬರಿಮಲೆ ವರ್ಚುವಲ್ ಕ್ಯೂ ಬುಕ್ಕಿಂಗ್ ಮಿತಿ ಹೆಚ್ಚಳ
Uttar Pradesh: ಝಾನ್ಸಿ ಅಗ್ನಿ ಅವಘಡ: ಗುರುತೇ ಸಿಗದಂತೆ ಕರಕಲಾದ ಹಸುಳೆಗಳು
G20 Leaders Summit: ಪ್ರಧಾನಿ ಮೋದಿ ನೈಜೀರಿಯಾ, ಬ್ರೆಜಿಲ್, ಗಯಾನಾ ಪ್ರವಾಸ ಶುರು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.