ಭಾರತದ ಮಿತ್ರರಿಗೆ ಸ್ಮಿತ್ ಧನ್ಯವಾದ
Team Udayavani, May 22, 2017, 12:20 PM IST
ಹೈದರಾಬಾದ್ : ಆಸ್ಟ್ರೇ ಲಿಯದ ಬಹುತೇಕ ಕ್ರಿಕೆಟಿಗರಿಗೆ ಭಾರತವೆಂದರೆ ಎರಡನೇ ತವರುಮನೆ ಇದ್ದಂತೆ. ಇದಕ್ಕೆ ಐಪಿಎಲ್ ಸೇರಿದಂತೆ ಅನೇಕ ಇತರ ಕಾರಣಗಳೂ ಒಳ ಗೊಂಡಿವೆ. ಸ್ಟೀವ್ ವೋ, ಹೇಡನ್, ಪಾಂಟಿಂಗ್, ಬ್ರೆಟ್ ಲೀ, ಗಿಲ್‌ಕ್ರಿಸ್ಟ್ ಇವರಲ್ಲಿ ಪ್ರಮುಖರು. ಈ ಸಾಲಿಗೆ ಈಗ ಸ್ಟೀವನ್ ಸ್ಮಿತ್ ಕೂಡ ಸೇರಿದ್ದಾರೆ.
4 ತಿಂಗಳ ಹಿಂದೆ ಟೆಸ್ಟ್ ಸರಣಿಗೆಂದು ಭಾರತಕ್ಕೆ ಆಗಮಿಸಿದ ಸ್ಟೀವನ್ ಸ್ಮಿತ್ ಐಪಿಎಲ್ ಫೈನಲ್ ತನಕವೂ ಇಲ್ಲಿ ಉಳಿಯಬೇಕಾಯಿತು. ಈ ಸಂದರ್ಭ ಇನ್‌ಸ್ಟಾಗ್ರಾಮ್ ಮೂಲಕ ಸಂದೇಶ ನೀಡಿರುವ ಅವರು, ಸ್ಮರಣೀಯ ಅನುಭವ ದೊಂದಿಗೆ ತವರಿಗೆ ಮರಳುತ್ತಿದ್ದೇನೆ ಎಂದಿದ್ದಾರೆ.
“ಈ 4 ತಿಂಗಳ ಭಾರತದ ವಾಸ್ತವ್ಯ ಎನ್ನುವುದು ನನ್ನ ಪಾಲಿಗೆ ಅತ್ಯಂತ ರೋಚಕವಾಗಿತ್ತು. ಸಾಕಷ್ಟು ಏರಿಳಿತ ಗಳನ್ನು ಕಂಡರೂ ಇದನ್ನೆಲ್ಲ ನಿಭಾಯಿ ಸುವ ರೀತಿಯನ್ನು ಕಲಿತುಕೊಂಡೆ. ಟೆಸ್ಟ್ ಸರಣಿ ಅತ್ಯಂತ ಕಠಿನವಾಗಿತ್ತು, ಆದರೆ ಇದನ್ನು ಆನಂದಿಸಿದೆ. ಕೆಲವು ಅದ್ಭುತ ವ್ಯಕ್ತಿಗಳನ್ನು ಭೇಟಿಯಾದೆ, ಹೊಸ ಗೆಳೆಯರು ದೊರೆತರು. ಪುಣೆ ಜತೆಗಿನ ಐಪಿಎಲ್ ಅನುಭವವೂ ರೋಮಾಂಚಕಾರಿ ಯಾಗಿತ್ತು’ ಎಂದು ಸ್ಮಿತ್ ಸಂದೇಶವೊಂದನ್ನು ರವಾನಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
UI Movie: 9 ವರ್ಷ ಬಳಿಕ ಉಪ್ಪಿ ಡೈರೆಕ್ಟ್ ಮಾಡಿದ ಯು-ಐ ಸಿನಿಮಾದ ಹೈಲೈಟ್ಸ್ ಏನು?
CT Ravi Arrested: ಬಿಜೆಪಿ ಕರೆ ನೀಡಿದ್ದ ಬಂದ್ ಗೆ ಚಿಕ್ಕಮಗಳೂರಿನಲ್ಲಿ ಮಿಶ್ರ ಪ್ರತಿಕ್ರಿಯೆ
Belagavi: ಹೆಬ್ಬಾಳಕರ್ ಕ್ಷೇತ್ರದಲ್ಲೇ ಸಿ.ಟಿ.ರವಿಗೆ ವೈದ್ಯಕೀಯ ತಪಾಸಣೆ
Electricity theft: ಎಸ್ಪಿ, ಸಂಸದನ ವಿರುದ್ಧ ದೂರು ದಾಖಲು
Afghanistan: 2 ಅಪಘಾತ: 50 ಸಾವು, 76 ಮಂದಿಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.