ಟ್ರಾಫಿಕ್ ನಿಯಂತ್ರಣಕ್ಕೆ ಪ್ರತ್ಯೇಕ “ಬಸ್ ಲೇನ್’
Team Udayavani, May 22, 2017, 12:41 PM IST
ಬೆಂಗಳೂರು: ರಾಜಧಾನಿಯ ಟ್ರಾಫಿಕ್ ಜಾಮ್‌ಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಹಲವು ಸುಧಾರಣಾ ಕ್ರಮ ಕೈಗೊಂಡಿರುವ ನಗರ ಸಂಚಾರ ಪೊಲೀಸರು, ಇದೀಗ ಬಸ್‌ಗಳ ಓಡಾಟಕ್ಕೆ ಪ್ರತ್ಯೇಕ “ಬಸ್‌ಲೇನ್’ ಜಾರಿಗೆ ಚಿಂತನೆ ನಡೆಸಿದ್ದಾರೆ.
ನಗರದಲ್ಲಿ ಟ್ರಾಫಿಕ್ ಜಾಮ್‌ನಿಂದ ಸಾರ್ವಜನಿಕರು ತಾಸುಗಟ್ಟಲೇ ಕಾಯುವುದು ಒಂದೆಡೆಯಾದರೆ, ಟ್ರಾಫಿಕ್ ಮಧ್ಯೆಯೇ ಅಡ್ಡಾದಿಡ್ಡಿ ಸಂಚರಿಸುವ ಬಸ್‌ಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ನಗರದ ಹಲವೆಡೆ ಜಾರಿಯಲ್ಲಿರುವ ಆಟೋಲೇನ್ ಮಾದರಿಯಂತೆ ಬಸ್‌ಗಳ ಸಂಚಾರಕ್ಕೇ ಪ್ರತ್ಯೇಕ ಲೇನ್ ಆರಂಭಿಸಲು ನಿರ್ಧರಿಸಲಾಗಿದೆ. ಇದರಿಂದ ಬಸ್‌ಗಳ ಅಡ್ಡಾದಿಡ್ಡಿ ಸಂಚಾರ, ಚಾಲಕರ ಓವರ್‌ಟೇಕ್ ಪ್ರವೃತ್ತಿಗೆ ಕಡಿವಾಣ ಬೀಳುವ ಜತೆಗೆ ಟ್ರಾಫಿಕ್ ಸಮಸ್ಯೆಗೂ ಪರಿಹಾರ ಸಿಗಲಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಉದ್ದೇಶಿತ “ಬಸ್‌ಲೇನ್’ ರೂಪಿಸುವ ಸಂಬಂಧ ಪಶ್ಚಿಮ ಹಾಗೂ ಪೂರ್ವ ವಿಭಾಗ ಸೇರಿದಂತೆ ನಗರದಲ್ಲಿ ಬಸ್‌ಗಳ ಸಂಚಾರ ಹೆಚ್ಚಿರುವ ಮಾರ್ಗಗಳನ್ನು ಗುರುತಿಸುವ ಕಾರ್ಯ ನಡೆಯುತ್ತಿದೆ. ಈ ಪಟ್ಟಿಯಲ್ಲಿ ಕೆ.ಆರ್.ಮಾರುಕಟ್ಟೆ, ಮೆಜೆಸ್ಟಿಕ್ ಸುತ್ತಮುತ್ತಲ ಭಾಗ, ಮೈಸೂರು ರಸ್ತೆ ಸೇರಿದಂತೆ ಇತರೆ ಮಾರ್ಗಗಳು ಇವೆ. ಬಸ್ ಲೇನ್ ಬಿಎಂಟಿಸಿ, ಕೆಎಸ್‌ಆರ್‌ಟಿಸಿ, ಹಾಗೂ ಎಲ್ಲ ಖಾಸಗಿ ಬಸ್‌ಗಳಿಗೂ ಅನ್ವಯವಾಗಲಿದೆ ಎಂದು ಅವರು ಹೇಳಿದ್ದಾರೆ.
ಈ ಸಂಬಂಧ “ಉದಯವಾಣಿ’ ಜತೆ ಮಾತನಾಡಿದ ನಗರ ಸಂಚಾರ ಪೊಲೀಸ್ ವಿಭಾಗದ ಹೆಚ್ಚುವರಿ ಆಯುಕ್ತ ಹಿತೇಂದ್ರ, “ಟ್ರಾಫಿಕ್ ನಿಯಂತ್ರಣದ ದೃಷ್ಟಿಯಿಂದ ಬಸ್‌ಲೇನ್ ಆರಂಭಿಸುವ ಬಗ್ಗೆ ಚಿಂತನೆ ನಡೆದಿದೆ. ಮೊದಲು ನಗರದ ಬಸ್‌ಗಳ ಓಡಾಟ ಹೆಚ್ಚಿರುವ ಭಾಗಗಳಲ್ಲಿ ಬಸ್‌ಲೇನ್ ಆರಂಭಿಸಿ, ಅದರ ಯಶಸ್ಸು ಆಧರಿಸಿ ಮುಂದಿನ ತೀರ್ಮಾನ ತೆಗೆದುಕೊಳ್ಳಲಾಗುವುದು,’ ಎಂದು ತಿಳಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.