ಸಾಹಿತಿಗಳು ಸರ್ವಜ್ಞರೆಂಬುದು ಸುಳ್ಳು
Team Udayavani, May 22, 2017, 12:41 PM IST
ಬೆಂಗಳೂರು: ಸಾಹಿತಿಗಳು ಸರ್ವಜ್ಞರಲ್ಲ ಅವರು ತಾವು ಸ್ವಯಂ ಧೀಮಂತ ಎಂದು ತಿಳಿದುಕೊಳ್ಳುವುದು ಬೋಗಸ್ ಕಲ್ಪನೆ. ಪ್ರತಿಯೊಂದಕ್ಕೂ ಸಲಹೆ ಕೊಡುವವರು ನಾವೇ ಎನ್ನುವ ಕಲ್ಪನೆಯೂ ತಪ್ಪು ಎಂದು ಕಥೆಗಾರ ಎಸ್.ದಿವಾಕರ ಅಭಿಪ್ರಾಯಪಟ್ಟರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕನ್ನಡ ಭವನದ ನಯನ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ “ಮನೆಯಂಗಳದಲ್ಲಿ ಮಾತುಕತೆ’ ಕಾರ್ಯಕ್ರಮದ ಅತಿಥಿಯಾಗಿ ಮಾತನಾಡಿದ ಅವರು, “ಹಿಂದೆ ಲೇಖಕರು ಸರ್ಕಾರಕ್ಕೆ ಹತ್ತಿರವಾಗಿರಲಿಲ್ಲ. ಈಗ ಪರಿಸ್ಥಿತಿ ಭಿನ್ನವಾಗಿದೆ.
ಸಾಹಿತಿ, ಲೇಖಕರು ಸರ್ಕಾರಗಳ ಜತೆಗೆ ಸಂಬಂಧವಿಟ್ಟುಕೊಂಡರೆ ಬಹಳಷ್ಟು ಸಮಸ್ಯೆಗಳು ಉದ್ಭವಿಸುತ್ತವೆ. ಸಾಹಿತಿಯು ಸ್ವತಂತ್ರವಾಗಿ ತನ್ನ ಅಭಿಪ್ರಾಯವನ್ನು, ಕಲ್ಪನೆಯನ್ನು ವ್ಯಕ್ತಪಡಿಸುವ ಹಕ್ಕುಳ್ಳವನು. ಆತನಿಗೂ ಸಾಮಾಜಿಕ ಜವಾಬ್ದಾರಿ ಇರುತ್ತದೆ. ನಿಜ, ಹಾಗೆಂದ ಮಾತ್ರಕ್ಕೆ ಪ್ರತಿಯೊಂದಕ್ಕೂ ಸಲಹೆ ಕೊಡಲು ಹೋಗುವುದು ಸರಿಯಲ್ಲ. ಸಾಹಿತ್ಯ ಕ್ಷೇತ್ರದಲ್ಲಿ ಎಡ-ಬಲ ಪಂಥಗಳ ನಡುವೆ ಮಧ್ಯಮ ಮಾರ್ಗದ ಗುಂಪು ಉದ್ಭವಿಸುವ ಅಗತ್ಯತೆ ಇದೆ,’ಎಂದರು.
ಹಿರಿಯ ಸಂಶೋಧಕ ಡಾ. ಎಂ.ಎಂ. ಕಲಬುರ್ಗಿ ಹತ್ಯೆಗೆ ಸಹಿಷ್ಣುತೆ-ಅಸಹಿಷ್ಣುತೆ ಕಾರಣವೋ ಗೊತ್ತಿಲ್ಲ. ಅಭಿವ್ಯಕ್ತಿ ಸ್ವಾತಂತ್ರÂ ಇರಲೇಬೇಕು. ಅದು ಕ್ಷೀಣಿಸಿದಾಗ ಹತ್ಯೆ ಯಂತಹ ಘಟನೆಗಳು ನಡೆಯುತ್ತವೆ. ಕೆಲ ವೊಂದು ನಿಜ ಸಂಗತಿಗಳನ್ನು ಒಪ್ಪಿಕೊಳ್ಳುವಂತಹ ಮನಸ್ಥಿತಿಗಳ ಸಂಖ್ಯೆ ಕಡಿಮೆಯಾಗುತ್ತಿದೆ.
ಜತೆಗೆ ಸೂಕ್ಷ್ಮ ಪ್ರಭಾವ ಬೀರುವ ಚಳವಳಿಗಳು ಕ್ಷೀಣಿಸುತ್ತಿರುವುದು ವಿಷಾದನೀಯ. ಪ್ರಸ್ತುತ ದಿನಗಳಲ್ಲಿ ಹೋರಾಟಗಳು ಹೊಸ ರೂಪವನ್ನು ಪಡೆದುಕೊಳ್ಳಬೇಕಿದೆ. ಸಾಮಾಜಿಕ, ರಾಜಕೀಯ, ಆರ್ಥಿಕ ಪ್ರಗತಿಗೆ ಅದು ಅನಿವಾರ್ಯ ಎಂದು ಹೇಳಿದರು. ಕನ್ನಡ ಸಂಸ್ಕೃತಿ ಇಲಾಖೆ ನಿರ್ದೇಶಕಿ ಎಂ.ಎಸ್. ಅರ್ಚನಾ ಮತ್ತಿತರರು ಕಾರ್ಯಕ್ರಮದಲ್ಲಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?
Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!
Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ
Financial Burden: ಶಾಲಾ ಶಿಕ್ಷಕರಿಗೆ ಮೊಟ್ಟೆ ತಲೆನೋವು!
Naxal Activity: ಮಲೆನಾಡಿನವರೊಂದಿಗೆ ಆತ್ಮೀಯವಾಗಿ ಬೆರೆಯುತ್ತಿದ್ದ ವಿಕ್ರಂ ಗೌಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.