ಪದೇ ಪದೇ ಸುಟ್ಟು ಹೋಗುವ ಟ್ರಾನ್ಸ್‌ಫಾರ್ಮರ್‌

Team Udayavani, May 22, 2017, 1:03 PM IST

mys6.jpg

ಎಚ್‌.ಡಿ.ಕೋಟೆ: ರೈತರ ಜಮೀನುಗಳಲ್ಲಿ ಕೊರೆದಿರುವ ಬೋರ್‌ಗಳಿಗೆ ವಿದ್ಯುತ್‌ ಸಂಪರ್ಕ ನೀಡುವ ಸಲುವಾಗಿ ಸೆಸ್ಕ್ ವತಿಯಿಂದ ಅಳವಡಿಸಿರುವ ಟ್ರಾನ್ಸ್‌ಫಾರ್ಮರ್‌ ಹೆಚ್ಚಿನ ಲೋಡ್‌ನಿಂದಾಗಿ ಪದೇ ಪದೇ ಸುಟ್ಟುಹೊಗುತ್ತಿದ್ದು, ಈ ಭಾಗಕ್ಕೆ ಹೆಚ್ಚುವರಿ ಅಡಿಸನಲ್‌ ಟಿ.ಸಿ ಗಳನ್ನು ಅಳವಡಿಸಬೇಕೆಂದು  ಪಟ್ಟಣದ ರೈತರು ಆಗ್ರಹಿಸಿದ್ದಾರೆ.

ತಾಲೂಕಿನ ಸೋನಹಳ್ಳಿ ಗ್ರಾಮದ ಹೊರ ವಲಯದಲ್ಲಿ ಈ ಪರಿಸ್ಥಿತಿ ಕಂಡು ಬಂದಿದ್ದು, ಅನೇಕ ವರ್ಷಗಳ ಹಿಂದೆ ಟ್ರಾನ್ಸ್‌ಫಾರ್ಮರ್‌ವೊಂದನ್ನು ಸೆಸ್ಕ್ ನವರು ಅಳವಡಿಸಿದ್ದು, ಇದರಿಂದ ಪ್ರಾರಂಭದಲ್ಲಿ ಆರೇಳು ಜನ ರೈತರು ಮಾತ್ರ ತಮ್ಮ ಬೋರ್‌ಗೆ ಸಂಪರ್ಕ ಪಡೆದಿದ್ದರು.

ಆದರೆ ಕಳೆದ 3 ವರ್ಷಗಳಿಂದ ತಲೆದೂರಿದ್ದ ತೀವ್ರ ಬರದಿಂದ ಮಳೆ ಇಲ್ಲದೇ ತತ್ತರಿಸಿದ್ದ ಇಲ್ಲಿನ ಬಹುತೇಕ ಮಂದಿ ರೈತರು ತಮ್ಮ ಜಮೀನುಗಳಲ್ಲಿ ಕೊಳವೆ ಬಾವಿ ಕೊರೆಸಿ ದ್ವಿ-ದಳ ಧಾನ್ಯ ಬೆಳೆಗಳು ಸೇರಿದಂತೆ ಕಬ್ಬು ಇನ್ನಿತರ ಬೆಳೆಗಳನ್ನು ಬೆಳೆಯಲು ಪ್ರಾರಂಭಿಸಿದರು. ಇಂದು ಈ ಭಾಗದಲ್ಲಿ ಅನೇಕ ರೈತರು ಬೋರ್‌ ಕೊರೆಸಿದ್ದು, ಇಲ್ಲಿ ಇರುವ ಒಂದೇ ಟ್ರಾನ್ಸ್‌ಫಾರ್ಮರ್‌ನಿಂದ ಸುಮಾರು 30ಕ್ಕೂ ಹೆಚ್ಚು ರೈತರು ಸಂಪರ್ಕ ಪಡೆದಿದ್ದಾರೆ.

ಈ ಭಾಗದಲ್ಲೂ ಪ್ರತಿನಿತ್ಯ ಅನಿಯಮಿತ ಲೋಡ್‌ ಸೆಡ್ಡಿಂಗ್‌ ಇರುವುದರಿಂದ ಕರೆಂಟ್‌ ಬಂದ ತಕ್ಷಣ ಎಲ್ಲ ರೈತರ ಬೋರ್‌ನ ಮೋಟರ್‌ ಚಾಲನೆ ಗೊಳ್ಳುವುದರಿಂದ ಟ್ರಾನ್ಸ್‌ಫಾರ್ಮರ್‌ಗೆ ಲೋಡ್‌ ಹೆಚ್ಚಾಗಿ ವಾರದಲ್ಲಿ ಎರಡು, ಮೂರು ದಿನಕ್ಕೊಮ್ಮೆ ಸುಟ್ಟು ಹೋಗುತ್ತಿದ್ದು, ಸೆಸ್ಕ್ ಸಿಬ್ಬಂದಿ ಬಂದು ಬದಲಿ ಟ್ರಾನ್ಸ್‌ಫಾರ್ಮರ್‌ ಅಳವಡಿಸುವವರೆಗೂ ರೈತರು ಜಮೀನಿನಲ್ಲಿ ಬೆಳೆದಿರುವ ಬೆಳೆಗಳಿಗೆ ನೀರು ಹಾಯಿಸಲು ಆಗದೆ ಪರಿತಪಿಸಬೇಕಾದ ದುಸ್ಥಿತಿ ನಿರ್ಮಾಣವಾಗುತ್ತಿದೆ.

ಈ ಬಗ್ಗೆ ರೈತರು ಹಲವಾರು ಬಾರಿ ಪಟ್ಟಣದ ಸೆಸ್ಕ್ ಅಧಿಕಾರಿಗಳಿಗೆ ಈ ಭಾಗಕ್ಕೆ ಎರಡು ಹೆಚ್ಚುವರಿ ಅಡಿಸನಲ್‌ ಟ್ರಾನ್ಸ್‌ಫಾರ್ಮರ್‌ ಅಳವಡಿಸಬೇಕೆಂದು ಮನವಿ ಮಾಡಿಕೊಂಡರು ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ ಇನ್ನಾದರೂ ಸಂಬಂಧಪಟ್ಟ ಸೆಸ್ಕ್ನ ಮೇಲಾಧಿಕಾರಿಗಳು, ಇಲ್ಲಿನ ಜನಪ್ರತಿನಿಧಿಗಳು ಇತ್ತ ಗಮನಹರಿಸಿ ಈ ಭಾಗದಲ್ಲಿ ಹೆಚ್ಚುವರಿ ಟ್ರಾನ್ಸ್‌ಫಾರ್ಮರ್‌ಗಳನ್ನು ಅಳವಡಿಸಲು ಕ್ರಮವಹಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ.

ನಾನು ಸೇರಿದಂತೆ 30ಕ್ಕೂ ಹೆಚ್ಚು ರೈತರು ಇಲ್ಲಿ ಇರುವ ಒಂದೇ ಟ್ರಾನ್ಸ್‌ಫಾರ್ಮರ್‌ನಿಂದ ನಮ್ಮ ಜಮೀನುಗಳ ಬೋರ್‌ಗಳಿಗೆ ಸಂಪರ್ಕ ಪಡೆದಿದ್ದು, ಟಿ.ಸಿ ಲೋಡ್‌ ತಡೆಯದೇ ಪದೇ ಪದೇ ಸುಟ್ಟು ಹೋಗುತ್ತಿದೆ. ಹಾಗಾಗಿ ಈ ಭಾಗಕ್ಕೆ ಎರಡು ಅಡಿಶನಲ್‌ ಟಿ.ಸಿ ಅಳವಡಿಸುವಂತೆ ಸೆಸ್ಕ್ ಅಧಿಕಾರಿಗಳನ್ನು ನಾಮ ಹಲವು ಬಾರಿ ಕೇಳಿಕೊಂಡರು ಇನ್ನು ಅಳವಡಿಸಿಲ್ಲ ಶೀಘ್ರ ಅಡಿಶಿನಲ್‌ ಟಿ.ಸಿ ಅಳವಡಿಸಿ ಅನುಕೂಲ ಮಾಡಿಕೊಡಿ.
-ಮಂಜೇಗೌಡ, ಸೋನಹಳ್ಳಿ

ಟಾಪ್ ನ್ಯೂಸ್

Fake Currency: 500 ರೂ. ನಕಲಿ ನೋಟುಗಳಲ್ಲಿ ಗಾಂಧಿ ಬದಲು ಅನುಪಮ್‌ ಖೇರ್‌ ಫೋಟೊ!

Fake Currency: 500 ರೂ. ನಕಲಿ ನೋಟುಗಳಲ್ಲಿ ಗಾಂಧಿ ಬದಲು ಅನುಪಮ್‌ ಖೇರ್‌ ಫೋಟೊ!

Sirsi: ಕಸ್ತೂರಿ ರಂಗನ್ ವರದಿಯ ಸಮೀಕ್ಷೆಯೇ ಸಮರ್ಪಕವಾಗಿಲ್ಲ: ಶಾಸಕ ಭೀಮಣ್ಣ‌ ನಾಯ್ಕ

Sirsi: ಕಸ್ತೂರಿ ರಂಗನ್ ವರದಿಯ ಸಮೀಕ್ಷೆಯೇ ಸಮರ್ಪಕವಾಗಿಲ್ಲ: ಶಾಸಕ ಭೀಮಣ್ಣ‌ ನಾಯ್ಕ

Gadag: ನೀರಿನಲ್ಲಿ ಕೊಚ್ಚಿಹೋದ ಯುವಕರು; ಓರ್ವನ ಶವ ಪತ್ತೆ, ಮತ್ತೋರ್ವನಿಗೆ ಶೋಧ

Gadag: ನೀರಿನಲ್ಲಿ ಕೊಚ್ಚಿಹೋದ ಯುವಕರು; ಓರ್ವನ ಶವ ಪತ್ತೆ, ಮತ್ತೋರ್ವನಿಗೆ ಶೋಧ

Mudhol: ಸಭೆಗೆ ತಡವಾಗಿ ಬಂದ ಉಸ್ತುವಾರಿ ಸಚಿವರು… ಸಭೆ ಬಹಿಷ್ಕರಿಸಿದ ಬಿಜೆಪಿ ಸದಸ್ಯರು

Mudhol: ಸಭೆಗೆ ತಡವಾಗಿ ಬಂದ ಉಸ್ತುವಾರಿ ಸಚಿವರು… ಸಭೆ ಬಹಿಷ್ಕರಿಸಿದ ಬಿಜೆಪಿ ಸದಸ್ಯರು

Udupi: ಸರಕಾರಿ ವಸತಿ ಗ್ರಹಕ್ಕೆ ನುಗ್ಗಿದ ಕಳ್ಳರು… ಲಕ್ಷಾಂತರ ಮೌಲ್ಯದ ನಗನಗದು ದೋಚಿ ಪರಾರಿ

Udupi: ಸರಕಾರಿ ವಸತಿ ಗ್ರಹಕ್ಕೆ ನುಗ್ಗಿದ ಕಳ್ಳರು… ಲಕ್ಷಾಂತರ ಮೌಲ್ಯದ ನಗನಗದು ದೋಚಿ ಪರಾರಿ

Bellary; ಜನಾರ್ದನ ರೆಡ್ಡಿ ಬಳ್ಳಾರಿ ವನವಾಸ ಅಂತ್ಯ

Bellary; ಜನಾರ್ದನ ರೆಡ್ಡಿ ಬಳ್ಳಾರಿ ವನವಾಸ ಅಂತ್ಯ

Dadasaheb Phalke: ಸ್ಟಾರ್ ಆಗೋ ಮುನ್ನ ರಿಯಲ್ ಲೈಫ್ ನಲ್ಲಿ ನಕ್ಸಲೈಟ್ ಆಗಿದ್ದ ಈ ನಟ!

Dadasaheb Phalke: ಸ್ಟಾರ್ ಆಗೋ ಮುನ್ನ ರಿಯಲ್ ಲೈಫ್ ನಲ್ಲಿ ನಕ್ಸಲೈಟ್ ಆಗಿದ್ದ ಈ ನಟ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Gadag: ನೀರಿನಲ್ಲಿ ಕೊಚ್ಚಿಹೋದ ಯುವಕರು; ಓರ್ವನ ಶವ ಪತ್ತೆ, ಮತ್ತೋರ್ವನಿಗೆ ಶೋಧ

Gadag: ನೀರಿನಲ್ಲಿ ಕೊಚ್ಚಿಹೋದ ಯುವಕರು; ಓರ್ವನ ಶವ ಪತ್ತೆ, ಮತ್ತೋರ್ವನಿಗೆ ಶೋಧ

Mahisha

Mysuru: ಮಹಿಷಾ ಪ್ರತಿಮೆ ಪುಷ್ಪಾರ್ಚನೆಗೆ ಪೊಲೀಸರ ತಡೆ: ಆಕ್ರೋಶ

CM-Ashokapuram

Mysuru: ನಾನು ಹೆದರುವ, ಜಗ್ಗುವ, ಬಗ್ಗುವ ಪ್ರಶ್ನೆಯೇ ಇಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ

1-bahga

K.S.Bhagawan ವಿವಾದ;ಮಾನ ಮರ್ಯಾದೆ ಇದ್ದರೆ ದೇವಸ್ಥಾನಗಳಿಗೆ ಹೋಗುವುದನ್ನು ನಿಲ್ಲಿಸಬೇಕು…

Yadhu

Udupi: ಚಾಮುಂಡಿ ಬೆಟ್ಟದ ಮೇಲೆ ಮಹಿಷ ದಸರಾ ಸರಿಯಲ್ಲ: ಸಂಸದ ಯದುವೀರ್‌

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

2(1)

Kadaba police Station: ದಾಖಲೆ ಕಾಪಿಡುವುದೇ ಇಲ್ಲಿ ಸಾಹಸದ ಕೆಲಸ

Fake Currency: 500 ರೂ. ನಕಲಿ ನೋಟುಗಳಲ್ಲಿ ಗಾಂಧಿ ಬದಲು ಅನುಪಮ್‌ ಖೇರ್‌ ಫೋಟೊ!

Fake Currency: 500 ರೂ. ನಕಲಿ ನೋಟುಗಳಲ್ಲಿ ಗಾಂಧಿ ಬದಲು ಅನುಪಮ್‌ ಖೇರ್‌ ಫೋಟೊ!

Sirsi: ಕಸ್ತೂರಿ ರಂಗನ್ ವರದಿಯ ಸಮೀಕ್ಷೆಯೇ ಸಮರ್ಪಕವಾಗಿಲ್ಲ: ಶಾಸಕ ಭೀಮಣ್ಣ‌ ನಾಯ್ಕ

Sirsi: ಕಸ್ತೂರಿ ರಂಗನ್ ವರದಿಯ ಸಮೀಕ್ಷೆಯೇ ಸಮರ್ಪಕವಾಗಿಲ್ಲ: ಶಾಸಕ ಭೀಮಣ್ಣ‌ ನಾಯ್ಕ

1

Puttur: ಪಾಣಾಜೆ ಸಮುದಾಯ ಆರೋಗ್ಯ ಕೇಂದ್ರ ಶೀಘ್ರ ಸಿದ್ಧ

Gadag: ನೀರಿನಲ್ಲಿ ಕೊಚ್ಚಿಹೋದ ಯುವಕರು; ಓರ್ವನ ಶವ ಪತ್ತೆ, ಮತ್ತೋರ್ವನಿಗೆ ಶೋಧ

Gadag: ನೀರಿನಲ್ಲಿ ಕೊಚ್ಚಿಹೋದ ಯುವಕರು; ಓರ್ವನ ಶವ ಪತ್ತೆ, ಮತ್ತೋರ್ವನಿಗೆ ಶೋಧ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.