ಹೊರಗಡೆ ಯಕ್ಷ ಭಾಷಣ ಮಾಡುವೆ, ಇಲ್ಲಲ್ಲ

Team Udayavani, May 22, 2017, 3:23 PM IST

210517uk5.jpg

ಉಡುಪಿ: ಯಕ್ಷಗಾನದ ಕುರಿತು ದಿಲ್ಲಿ, ನೇಪಾಲ, ವಿಶ್ವಭಾರತಿ ವಿಶ್ವವಿದ್ಯಾನಿಲಯಗಳಲ್ಲಿ ಮಾತನಾಡುವೆ. ಆದರೆ ಇಲ್ಲಿ ನಾನು ಮಾತ ನಾಡುವುದಿಲ್ಲ. ಯಕ್ಷಗಾನವನ್ನು ನನಗಿಂತ ಹೆಚ್ಚು ತಿಳಿದ ಅನೇಕ ಮಂದಿ ಇಲ್ಲಿದ್ದಾರೆ…

ಇದು ದಿಲ್ಲಿ ಜವಾಹರಲಾಲ್‌ ನೆಹರೂ ವಿ.ವಿ.ಯ ಕನ್ನಡ ಪೀಠದ ಪ್ರಾಧ್ಯಾಪಕ, ಜನಪದ ವಿದ್ವಾಂಸ ಡಾ| ಪುರುಷೋತ್ತಮ ಬಿಳಿಮಲೆಯವರ ಅಭಿಮತ.

ಯಕ್ಷಗಾನ ಕಲಾರಂಗ ಎಂಜಿಎಂ
ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ರವಿವಾರ ಏರ್ಪಡಿ ಸಿದ ಸಮಾರಂಭದಲ್ಲಿ ತಲ್ಲೂರು ಫ್ಯಾಮಿಲಿ ಟ್ರಸ್ಟ್‌ ನೀಡಿದ 40,000ರೂ. ಮೊತ್ತದ ತಲ್ಲೂರು ಕನಕಾ- ಅಣ್ಣಯ್ಯ ಶೆಟ್ಟಿ ಸ್ಮರಣಾರ್ಥ ಯಕ್ಷಗಾನ ಕಲಾರಂಗ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದ ಅವರು, ನಾನು ಯಕ್ಷಗಾನ ಕಲಾವಿದನಾಗಲು ಯಕ್ಷಗಾನವನ್ನು ಕಲಿತದ್ದಲ್ಲ. ಯಕ್ಷಗಾನದ ಕುರಿತು ಮಾತನಾಡಲು ತಿಳಿದಿರಬೇಕು ಎಂಬ ಕಾರಣಕ್ಕೆ, ಕನ್ನಡೇತರರಿಗೆ ಕಲೆ ಕುರಿತು ತಿಳಿವಳಿಕೆ ಮೂಡಿಸಲು ಕಲಿತೆ ಎಂದರು. 

1915ರಲ್ಲಿ ಸುಪ್ತಂಕರ್‌ ಅವರು ಪುಣೆಯಲ್ಲಿ ವ್ಯಾಸರ ಮಹಾಭಾರತದ ವಿವಿಧ ಪ್ರದೇಶಗಳ 60 ಪಠ್ಯಗಳನ್ನು ಸಂಗ್ರಹಿಸಿ ಹೊರತಂದಾಗ “ಇದು 61ನೆಯದು’ ಎಂದು ಹೇಳಿದರು. ಬೇರೆಬೇರೆ ಪ್ರದೇಶಗಳಲ್ಲಿ ಮಹಾಭಾರತ, ರಾಮಾಯಣದ ಕಥೆಗಳು ವಿಭಿನ್ನವಾಗಿರುವುದಕ್ಕೆ ಆಯಾ ಸ್ಥಳೀಯ ಕಲೆಗಳ ಪಾತ್ರ ಮುಖ್ಯವಾದುದು. ಹೀಗೆ ನೂರಾರು ಪಠ್ಯಗಳನ್ನು ಕಟ್ಟಿರುವುದು ಸಮುದಾಯ. ಇಂತಹ ಕಥೆಯ ಪುನಃಸೃಷ್ಟಿಯಲ್ಲಿ ಯಕ್ಷಗಾನದ ಪಾತ್ರ ಮಹತ್ವದ್ದು ಎಂದು ಹೇಳಿದರು.

ಕನ್ನಡ ಪೀಠಗಳು ಕಾಣೆ !
ಅಭಿನಂದನಾ ಭಾಷಣ ಮಾಡಿದ ವಿದ್ವಾಂಸ ಡಾ| ತಾಳ್ತಜೆ ವಸಂತ ಕುಮಾರ್‌ ಅವರು, ಬನಾರಸ್‌ ವಿ.ವಿ., ಕಾಶೀ ವಿದ್ಯಾಪೀಠ, ಗುಜರಾತ್‌ನ ಗಾಂಧಿ ವಿದ್ಯಾಪೀಠಗಳಲ್ಲಿ ಇದ್ದ ಕನ್ನಡ ಪೀಠ ಈಗ ಇಲ್ಲವಾಗಿದೆ. ಕೆಲವೇ ಕೆಲವು ಪ್ರತಿಷ್ಠಿತ ವಿ.ವಿ.ಗಳಲ್ಲಿ ಜವಾಹರಲಾಲ್‌ ನೆಹರೂ ವಿ.ವಿ. ಕೂಡ ಒಂದು. ಪುರುಷೋತ್ತಮ ಬಿಳಿಮಲೆಯವರಿಂದ ಇದು ಬೆಳಗಲಿ ಎಂದು ಹಾರೈಸಿದರು.

ಸಂಸ್ಕೃತಿ ಚಿಂತಕ ಡಾ| ಏರ್ಯ ಲಕ್ಷ್ಮೀನಾರಾಯಣ ಆಳ್ವ ಅಧ್ಯಕ್ಷತೆ ವಹಿಸಿದ್ದರು. ತಲ್ಲೂರು ಫ್ಯಾಮಿಲಿ ಟ್ರಸ್ಟ್‌ನ ತಲ್ಲೂರು ಶಿವರಾಮ ಶೆಟ್ಟಿ, ಗಿರಿಜಾ ಶೆಟ್ಟಿ, ಕಲಾರಂಗದ ಉಪಾಧ್ಯಕ್ಷರಾದ ಎಸ್‌.ವಿ. ಭಟ್‌,ಮಟ್ಟಿ ಗಂಗಾಧರ ರಾವ್‌ ಉಪಸ್ಥಿತ ರಿದ್ದರು. ಕಲಾರಂಗದ ಅಧ್ಯಕ್ಷ ಗಣೇಶ ರಾವ್‌ ಸ್ವಾಗತಿಸಿ, ಕಾರ್ಯದರ್ಶಿ ಮುರಲಿ ಕಡೆಕಾರ್‌ ನಿರ್ವಹಿಸಿದರು.

ಹಿಂದಿ ಯಕ್ಷಗಾನ ಪುಸ್ತಕ 
ಈ ಪ್ರಶಸ್ತಿ ಮೊತ್ತವನ್ನು ಜವಾಧಿಹರಲಾಲ್‌ ವಿ.ವಿ. ಕನ್ನಡ ಪೀಠದಿಂದ ಹಿಂದಿಯಲ್ಲಿ ಯಕ್ಷಗಾನದ ಕುರಿತು ತಯಾರಿಸುವ ಗ್ರಂಥಕ್ಕೆ ವಿನಿಯೋಗಿಸುವೆ. ಇಂಗ್ಲಿಷ್‌ನಲ್ಲಿ ಹಿಂದೆ ಡಾ| ಶಿವರಾಮ ಕಾರಂತ, ಮಾರ್ತಾ ಆಸ್ಟನ್‌ ಪುಸ್ತಕ ರಚಿಸಿದ್ದರು. ಹಿಂದಿಯಲ್ಲಿಲ್ಲ. 

ಅಪರಿಚಿತ- ಅಲ್ಪಸಂಖ್ಯಾಕ- ಬಹುಸಂಖ್ಯಾಕ…
ಹುಟ್ಟೂರು ಪಂಜದಲ್ಲಿ ನಾನು ಅಪರಿಚಿತ.  8,000 ವಿದ್ಯಾರ್ಥಿಗಳ ವಿ.ವಿ.ಯಲ್ಲಿ 1,800 ಭಾಷಾ ಅಧ್ಯಯನ ವಿದ್ಯಾರ್ಥಿಗಳಲ್ಲಿ ನಾನೊಬ್ಬನೇ ಕನ್ನಡ ಮಾತನಾಡುವವ. ಹೀಗಾಗಿ ದಿಲ್ಲಿಯಿಂದ ವಿಮಾನವೇರುವಾಗ ನಾನು ಅಲ್ಪಸಂಖ್ಯಾಕ, ಮಂಗಳೂರಿನಲ್ಲಿ ಇಳಿಯುವಾಗ ಬಹುಸಂಖ್ಯಾಕ. ಸಾಹಿತ್ಯ, ಕಲೆ ಓದಿದ ನನಗೆ ತೇಲುವ ದ್ವೀಪದಲ್ಲಿರುವ ಅನುಭವವಾಗುತ್ತದೆ. ಬೇರೆ ಕ್ಷೇತ್ರದವರಿಗೆ ಹೀಗಾಗುವುದಿಲ್ಲ.       
-ಡಾ| ಪುರುಷೋತ್ತಮ ಬಿಳಿಮಲೆ

ಹೈಸ್ಕೂಲ್‌ ಮೇಸ್ಟ್ರಾಗಬಹುದಿತ್ತು!
ಮಂಗಳೂರು ವಿ.ವಿ.ಯಿಂದ ಹಂಪಿ ವಿ.ವಿ.ಗೆ ಹೋದಾಗ ಅಲ್ಲಿ ನೆರೆ ಬಂತು. ಇಂತಹ ಸಂದರ್ಭಗಳಲ್ಲಿ ಪುರುಷೋತ್ತಮ ಬಿಳಿಮಲೆಯವರು ಬಹಳ ಕಷ್ಟ ಪಟ್ಟರು. ಆದರೆ ಅನಂತರ ಮಾನವ ಸಹಜ ಸಮಸ್ಯೆ ಇದಿರಾಯಿತು. ಆಗೊಂದು ಬಾರಿ ನನಗೆ ಬರೆದ ಪತ್ರದಲ್ಲಿ “ಹೈಸ್ಕೂಲ್‌ನ ಮಾಸ್ತರಿಕೆ ಆದರೂ ಆದೀತು’ ಎಂದು ಬರೆದರು. ಈ ಮಾತು ಆಗಿನ ಕಹಿ ಅನುಭವವನ್ನು ಸಾರುತ್ತದೆ.

– ತಾಳ್ತಜೆ ವಸಂತಕುಮಾರ್‌, ಕನ್ನಡ ವಿದ್ವಾಂಸರು

ಟಾಪ್ ನ್ಯೂಸ್

ಲಾರೆನ್ಸ್ ಬಿಷ್ಣೋಯ್ ಹಿಟ್ ಲಿಸ್ಟ್‌ನಲ್ಲಿ ಶ್ರದ್ಧಾ ವಾಲ್ಕರ್ ಹತ್ಯೆ ಆರೋಪಿ: ಮೂಲಗಳು

Mumbai: ಲಾರೆನ್ಸ್ ಬಿಷ್ಣೋಯ್ ಹಿಟ್ ಲಿಸ್ಟ್‌ನಲ್ಲಿ ಶ್ರದ್ಧಾ ವಾಕರ್ ಹತ್ಯೆ ಆರೋಪಿ: ವರದಿ

Kiwi player will be away from Test cricket after the England series

Test: ಇಂಗ್ಲೆಂಡ್‌ ಸರಣಿಯ ಬಳಿಕ ಟೆಸ್ಟ್‌ ಕ್ರಿಕೆಟ್‌ ನಿಂದ ದೂರವಾಗಲಿದ್ದಾರೆ ಕಿವೀಸ್‌ ಆಟಗಾರ

Shimoga; Congress – Statement against Muslims: Sumoto case against KS Eshwarappa

Shimoga; ಕಾಂಗ್ರೆಸ್-ಮುಸ್ಲಿಮರ ವಿರುದ್ದ ಹೇಳಿಕೆ: ಈಶ್ವರಪ್ಪ ವಿರುದ್ದ ಸುಮೋಟೋ ಪ್ರಕರಣ

Karkala: ತಿಂಗಳ ಹಿಂದೆ ಮೃತಪಟ್ಟಿದ್ದ ಪತಿ, ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ

Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ

Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿಯೂ ವಿದ್ಯುತ್ ಆಘಾತದಿಂದ ಮೃ*ತ್ಯು

Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು

Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ

Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ

Ranji Trophy: ಇನ್ನಿಂಗ್ಸ್‌ ನ ಎಲ್ಲಾ 10 ವಿಕೆಟ್‌ ಕಿತ್ತು ಅನ್ಶುಲ್‌ ಕಾಂಬೋಜ್‌ ದಾಖಲೆ

Ranji Trophy: ಇನ್ನಿಂಗ್ಸ್‌ ನ ಎಲ್ಲಾ 10 ವಿಕೆಟ್‌ ಕಿತ್ತು ಅನ್ಶುಲ್‌ ಕಾಂಬೋಜ್‌ ದಾಖಲೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8

Manipal: ನಿತ್ಯ ಅಪಘಾತ ತಾಣವಾದ ಈಶ್ವರ ನಗರ-ಪರ್ಕಳ ರಸ್ತೆ

Karkala: ತಿಂಗಳ ಹಿಂದೆ ಮೃತಪಟ್ಟಿದ್ದ ಪತಿ, ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ

Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ

Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿಯೂ ವಿದ್ಯುತ್ ಆಘಾತದಿಂದ ಮೃ*ತ್ಯು

Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು

Udupi: ಮೀನುಗಾರರಿಗೆ ಎನ್‌ಎಫ್ಡಿಪಿ ಪೋರ್ಟಲ್‌ನಲ್ಲಿ ಶುಲ್ಕರಹಿತ ನೋಂದಣಿ

Udupi: ಮೀನುಗಾರರಿಗೆ ಎನ್‌ಎಫ್ಡಿಪಿ ಪೋರ್ಟಲ್‌ನಲ್ಲಿ ಶುಲ್ಕರಹಿತ ನೋಂದಣಿ

ಏಕನಿವೇಶನ ನಕ್ಷೆ ಅನುಮೋದನೆ ಅಧಿಕಾರ ಗ್ರಾಮ ಪಂಚಾಯತ್‌ಗೆ ನೀಡಲು ಸಿಎಂಗೆ ಸಂಸದ ಕೋಟ ಪತ್ರ

ಏಕನಿವೇಶನ ನಕ್ಷೆ ಅನುಮೋದನೆ ಅಧಿಕಾರ ಗ್ರಾಮ ಪಂಚಾಯತ್‌ಗೆ ನೀಡಲು ಸಿಎಂಗೆ ಸಂಸದ ಕೋಟ ಪತ್ರ

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

ಲಾರೆನ್ಸ್ ಬಿಷ್ಣೋಯ್ ಹಿಟ್ ಲಿಸ್ಟ್‌ನಲ್ಲಿ ಶ್ರದ್ಧಾ ವಾಲ್ಕರ್ ಹತ್ಯೆ ಆರೋಪಿ: ಮೂಲಗಳು

Mumbai: ಲಾರೆನ್ಸ್ ಬಿಷ್ಣೋಯ್ ಹಿಟ್ ಲಿಸ್ಟ್‌ನಲ್ಲಿ ಶ್ರದ್ಧಾ ವಾಕರ್ ಹತ್ಯೆ ಆರೋಪಿ: ವರದಿ

Kiwi player will be away from Test cricket after the England series

Test: ಇಂಗ್ಲೆಂಡ್‌ ಸರಣಿಯ ಬಳಿಕ ಟೆಸ್ಟ್‌ ಕ್ರಿಕೆಟ್‌ ನಿಂದ ದೂರವಾಗಲಿದ್ದಾರೆ ಕಿವೀಸ್‌ ಆಟಗಾರ

priyanka upendra in life is beautiful movie

Priyanka Upendra: ಬ್ಯೂಟಿಫುಲ್‌ ಲೈಫ್‌ ನಲ್ಲಿ ಪ್ರಿಯಾಂಕಾ

Shimoga; Congress – Statement against Muslims: Sumoto case against KS Eshwarappa

Shimoga; ಕಾಂಗ್ರೆಸ್-ಮುಸ್ಲಿಮರ ವಿರುದ್ದ ಹೇಳಿಕೆ: ಈಶ್ವರಪ್ಪ ವಿರುದ್ದ ಸುಮೋಟೋ ಪ್ರಕರಣ

11-bantwala

Bantwala: ಶಾಲಾ ವಾಹನ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಸ್ಕೂಟರ್ ಸವಾರ ಮೃತ್ಯು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.