ಐಟಿ ಬಿಟಿಯ ಹುಡುಗರೂ ಸೀಡ್ ಬಾಲ್ ಕಟ್ಟಿದರು …
Team Udayavani, May 22, 2017, 3:48 PM IST
ಉಡುಪಿ: ನವೀನ್ ಕಾಮತ್, ಅಶ್ವಿನ್, ರವಿ ತೇಜ, ಉಲ್ಲಾಸ್, ಸಂದೀಪ್ ಆಚಾರ್ಯ…… ಹೀಗೆ ಹತ್ತಾರು ಉತ್ಸಾಹಿ ಯುವಶಕ್ತಿಗಳು ವೃತ್ತಿಯಲ್ಲಿ ಐಟಿ ಎಂಜಿನಿಯರ್ಸ್. ಬೆಂಗಳೂರಿನ ಪ್ರತಿಷ್ಠಿತ ಕಂಪೆನಿಗಳಲ್ಲಿ ಉದ್ಯೋಗಿಗಳು. ಜತೆಗೆ ಉತ್ತಿಷ್ಠ ಭಾರತ ಸಂಘಟನೆಯ ಸದಸ್ಯರು. ಶನಿವಾರ ಮತ್ತು ರವಿವಾರದ ರಜಾ ದಿನಗಳಲ್ಲಿ ರಾಷ್ಟ್ರ, ಸಮಾಜ ಕಟ್ಟುವ ಕಾಯಕಕ್ಕೆ ಕೈಜೋಡಿಸುವ ಆಸಕ್ತಿ ಇದೆ.
ಈ ಹಿನ್ನೆಲೆಯಲ್ಲೇ ರವಿವಾರ ಶ್ರೀಕೃಷ್ಣ ಮಠದಲ್ಲಿ ಪರ್ಯಾಯ ಪೇಜಾವರ ಶ್ರೀಗಳ ಮುತುವರ್ಜಿಯಿಂದ ಸಂಘಟನೆ ಹಮ್ಮಿಕೊಂಡ ಲಕ್ಷ ಬೀಜದುಂಡೆ ತಯಾರಿಸುವ ಕಾರ್ಯಕ್ರಮದಲ್ಲಿ 60ಕ್ಕೂ ಅಧಿಕ ಯುವ ಪೀಳಿಗೆ ಬೆಳಗ್ಗಿನಿಂದಲೇ ಕೆಂಪು ಮಣ್ಣಿಗೆ ಗೋಮೂತ್ರ, ಗೋಮಯಗಳ ಮಿಶ್ರಣ ಮಾಡಿ ಅವುಗಳನ್ನು ಉಂಡೆ ಮಾಡಿ ಅವುಗಳ ನಡುವೆ ಹೊಂಗೆ, ಪನ್ನೇರಳೆ, ಅಳಲೆ, ಅಶ್ವತ್ಥ, ಅಂಟುವಾಳ ಮೊದಲಾದ ಬೀಜಗಳನ್ನಿಟ್ಟು ಸೀಡ್ ಬಾಲ್ ತಯಾರಿಯಲ್ಲಿ ಪಾಲ್ಗೊಂಡರು. ಸ್ಥಳೀಯ ಅನೇಕ ಭಕ್ತರೂ ಇದರಲ್ಲಿ ಸೇರಿಕೊಂಡರು.
ಪ್ರಕೃತಿಯಲ್ಲಿ ಸಸ್ಯ ಸಮೃದ್ಧಿಗೆ ಈ ಸುಲಭ ಉಪಾಯಧಿದಿಂದ ರಾಜ್ಯದಲ್ಲಿ ಈ ವರ್ಷ ಒಂದು ಕೋಟಿ ಸೀಡ್ ಬಾಲ್ ತಯಾರಿಸುವ ಸಂಕಲ್ಪಕೈಗೊಂಡಿರುವ ಉತ್ತಿಷ್ಠ ಭಾರತ ಸಂಘಟನೆ ಉಡುಪಿಯಲ್ಲಿಯೂ ಲಕ್ಷ ಸೀಡ್ ಬಾಲ್ ತಯಾರಿಸಿ ಹಂಚುವ ಗುರಿ ಇರಿಸಿಕೊಂಡಿದೆ. ಪರಿಸರ ಪ್ರೇಮಿಗಳೂ ಆದ ಪೇಜಾವರ ಕಿರಿಯ ಶ್ರೀ ವಿಶ್ವಪ್ರಸನ್ನತೀರ್ಥರು ಅಭಿಯಾನಕ್ಕೆ ಚಾಲನೆ ನೀಡಿಧಿದರು. ಆ ಬಳಿಕ ಶ್ರೀ ವಿಶ್ವೇಶತೀರ್ಥರು ತಯಾರಿಸಿದ್ದ ಉಂಡೆಗಳನ್ನು ಆಸಕ್ತ ಭಕ್ತರಿಗೆ ವಿತರಿಸಿದರು. ನೀಲಾವರ ಗೋಶಾಲೆಯಲ್ಲಿ ಸದ್ಯದಲ್ಲೇ ಸ್ವಯಂಸೇವಾ ಸಂಸ್ಥೆಗಳ ಸಹಯೋಗದಲ್ಲಿ ಬೀಜದುಂಡೆಗಳನ್ನು ತಯಾರಿಸಲಾಗುವುದು ಎಂದು ಕಿರಿಯ ಶ್ರೀ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು
Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್
Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ
Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ
Udupi: ಗೀತಾರ್ಥ ಚಿಂತನೆ-94: ದುಗುಡಗಳನ್ನು ಕೇಳುವುದೂ ಚಿಕಿತ್ಸೆ
MUST WATCH
ಹೊಸ ಸೇರ್ಪಡೆ
ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು
Bengaluru: ಇ-ಖಾತಾ ಗೊಂದಲದಿಂದ ಲಂಚಕ್ಕೆ ದಾರಿ: ಆರ್. ಅಶೋಕ್
Pollution: ದಿಲ್ಲಿಯಲ್ಲಿ ಈಗ ನಿರ್ಮಾಣಕ್ಕೆ ಬ್ರೇಕ್, ಬಸ್‌ಗಳಿಗೆ ನಿರ್ಬಂಧ
Subramanya: ಕಸ್ತೂರಿ ರಂಗನ್ ವರದಿ ವಿರುದ್ಧ ಗುಂಡ್ಯದಲ್ಲಿ ಬೃಹತ್ ಪ್ರಭಟನಾ ಸಭೆ ಆರಂಭ
Sri Lanka Election Result:ಸಂಸತ್ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.