ಬಸವ ತತ್ವ ಅರ್ಥ ಮಾಡಿಕೊಂಡಿದ್ದರೆ ದೇಶವೇ ಸಮೃದ್ಧ


Team Udayavani, May 22, 2017, 4:45 PM IST

gul2.jpg

ಆಳಂದ: ಬಸವ ತತ್ವವನ್ನು ಅರ್ಥಮಾಡಿಕೊಂಡಿದ್ದರೆ ದೇಶ, ನಾಡು ಸಮೃದ್ಧವಾಗುತ್ತಿತ್ತು ಎಂದು ಬೈಲಹೊಂಗಲ ಮಠದ ನಿಜಗುಣಾನಂದ ಸ್ವಾಮೀಜಿ  ಹೇಳಿದರು. ಪಟ್ಟಣದ ಶ್ರೀರಾಮ ಮಾರುಕಟ್ಟೆಯಲ್ಲಿ ಬಸವ ಜಯಂತಿ ಉತ್ಸವ ಸಮಿತಿ ಹಾಗೂ ಯುವ ವೇದಿಕೆ ಆಶ್ರಯದಲ್ಲಿ ರವಿವಾರ ನಡೆದ ಬಸವ ಜಯಂತಿ ಸಮಾರಂಭದ ಸಾನ್ನಿಧ್ಯ ವಹಿಸಿ ಸ್ವಾಮೀಜಿ ಆಶೀರ್ವಚನ ನೀಡಿದರು. 

ಬಸವಣ್ಣನವರನ್ನು ಅರ್ಥ ಮಾಡಿಕೊಳ್ಳದ ಕಾರಣ ಇಂದಿಗೂ ಜಾತಿ, ಧರ್ಮಗಳ ತಿಕ್ಕಾಟ ನಡೆಯುತ್ತಿವೆ. ಬಸವಣ್ಣನವರ ಧರ್ಮವನ್ನು ಬೆಳೆಯಲು ಬಿಡದ ಕಾರಣ ಇಂದಿಗೂ ಸಂಕಷ್ಟದಿಂದ ಬದುಕು ಕೂಡಿದೆ. ಜಯಂತಿಗಳು ಜಾತಿ, ಧರ್ಮಕ್ಕೆ ಸೀಮಿತಗೊಳಿಸಿದೆ ಮಾನವರ ಒಳಿತಿಗಾಗಿ ಅವರ ಸ್ಮರಣೆಯ ಆಗಬೇಕು ಎಂದು ಹೇಳಿದರು. 

ಶಾಸಕ ಬಿ.ಆರ್‌. ಪಾಟೀಲ ಮಾತನಾಡಿ, ಆಳಂದ ತಾಲೂಕು ಹೋರಾಟ ಮತ್ತು ಕ್ರಾಂತಿಯ ಸೌಹಾರ್ದದ ನೆಲೆಬಿಡಾಗಿದೆ. ಇಂಥ ವಾತಾವರಣವನ್ನು ಪಟ್ಟಭದ್ರ ಸ್ವಹಿತಾಶಕ್ತಿಗಳು ಕಲುಷಿತಗೊಳಿಸಿ ಜಾತಿ ಧರ್ಮದ ಹೆಸರಿನಲ್ಲಿ ವಿಷಬೀಜ ಬಿತ್ತುವ ಹುನ್ನಾರ ನಡೆಸಿದ್ದಾರೆ. ಇಂಥವುಗಳಿಗೆ ಇಲ್ಲಿಯ ಜನರು ಅವಕಾಶ ನೀಡುವುದಿಲ್ಲ ಎಂದು ಹೇಳಿದರು. 

ಉತ್ಸವ ಸಮಿತಿ ಕೋರಿಕೆಯಂತೆ ಆರು ತಿಂಗಳಲ್ಲಿ ಪಟ್ಟಣದಲ್ಲಿ ಬಸವೇಶ್ವರ ಪುತ್ಥಳಿ ಸ್ಥಾಪನೆಗೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದರು. ಮಳಖೇಡದ ದರ್ಗಾದ ಸೈಯ್ಯದ್‌ ಮುಸ್ತಾಫ್‌ ಖಾದ್ರಿ ಮಾತನಾಡಿ, ತನ್ನ ಧರ್ಮವನ್ನು ಅರ್ಥಮಾಡಿಕೊಂಡು ಇನ್ನೂಬ್ಬರ ಧರ್ಮವನ್ನು ಪ್ರೀತಿಸುವುದೇ ಮಾನವ ಧರ್ಮವಾಗಿದೆ ಎಂದು ಹೇಳಿದರು. 

ಬೀದರ ಮಲ್ಲಿಕಾರ್ಜುನ ಸ್ವಾಮಿಗಳು, ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಎಸ್‌.ಪಿ.ಸುಳ್ಳದ ಮಾತನಾಡಿದರು. ವೀರಶೈವ ಸಮಾಜದ ಅಧ್ಯಕ್ಷ ಡಾ| ಎಸ್‌. ಆರ್‌. ಬೇಡಗೆ, ಪುರಸಭೆ ಮಾಜಿ ಅಧ್ಯಕ್ಷ ವಿಠuಲರಾವ ಪಾಟೀಲ, ಜಿಪಂ ಸದಸ್ಯ ಸಿದ್ದರಾಮ ಪ್ಯಾಟಿ, ಶರಣಗೌಡ ಪಾಟೀಲ, ಜೆಡಿಎಸ್‌ ಜಿಲ್ಲಾಧ್ಯಕ್ಷ ಬಸವರಾಜ ತಡಕಲ್‌, ಡಿಸಿಸಿ ಬ್ಯಾಂಕ್‌ ನಿರ್ದೇಶಕ ಅಶೋಕ ಸಾವಳೇಶ್ವರ, 

-ಹಮ್ಮಿದ್‌ ಅನ್ಸಾರಿ, ಕಾರ್ಯಾಧ್ಯಕ್ಷ ಲಿಂಗರಾಜ ಪಾಟೀಲ, ಚನ್ನಪ್ಪ ಎಸ್‌. ಹತ್ತರಕಿ ಇದ್ದರು. ಜಯಂತಿ ಸ್ವಾಗತ ಸಮಿತಿ ಅಧ್ಯಕ್ಷ ನಿಜಲಿಂಗಪ್ಪ ಎಸ್‌. ಕೊರಳಿ ಸ್ವಾಗತಿಸಿದರು. ಶೇಖರ ಮುನ್ನೋಳಿ ಕಾರ್ಯಕ್ರಮ ನಿರೂಪಿಸಿದರು. ಶಂಕರ ಹೂಗಾರ, ಶಿವಶರಣಪ್ಪ ಪೂಜಾರಿ ಅನೇಕ ಕಲಾವಿದರು ವಚನ ಗಾಯನ ನಡೆಸಿಕೊಟ್ಟರು. 

ಟಾಪ್ ನ್ಯೂಸ್

Vijayendra (2)

BJP; ಬೇಗುದಿಗೆ ವರಿಷ್ಠರ ಸೂತ್ರ : ರಾಜ್ಯಾಧ್ಯಕ್ಷ ವಿಜಯೇಂದ್ರ ಬದಲಾವಣೆ ಇಲ್ಲ

Thavar chand gehlot

Karnataka Govt; ರಾಜ್ಯಪಾಲ ಅರ್ಕಾವತಿ ಬಾಣ :ಕಾಳಗ ಈಗ ಮತ್ತೊಂದು ಸುತ್ತಿಗೆ!

MDNL

Kasaragodu: ಎಂಡಿಎಂಎ ಬೆಂಗಳೂರಿನಿಂದ ಪೂರೈಕೆ: ಎಸ್‌ಪಿ ಶಿಲ್ಪಾ

1-qwewqwqe

World Book of Records; ಪ್ರಜಾಪ್ರಭುತ್ವ ಮಾನವ ಸರಪಳಿಗೆ ವಿಶ್ವದಾಖಲೆ ಗರಿ

20

J. B. Shruti Sagar: ಏಕಾಗ್ರತೆಗೆ ಭಂಗ ತರುವ ಏನನ್ನೂ  ಬಳಸಿದರೂ ಸಾಧನೆಗೆ ತೊಡಕೇ

BSYadiyurappa

Inquiry: ಗಂಗೇನಹಳ್ಳಿ ಡಿನೋಟಿಫಿಕೇಶನ್‌ ಪ್ರಕರಣ: ಲೋಕಾಯುಕ್ತದಿಂದ ಬಿಎಸ್‌ವೈ ವಿಚಾರಣೆ

CM-Mysore

Press Day: ಸುಳ್ಳು ಸುದ್ದಿಯಿಂದ ಸಮಾಜದ ನೆಮ್ಮದಿ ಹಾಳು: ಸಿಎಂ ಸಿದ್ದರಾಮಯ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಲಬುರಗಿಯಲ್ಲಿ ಗುಂಡಿನ ಸದ್ದು; ಕೊಲೆ ಆರೋಪಿ ಮೇಲೆ ಪೊಲೀಸರಿಂದ ಫೈರಿಂಗ್‌

Firing; ಕಲಬುರಗಿಯಲ್ಲಿ ಗುಂಡಿನ ಸದ್ದು; ಕೊಲೆ ಆರೋಪಿ ಮೇಲೆ ಪೊಲೀಸರಿಂದ ಫೈರಿಂಗ್‌

Alanda: ಬಂಧಿಸಲು ಹೋದ ಪೊಲೀಸರ ಮೇಲೆ ಹಲ್ಲೆಗೆ ಯತ್ನ… ಆರೋಪಿ ಕಾಲಿಗೆ ಗುಂಡೇಟು

Alanda: ಬಂಧಿಸಲು ಹೋದ ಪೊಲೀಸರ ಮೇಲೆ ಹಲ್ಲೆಗೆ ಯತ್ನ… ಆರೋಪಿ ಕಾಲಿಗೆ ಗುಂಡೇಟು

Kalaburagi: ಸಿಎಂ ಸಿದ್ಧರಾಮಯ್ಯ ರಾಜೀನಾಮೆ ಕೊಡದಂತೆ ನಿಡುಮಾಮಿಡಿ ಶ್ರೀಗಳ ಆಗ್ರಹ

Kalaburagi: ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡದಂತೆ ನಿಡುಮಾಮಿಡಿ ಶ್ರೀಗಳ ಆಗ್ರಹ

1-qwewewqe

Cabinet meeting ತೃಪ್ತಿ ತಂದಿಲ್ಲ: ಬಿ.ಆರ್.ಪಾಟೀಲ ಮತ್ತೊಮ್ಮೆ ಅಸಮಧಾನ

CM Siddaramaiah ಕಲ್ಯಾಣ ಕರ್ನಾಟಕಕ್ಕೆ ಪ್ರತಿ ವರ್ಷ 5000 ಕೋಟಿ

CM Siddaramaiah ಕಲ್ಯಾಣ ಕರ್ನಾಟಕಕ್ಕೆ ಪ್ರತಿ ವರ್ಷ 5000 ಕೋಟಿ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Aranthodu: ವಿದ್ಯಾರ್ಥಿಯ ಮರ್ಮಾಂಗ ಹಿಡಿದೆಳೆದು ಹಲ್ಲೆ

Aranthodu: ವಿದ್ಯಾರ್ಥಿಯ ಮರ್ಮಾಂಗ ಹಿಡಿದೆಳೆದು ಹಲ್ಲೆ

Iceland: 8 ವರ್ಷ ಬಳಿಕ ಐಸ್‌ಲ್ಯಾಂಡ್‌ಗೆ ಹಿಮಕರಡಿ ಭೇಟಿ; ಗುಂಡಿಕ್ಕಿ ಹತ್ಯೆ

Iceland: 8 ವರ್ಷ ಬಳಿಕ ಐಸ್‌ಲ್ಯಾಂಡ್‌ಗೆ ಹಿಮಕರಡಿ ಭೇಟಿ; ಗುಂಡಿಕ್ಕಿ ಹತ್ಯೆ

IPL 2025: ಡೆಲ್ಲಿ ತಂಡದಲ್ಲೇ ಉಳಿಯಲಿದ್ದಾರೆ ಪಂತ್‌

IPL 2025: ಡೆಲ್ಲಿ ತಂಡದಲ್ಲೇ ಉಳಿಯಲಿದ್ದಾರೆ ಪಂತ್‌

Vijayendra (2)

BJP; ಬೇಗುದಿಗೆ ವರಿಷ್ಠರ ಸೂತ್ರ : ರಾಜ್ಯಾಧ್ಯಕ್ಷ ವಿಜಯೇಂದ್ರ ಬದಲಾವಣೆ ಇಲ್ಲ

Thavar chand gehlot

Karnataka Govt; ರಾಜ್ಯಪಾಲ ಅರ್ಕಾವತಿ ಬಾಣ :ಕಾಳಗ ಈಗ ಮತ್ತೊಂದು ಸುತ್ತಿಗೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.