ಟೆಕ್ಕಿ ಆಗಿ ಮಿಂಚಲು ರೈಟ್ ಕ್ಲಿಕ್, ಉದ್ಯೋಗ ಖಚಿತ 5 ತಂತ್ರಜ್ಞಾನಗಳು
Team Udayavani, May 23, 2017, 10:16 AM IST
ಟೆಕ್ ಲೋಕ ದೊಡ್ಡ ಸಾಗರ ಇದ್ದಂತೆ. ಇಲ್ಲಿ ಎಲ್ಲಿ ಜಿಗಿದರೆ ನೀವು ದಡ ಸೇರುತ್ತೀರಿ ಎನ್ನುವುದು ಒಂದು ಪ್ರಶ್ನೆ. ಸಾಫ್ಟ್ವೇರ್ ಪ್ರಪಂಚದಲ್ಲಿ ಸದ್ಯ ಚಾಲ್ತಿಯಲ್ಲಿರುವ 5 ತಂತ್ರಜ್ಞಾನಗಳು ಇಲ್ಲಿ ಬಹುಶಃ ಉತ್ತರವಾಗಬಹುದು…
ಸ್ಟಾರ್ಟಪ್ ಕಂಪನಿಯೊಂದರ ಮಾಲೀಕ ಅಥವಾ ಒಬ್ಬ ಯಶಸ್ವಿ ಬಿಝಿನೆಸ್ ಲೀಡರ್ನನ್ನು ಮಾತಿಗೆಳೆಯಿರಿ. ಅವರೆಲ್ಲರೂ ಸಾಮಾನ್ಯವಾಗಿ ಹೇಳುವ ಸಾಲು “ನಾನು ಇನ್ನೂ ಕಲಿಯುತ್ತಲೇ ಇದ್ದೇನೆ. ಕಲಿಕೆ ಎಂದೂ ನಿಂತಿಲ್ಲ’. ಈ ಮನೋಭಾವವನ್ನು ಹೊಂದಿರುವವರು ಯಾವ ಕ್ಷೇತ್ರದಲ್ಲಿದ್ದರೂ ಅವಕಾಶಗಳು ಅವರನ್ನು ಕೈ ಬೀಸಿ ಕರೆಯುತ್ತವೆ. ಅಂಥವರು ಜೀವನಲ್ಲಿ ಉನ್ನತ ಸ್ಥಾನಗಳಿಗೆ ಹೋಗುವರು. ವಿದ್ಯಾರ್ಥಿ ಜೀವನದಲ್ಲಿದ್ದಾಗ ಸಿಗುವ ಬಿಡುವಿನ ವೇಳೆಯನ್ನು ಬರಿ ಮೋಜು ಮಸ್ತಿಗೆ ಮಾತ್ರ ಮೀಸಲಿಡದೆ ಅಧ್ಯಯನಕ್ಕೂ ಗಮನ ನೀಡಿದರೆ ಮುಂದಿನ ಉದ್ಯೋಗ ಜೀವನ ಸುಗಮವಾಗುವುದು. ಈ ಸಮಯದಲ್ಲಿ ಅನೇಕ ಬಗೆಯ ವೃತ್ತಿ ಕೌಶಲಗಳನ್ನು ಕಲಿತುಕೊಳ್ಳಬಹುದು. ಪ್ರಸ್ತುತ ಸನ್ನಿವೇಶದಲ್ಲಿ ಯಾವ ತಂತ್ರಜ್ಞಾನ, ಕಂಪನಿ ಮುಂಚೂಣಿಯಲ್ಲಿದೆ? ಏಕೆ? ಯಾವ ಕ್ಷೇತ್ರವನ್ನು ಆರಿಸಿಕೊಳ್ಳಬೇಕು ಮುಂತಾದ ವಿಚಾರಗಳತ್ತ ಗಮನ ಹರಿಸುವುದರಿಂದ ಸ್ವಂತ ದೃಷ್ಟಿಕೋನ ಬೆಳೆಸಿಕೊಳ್ಳುವುದು ಸಾಧ್ಯವಾಗುತ್ತದೆ. ಸಾಫ್ಟ್ವೇರ್ ಪ್ರಪಂಚದಲ್ಲಿ ಸದ್ಯ ಚಾಲ್ತಿಯಲ್ಲಿರುವ 5 ತಂತ್ರಜ್ಞಾನಗಳ ಪರಿಚಯ ಇಲ್ಲಿದೆ.
ಆ್ಯಂಡ್ರಾಯ್ಡ
ಸ್ಮಾರ್ಟ್ಫೋನ್ ಬಳಕೆ ಹೆಚ್ಚುತ್ತಿರುವ ಈ ದಿನಗಳಲ್ಲಿ ಮೊಬೈಲ್ ಕಂಪನಿಗಳ ನಡುವೆ ಯಾರು ಹೆಚ್ಚಿನ ಸವಲತ್ತುಗಳನ್ನು ನೀಡುತ್ತಾರೆ ಎಂಬ ಸ್ಪರ್ಧೆ ಏರ್ಪಟ್ಟಿದೆ. ಇವೆಲ್ಲದರಿಂದಾಗಿ ಆಂಡ್ರಾಯ್ಡ ಆ್ಯಪ್ ಡೆವೆಲಪರ್ಗಳಿಗೆ ಬೇಡಿಕೆ ಹೆಚ್ಚಿದೆ. ನಮ್ಮಲ್ಲಿ ಒಂದು ಶತಕೋಟಿಗೂ ಅಧಿಕ ಆಂಡ್ರಾಯ್ಡ ಫೋನ್ ಬಳಕೆದಾರರಿದ್ದಾರೆ. ಹತ್ತಿರತ್ತಿರ ಇಪ್ಪತ್ತು ಲಕ್ಷ ಆಂಡ್ರಾಯ್ಡ ಆ್ಯಪ್ಗ್ಳಿವೆ. ಹಾಗಾಗಿ ಆಂಡ್ರಾಯ್ಡ ತಂತ್ರಜ್ಞಾನವನ್ನು ಕಲಿತುಕೊಳ್ಳುವುದರಿಂದ ಭವಿಷ್ಯ ಉಜ್ವಲವಾಗುವುದು.
ಇಂಟರ್ನೆಟ್ ಆಫ್ ಥಿಂಗ್ಸ್
ಸಾಫ್ಟ್ವೇರ್ ತಂತ್ರಜ್ಞಾನದಲ್ಲಿ ಕ್ರಾಂತಿಯೊಂದು ಆಗುತ್ತಿದ್ದರೆ ಅದು “ಇಂಟರ್ನೆಟ್ ಆಫ್ ಥಿಂಗ್ಸ್'(ಐಓಟಿ) ಕ್ಷೇತ್ರದಲ್ಲಿ. ಈ ಕ್ಷೇತ್ರದ ವಿಶೇಷತೆಯೆಂದರೆ ಯಾವುದೋ ಒಂದು ನಿರ್ದಿಷ್ಟ ಉಪಯೋಗಕ್ಕೆ ಅಥವಾ ಉಪಕರಣಗಳಿಗೆ ಅಪ್ಲಿಕೇಷನ್ ಬರೆಯುವುದು. ಉದಾಹರಣೆಗೆ ಹಾರ್ಟ್ ರೇಟ್ ಮಾನಿಟರ್, ಫೇಸ್ಬುಕ್ ಸ್ಟೇಟಸ್ ಅಪ್ಡೇಟ್ ಮಾಡಲು, ಸ್ವಯಂಚಾಲಿತ ಕಾರು ನಿರ್ವಹಣೆ, ಜಿಮ್ನಲ್ಲಿ ಪೇಮೆಂಟ್ ಸ್ವೀಕರಿಸುವ ಅಪ್ಲಿಕೇಷನ್… ಹೀಗೆ ಪಟ್ಟಿ ಮುಂದುವರಿಯುತ್ತದೆ. ಐಟಿ ಕ್ಷೇತ್ರದ ದಿಗ್ಗಜರೆಲ್ಲ ಈಗಾಗಲೇ ಐ.ಒ.ಟಿ ವಿಭಾಗದಲ್ಲಿ ದೊಡ್ಡ ಮೊತ್ತದ ಬಂಡವಾಳವನ್ನು ಹೂಡುತ್ತಿದ್ದಾರೆ. ಇದನ್ನು ಇಂಟರ್ನೆಟ್ನ ಭವಿಷ್ಯ ಎಂಬ ದೃಷ್ಟಿಯಿಂದ ನೋಡಲಾಗುತ್ತಿದೆ.
ವೆಬ್ ಡೆವೆಲಪ್ಮೆಂಟ್
2017ರ ಅಂತ್ಯದ ವೇಳೆಗೆ ಭಾರತದಲ್ಲಿ ಇಂಟರ್ನೆಟ್ ಬಳಕೆದಾರರ ಸಂಖ್ಯೆ 100ಕೋಟಿ ದಾಟಲಿದೆ ಎಂದು ಗೂಗಲ್ ಇಂಡಿಯಾ ಸಂಸ್ಥೆ ಹೇಳಿದೆ. ಇವೆಲ್ಲದರಿಂದಾಗಿ ಇ- ಕಾಮರ್ಸ್ ಉದ್ಯಮಕ್ಕೆ ಹೆಚ್ಚಿನ ಲಾಭವಾಗಲಿದೆ. ಅಂದರೆ ಆನ್ಲೈನ್ ವ್ಯವಹಾರ ನಡೆಸುವವರು ಹೆಚ್ಚಲಿದ್ದಾರೆ. ಹೀಗಾಗಿ ಆ ವೇಳೆಯ ಹೊತ್ತಿಗೆ ಪ್ರತಿಯೊಂದು ಕಂಪನಿ, ಉದ್ಯಮದವರು ಆನ್ಲೈನ್ ಮಾರುಕಟ್ಟೆಯಲ್ಲಿ ತಮ್ಮ ಸಾಮರ್ಥಯವನ್ನು ಬಲಪಡಿಸುವತ್ತ ಗಮನವಿತ್ತಿದ್ದಾರೆ. ಹೀಗಾಗಿ ವೆಬ್ ಡೆವೆಲಪರ್ಗೆ ಎಲ್ಲಿಲ್ಲದ ಅವಕಾಶಗಳು ಹುಡುಕಿಕೊಂಡು ಬರತೊಡಗಿವೆ. ವೆಬ್ ಡೆವೆಲಪರ್ಗಳು ಫ್ರೀಲ್ಯಾನ್ಸರ್ ಆಗಿಯೂ ಕೆಲಸ ನಿರ್ವಹಿಸಬಹುದು.
ಪೈಥಾನ್
ಇಂಟರ್ನೆಟ್ ಆಪ್ ಥಿಂಗ್ಸ್, ಅನಾಲಿಟಿಕ್ಸ್ ಮತ್ತು ಅತ್ಯಂತ ಸುಧಾರಿತ ವಿಡಿಯೋ ಗೇಮ್ಗಳನ್ನು ಅಭಿವೃದ್ಧಿಪಡಿಸುವುದರ ಹಿಂದೆ ಇರುವ ಮ್ಯಾಜಿಕ್ ಲ್ಯಾಂಗ್ವೇಜ್- ಪೈಥಾನ್. ಇದನ್ನು ಕಲಿಯುವುದರಿಂದ ಅನೇಕ ಬಗೆಯ ಉಪಯೋಗಗಳಿವೆ. ಕೋಡ್ ಬರೆಯುವ ಸಾಧಾರಣ ಕ್ರಿಯೆಯೂ ಮನರಂಜನೆ ಒದಗಿಸಬಲ್ಲದು ಎಂಬುದಕ್ಕೆ ಸಾಕ್ಷಿ ಈ ಪೈಥಾನ್ ಎನ್ನುವ ಪ್ರೋಗ್ರಾಮಿಂಗ್ ಲ್ಯಾಂಗ್ವೇಜ್. ದೈತ್ಯ ಕಂಪನಿಗಳಾದ ಗೂಗಲ್, ಯಾಹೂ ಮತ್ತು ಐಬಿಎಂನಲ್ಲಿ ಪೈಥಾನ್ ಪ್ರೋಗ್ರಾಮರ್ಗಳಿಗೆ ಹೆಚ್ಚಿನ ಪ್ರಾಶಸ್ತ್ಯವಿದೆ.
ಸಿ/ ಸಿ++
ದಶಕಗಳೇ ಕಳೆದರೂ ಇನ್ನೂ ಸಿ ಮತ್ತು ಸಿ++ ಪ್ರೋಗ್ರಾಮಿಂಗ್ ಲ್ಯಾಂಗ್ವೇಜ್ಗೆ ಮುಪ್ಪಾಗಿಲ್ಲ. ಇನ್ನೂ ಅದು ಚಾಲ್ತಿಯಲ್ಲಿದೆ. ಮೆಡಿಕಲ್, ಬ್ಯಾಂಕಿಂಗ್, ಫೈನಾನ್ಸ್ ಮುಂತಾದ ಕಡೆಯಲ್ಲೆಲ್ಲಾ ಇದರ ಉಪಯೋಗ ಮತ್ತು ಬೇಡಿಕೆ ಹೆಚ್ಚು.
– ಹವನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Karnataka ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿರುದ್ಧ ಲೈಂಗಿ*ಕ ದೌರ್ಜನ್ಯ ಪ್ರಕರಣ
Mandya: ಬಹುಮಾನ ಗೆದ್ದ ಹಳ್ಳಿಕಾರ್ ತಳಿಯ ಎತ್ತು ದಾಖಲೆಯ 13 ಲಕ್ಷ ರೂ.ಗೆ ಮಾರಾಟ!
Ajmer dargah ಶಿವ ದೇವಾಲಯ?; ಕೋಮು ಸೌಹಾರ್ದತೆಗೆ ಭಂಗ ತರುವ ಕುತಂತ್ರ: ಖಾದಿಮರ ಮನವಿ
Udupi; ಶ್ರೀ ಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ: ಡಿ.1 ರಂದು ದೀಪೋತ್ಸವ
ಕುದೂರು; ಸ್ವಂತ ಖರ್ಚಲ್ಲಿ ಶಿಕ್ಷಕನಿಂದ ವಿದ್ಯಾರ್ಥಿಗಳಿಗೆ ವಿಮಾನ ಪ್ರವಾಸ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.