ನಾನು ಇರೋದೇ ಹೀಗೆ…
Team Udayavani, May 23, 2017, 11:42 AM IST
“ಬಿಗ್ ಬಾಸ್’ ಮನೆಯಿಂದ ಆಚೆ ಬಂದ ಮೇಲೆ ಸಂಜನಾಗೆ ಹಲವು ಆಫರ್ಗಳು ಬಂದು, ಆ ಪೈಕಿ ಅವರು “ಕಿರಿಕ್ ಕೀರ್ತಿ’ ಎಂಬ ಚಿತ್ರದಲ್ಲಿ ನಾಯಕಿಯಾಗಿ ಒಪ್ಪಿಕೊಂಡಿದ್ದೂ ಆಯ್ತು. ಈಗ ಸಂಜನಾ, ಆ ಚಿತ್ರದಿಂದ ಹೊರಕ್ಕೆ ಬಂದಿದ್ದಾರೆ. ಆ ಚಿತ್ರದ ಬದಲು ಇನ್ನೂ ಎರಡು ಚಿತ್ರಗಳಲ್ಲಿ ನಟಿಸುವುದಕ್ಕೆ ಸಜ್ಜಾಗಿದ್ದಾರೆ.
“ಆ ಚಿತ್ರದ ಕಥೆಯನ್ನೇ ಹೇಳಿರಲಿಲ್ಲ. ಪರಿಚಯದವರಲ್ಲವಾ ಎಂದು ನಾನೂ ಒಪ್ಪಿದ್ದೆ. ಆದರೆ, ಕೊನೆಗೆ ಯಾಕೋ ಸರಿ ಹೋಗಲಿಲ್ಲ. ಚಿತ್ರದಲ್ಲಿ ನಟಿಸುವುದಿಲ್ಲ ಎಂದೆ. ಕೊನೆಗೆ ಚಿತ್ರತಂಡದವರು ನನ್ನನ್ನು ಚಿತ್ರತಂಡದಿಂದ ಕಿತ್ತು ಹಾಕಲಾಗಿದೆ ಎಂದೆಲ್ಲ ಸುದ್ದಿಯಾಯಿತು. ನಿಜ ಏನೆಂದರೆ, ಆ ಚಿತ್ರದಿಂದ ನಾನೇ ಹೊರ ಬಂದೆ. ಅದರ ಬದಲು, ಈಗ ಎರಡು ಚಿತ್ರ ಒಪ್ಪಿಕೊಂಡಿದ್ದೇನೆ. ಒಂದರ ಹೆಸರು “ಉಡುಂಬ’.
ಚಿತ್ರದೊಳಗೊಂದು ಚಿತ್ರವಿರುತ್ತದೆ. ಆ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದೇನೆ. ಒಂದು ಡ್ರೀಮ್ ಸಾಂಗ್ ಸಹ ಇದೆ. ಇನ್ನೊಂದು ಚಿತ್ರದಲ್ಲಿ ನಿರಂಜನ್ ದೇಶಪಾಂಡೆ ಜೊತೆಗೆ ನಟಿಸುತ್ತಿದ್ದೀನಿ. ಫೋಟೋಶೂಟ್ ಸಹ ಆಗಿದೆ. ಸದ್ಯದಲ್ಲೇ ಸಿನಿಮಾ ಶುರುವಾಗಲಿದೆ’ ಎನ್ನುತ್ತಾರೆ ಅವರು. ಕಲರ್ಸ್ ಕನ್ನಡದಲ್ಲಿ “ಸಂಜು ಮತ್ತು ನಾನು’ ಧಾರಾವಾಹಿಯಲ್ಲೂ ಕಾಣಿಸಿಕೊಳ್ಳುತ್ತಿದ್ದೇನೆ’ ಎಂದು ವಿವರ ಕೊಡುತ್ತಾರೆ ಸಂಜನಾ.
ಈ ಮಧ್ಯೆ ಸಂಜನಾಗೆ ಬಹಳ ಆಫರ್ಗಳಿವೆಯಂತೆ. ಆದರೆ, ಇದು ಮುಗಿಯುವವರೆಗೂ ನಟಿಸಬಾರದು ಎಂದು ಚಾನಲ್ ಜೊತೆಗೆ ಒಪ್ಪಂದವಾಗಿರುವುದರಿಂದ ಯಾವುದೇ ಚಿತ್ರವನ್ನೂ ಒಪ್ಪಿಲ್ಲವಂತೆ ಸಂಜನಾ. ನಿಜ ಹೇಳಬೇಕೆಂದರೆ, ಅವರಿಗೆ ಇದೆಲ್ಲಾ ಇಷ್ಟವೇ ಇಲ್ಲವಂತೆ. “ನನಗೆ ಇವೆಲ್ಲಾ ಇಷ್ಟ ಇಲ್ಲ. ಡೇಟ್ ನೋಡ್ಕೊಳ್ಳೋದು ಎಲ್ಲಾ ಕಿರಿಕಿರಿ ನನಗೆ. ಹಾಗಾಗಿ ಒಪ್ಪಿರೋದನ್ನೆಲ್ಲಾ ಮುಗಿಸಿ, ಆ ನಂತರ ಇಂಟೀರಿಯರ್ ಡಿಸೈನಿಂಗ್ ಕಡೆಗೆ ಹೋಗುವ ಯೋಚನೆ ಇದೆ’ ಎನ್ನುತ್ತಾರೆ ಸಂಜನಾ.
ಇದೆಲ್ಲದರ ಮಧ್ಯೆ ಸಂಜನಾಗೆ ಬಹಳ ಖುಷಿ ಇದೆ. “ನಾನು ಧಾರಾವಾಹಿಗಳಲ್ಲಿ ನಟಿಸುವಾಗ ಬರೀ ಆಂಟಿಗಳು ನನ್ನನ್ನ ಗುರುತು ಹಿಡಿಯೋರು. “ಬಿಗ್ ಬಾಸ್’ ಮನೆಗೆ ಹೋಗಿ ಬಂದ ನಂತರ ಮಕ್ಕಳು, ವಯಸ್ಸಾದವರು ಎಲ್ಲರೂ ನನ್ನನ್ನ ಗುರುತು ಹಿಡಿಯುತ್ತಾರೆ, ಎಲ್ಲಾ ಮಾತಾಡಿಸುತ್ತಾರೆ’ ಎನ್ನುತ್ತಾರೆ ಸಂಜನಾ. ಸಂಜನಾಗೆ ವಿವಾದಿತ ನಟಿ ಎಂಬ ಬಿರುದಿದೆಯಲ್ಲಾ ಎಂದರೆ, ಆ ಬಗ್ಗೆ ಅವರು ತಲೆ ಕೆಡಿಸಿಕೊಳ್ಳುವುದಿಲ್ಲ ಎನ್ನುತ್ತಾರೆ.
“ಇತ್ತೀಚೆಗೆ “ತಾತನ ತಿಥಿ ಮೊಮ್ಮಗನ ಪ್ರಸ್ತ’ ಎಂಬ ಚಿತ್ರದಲ್ಲಿ ನನ್ನ ಹೆಸರು ಬಳಸಿಕೊಂಡಿದ್ದಾರೆ. ಈ ಮೂಲಕ ನನ್ನ ಹೆಸರಲ್ಲಿ ಪುಕ್ಕಟ್ಟೆ ಪ್ರಚಾರ ಪಡೆಯುತ್ತಿದ್ದಾರೆ. ನಾನು ಈ ಕುರಿತು ಚಿತ್ರತಂಡದವರಿಗೆ ಫೋನ್ ಮಾಡಿ ಹೇಳಿದೆ. ಆದರೆ, ಅವರು ತೆಗೀತಿಲ್ಲ. ಕೇಳಿದರೆ ಕಾಂಟ್ರೋವರ್ಸಿ ಮಾಡುತ್ತೀನಿ ಎನ್ನುತ್ತಾರೆ. ನನಗೆ ವಿವಾದ ಮಾಡಿಕೊಳ್ಳೋಕೆ ಇಷ್ಟವಿಲ್ಲ. ನಾನು ಇರೋದೇ ಹೀಗೇ. ಅದು ಮನೆಯವರಿಗೂ ಗೊತ್ತು.
ಅದೇ ಕಾರಣಕ್ಕೆ, ಅವರೆಲ್ಲಾ ನನಗೆ ತಲೆ ಕೆಡಿಸಿಕೊಳ್ಳಬೇಡ ಅಂತಾರೆ. ಮನೆಯವರೇ ಹೇಳುವಾಗ, ನಾನ್ಯಾಕೆ ತಲೆ ಕೆಡಿಸಿಕೊಳ್ಳಲಿ. ಹಾಗಾಗಿ ಈ ತರಹದ ವಿಷಯಗಳನ್ನು ಯೋಚಿಸೋಕೆ ಹೋಗುವುದಿಲ್ಲ. ನಾನು ತಲೆ ಕೆಡಿಸಿಕೊಳ್ಳುವುದಿಲ್ಲ, ಇಷ್ಟವಿಲ್ಲದ್ದು ಮಾಡುವುದಿಲ್ಲ’ ಎನ್ನುತ್ತಾರೆ ಸಂಜನಾ. ಇನ್ನು ಸಂಜನಾಗೆ ಹೋಂಡಾ ಸಿಟಿ ಕಾರು ತಗೋಬೇಕು ಎಂಬ ಆಸೆ ಇತ್ತಂತೆ. “ಬಿಗ್ ಬಾಸ್’ನಿಂದ ಬಂದ ಹಣದಲ್ಲಿ ಅವರು ತಮ್ಮ ಆಸೆಯನ್ನು ಪೂರೈಸಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kerala govt: ಶಬರಿಮಲೆ ವರ್ಚುವಲ್ ಕ್ಯೂ ಬುಕ್ಕಿಂಗ್ ಮಿತಿ ಹೆಚ್ಚಳ
Uttar Pradesh: ಝಾನ್ಸಿ ಅಗ್ನಿ ಅವಘಡ: ಗುರುತೇ ಸಿಗದಂತೆ ಕರಕಲಾದ ಹಸುಳೆಗಳು
G20 Leaders Summit: ಪ್ರಧಾನಿ ಮೋದಿ ನೈಜೀರಿಯಾ, ಬ್ರೆಜಿಲ್, ಗಯಾನಾ ಪ್ರವಾಸ ಶುರು
Chhattisgarh: ನೀರಿನ ಬಾವೀಲಿ ಪೆಟ್ರೋಲ್: ಸಂಗ್ರಹಕ್ಕೆ ಮುಗಿಬಿದ್ದ ಜನ
Manipur: ಸಿಎಂ ಬಿರೇನ್ ಸಿಂಗ್ ಮನೆಗೆ ನುಗ್ಗಲು ಯತ್ನಿಸಿದ ಗುಂಪು; ಹೆಚ್ಚಿದ ಹಿಂಸಾಚಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.