ಸ್ವಚ್ಛತಾ ಯಂತ್ರಗಳಿಗೆ ಸಿಎಂ ಚಾಲನೆ


Team Udayavani, May 23, 2017, 12:34 PM IST

cm-mayor.jpg

ಬೆಂಗಳೂರು: ಉದ್ಯಾನನಗರಿ ಬೆಂಗಳೂರನ್ನು ಆರೋಗ್ಯಕರ ಹಾಗೂ ಸ್ವಚ್ಛ ನಗರವನ್ನಾಗಿ ರೂಪಿಸುವ ಉದ್ದೇಶದಿಂದ ಬಿಬಿಎಂಪಿ ಖರೀದಿಸಿರುವ ಎಂಟು ಬೃಹತ್‌ ಯಾಂತ್ರೀಕೃತ ಸ್ವಚ್ಛತಾ ವಾಹನಗಳು ಹಾಗೂ ಸಣ್ಣ ಸ್ವಚ್ಛತಾ ಯಂತ್ರಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ಚಾಲನೆ ನೀಡಿದರು. 

ವಿಧಾನಸೌಧದ ಮುಂಭಾಗ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಸ್ವಚ್ಛತಾ ವಾಹನಗಳಿಗೆ ಸಿ ಎಂ ಚಾಲನೆ ನೀಡಿದರು. ನಂತರ ಮಾತನಾಡಿದ ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್‌, “ಅತಿ ದಟ್ಟಣೆಯ ಕಾರಿಡಾರ್‌ಗಳು, ಆರ್ಟಿರಿಯಲ್‌ ಮತ್ತು ಸಬ್‌ ಆರ್ಟಿರಿಯಲ್‌ ರಸ್ತೆಗಳ ವಿಭಜಕ ಹಾಗೂ ಪಾದಚಾರಿ ಮಾರ್ಗದ ಬಳಿಯ ಮಣ್ಣು, ದೂಳಿನ ಕಣಧಿಗಳನ್ನು ಈ ಯಂತ್ರಗಳು ಸ್ವಚ್ಛಗೊಳಿಸಲಿವೆ. ಇದರಿಂದ ವಾಹನ ಸವಾರರು, ಪಾದಚಾರಿಗಳಿಗೆ ಉಂಟಾಧಿಗುವ ಕಿರಿಕಿರಿ ತಪ್ಪಿಸಬಹುದು. ಜನರ ಆರೋಗ್ಯ ಸಂರಕ್ಷಿಸುವ ಜತೆಗೆ ರಸ್ತೆಗಳ ಸ್ವಚ್ಛತೆ ಕಾಪಾಡಲು ಯಂತ್ರಗಳನ್ನು ಬಳಸಲಾಗುತ್ತಿದೆ,’ಎಂದರು. 

ವರ್ಷಕ್ಕೆ 46 ಕೋಟಿ ರೂ. ಉಳಿತಾಯ: ಮೇಯರ್‌ ಜಿ.ಪದ್ಮಾಪತಿ ಮಾತನಾಡಿ, “ಪ್ರತಿ ಯಾಂತ್ರೀಕೃತ ಸ್ವಚ್ಛತಾ ಯಂತ್ರಕ್ಕೂ ಜಿ.ಪಿ.ಎಸ್‌. ಸಾಧನ ಅಳವಡಿಸಲಾಗುಧಿವುದು. ಈ ಮೂಲಕ ಅವುಗಳ ಕಾರ್ಯಾಚರಣೆ ಮೇಲೆ ನಿಗಾ ಇಡಲಾಗುವುದು. ಅದರ ಮೇಲ್ವಿಧಿಚಾರಣೆಗೆ ನಿಯಂತ್ರಣ ಕೊಠಡಿ ಸ್ಥಾಪಿಸಲಾಗುವುದು. ಈ ಯಂತ್ರಗಳ ಬಳಕೆಯಿಂದ ಸ್ವಚ್ಛತಾ ಕಾರ್ಯಕ್ಕೆ ತಗಲುವ ವೆಚ್ಚದಲ್ಲಿ ವಾರ್ಷಿಕ ಕನಿಷ್ಠ 46 ಕೋಟಿ ರೂ. ಉಳಿತಾಯವಾಗಲಿದೆ. ಐದು ವರ್ಷಗಳಲ್ಲಿ ಪಾಲಿಕೆಗೆ 230 ಕೋಟಿ ರೂ. ಉಳಿತಾಯವಾಗಲಿದೆ,’ ಎಂದು ಹೇಳಿದರು. 

ಪಾಲಿಕೆ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಮಾತನಾಡಿ, “ಬೃಹತ್‌ ಯಾಂತ್ರೀಕೃತ ಸ್ವಚ್ಛತಾ ಯಂತ್ರವು ನಿತ್ಯ ರಾತ್ರಿ 10 ಗಂಟೆಯಿಂದ ನಸುಕಿನ 4 ಗಂಟೆವರೆಗೆ 50 ಕಿ.ಮೀ. ಹಾಗೂ ಸಣ್ಣ ಯಂತ್ರವು ನಿತ್ಯ 30 ಕಿ.ಮೀ. ಮಾರ್ಗ ಸ್ವಚ್ಛಗೊಳಿಸುವ ಸಾಮರ್ಥಯ ಹೊಂದಿದೆ. ಒಂಬತ್ತು ಯಂತ್ರಗಳಿಂದ ನಿತ್ಯ 430 ಕಿ.ಮೀ. ಉದ್ದದ ಮಾರ್ಗ ಸ್ವಚ್ಛಗೊಳಿಸುವ ಉದ್ದೇಶವಿದೆ. ಅದರಂತೆ 200 ಕಿ.ಮೀ. ಉದ್ದದ ವಿಭಜಕ ಮಾರ್ಗ ಹಾಗೂ ಪ್ರಮುಖ ರಸ್ತೆಗಳನ್ನು ಎರಡು ದಿನಕ್ಕೊಮ್ಮೆ ಸ್ವಚ್ಛಗೊಳಿಸುವ ವ್ಯವಸ್ಥೆ ಕಲ್ಪಿಸುವ ಚಿಂತನೆ ಇದೆ,’ ಎಂದು ಹೇಳಿದರು. ಉಪಮೇಯರ್‌ ಎಂ.ಆನಂದ್‌ ಇತರರು ಉಪಸ್ಥಿತರಿದ್ದರು.

ಸ್ವಚ್ಛತಾ ಯಂತ್ರದ ವಿವರ: ಮುಖ್ಯಮಂತ್ರಿಗಳ ನಗರೋತ್ಥಾನ ಯೋಜನೆಯಡಿ 32 ಬೃಹತ್‌ ಹಾಗೂ ಸಣ್ಣ ಯಾಂತ್ರೀಕೃತ ಸ್ವಚ್ಛತಾ ಯಂತ್ರ ಖರೀದಿಗೆ 38.40 ಕೋಟಿ ರೂ. ಹಾಗೂ 14.72 ಕೋಟಿ ರೂ. ಅನುದಾನ ಕಾಯ್ದಿರಿಸಲಾಗಿತ್ತು. ಅದರಂತೆ ತಲಾ 1.09 ಕೋಟಿ ರೂ. ದರದಂತೆ 8.68 ಕೋಟಿ ರೂ. ವೆಚ್ಚದಲ್ಲಿ ಎಂಟು ಯಂತ್ರ ಖರೀದಿಸಲಾಗಿದೆ. ಐದು ವರ್ಷಗಳ ನಿರ್ವಹಣೆಗೆ ಪ್ರತಿ ವಾಹನಕ್ಕೆ 2.48 ಕೋಟಿ ರೂ.ನಂತೆ 19.86 ಕೋಟಿ ರೂ. ವೆಚ್ಚವಾಗಲಿದೆ. ಇನ್ನು 48 ಲಕ್ಷ ರೂ. ವೆಚ್ಚದಲ್ಲಿ ಸಣ್ಣ ಯಂತ್ರ ಖರೀದಿಸಲಾಗಿದ್ದು, ಐದು ವರ್ಷದ ನಿರ್ವಹಣೆಗೆ 1.51 ಕೋಟಿ ರೂ. ಭರಿಸಬೇಕಾಗುತ್ತದೆ.

ನಿರ್ವಹಣೆ ಮೊತ್ತ ಬಿಡುಗಡೆ ಹೇಗೆ?: ಬೃಹತ್‌ ಯಂತ್ರಗಳೂ ನಿತ್ಯ ಕನಿಷ್ಠ 50 ಕಿ.ಮೀ. ಉದ್ದದ ಮಾರ್ಗ ಸ್ವಚ್ಛಗೊಳಿಸಬೇಕು. ಯಂತ್ರಗಳು ಸ್ವಚ್ಛಗೊಳಿಸಿದ ಕಾರ್ಯದ ವಿಡಿಯೋ ಚಿತ್ರೀಕರಣ ನಡೆಸಿ ಪಾಲಿಕೆಗೆ ಸಲ್ಲಿಸಬೇಕು. ಜತೆಗೆ ಸಂಬಂಧಪಟ್ಟ ಎಂಜಿನಿಯರ್‌ ಖಾತರಿಪಡಿಸಿ ವರದಿ ಸಲ್ಲಿಸಿದರಷ್ಟೇ ನಿರ್ವಹಣೆ ಮೊತ್ತ ಬಿಡುಗಡೆಯಾಗಲಿದೆ. ಹಾಗೆಯೇ ಪ್ರತಿ ಯಂತ್ರಕ್ಕೂ ಜಿಪಿಎಸ್‌ ಸಾಧನ ಅಳವಡಿಸಬೇಕು. ಜಿಪಿಎಸ್‌ ನಿಯಂತ್ರಣ ವ್ಯವಸ್ಥೆಯನ್ನು ಎಲ್ಲ ಎಂಟು ವಲಯಗಳಲ್ಲಿ ಕಲ್ಪಿಸಿ, ನಿಯಂತ್ರಣ ಕೊಠಡಿಯನ್ನು ಕೇಂದ್ರ ಕಚೇರಿಯಲ್ಲಿ ಸ್ಥಾಪಿಸಬೇಕು.

ಮಂಜುಳಾ ಮೇಲಿನ  ಹಲ್ಲೆಗೆ ಪದ್ಮಾವತಿಗೆ ತರಾಟೆ
ರಾಜರಾಜೇಶ್ವರಿನಗರ ಕ್ಷೇತ್ರ ವ್ಯಾಪ್ತಿಯ ಲಗ್ಗೆರೆಯಲ್ಲಿ ಇತ್ತೀಚೆಗೆ ಮಳೆ ನೀರು ಕಾಲುವೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ನಡೆದ ಕಾರ್ಪೊರೇಟರ್‌ ಮೇಲಿನ ಹಲ್ಲೆಗೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ, ಮೇಯರ್‌ ಜಿ.ಪದ್ಮಾವತಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. 

ವಿಧಾನಸೌಧದ ಮುಂಭಾಗ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮುಖ್ಯಧಿಮಂತ್ರಿಗಳು, ಮೇಯರ್‌ ಎದುರಾಗುತ್ತಿದ್ದಂತೆ ಶಾಸಕ ಮುನಿರತ್ನ ಬೆಂಬಲಿಗರು ಹಾಗೂ ಪಾಲಿಕೆ ಸದಸ್ಯೆ ಮಂಜುಳಾ ನಾರಾಯಣಸ್ವಾಮಿ ನಡುವಿನ ಗಲಾಟೆಗೆ ಕಾರಣವೇನು ಎಂದು ಪ್ರಶ್ನಿಸಿದರು. ತಾವು ಭಾಗವಹಿಸಿದ್ದ ಕಾರ್ಯಕ್ರಮದ ವೇಳೆ ಈ ರೀತಿಯ ಘಟನೆ ನಡೆಯದಂತೆ ತಡೆಯಲು ಮುನ್ನೆಚ್ಚರಿಕೆ ವಹಿಸಬೇಕಿತ್ತಲ್ಲವೇ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಗೊತ್ತಾಗಿದೆ.

ಬಿಬಿಎಂಪಿಯಲ್ಲಿ ಮೈತ್ರಿ ಆಡಳಿತವಿದ್ದು, ಈ ರೀತಿಯ ಘಟನೆಗಳು ನಡೆದರೆ ತಪ್ಪು ಸಂದೇಶ ರವಾನೆಯಾಗುತ್ತದೆ. ಪಾಲಿಕೆಯಿಂದ ಆಯೋಜಿ­ಸುವ ಕಾರ್ಯಕ್ರಮಗಳಿಗೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆ­ದುಕೊಳ್ಳಬೇಕು. ಎಲ್ಲರ ವಿಶ್ವಾಸ ಪಡೆಯದಿದ್ದರೆ ಪಕ್ಷದ ವರ್ಚಸ್ಸಿಗೂ ಹಾನಿಯಾಗುತ್ತದೆ ಎಂದು ಹೇಳಿ­ದರು ಎನ್ನಲಾಗಿದೆ. ಇದರಿಂದ ಕೆಲಕಾಲ ತಬ್ಬಿಬ್ಟಾದ ಮೇಯರ್‌, ಬಳಿಕ ಅಂದಿನ ಘಟನೆ ಹಿಂದಿನ ಕಾರಣ ಹಾಗೂ ರಾಜಕೀಯ ಕಾರಣಗಳನ್ನು ವಿವರಿಸಿ ಸಮಾಧಾನಪಡಿಸಿದರು ಎಂದು ತಿಳಿದುಬಂದಿದೆ.

ಹುತಾತ್ಮ ಯೋಧ ನಿರಂಜನ್‌ ಅವರ ಹೆಸರನ್ನು ವಿವಾದಿತ ಸ್ಥಳಕ್ಕೆ ಬದಲಾಗಿ ನಗರದ ಮತ್ತೂಂದು ಪ್ರಮುಖ ರಸ್ತೆಗೆ ನಾಮಕರಣ ಮಾಡಲಾಗುವುದು.
-ಕೆ.ಜೆ.ಜಾರ್ಜ್‌, ಬೆಂಗಳೂರು ಅಭಿವೃದ್ಧಿ ಸಚಿವ

ಟಾಪ್ ನ್ಯೂಸ್

ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?

ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?

1-horoscope

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಯಶಸ್ಸು, ಅನಿರೀಕ್ಷಿತ ಧನಾಗಮ ಸಂಭವ

Puttur: ಇದು ಅಜಿತರ ಸಾಹಸ : ರಬ್ಬರ್‌ ತೋಟದಲ್ಲಿ ಕಾಫಿ ಘಮ ಘಮ

Puttur: ಇದು ಅಜಿತರ ಸಾಹಸ : ರಬ್ಬರ್‌ ತೋಟದಲ್ಲಿ ಕಾಫಿ ಘಮ ಘಮ

Kasaragod: ನಿದ್ದೆಯಲ್ಲಿದ್ದ ಗಂಡು ಮಗು ಸಾ*ವು

Kasaragod: ನಿದ್ದೆಯಲ್ಲಿದ್ದ ಗಂಡು ಮಗು ಸಾ*ವು

Kundapura: ಕಾಂತಾರ ಸಿನೆಮಾದೊಂದಿಗೆ ಪ್ರಸಿದ್ಧಿ ಪಡೆದ ಕೆರಾಡಿ ಕಂಬಳ

Kundapura: ಕಾಂತಾರ ಸಿನೆಮಾದೊಂದಿಗೆ ಪ್ರಸಿದ್ಧಿ ಪಡೆದ ಕೆರಾಡಿ ಕಂಬಳ

Train: ಮುರುಡೇಶ್ವರ ಎಕ್ಸ್‌ಪ್ರೆಸ್‌ ಸಮಯ ಬದಲಾವಣೆ ಬೇಡ

Train: ಮುರುಡೇಶ್ವರ ಎಕ್ಸ್‌ಪ್ರೆಸ್‌ ಸಮಯ ಬದಲಾವಣೆ ಬೇಡ

yadiyurappa

B.S.Yediyurappa ಮೇಲೆ ಅಭಿಯೋಜನೆ ಅಸ್ತ್ರ!: ಏನಿದು 12 ಕೋಟಿ ರೂ. ಲಂಚ ಪ್ರಕರಣ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕುದೂರು; ಸ್ವಂತ ಖರ್ಚಲ್ಲಿ ಶಿಕ್ಷಕನಿಂದ ವಿದ್ಯಾರ್ಥಿಗಳಿಗೆ ವಿಮಾನ ಪ್ರವಾಸ!

ಕುದೂರು; ಸ್ವಂತ ಖರ್ಚಲ್ಲಿ ಶಿಕ್ಷಕನಿಂದ ವಿದ್ಯಾರ್ಥಿಗಳಿಗೆ ವಿಮಾನ ಪ್ರವಾಸ!

Marriages: ನಗರದಲ್ಲಿ 1 ತಿಂಗಳಲ್ಲಿ 13,000 ಮದುವೆ!

Marriages: ನಗರದಲ್ಲಿ 1 ತಿಂಗಳಲ್ಲಿ 13,000 ಮದುವೆ!

High Court: ಗುರು ರಾಘವೇಂದ್ರ ಬ್ಯಾಂಕ್‌ ಅಧ್ಯಕಗೆ ಜಾಮೀನು ನಿರಾಕರಣೆ

High Court: ಗುರು ರಾಘವೇಂದ್ರ ಬ್ಯಾಂಕ್‌ ಅಧ್ಯಕಗೆ ಜಾಮೀನು ನಿರಾಕರಣೆ

Arrested: ಬಿಹಾರದ ಬೆಡ್‌ಶೀಟ್‌ ಗ್ಯಾಂಗ್‌ನ 8 ಮಂದಿ ಸೆರೆ

Arrested: ಬಿಹಾರದ ಬೆಡ್‌ಶೀಟ್‌ ಗ್ಯಾಂಗ್‌ನ 8 ಮಂದಿ ಸೆರೆ

Crime Follow Up: ಅಸ್ಸಾಂ ಯುವತಿ ಹತ್ಯೆ ಕೇಸ್‌; ಆರೋಪಿ ಸೆರೆಗೆ 3 ತಂಡ ರಚನೆ

Crime Follow Up: ಅಸ್ಸಾಂ ಯುವತಿ ಹತ್ಯೆ ಕೇಸ್‌; ಆರೋಪಿ ಸೆರೆಗೆ 3 ತಂಡ ರಚನೆ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

naa ninna bidalare movie releasing today

Sandalwood: ನಿಮ್ಮ ನಿರೀಕ್ಷೆಗೆ ನಾವು ಜವಾಬ್ದಾರರು: ʼನಾ ನಿನ್ನ ಬಿಡಲಾರೆ’ ಇಂದು ತೆರೆಗೆ

ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?

ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?

1

Pension Fraud: ಕಲ್ಯಾಣ ಪಿಂಚಣಿ ಲಪಟಾವಣೆ; ಸಿಕ್ಕಿ ಬಿದ್ದ 1,458 ಸರಕಾರಿ ಸಿಬಂದಿ

1-horoscope

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಯಶಸ್ಸು, ಅನಿರೀಕ್ಷಿತ ಧನಾಗಮ ಸಂಭವ

Puttur: ಇದು ಅಜಿತರ ಸಾಹಸ : ರಬ್ಬರ್‌ ತೋಟದಲ್ಲಿ ಕಾಫಿ ಘಮ ಘಮ

Puttur: ಇದು ಅಜಿತರ ಸಾಹಸ : ರಬ್ಬರ್‌ ತೋಟದಲ್ಲಿ ಕಾಫಿ ಘಮ ಘಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.