ಬ್ಲ್ಯಾಕ್ ಅಂಡ್ ವೈಟ್ ದಂಧೆ; ಲಾಲು ಪುತ್ರಿ ಮಿಸಾ ಸಿಎ ಅಗರ್ ವಾಲ್ ಬಂಧನ
Team Udayavani, May 23, 2017, 3:05 PM IST
ನವದೆಹಲಿ:ಹಣ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್ ಜೆಡಿ ವರಿಷ್ಠ ಲಾಲು ಪ್ರಸಾದ್ ಯಾದವ್ ಅವರ ಪುತ್ರಿ ಮಿಸಾ ಭಾರತಿ
ಸಿಎ(ಚಾರ್ಟೆರ್ಡ್ ಅಕೌಂಟೆಂಟ್) ರಾಜೇಶ್ ಅಗರ್ ವಾಲ್ ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಮಂಗಳವಾರ ಬಂಧಿಸಿದ್ದಾರೆ.
ಹಣ ಅವ್ಯವಹಾರ ಮತ್ತು ಕಪ್ಪು ಹಣದ ದಂಧೆಯಲ್ಲಿ ಶಾಮೀಲಾಗಿರುವ ಆರೋಪದಲ್ಲಿ ರಾಜೇಶ್ ಅಗರ್ ವಾಲ್ ಅವರನ್ನು ಬಂಧಿಸಲಾಗಿದೆ
ಎಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಐಎಎನ್ ಎಸ್ ಗೆ ತಿಳಿಸಿದ್ದಾರೆ.
ಎಸ್ ಕೆ ಜೈನ್ ಮತ್ತು ವಿಕೆ ಜೈನ್ ಸಹೋದರರ ನೆರವಿನೊಂದಿಗೆ ಕಪ್ಪು ಹಣ ದಂಧೆಯಲ್ಲಿ ಅಗರ್ ವಾಲ್ ತೊಡಗಿರುವುದಾಗಿ ಇಡಿ(ಜಾರಿ
ನಿರ್ದೇಶನಾಲಯ) ಅಧಿಕಾರಿಗಳು ವಿವರಿಸಿದ್ದು, ಜೈನ್ ಸಹೋದರರನ್ನು ಮಾರ್ಚ್ 20ರಂದು ಬಂಧಿಸಲಾಗಿತ್ತು.
ಸುಮಾರು 90 ನಕಲಿ ಕಂಪನಿಗಳು ಜಾರಿ ನಿರ್ದೇಶನಾಲಯದ ಕಣ್ಗಾವಲಿನಲ್ಲಿದೆ. ಮಿಸಾ ಭಾರತಿ ಪತಿಯ ಮಿಶೈಲ್ ಪ್ಯಾಕರ್ಸ್ ಅಂಡ್ ಪ್ರಿಂಟರ್ಸ್ ಪ್ರೈ ಲಿ ಕಂಪನಿಗೂ ಅಗರ್ ವಾಲ್ ಸಹಾಯ ಮಾಡಿರುವುದಾಗಿ ಹೇಳಿದೆ. ಅಗರ್ ವಾಲ್ ಅವರನ್ನು ಇಂದು ಸಂಜೆ ಕೋರ್ಟ್ ಗೆ ಹಾಜರುಪಡಿಸುವುದಾಗಿ ಮೂಲಗಳು ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ
Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು
Gujarat: 700 ಕೆ.ಜಿ. ಡ್ರಗ್ಸ್ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ
Bombay high court: ವಯಸ್ಕಳಲ್ಲದ ಪತ್ನಿ ಜತೆ ಒಪ್ಪಿತ ಲೈಂಗಿಕ ಸಂಬಂಧ ರೇ*ಪ್
Jharkhand; ವಿಮಾನದಲ್ಲಿ ತಾಂತ್ರಿಕ ದೋಷ: 2 ಗಂಟೆ ಕಾದ ಪ್ರಧಾನಿ ಮೋದಿ
MUST WATCH
ಹೊಸ ಸೇರ್ಪಡೆ
Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ
Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ
Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು
Criminal case; ಏಕಕಾಲಕ್ಕೆ ಪಾಲಿಕೆ, ಮುಡಾದಲ್ಲಿ ಕೆಲಸ: ನೌಕರ ವಜಾ
Gujarat: 700 ಕೆ.ಜಿ. ಡ್ರಗ್ಸ್ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.