ಪಾತಾಳಗಂಗೆ ಯೋಜನೆ ವಿರೋಧಿಸಿ ಮನವಿ


Team Udayavani, May 23, 2017, 4:54 PM IST

gul1.jpg

ಆಳಂದ: ರಾಜ್ಯ ಸರ್ಕಾರ ತಾಲೂಕಿನಲ್ಲಿ ಪಾತಾಳಗಂಗೆ ಬಗೆದು ತೆಗೆಯಲು ಮುಂದಾಗಿರುವುದು ಪರಿಸರ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಪಾತಾಳ ಗಂಗೆ ಅಲ್ಲಿಯೇ ಇರಲಿ, ಆಕಾಶ ಗಂಗೆ ಇಲ್ಲಿಗೆ ಬರಲಿ ಎಂದು ಒತ್ತಾಯಿಸಿ ಪಾತಾಳಗಂಗೆ ಲೂಟಿ ವಿರೋಧಿ ಹೋರಾಟ ಸಮಿತಿ ಕಾರ್ಯಕರ್ತರು ತಹಶೀಲ್ದಾರಗೆ ಮನವಿ ಸಲ್ಲಿಸಿದರು. 

ಸರ್ಕಾರ ಕ್ವೆಸ್ಟ್‌ ಕಂಪನಿಗೆ ಪಾತಾಳ ಗಂಗೆ ಬಗೆದು ನೀರು ತೆಗೆಯುವ ಕೆಲಸ ಕೊಟ್ಟಿದೆ. ಇದು ಅತ್ಯಂತ ಅವೈಜ್ಞಾನಿಕವಾಗಿದೆ ಎಂದು ನಮ್ಮ ಸಂಘಟನೆಗಳು ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟಿವೆ. ವಿಜ್ಞಾನಿಗಳೂ ವಿರೋಧಿಸಿದ್ದಾರೆ. ಸಂಘಟನೆಗಳ ಸಭೆಗೆ ಈ ಕಂಪನಿಯವರನ್ನು ಕರೆದಿರಲಿಲ್ಲ.

ಕಂಪನಿ ಸಲಹೆ ಮೇರೆಗೆ ಯೋಜನೆಗಾಗಿ ನಿರ್ಣಯ ಕೈಗೊಳ್ಳಲಾಗಿದೆ. ಸರ್ಕಾರದ ಇಂತಹ ನಿಲುವು ಅತ್ಯಂತ ಅಪಾಯಕಾರಿ. ಯೋಜನೆಗೆ ಮೊದಲು ಪ್ರಾಯೋಗಿಕವಾಗಿ ವಿಜಯಪುರ ಜಿಲ್ಲೆ ಇಂಡಿ ಮತ್ತು ಕಲಬರುಗಿ ಜಿಲ್ಲೆಯ ಆಳಂದ ಪ್ರದೇಶ ಬಲಿ ಮಾಡಲು ಹೊರಟಿದೆ. ನಾಡಿನ ಪ್ರಜ್ಞಾವಂತರು, ವಿಜ್ಞಾನಿಗಳು, ಜಲತಜ್ಞರು, ಪರಿಸರವಾದಿಗಳು, ಮಾಧ್ಯಮದವರು ಇದನ್ನು ವಿರೋಧಿಸಿದ್ದಾರೆ.

ಆಳಂದದಲ್ಲಿ ಪಾತಾಳಗಂಗೆ  ಸಂಬಂಧ ಭೂಮಿ ಕೊರೆಯಲು ಬಿಡುವುದಿಲ್ಲ ಎಂದರು. ಪಾತಾಳ ಗಂಗೆ ಬಗೆಯುವ ಬದಲು ನರೇಗಾ ಜಾರಿ ಮಾಡಿ ನೀರು ಸಂಗ್ರಹಿಸಿಕೊಳ್ಳಲು ಬೇಕಾದ ವ್ಯವಸ್ಥೆ ಮಾಡಲಿ. ಬಹುದೊಡ್ಡ ಸಂಖ್ಯೆಯಲ್ಲಿರುವ ದುಡಿವ ಜನರ ಕೈಗೆ ಕೆಲಸವೂ ಸಿಕ್ಕಂತಾಗುತ್ತದೆ.

ಕೆರೆ, ಚೆಕ್‌ ಡ್ಯಾಂ, ಗೋಕಟ್ಟೆ, ಕೃಷಿ ಹೂಂಡ, ಕ್ಷೇತ್ರ ಬದು ನಿರ್ಮಾಣದ ಮೂಲಕ ಬಸಿನೀರು ಸಂಗ್ರಹಣೆಗೆ ಅವಕಾಶವಿದೆ. ಕಳೆದ ವರ್ಷ ನರೇಗಾವನ್ನು ಪರಿಣಾಮಕಾರಿಯಾಗಿ ಜಾರಿ  ಮಾಡಿದ ಕಾರಣ ಅನೇಕ ಕೆರೆಗಳು ತುಂಬಿವೆ. ಅಂತರ್ಜಲ ಮಟ್ಟ ಹೆಚ್ಚಾಗಿದೆ. ಸರ್ಕಾರ ಇಂಥ ಕಾರ್ಯಕ್ಕೆ ರಾಜಕೀಯ ಇಚ್ಛೆ ತೋರಿಸಲಿ.

ಪಾತಾಳಗಂಗೆ ಬಗೆದು ಜನರ ಬದುಕಿಗೆ ಅಪಾಯ ತಂದೊಡ್ಡುವ ಜನವಿರೋಧಿ ನೀತಿ ಕೈಬಿಡಬೇಕು ಎಂದು ಒತ್ತಾಯಿಸಿದರು. ಸರ್ಕಾರವೇನಾದರೂ ಆಳಂದ ತಾಲೂಕಿನಲ್ಲಿ ಪಾತಾಳಗಂಗೆ ಬಗೆಯಲು ಮುಂದಾದರೆ ತೀವ್ರತರ ಹೋರಾಟ ಎದುರಿಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು. ಬಳಿಕ ತಹಶೀಲ್ದಾರ ಬಸವರಾಜ ಎಂ. ಬೆಣ್ಣೆಶಿರೂರ ಅವರಿಗೆ ಮನವಿ ಸಲ್ಲಿಸಿದರು.

ಹಿರಿಯ ಬಂಡಾಯ ಸಾಹಿತಿ ಡಾ| ಪ್ರಭು ಖಾನಾಪುರೆ, ಜನವಾದಿ ಮಹಿಳಾ ಸಂಘಟನೆ ರಾಜ್ಯ ಅಧ್ಯಕ್ಷೆ ಕೆ. ನೀಲಾ, ನಂದಾದೇವಿ ಮಾಗೊಂಡ, ಚಂದಮ್ಮ ಗೊಳಾ, ಮಹಾಂತಪ್ಪ ಮುಲಗೆ, ನಾಗಮ್ಮ ಕೆರಮಗಿ, ನಿಂಗಪ್ಪ ಮಾಗೊಂಡಿ, ಸುದೇವಿ ಮುನ್ನೊಳ್ಳಿ, ರಮೇಶ ಬಿರಾದಾರ, ಸಂತೋಷ ಬಾವಿ, ಬಲಭೀಮ ಪಾಟೀಲ, ಸೋಮಶಂಕರ ಮುನ್ನೋಳಿ, ಬಸವರಾಜ ಯಲೆª, ಖೇಮಲಿಂಗ ಮರಡಿ ಪಾಲ್ಗೊಂಡಿದ್ದರು.  

ಟಾಪ್ ನ್ಯೂಸ್

bidar

Road Mishap: ಬೀದರ್ ನಲ್ಲಿ ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಮೃತ್ಯು, ಮಹಿಳೆ ಗಂಭೀರ

1-s-v

Belgavi;ಸುವರ್ಣ ವಿಧಾನ ಸೌಧದ ಸುತ್ತ ನಿಷೇಧಾಜ್ಞೆ

congress

Maharashtra ಮತದಾನ ಮುಗಿದ ನಂತರ 7% ಹೆಚ್ಚಳ : ECI ಸ್ಪಷ್ಟಪಡಿಸಬೇಕು ಎಂದ ಕಾಂಗ್ರೆಸ್

Mumbai: ಆತ್ಮಹತ್ಯೆಗೂ 15 ನಿಮಿಷದ ಮೊದಲು ತಾಯಿಗೆ ಕರೆ ಮಾಡಿ ಖುಷಿಯಲ್ಲೇ ಮಾತನಾಡಿದ್ದ ಪೈಲೆಟ್

Mumbai: ಆತ್ಮಹತ್ಯೆಗೂ 15 ನಿಮಿಷದ ಮೊದಲು ತಾಯಿಗೆ ಕರೆ ಮಾಡಿ ಖುಷಿಯಲ್ಲೇ ಮಾತನಾಡಿದ್ದ ಪೈಲೆಟ್

Vijayapura: ಬಿಚ್ಚಿಟ್ಟರೆ ಬಣ್ಣ ಬಯಲು, ಬಾಯಿ ಮುಚ್ಚಿ ಕುಳಿತರೆ ಒಳ್ಳೆಯದು: ಯತ್ನಾಳ್

ಬಾಯಿ ಮುಚ್ಚಿ ಕುಳಿತರೆ ಒಳ್ಳೆಯದು, ಇಲ್ಲದಿದ್ದರೆ.. ಸ್ವಪಕ್ಷೀಯರ ವಿರುದ್ಧವೇ ಯತ್ನಾಳ್ ಕಿಡಿ

fir

Karnataka ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿರುದ್ಧ ಲೈಂಗಿ*ಕ ದೌರ್ಜನ್ಯ ಪ್ರಕರಣ

1-ajmir

Ajmer dargah ಶಿವ ದೇವಾಲಯ?; ಕೋಮು ಸೌಹಾರ್ದತೆಗೆ ಭಂಗ ತರುವ ಕುತಂತ್ರ: ಖಾದಿಮರ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಜಮೀನು ವ್ಯಾಜ್ಯ: ಪೆಟ್ರೋಲ್ ಸುರಿದು ಕುಟುಂಬಸ್ಥರ ಸಾಮೂಹಿಕ ಹತ್ಯೆಗೆ ಯತ್ನ

Kalaburagi: ಜಮೀನು ವ್ಯಾಜ್ಯ; ಪೆಟ್ರೋಲ್ ಸುರಿದು ಕುಟುಂಬಸ್ಥರ ಸಾಮೂಹಿಕ ಹತ್ಯೆಗೆ ಯತ್ನ

1-kims

Kalaburagi; 36 ಗಂಟೆಯಲ್ಲಿ ತಾಯಿ ಮಡಿಲು ಸೇರಿದ ಮಗು: ಪೊಲೀಸರ ಭರ್ಜರಿ ಕಾರ್ಯಾಚರಣೆ

ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್‌ ಯತ್ನಾಳ್‌

ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್‌ ಯತ್ನಾಳ್‌

The day will come when our team member will become CM: Yatnal

Kalaburagi; ನಮ್ಮ ತಂಡದವರು ಸಿಎಂ ಆಗುವ ದಿನ ಬರಲಿದೆ: ಗುಡುಗಿದ ಯತ್ನಾಳ್

yatnal

Waqf ವಿರುದ್ದ ಮಠಾಧೀಶರು,ಯತ್ನಾಳ್ ತಂಡದಿಂದ ಮತ್ತೊಂದು ಹಂತದ ಹೋರಾಟ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

1-reee

Udupi; ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾಗಿ ರಮೇಶ್‌ ಕಾಂಚನ್‌ ಆಯ್ಕೆ

bidar

Road Mishap: ಬೀದರ್ ನಲ್ಲಿ ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಮೃತ್ಯು, ಮಹಿಳೆ ಗಂಭೀರ

1-s-v

Belgavi;ಸುವರ್ಣ ವಿಧಾನ ಸೌಧದ ಸುತ್ತ ನಿಷೇಧಾಜ್ಞೆ

congress

Maharashtra ಮತದಾನ ಮುಗಿದ ನಂತರ 7% ಹೆಚ್ಚಳ : ECI ಸ್ಪಷ್ಟಪಡಿಸಬೇಕು ಎಂದ ಕಾಂಗ್ರೆಸ್

Mumbai: ಆತ್ಮಹತ್ಯೆಗೂ 15 ನಿಮಿಷದ ಮೊದಲು ತಾಯಿಗೆ ಕರೆ ಮಾಡಿ ಖುಷಿಯಲ್ಲೇ ಮಾತನಾಡಿದ್ದ ಪೈಲೆಟ್

Mumbai: ಆತ್ಮಹತ್ಯೆಗೂ 15 ನಿಮಿಷದ ಮೊದಲು ತಾಯಿಗೆ ಕರೆ ಮಾಡಿ ಖುಷಿಯಲ್ಲೇ ಮಾತನಾಡಿದ್ದ ಪೈಲೆಟ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.