ಸೂಕ್ತ ಸ್ಥಾನದಲ್ಲಿದ್ದ ಸೂಕ್ತ ವ್ಯಕ್ತಿ-ಅನಿಲ್‌ ಮಾಧವ ದವೆ


Team Udayavani, May 24, 2017, 10:47 AM IST

anil-madhav-dave.jpg

ಎಲ್ಲ ದೃಷ್ಟಿಯಿಂದಲೂ ಅನಿಲ್‌ ದವೆ ನಮ್ಮ ಸಿರಿವಂತಿಕೆಯ, ಸೋಗಿನ ಭಾರತೀಯ ರಾಜಕಾರಣಿಗಳ ಪಾಲಿಗೊಂದು ಅನುಕರಣೀಯ ಮಾದರಿ ಎಂಬಂತಿದ್ದವರು. ಅವರೊಬ್ಬ ಕೇಂದ್ರ ಸಚಿವರಾಗಿದ್ದರೂ ತಮ್ಮ ಕಚೇರಿಗೆ ತೆರಳುತ್ತಿದ್ದುದು ಸೈಕಲ್‌ನಲ್ಲಿ. 

“ಸೂಕ್ತ ಸ್ಥಾನದಲ್ಲಿ ಸೂಕ್ತ ವ್ಯಕ್ತಿ’ ಎಂಬ ಆದರ್ಶದ ಮಾತನ್ನು ನಾವೆಲ್ಲ ಕೇಳಿದ್ದೇವೆ. ಹಾಗೆ ಅನ್ನಿಸಿಕೊಂಡ ಸಚಿವರೊಬ್ಬರನ್ನು ದೇಶ ಮೇ 18ರಂದು ಕಳೆದುಕೊಂಡಿದೆ. ಅವರೇ ಕೇಂದ್ರ ಸರಕಾರದಲ್ಲಿ ಪರಿಸರ ಖಾತೆಯ ಸಚಿವರಾಗಿದ್ದ ಅನಿಲ್‌ ಮಾಧವ ದವೆ. ಆದರೆ ಅವರ ಪರಿಚಯ ದೇಶಕ್ಕೆ ಆದುದು ಅವರ ನಿಧನದ ಬಳಿಕವಷ್ಟೇ ಎಂಬುದೊಂದು ದುರದೃಷ್ಟಕರ ಸಂಗತಿ. ಟಿವಿ ಮಾಧ್ಯಮ ಹಾಗೂ ಸುದ್ದಿ ಮಾಧ್ಯಮಗಳಲ್ಲಿ ಖಾಯಮ್ಮಾಗಿ ಕಾಣಿಸಿಕೊಳ್ಳುತ್ತಿರುವ ನರೇಂದ್ರ ಮೋದಿಯವರ ಸರಕಾರದ ಸಚಿವರ ಪೈಕಿ ರಾಷ್ಟ್ರದ ಜನತೆಗೆ ಕಡಿಮೆ ಪರಿಚಿತರಾಗಿದ್ದ ವ್ಯಕ್ತಿ ಅವರು. 

ಮೊದಲಿನಿಂದಲೂ ಕೇಂದ್ರ ಅಥವಾ ರಾಜ್ಯಗಳ ಸಚಿವರುಗಳ ಪೈಕಿ ತಮ್ಮ ಖಾತೆಗೆ ಅಗತ್ಯವಾದ ಅರ್ಹತೆ ಹೊಂದಿದ್ದ ಅಥವಾ ಹೊಂದಿರುವ ಮಂತ್ರಿಗಳ ಸಂಖ್ಯೆ ತುಂಬ ಚಿಕ್ಕದೆಂದೇ ಹೇಳಬೇಕು. ಎಲ್ಲೋ ಅಲ್ಪ ಸ್ವಲ್ಪ ಶಿಕ್ಷಣ ಪಡೆದಿರುವ ಮಂತ್ರಿಯೊಬ್ಬ ಇಲ್ಲಿ ಶಿಕ್ಷಣ ಸಚಿವನಾಗಬಹುದು ಅಥವಾ ಔಷಧಿ ಇಲ್ಲವೇ ಸಾರ್ವಜನಿಕ ಸ್ವಾಸ್ಥ್ಯದ ಬಗ್ಗೆ ಏನೇನೂ ತಿಳಿವಳಿಕೆಯಿಲ್ಲದ ರಾಜಕಾರಣಿಯೊಬ್ಬ ಆರೋಗ್ಯ ಖಾತೆಯ ಮಂತ್ರಿಯಾಗಬಹುದು. ಅರ್ಥಾತ್‌ ನಮ್ಮ ಸಚಿವರಲ್ಲಿ ಹೆಚ್ಚಿನವರಿಗೆ ಯಶಸ್ವೀ ವೃತ್ತಿಪರರೆನ್ನಿಸಿಕೊಳ್ಳುವ ಯೋಗ್ಯತೆಯಾಗಲೀ ಸಾಮಾಜಿಕ -ರಾಜಕೀಯ ಆಂದೋಲ ನಗಳಲ್ಲಿ ಪಾಲ್ಗೊಳ್ಳಲುಬೇಕಾದ ಅರ್ಹತೆಯಾಗಲೀ ಇಲ್ಲ. ಉದ್ದಿಮೆ, ಕೃಷಿ, ಶಿಕ್ಷಣದಂಥ ಕ್ಷೇತ್ರಗಳಲ್ಲಿ ಕೆಲ ಮಂತ್ರಿ ಮಹೋದ ಯರಿಗೆ ಯಾವ ತೆರನಾದ ಅನುಭವವೂ ಇರುವುದಿಲ್ಲ.

ಆದರೆ ನಮ್ಮ ನೆರೆಯ ಪಾಕಿಸ್ಥಾನದಲ್ಲಿ ಹೀಗಿಲ್ಲ. ಅಲ್ಲಿ ರಾಷ್ಟ್ರೀಯ ಶಾಸನ ಸಭೆ (ಸಂಸತ್ತು) ಅಥವಾ ಪ್ರಾಂತೀಯ ಶಾಸನ ಸಭೆ (ರಾಜ್ಯ ವಿಧಾನ ಸಭೆ)ಗಳಲ್ಲಿ ಸದಸ್ಯರಾಗ ಬಯಸುವವರು ಕನಿಷ್ಠ ಪಕ್ಷ ಯಾವುದಾದರೂ ವಿಶ್ವವಿದ್ಯಾಲಯದ ಪದವಿಯನ್ನು ಹೊಂದಿರಲೇಬೇಕೆಂಬ ನಿಯಮವಿದೆ. ಅಲ್ಲಿನ ಸಂವಿಧಾನದ 62ನೆಯ ವಿಧಿಯಡಿಯಲ್ಲಿ ಉಲ್ಲೇಖೀಸಲಾಗಿರುವ ಶರತ್ತು ಇದು. ಈ ಕ್ರಮ ಪರ್ವೇಜ್‌ ಮುಶರ್ರಫ್ ಅವರ ಆಡಳಿತಾವಧಿಯಲ್ಲಿ ಜಾರಿಗೆ ಬಂತು. ಪಾಕಿಸ್ಥಾನದಲ್ಲಿ ಕಾನೂನನ್ನು ವಿವಿಧ ರೀತಿಗಳಲ್ಲಿ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆಯೆಂಬ ಮಾತಿದೆಯಾದರೂ ಅಲ್ಲಿನ ಸಂವಿಧಾನದ ಈ ಶರತ್ತಿಗೆ ಯಾವುದೇ ಬಾಧಕ ಬಂದಿಲ್ಲ.
1970ರಿಂದೀಚಿನ ವರ್ಷಗಳಲ್ಲಿ ನಮ್ಮಲ್ಲಿ ಕೇಂದ್ರ ಸರಕಾರ ಹಾಗೂ ಕರ್ನಾಟಕ ಸರಕಾರದಲ್ಲಿನ ಕೆಲ ಸಚಿವರುಗಳ ಅರ್ಹತೆ ಹಾಗೂ ಗುಣಮಟ್ಟಗಳಲ್ಲಿ ಇಳಿಕೆಯಾಗಿರುವುದನ್ನು ಗಮನಿಸುತ್ತ ಬಂದಿದ್ದೇನೆ. ಇದಕ್ಕೆ ಮುಖ್ಯ ಕಾರಣ, ಜಾತಿ ಹಾಗೂ ಸಮುದಾಯ ಎಂಬೆರಡು ಅಂಶಗಳಿಗೆ ಪ್ರಾಮುಖ್ಯ ಸಿಕ್ಕಿರುವುದು. ಈಗಂತೂ ರಾಜಕೀಯ ವ್ಯಾಪಾರೀಕರಣಗೊಂಡಿದೆ. 

ಪಕ್ಷದ ನಾಯಕ ರಿಗಾಗಿ, ಪಕ್ಷಕ್ಕಾಗಿ ಅಥವಾ ತನಗಾಗಿ ಹಣ ಸಂಗ್ರಹಿಸುವ ಸಾಮರ್ಥ್ಯ ಒಬ್ಬನಲ್ಲಿ ಎಷ್ಟಿದೆ ಎಂಬುದಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ನಿಧಿಸಂಗ್ರಹ ಎಂಬುದು ಭ್ರಷ್ಟಾಚಾರಕ್ಕೆ ಇರುವ ಪರ್ಯಾಯ ಪದ! ಸ್ವಾತಂತ್ರೊéàತ್ತರ ವರ್ಷಗಳಲ್ಲಿ ಕೂಡ, ಸ್ವಾತಂತ್ರ್ಯ ಹೋರಾಟ (ಅಭ್ಯರ್ಥಿಯ) ಆಯ್ಕೆಗೆ ಮಾನದಂಡವಾಗಿತ್ತಾದರೂ ಕ್ರಮೇಣ ಎಲ್ಲೆಡೆ ಅಲ್ಲದಿದ್ದರೂ ಕನಿಷ್ಠ ದಕ್ಷಿಣ ಭಾರತದಲ್ಲಿ, ಜಾತಿ ಹಾಗೂ ಸಮುದಾಯ ಎಂಬ ಅಂಶಗಳು ಪ್ರಧಾನ ಪಾತ್ರವನ್ನು ನಿರ್ವಹಿಸಿವೆ.

ಒಳ್ಳೆಯ ಮಂತ್ರಿಗಳು ಯಾಕೆ ಸಿಗುತ್ತಿಲ್ಲ ಎಂಬುದಕ್ಕೆ ಇರುವ ಇನ್ನೊಂದು ಕಾರಣವೆಂದರೆ, ಉತ್ತಮ ಶಿಕ್ಷಣಾರ್ಹತೆ, ಪ್ರಾಮಾಣಿಕತೆ ಹಾಗೂ ಸೇವಾ ಸಾಮರ್ಥ್ಯ ಹೊಂದಿರುವ ವ್ಯಕ್ತಿಗಳು ರಾಜಕೀಯದಿಂದ ದೂರವೇ ಉಳಿದಿರುವುದು. ಅಧಿಕ ಮುಖ ಬೆಲೆಯ ನೋಟುಗಳ ಅಮಾನ್ಯಿàಕರಣದಂಥ ದಿಟ್ಟ ಕ್ರಮ ಕೈಗೊಂಡಿರುವ ಪ್ರಧಾನಿ ಮೋದಿ, ಇನ್ನು ಭಾರತದ ರಾಜಕೀಯ ವ್ಯವಸ್ಥೆಯನ್ನೂ “ಅಮಾನ್ಯಿàಕರಣ’ ಪ್ರಕ್ರಿಯೆಗೆ ಒಳಪಡಿಸಬೇಕು. ಅನಿಲ್‌ ದವೆರಂಥ ವ್ಯಕ್ತಿಗಳಿಗೆ ಸಂಸತ್ತು, ರಾಜ್ಯ ವಿಧಾನಸಭೆಗಳನ್ನು ಪ್ರವೇಶಿಸಲು ಅವಕಾಶ ಮಾಡಿಕೊಡಬೇಕು!

ನಮ್ಮ ಮಂತ್ರಿಗಳು ದವೆಯವರಿಂದ ಕಲಿಯಬೇಕಾದ ಪಾಠ: ಎಲ್ಲ ದೃಷ್ಟಿಯಿಂದಲೂ ಅನಿಲ್‌ ದವೆ ನಮ್ಮ ಸಿರಿವಂತಿಕೆಯ, ಸೋಗಿನ ಭಾರತೀಯ ರಾಜಕಾರಣಿಗಳ ಪಾಲಿಗೊಂದು ಅನುಕರಣೀಯ ಮಾದರಿ ಎಂಬಂತಿದ್ದವರು. ಅವರೊಬ್ಬ ಕೇಂದ್ರ ಸಚಿವರಾಗಿದ್ದರೂ ತಮ್ಮ ಕಚೇರಿಗೆ ತೆರಳುತ್ತಿದ್ದುದು ಸೈಕಲ್‌ನಲ್ಲಿ. ನಮ್ಮ ಮಂತ್ರಿಗಳಲ್ಲಿ ಇಂಥ ಆದರ್ಶವನ್ನು ಪಾಲಿಸುವವರು ಎಷ್ಟು ಮಂದಿ ಇದ್ದಾರೆ? 1973ರಲ್ಲಿ  ಎಸ್‌. ಎಂ. ಕೃಷ್ಣ ಬೆಂಗಳೂರಿನ ಸ್ಯಾಂಕಿ ರೋಡ್‌ನ‌ಲ್ಲಿದ್ದ ತಮ್ಮ ಅಧಿಕೃತ ನಿವಾಸದಿಂದ ವಿಧಾನಸೌಧಕ್ಕೆ ಸೈಕಲ್‌ನಲ್ಲಿ ಹೋಗುತ್ತಿದ್ದುದನ್ನು ನಾನೇ ವರದಿ ಮಾಡಿದ್ದಿದೆ. ಆಗ ಅವರು ದೇವರಾಜ ಅರಸರ ಸಂಪುಟದ ಮಂತ್ರಿಯಾಗಿದ್ದರು. ಕೊಲ್ಲಿ ಸಮರದ ಪರಿಣಾಮವಾಗಿ ಪೆಟ್ರೋಲ್‌ ಬೆಲೆ ಶೇ. 80ರಷ್ಟು ಏರಿಕೆಯಾಗಿತ್ತು. ಹೀಗಿದ್ದರೂ ಪೆಟ್ರೋಲ್‌ ಕೇವಲ ಲೀಟರ್‌ಗೆ 2.07ರೂ.ಗೆ ಮಾರಾಟವಾಗುತ್ತಿತ್ತು. ಇಂಥದನ್ನೆಲ್ಲ ಇಂದು ಊಹಿಸಿಕೊಳ್ಳುವುದಾದರೂ ಸಾಧ್ಯವೇ? ಇಂದು ನಮ್ಮ ಗ್ರಾಮ ಪಂಚಾಯತ್‌ಗಳ ಸದಸ್ಯರು ಕೂಡ ಭರ್ಜರಿ ಕಾರುಗಳಲ್ಲಿ ತಿರುಗುತ್ತಿದ್ದಾರೆ. 

ಪರಿಸರಾಭಿವೃದ್ಧಿಯನ್ನು ಆಂದೋಲನವೆಂಬಂತೆ ಪರಿಗಣಿಸಿದ್ದ ದವೆ ನಿಜವಾದ ಅರ್ಥದಲ್ಲಿ ಓರ್ವ ಪರಿಸರವಾದಿಯಾಗಿದ್ದರು. ನದಿಗಳ ಸಂರಕ್ಷಣೆಯ ವಿಷಯದಲ್ಲಿ ಅವರೊಬ್ಬ ತಜ್ಞರಾಗಿದ್ದರು. ತಮ್ಮ ತವರು ರಾಜ್ಯವಾದ ಮಧ್ಯಪ್ರದೇಶದಲ್ಲಿ ಹರಿಯುವ ನರ್ಮದಾ ನದಿಯ ರಕ್ಷಣೆಗೆ ಅವರು ಅವಿರತವಾಗಿ ಶ್ರಮಿಸಿದ್ದರು. ತಮ್ಮ ಖಾತೆಗಳ ಬಗ್ಗೆ ಯಾವುದೇ ಬದ್ಧತೆ ಅಥವಾ ಆಸಕ್ತಿ ಹೊಂದಿರದ ವ್ಯಕ್ತಿಗಳು ಮಂತ್ರಿಗಿರಿಯನ್ನು ದೀರ್ಘ‌ಕಾಲ ಉಳಿಸಿಕೊಳ್ಳುವ ವಿಚಾರದಲ್ಲಿ ತಮ್ಮ ಬೇರೊಂದು ತೆರನ “ತಜ್ಞತೆ’ಯನ್ನು ಬಳಸಿಕೊಳ್ಳುವಲ್ಲಿ ನಿರತರಾಗಿದ್ದರೆ, ಅನಿಲ್‌ ದವೆ ಅವರು ಕೇಂದ್ರ ಸಚಿವರಾಗಿದ್ದುದು ತೀರಾ ಅಲ್ಪಅವಧಿಗೆ- ಕೇವಲ ಹತ್ತು ತಿಂಗಳಷ್ಟೆ. ಅವರು ಈ ಖಾತೆಗೆ ನೇಮಿಸಲ್ಪಟ್ಟದ್ದು 2016ರ ಜುಲೈಯಲ್ಲಿ.

ಹುದ್ದೆಗೆ ತಕ್ಕ ಅರ್ಹತೆಯನ್ನು ಹೊಂದಿದ್ದು, ಮೊದಲಿಗೆ ಕೇಂದ್ರ ಸಚಿವರಾಗಿ, ಮುಂದೆ ಪ್ರಧಾನಿಯಾಗಿ ಕಾರ್ಯನಿರ್ವಹಿಸಿದ ದಾಖಲೆಯಿದ್ದರೆ, ಅದಕ್ಕೆ ಶ್ರೇಷ್ಠ ಉದಾಹರಣೆ. ಡಾ| ಮನಮೋಹನ್‌ ಸಿಂಗ್‌. ಖ್ಯಾತ ಅರ್ಥಶಾಸ್ತ್ರಜ್ಞರಾದ ಅವರು ಆರ್‌ಬಿಐನ ಮಾಜಿ ಗವರ್ನರ್‌ ಕೂಡ ಹೌದು. ಅವರು ಪಿ.ವಿ. ನರಸಿಂಹರಾಯರ ಸರಕಾರದಲ್ಲಿ ವಿತ್ತ ಸಚಿವರಾಗಿದ್ದವರು. ಆರ್‌ಬಿಐ ಗವರ್ನರ್‌ ಆಗಿ ನಿವೃತ್ತಿ ಹೊಂದಿ ಕೇಂದ್ರದ ವಿತ್ತ ಸಚಿವರಾದ ಇನ್ನೊಬ್ಬರೆಂದರೆ ಸರ್‌ ಸಿ.ಡಿ. ದೇಶಮುಖ್‌. ದೇಶದ ಮೂರನೆಯ ವಿತ್ತ ಸಚಿವ ಡಾ| ಜಾನ್‌ ಮಥಾಯ್‌ ಅವರಿಗೆ ವಾಣಿಜ್ಯ ನಿರ್ವಹಣ ಕ್ಷೇತ್ರ ಹಾಗೂ ಅರ್ಥಶಾಸ್ತ್ರದ ಅನುಭವದ ಹಿನ್ನೆಲೆಯಿತ್ತು. ಕೇಂದ್ರ ಸರಕಾರದ ವಿತ್ತೀಯ ವಿಷಯಗಳಲ್ಲಿ ಅವರ ತಜ್ಞತೆಯೆಷ್ಟಿತ್ತೆಂದರೆ ತಾವು ಮಂಡಿಸಬೇಕಿದ್ದ ಒಂದು ಬಜೆಟನ್ನು ಬಾಯ್ದೆರೆಯಾಗಿಯೇ ಪ್ರಸ್ತುತ ಪಡಿಸಿದ್ದರು. ಖ್ಯಾತ ಅರ್ಥಶಾಸ್ತ್ರಜ್ಞ ಡಾ| ವಿಜಯೇಂದ್ರ ಕಸ್ತೂರಿರಂಗ ವರದರಾಜ ರಾವ್‌ ಅವರ ಅರ್ಥಶಾಸ್ತ್ರೀಯ ಪಾಂಡಿತ್ಯವನ್ನು ಬಳಸಿಕೊಳ್ಳುವಲ್ಲಿ ಆಗಿನ ಪ್ರಧಾನಿ ಇಂದಿರಾ ವಿಫ‌ಲರಾದರೆಂದೇ ಹೇಳಬೇಕು. ಆಕೆ ಅವರಿಗೆ ವಿತ್ತ ಖಾತೆಯ ಬದಲಿಗೆ ಇನ್ನೊಂದು ಖಾತೆನೀಡಿದ್ದರು.

ಸಂತಾನ ನಿಯಂತ್ರಣ ಪ್ರಚಾರಕ: ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸಿದವರನ್ನು ನೆನೆಸಿಕೊಳ್ಳುವ ಸಂದರ್ಭದಲ್ಲಿ ಸೂಕ್ತ ವ್ಯಕ್ತಿಗೆ ಸೂಕ್ತ ಅಧಿಕಾರ ಎನ್ನುವ ಉಲ್ಲೇಖದ ಜತೆಗೇ ನೆನಪಿಗೆ ಬರುವ ಇನ್ನೊಂದು ಹೆಸರು ದಿವಂಗತ ಡಾ| ಶ್ರೀಪತಿ ಚಂದ್ರಶೇಖರ್‌ (1918-2001). 1967ರಿಂದ ಕೆಲವು ವರ್ಷಗಳ ಕಾಲ ಅವರು ಕೇಂದ್ರದ ಆರೋಗ್ಯ ಹಾಗೂ ಕುಟುಂಬ ಯೋಜನಾ ಖಾತೆಯ ಸಹಾಯಕ ಸಚಿವರಾಗಿದ್ದರು. ಅಮೆರಿಕದಲ್ಲಿ ಶಿಕ್ಷಣ ಪಡೆದಿದ್ದ ಈ ಡೆಮೋಗ್ರಾಫ‌ರ್‌ ಹಾಗೂ ಸಮಾಜವಾದಿಯನ್ನು ಮಂತ್ರಿಯಾಗಿ ನೇಮಿಸಿಕೊಂಡವರು ಇಂದಿರಾ ಗಾಂಧಿ. ಕುಟುಂಬ ಯೋಜನೆಯ ಪ್ರಚಾರಕ್ಕಾಗಿ ಡಾ| ಚಂದ್ರಶೇಖರ್‌ ಅವರು ಪಟ್ಟಿದ್ದ ಸತತ ಪರಿಶ್ರಮವನ್ನು ಇಂದಿಗೂ ನೆನೆಸಿಕೊಳ್ಳುವವರಿದ್ದಾರೆ. ಆ ದಿನಗಳಲ್ಲಿ ದೇಶದ ಜನಸಂಖ್ಯೆ ಸುಮಾರು 50 ಕೋಟಿ ಮಾತ್ರವೇ ಇದ್ದರೂ ಡಾ| ಚಂದ್ರಶೇಖರ್‌ ಜನಸಂಖ್ಯೆ ಹೆಚ್ಚುತ್ತಿರುವ ಬಗ್ಗೆ ತೀವ್ರ ಚಿಂತಿತರಾಗಿದ್ದರು. 

ಜನಸಂಖ್ಯೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಬಹುದ್ದೇಶಿತ ಕಾರ್ಯಯೋಜನೆಯೊಂದನ್ನು ಅನುಷ್ಠಾನಗೊಳಿಸಿದರು. ಮಹಿಳೆಯರ ಮೇಲೆ ಕಾನೂನಿನ ಒತ್ತಡ ಹಾಕದೆ ಪುರುಷರು ಸ್ವಯಂಪ್ರೇರಿತ ವ್ಯಾಸೆಕ್ಟಮಿ ಮಾಡಿಕೊಳ್ಳುವಂತೆ, ಸ್ತ್ರೀಯರು ಸ್ವ- ಇಚ್ಛೆಯಿಂದ ಗರ್ಭಪಾತ ಮಾಡಿಕೊಳ್ಳಲು ಮುಂದಾಗುವಂತೆ ಪ್ರೇರಣೆ ನೀಡುವುದು ಈ ಯೋಜನೆಯ ಉದ್ದೇಶಗಳಲ್ಲಿ ಒಂದು. ಗಾಂಧೀಜಿಯಂತೆಯೇ ಚಂದ್ರಶೇಖರ್‌ ಕೂಡ ದಾಂಪತ್ಯ ಸನ್ಯಾಸವನ್ನು ಪ್ರತಿಪಾದಿಸಿ ವಿವಾಹಿತ ದಂಪತಿಗಳ ಮನವೊಲಿಸಲು ಯತ್ನಿಸಿದರು. ಅದುವರೆಗೂ ದೇಶದಲ್ಲಿದ್ದ ಕುಟುಂಬ ಯೋಜನೆಯ ಲಕ್ಷ್ಯ ಮಹಿಳೆಯರ ಮೇಲಷ್ಟೆ ಕೇಂದ್ರೀಕೃತವಾಗಿತ್ತು. ಟ್ಯುಬೆಕ್ಟಮಿ ಮಾಡಿಸಿಕೊಳ್ಳುವಂತೆ ಮಹಿಳೆಯರ ಮನವೊಲಿಸಲಾಗುತ್ತಿತ್ತು. ಜನತಾ ಪಕ್ಷದ ಸರಕಾರದಲ್ಲಿ ರಾಜ್‌ನಾರಾಯಣ್‌ ಈ ಖಾತೆಯ ಸಚಿವರಾಗಿದ್ದಾಗ, ಕುಟುಂಬ ಯೋಜನೆಯ ಹೆಸರು ಬದಲಾಯಿತು. ಕುಟುಂಬ ಕಲ್ಯಾಣ ಎಂಬ ಹೊಸ ಹೆಸರನ್ನು ಇರಿಸಲಾಯಿತು. 

ತೆಲಂಗಾಣದ ರಾಜಮಹೇಂದ್ರಿಯವರಾದ ಡಾ| ಚಂದ್ರಶೇಖರ್‌ ಇನ್ನೊಂದು ಕಾರಣಕ್ಕಾಗಿ ತಮ್ಮ ಜನಪ್ರಿಯತೆಯನ್ನು ಕಳೆದುಕೊಂಡರು. ರಾಜಕೀಯದ ಬಗ್ಗೆ ಹೆಚ್ಚಿನ ತಿಳಿವಳಿಕೆಯಿಲ್ಲದವರಾಗಿದ್ದ ಈ ಬುದ್ಧಿಜೀವಿ ಗೋಮಾಂಸ ಭಕ್ಷಣೆಯನ್ನು ಪ್ರತಿಪಾದಿಸಿದರು. ಆಗಿನ ಜನಸಂಘ ಇದೇ ಕಾರಣಕ್ಕಾಗಿ ಅವರ ಮೇಲೆ ಮುಗಿಬಿತ್ತು. ಇಲ್ಲಿಗೆ ಅವರ ರಾಜಕೀಯ ಜೀವನವೂ ಆಡಳಿತ ಸಾಮರ್ಥ್ಯವೂ ಇತಿಶ್ರೀ ಆಯಿತು. ಮುಂದೆ ಅವರು ಅಮೆರಿಕಕ್ಕೆ ಹೋಗಿ ಬಹುತೇಕ ಅನಾಮಿಕರಾಗಿಯೇ ಮರಣ ಕಂಡರು.
 
ನಮ್ಮ ದೇಶದಲ್ಲಿ ಇದುವರೆಗೂ ನಿವೃತ್ತ ಮಿಲಿಟರಿ ಅಧಿಕಾರಿಗಳ ಪೈಕಿ ಯಾರೊಬ್ಬರನ್ನೂ ರಕ್ಷಣಾ ಸಚಿವರನ್ನಾಗಿ ನೇಮಿಸಿಕೊಳ್ಳುವ ಕೆಲಸ ಆಗಿಲ್ಲ. ನಮ್ಮ ಪ್ರಥಮ ಪ್ರಧಾನಿ ಜವಾಹರಲಾಲ್‌ ನೆಹರೂ ಅವರು ಈ ಹುದ್ದೆಗೆ ಯೋಗ್ಯರಲ್ಲದಿದ್ದ ವಿ. ಕೆ. ಕೃಷ್ಣ ಮೆನೋನ್‌ ಅವರನ್ನು ನೇಮಿಸಿಕೊಂಡರು.

1962ರಲ್ಲಿ ಚೀನೀಯರು ಭಾರತಕ್ಕೆ ಮಾಡಿದ್ದೇನು ಎಂಬುದು ಇಂದು ಎಲ್ಲರಿಗೂ ಗೊತ್ತಿದೆ. ದೇಶದಲ್ಲೇ ಪ್ರಥಮ ಬಾರಿಗೆ ಈಗ ಭೂತಪೂರ್ವ ಭೂಸೇನಾ ಮುಖ್ಯಸ್ಥರೊಬ್ಬರನ್ನು ಕೇಂದ್ರ ಸಚಿವರನ್ನಾಗಿ ಹೊಂದಿದ್ದೇವೆ. (ಜ| ವಿ.ಕೆ. ಸಿಂಗ್‌). ಆದರೆ ಅವರು ರಕ್ಷಣಾ ಸಚಿವರಲ್ಲ; ವಿದೇಶಾಂಗ ವ್ಯವಹಾರಗಳ ಖಾತೆಯ ಸಹಾಯಕ ಸಚಿವರು. ನರೇಂದ್ರ ಮೋದಿಯವರಂಥ ಸಮರ್ಥ ಪ್ರಧಾನಿಯೊಬ್ಬರು ಇನ್ನು ಮುಂದಾದರೂ ಕೇಂದ್ರ ಸಚಿವ ಸಂಪುಟಕ್ಕೆ ಅತ್ಯಗತ್ಯವಾಗಿರುವ ವಿಷಯ ತಜ್ಞತೆ-ಕಾರ್ಯಕೌಶಲವಿರುವ ಸಮರ್ಥರನ್ನು ನೇಮಿಸಿಕೊಳ್ಳುವತ್ತ ಗಮನಹರಿಸಬೇಕಾಗಿದೆ.

ಅರಕೆರೆ ಜಯರಾಮ್‌

ಟಾಪ್ ನ್ಯೂಸ್

1-eena

ವಚನ ಸಾಹಿತ್ಯದಲ್ಲಿ ಶ್ರೀಕೃಷ್ಣನ ಮಾತು: ಬೃಹತ್‌ ಗೀತೋತ್ಸವ ಕಾರ್ಯಕ್ರಮದಲ್ಲಿ ವೀಣಾ ಬನ್ನಂಜೆ

1-cocco

230 ರೂ. ಗಡಿ ದಾಟಿದ ಹಸಿ ಕೊಕ್ಕೊ ಧಾರಣೆ

1-shadaa

ರಾಜ್ಯ ಸರಕಾರಿ ನೌಕರರ ಸಂಘ ಅಧ್ಯಕ್ಷ ಷಡಾಕ್ಷರಿ ಮರು ಆಯ್ಕೆ

suicide

Belgavi; ಹೆರಿಗೆ ಬಳಿಕ ಮತ್ತೋರ್ವ ಬಾಣಂತಿ ಸಾವು

1-havy

Havyaka Sammelana; ಅಡಿಕೆ ಬೆಳೆಗಾರರ ಹಿತ ರಕ್ಷಣೆಗೆ ಕೇಂದ್ರ ಬದ್ಧ: ಸಚಿವ ಜೋಶಿ

Kharge (2)

Manmohan Singh ಅಂತ್ಯಕ್ರಿಯೆ ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿ ನಡೆಸಲು ಖರ್ಗೆ ಮನವಿ

1-weqeqw

Traffic; ಉಡುಪಿ ನಗರದಲ್ಲಿ 5 ದಿನ ರಸ್ತೆ ಮಾರ್ಗಗಳಲ್ಲಿ ಮಾರ್ಪಾಡು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅತೃಪ್ತಿ ಹಣಿಯಲು ಚಾಣಕ್ಯ ಸಂದೇಶದ ತಂತ್ರ 

ಅತೃಪ್ತಿ ಹಣಿಯಲು ಚಾಣಕ್ಯ ಸಂದೇಶದ ತಂತ್ರ 

ಮೇಲ್ಮನೆಗೆ ಗೊಗೋಯ್‌, ವಿಪಕ್ಷ ಸಭಾತ್ಯಾಗ

ಮೇಲ್ಮನೆಗೆ ಗೊಗೋಯ್‌, ವಿಪಕ್ಷ ಸಭಾತ್ಯಾಗ

ಸಂವಿಧಾನ: ಅಂಬೇಡ್ಕರ್‌ ಜತೆಗೆ ನಪಿಸಿಕೊಳ್ಳಬೇಕಾದವರು

ಸಂವಿಧಾನ: ಅಂಬೇಡ್ಕರ್‌ ಜತೆಗೆ ನೆನಪಿಸಿಕೊಳ್ಳಬೇಕಾದವರು

kala-43

ಬ್ರಿಟನ್‌ ವಿತ್ತದ ಕೀಲಿ ಕೈ ಭಾರತೀಯ ಮೂಲದವರ ಕೈಯಲ್ಲಿ

jai-43

ನೂತನ ಸಚಿವ ಪರಿವಾರ -ಬಿಜೆಪಿಗೆ ಹೊರೆಯೇ, ವರವೇ?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-eena

ವಚನ ಸಾಹಿತ್ಯದಲ್ಲಿ ಶ್ರೀಕೃಷ್ಣನ ಮಾತು: ಬೃಹತ್‌ ಗೀತೋತ್ಸವ ಕಾರ್ಯಕ್ರಮದಲ್ಲಿ ವೀಣಾ ಬನ್ನಂಜೆ

1-cocco

230 ರೂ. ಗಡಿ ದಾಟಿದ ಹಸಿ ಕೊಕ್ಕೊ ಧಾರಣೆ

1-sid-male

Udupi; ಸಿದ್ದಾಪುರ ಪರಿಸರದಲ್ಲಿ ಮಳೆ

1-adaa

ಕೃಷಿ ಬೆಲೆ ಆಯೋಗದ ಅಧ್ಯಕ್ಷರಾಗಿ ಅಶೋಕ ದಳವಾಯಿ ನೇಮಕ

1-shadaa

ರಾಜ್ಯ ಸರಕಾರಿ ನೌಕರರ ಸಂಘ ಅಧ್ಯಕ್ಷ ಷಡಾಕ್ಷರಿ ಮರು ಆಯ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.