ಐಪಿಎಲ್ ಫೈನಲ್ಗೂ ಮುನ್ನ ಇನ್ಸೈಡರ್ ಫಲಿತಾಂಶ!
Team Udayavani, May 24, 2017, 11:38 AM IST
ಹೊಸದಿಲ್ಲಿ: ರವಿವಾರ ಮುಕ್ತಾಯವಾದ ಐಪಿಎಲ್ ಅಂತಿಮ ಪಂದ್ಯದ ಫಲಿತಾಂಶ ಮೊದಲೇ ಫಿಕ್ಸ್ ಆಗಿತ್ತೇ? ಇಂಥದೊಂದು ಅನುಮಾನಕ್ಕೆ ಕಾರಣವಾಗು ವಂತಹ ಸರಣಿ ಟ್ವೀಟ್ಗಳು ಬೆಳಕಿಗೆ ಬಂದಿವೆ.
ಆದರೆ ಸ್ವತಃ ಟ್ವೀಟ್ ಮಾಡಿದ ವ್ಯಕ್ತಿಯೇ ಫಿಕ್ಸಿಂಗ್ ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾನೆ. ಕ್ರಿಕೆಟ್ ಇನ್ಸೈಡರ್ ಎಂಬ ಟ್ವೀಟ್ ಖಾತೆಯಿಂದ ರವಿವಾರ ಮುಂಜಾನೆಯೇ ಪಂದ್ಯದ ಫಲಿತಾಂಶಗಳನ್ನು ಮೊದಲೇ ಊಹಿಸಿ ಟ್ವೀಟ್ಗಳನ್ನು ಮಾಡಲಾಗಿತ್ತು. ಆತ ಮಾಡಿರುವ ಅಷ್ಟೂ ಟ್ವೀಟ್ಗಳು ಸತ್ಯವಾಗಿರುವುದು ಅಚ್ಚರಿಯಾಗಿದೆ.
ಈ ಬಗ್ಗೆ ಕ್ರಿಕೆಟ್ ಇನ್ಸೈಡರ್ ಖಾತೆಯಿಂದ ಬಂದ ಸ್ಪಷ್ಟನೆ ಹೀಗಿದೆ: “ನಾನು ಕೇವಲ ಫಲಿತಾಂಶದ ಊಹೆ ಮಾಡಿದ್ದೇ ನಷ್ಟೆ. ಅದು ಸತ್ಯವಾಗಿದೆ. ಇದಕ್ಕೆ ಅದೃಷ್ಟವೇ ಕಾರಣ ಹೊರತು ಮತ್ತೇನಿಲ್ಲ. ಪಂದ್ಯ ಫಿಕ್ಸ್ ಆಗಿದೆ ಎಂಬುದೆಲ್ಲ ಸುಳ್ಳು. ಮುಂಬರುವ ಚಾಂಪಿಯನ್ಸ್ ಟ್ರೋಫಿಗೂ ಈ ಊಹೆಗಳನ್ನು ಮುಂದುರಿಸಲಿದ್ದೇನೆ’.
ಆದರೆ 2013ರ ಐಪಿಎಲ್ ಹಗರಣದ ಅನಂತರ ಜನರು ಪಂದ್ಯಗಳನ್ನು ಫಿಕ್ಸಿಂಗ್ ದೃಷ್ಟಿಯಿಂದ ನೋಡುತ್ತಿರುವು ದರಿಂದ ಕ್ರಿಕೆಟ್ ಇನ್ಸೈಡರ್ ಸರಣಿ ಟ್ವೀಟ್ಗಳು ಭಾರೀ ಸುದ್ದಿ ಮಾಡಿವೆ. ರವಿವಾರ ರಾತ್ರಿ 8 ಗಂಟೆಯಿಂದ ಅಂತಿಮ ಪಂದ್ಯ ಶುರುವಾಗಿದೆ. ಅಂದು ಬೆಳಗ್ಗೆ 3.46ರಿಂದ 4.17 ನಿಮಿಷದ ಅವಧಿಯಲ್ಲಿ ಟ್ವೀಟ್ಗಳು ಪ್ರಕಟವಾಗಿವೆ.
ಇವು ಇನ್ಸೈಡರ್ ಟ್ವೀಟ್ಗಳು…
1.ಟಾಸ್ ಗೆಲುವು ಮುಖ್ಯವಲ್ಲ, ಮೊದಲು ಬೌಲಿಂಗ್ ಮಾಡುವುದು ಪುಣೆ. ಒಂದು ವೇಳೆ ಪುಣೆ ಟಾಸ್ ಗೆದ್ದರೆ ಬೌಲಿಂಗ್, ಮುಂಬೈ ಟಾಸ್ ಗೆದ್ದರೆ ಬ್ಯಾಟಿಂಗ್ ಆಯ್ಕೆ ಮಾಡಿಕೊಳ್ಳುತ್ತದೆ. 2. ಮುಂಬೈ ಮೊದಲು ಬ್ಯಾಟಿಂಗ್ ಮಾಡಿ 120ರಿಂದ 130 ರನ್ ಗಳಿಸಲಿದೆ, 3. ಕೊನೆಯ ಓವರ್ನಲ್ಲಿ ಮುಂಬೈ ಟ್ರೋಫಿ ಗೆಲ್ಲಲಿದೆ, 4. ಸ್ಮಿತ್ ಅತಿ ಹೆಚ್ಚು ರನ್ ಗಳಿಸುತ್ತಾರೆ, 5. ಪೊಲಾರ್ಡ್ ಒಂದೇ ಸಿಕ್ಸರ್ ಬಾರಿಸುತ್ತಾರೆ, 6. ಪಂದ್ಯದಲ್ಲಿ ಯಾವುದೇ ನೋಬಾಲ್ಗಳು ದಾಖಲಾಗುವುದಿಲ್ಲ, 7. ಪಾರ್ಥಿವ್ 10 ರನ್ ಒಳಗೆ ಔಟಾಗುತ್ತಾರೆ, 8. ತ್ರಿಪಾಠಿ ಕೂಡ 10 ರನ್ ಒಳಗೆ ಔಟಾಗುತ್ತಾರೆ. ಇವೆಲ್ಲವೂ ನಿಜವಾಗಿವೆ!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BGT: ಆಸೀಸ್ ಮಾಧ್ಯಮದ ವಿರುದ್ದ ವಿರಾಟ್ ಗರಂ: ಏರ್ಪೋರ್ಟ್ ನಲ್ಲಿ ವರದಿಗಾರ್ತಿ ಜತೆ ಜಗಳ
Warner-Ashwin; 2024ರಲ್ಲಿ ವಿದಾಯ ಹೇಳಿದ್ದು ಬರೋಬ್ಬರಿ 28 ಕ್ರಿಕೆಟಿಗರು; ಇಲ್ಲಿದೆ ಪಟ್ಟಿ
INDvAUS: ಶಮಿ ವಿರುದ್ದ ನಿಂತರೇ ನಾಯಕ ರೋಹಿತ್?; ವೇಗಿಗೆ ಆಸೀಸ್ ಪ್ರವಾಸ ಕಷ್ಟ!
WTC 25; ಕಠಿಣವಾಯ್ತು ಭಾರತದ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಹಾದಿ; ಹೀಗಿದೆ ಲೆಕ್ಕಾಚಾರ
R.Ashwin retirement: ಅಶ್ವಿನ್ ವಿದಾಯದ ಸುತ್ತಮುತ್ತ…
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.