ವಿ-ಗಾರ್ಡ್ ಆದಾಯದಲ್ಲಿ ಶೇ.15.5ರಷ್ಟು ಹೆಚ್ಚಳ
Team Udayavani, May 24, 2017, 12:24 PM IST
ಬೆಂಗಳೂರು: ಗೃಹ ಬಳಕೆಯ ಎಲೆಕ್ಟ್ರಿಕಲ್ ಹಾಗೂ ಎಲೆಕ್ಟ್ರಾನಿಕ್ ವಸ್ತುಗಳ ಮಾರಾಟದಲ್ಲಿ ದೇಶದ ಅತಿ ದೊಡ್ಡ ಸಂಸ್ಥೆ ಎನಿಸಿರುವ “ವಿ-ಗಾರ್ಡ್ ಇಂಡಸ್ಟ್ರೀಸ್ ಲಿಮಿಟೆಡ್’ ಕಂಪನಿಯು 2016-17ನೇ ಆರ್ಥಿಕ ವರ್ಷದಲ್ಲಿ 2.150.62 ಕೋಟಿ ರೂ. ನಿವ್ವಳ ಆದಾಯ ಗಳಿಸಿದ್ದು, ಇದು ಕಳೆದ ಆರ್ಥಿಕ ವರ್ಷಕ್ಕೆ ಹೋಲಿಸಿದರೆ ಶೇ.15.5ರಷ್ಟು ಹೆಚ್ಚಾಗಿದೆ.
ಕಂಪನಿಯು 2015-16ರಲ್ಲಿ 1,862.28 ಕೋಟಿ ರೂ. ನಿವ್ವಳ ಆದಾಯ ಗಳಿಸಿತ್ತು. ಅದೇ ರೀತಿ 2016-17ನೇ ಆರ್ಥಿಕ ವರ್ಷದಲ್ಲಿ 151.80 ಕೋಟಿ ರೂ. ತೆರಿಗೆ ನಂತರದ ಲಾಭ ಗಳಿಸಿದ್ದು, ಹಿಂದಿನ ವರ್ಷಕ್ಕೆ ಹೋಲಿಸಿದರೆ ತೆರಿಗೆ ನಂತರದ ಲಾಭದಲ್ಲಿ ಶೇ.36ರಷ್ಟು ಏರಿಕೆ ಆಗಿದೆ.
ಅಲ್ಲದೆ ಮಾ.31ಕ್ಕೆ ಕೊನೆಗೊಂಡ ಪ್ರಸಕ್ತ ಆರ್ಥಿಕ ವರ್ಷದ ತ್ತೈಮಾಸಿಕದಲ್ಲಿ ಕಂಪನಿಯು 41.86 ಕೋಟಿ ರೂ. ತೆರಿಗೆ ನಂತರದ ಲಾಭ ಗಳಿಸಿದೆ. 2016-17ನೇ ಆರ್ಥಿಕದ ನಾಲ್ಕನೇ ತ್ತೈಮಾಸಿಕದಲ್ಲಿ 623.26 ಕೋಟಿ ರೂ. ಕಾರ್ಯನಿರ್ವಹಣೆಯ ನಿವ್ವಳ ಆದಾಯ ಗಳಿಸಿದ್ದು, ಈಕ್ವಿಟಿಯ ಮೇಲೆ ಶೇ.70ರಷ್ಟು ಡಿವಿಡೆಂಡ್ ಶಿಫಾರಸು ಮಾಡಲಾಗಿದ್ದು, ಇದು ಪ್ರತಿ ಷೇರಿಗೆ 0.70 ರೂ. ಆಗಲಿದೆ.
4ನೇ ತ್ತೈಮಾಸಿಕದಲ್ಲಿ ಬೇಸಿಗೆ ಸಂಬಂಧಿ ಉತ್ಪನ್ನಗಳಲ್ಲಿ ಹೆಚ್ಚು ಬೇಡಿಕೆ ಕಂಡು ಬಂದಿದೆ. ನೋಟು ಅಮಾನ್ಯಿಕರಣದ ಹೊರತಾಗಿಯೂ ಕಂಪನಿ ಸುಸ್ಥಿರತೆ ಕಾಪಾಡಿಕೊಂಡಿದೆ ಎಂದು ವಿ-ಗಾರ್ಡ್ ವ್ಯವಸ್ಥಾಪಕ ನಿರ್ದೇಶಕ ಮಿಥುನ್ ಕೆ. ಚಿತ್ತಿಲಪಿಲ್ಲಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Sambhal Mosque Survey: ಜಾಮಾ ಮಸೀದಿಯ ಸಮೀಕ್ಷೆಗೆ ತಡೆ ನೀಡಿದ ಸುಪ್ರೀಂಕೋರ್ಟ್
Gadget Review: iPhone 16: ಆಕರ್ಷಕ ವಿನ್ಯಾಸ, ಉತ್ತಮ ಕ್ಯಾಮರಾ, ವೇಗದ ಕಾರ್ಯಾಚರಣೆ
Sandalwood ಈ ವರ್ಷ 220+ ಸಿನಿಮಾ ತೆರೆಗೆ; ರಿಲೀಸ್ ಭರಾಟೆ ಬಲು ಜೋರು
Jammu Kashmir: ದೊಡ್ಡ ಯೋಜನೆ ವಿಫಲ; ಉಗ್ರರ ಅಡಗುತಾಣವನ್ನು ಧ್ವಂಸ ಮಾಡಿದ ಸೇನೆ
Shahapur: ಕಾರು-ಬೈಕ್ ಮುಖಾಮುಖಿ ಡಿಕ್ಕಿ- ಇಬ್ಬರ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.