ತಾಯಿ ಕೊಂದು ಸ್ಮೈಲಿ ಬರೆದ ಪುತ್ರ!
Team Udayavani, May 25, 2017, 2:30 AM IST
ಮುಂಬಯಿ: ಆರಂಭದಲ್ಲೊಂದು ಸ್ಮೈಲಿ ಚಿತ್ರ, ಅನಂತರ ; ‘ಆಕೆಯಿಂದ ಸಾಕಷ್ಟು ರೋಸಿಹೋಗಿದ್ದೆ. ಸಾಧ್ಯವಾದರೆ ನನ್ನನ್ನು ಹಿಡಿಯಿರಿ ಮತ್ತು ಗಲ್ಲಿಗೇರಿಸಿ…’ ಹೆತ್ತ ತಾಯಿಯನ್ನೇ ಚಾಕುವಿನಿಂದ ಇರಿದು ಕೊಂದ ಮುಂಬೈನ ಯುವಕನೊಬ್ಬ ಆಕೆಯದೇ ರಕ್ತದಿಂದ ಶವದ ಪಕ್ಕ ಬರೆದ ಸಂದೇಶವಿದು! ಇಲ್ಲಿ ತಾಯಿಯನ್ನು ಹತ್ಯೆಗೈದಾತ ಪೊಲೀಸ್ ಅಧಿಕಾರಿಯೊಬ್ಬರ ಮಗ ಎಂಬುದು ಅಚ್ಚರಿಯ ಸಂಗತಿ.
ಒಂದೊಮ್ಮೆ ದೇಶಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಶೀನಾ ಬೋರಾ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿದ್ದ ಮುಂಬೈ ಪೊಲೀಸ್ ಅಧಿಕಾರಿ ದ್ಯಾನೇಶ್ವರ್ ಗನೋರೆ ಅವರ ಪತ್ನಿ ಶವವಾಗಿ ಪತ್ತೆಯಾಗಿದ್ದಾರೆ. ಅಧಿಕಾರಿಯ ಪುತ್ರ ಸಿದ್ಧಾಂತ್ ಎಂಬಾತನೇ ತನ್ನ ತಾಯಿಯನ್ನು ಹತ್ಯೆಗೈದು, ಆಕೆಯದೇ ರಕ್ತದಲ್ಲಿ ‘ಸ್ಮೈಲಿ’ಯೊಂದಿಗಿನ ಸಂದೇಶ ಬರೆದು ಪರಾರಿಯಾಗಿದ್ದಾನೆ. ಬುಧವಾರ ನಸುಕಿನ ಒಂದು ಗಂಟೆ ಹೊತ್ತಿಗೆ ಪೊಲೀಸ್ ಅಧಿಕಾರಿ ದ್ಯಾನೇಶ್ವರ್ ವಕೋಲಾದಲ್ಲಿರುವ ಮನೆಗೆ ಹೋದಾಗ ಅವರ ಪತ್ನಿ ಶವ ರಕ್ತದ ಮಡುವಿನಲ್ಲಿ ಬಿದ್ದಿತ್ತು. ಮೈಮೇಲೆ ಐದಾರು ಇರಿದ ಗಾಯಗಳಿದ್ದವು.
ಮುಂಬಯಿಯ ನ್ಯಾಶನಲ್ ಕಾಲೇಜಿನಲ್ಲಿ ಎಂಜಿನಿಯರಿಂಗ್ ಓದುತ್ತಿದ್ದ ಸಿದ್ಧಾಂತ್ ವಿದ್ಯಾಭ್ಯಾಸವನ್ನು ಅರ್ಧಕ್ಕೇ ಮೊಟಕುಗೊಳಿಸಿದ್ದ. ಅಲ್ಲದೆ ಪ್ರತಿನಿತ್ಯ ತಡವಾಗಿ ಮನೆಗೆ ಬರುತ್ತಿದ್ದ. ಈ ಬಗ್ಗೆ ಮಗನನ್ನು ಎಚ್ಚರಿಸಿದ್ದ ತಾಯಿ, ಆತನಿಗೆ ಪಾಕೆಟ್ ಮನಿ ನೀಡುವುದನ್ನು ನಿಲ್ಲಿಸಿದ್ದರು. ಇದೇ ಕಾರಣಕ್ಕಾಗಿ ಆತ ತಾಯಿಯನ್ನು ಕೊಂದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
‘ಮಂಗಳವಾರ ರಾತ್ರಿ ಕೆಲಸ ಮುಗಿಸಿ 11 ಗಂಟೆಗೆ ಮನೆಗೆ ಹೋದಾಗ ಬಾಗಿಲಿಗೆ ಬೀಗ ಹಾಕಿತ್ತು. ತಾಯಿ-ಮಗ ಹೊರಗೆ ಹೋಗಿರಬಹುದು ಅಂದುಕೊಂಡು ಎರಡು ತಾಸು ಮನೆ ಹೊರಗೇ ಕಾದು ಕುಳಿತೆ. ಕಡೆಗೆ ಬಾಗಿಲ ಬಳಿಯಿದ್ದ ಡಸ್ಟ್‌ಬಿನ್‌ನಲ್ಲಿ ಮನೆಯ ಕೀ ಸಿಕ್ಕಿತ್ತು. ಮನೆ ಒಳಹೋಗಿ ನೋಡಿದಾಗ ಬೆಡ್‌ರೂಮ್‌ನಲ್ಲಿ ನನ್ನ ಪತ್ನಿ ರಕ್ತದ ಮಡುವಲ್ಲಿ ಬಿದ್ದಿದ್ದಳು’ ಎಂದು ದ್ಯಾನೇಶ್ವರ್ ಪೊಲೀಸರಿಗೆ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ
Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ
Air Pollution: ದಿಲ್ಲಿ ಗಾಳಿಯೇ ವಿಷ, ಒಂದು ದಿನದ ಉಸಿರಾಟ 25 ಸಿಗರೇಟಿಗೆ ಸಮ!
India: ಹಿರಿಯ ನಾಗರಿಕರ ಭದ್ರತೆಗೆ ಶೀಘ್ರ ಹೊಸ ನೀತಿ: ಕೇಂದ್ರ
Madras HC: ಆಲಿಂಗನ, ಚುಂಬನ ಹರೆಯದ ಪ್ರೇಮಿಗಳಲ್ಲಿ ಸಾಮಾನ್ಯ
MUST WATCH
ಹೊಸ ಸೇರ್ಪಡೆ
Belagavi: ವಿವಾಹಿತ ಮಹಿಳೆ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ನಡೆಸಿದ ನೆರೆಹೊರೆಯವರು!
Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ವಿಧಿವಶ
SMAT 2024: ಸಯ್ಯದ್ ಮುಷ್ತಾಕ್ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ
ಹೆದ್ದಾರಿ ತಡೆ ನಡೆಸಿದ ಆರೋಪ; ಸುಳ್ಯ, ಬೈಂದೂರು ಶಾಸಕರ ಸಹಿತ ಹಲವರ ವಿರುದ್ಧ ಪ್ರಕರಣ
IPL Auction: ಸಂಪೂರ್ಣ ಐಪಿಎಲ್ ಹರಾಜು ನಡೆಸಲಿದ್ದಾರೆ ಮಲ್ಲಿಕಾ ಸಾಗರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.