ಭಾರತದ ಸೇನಾ ನೆಲೆ ಧ್ವಂಸ ಪಾಕ್ ವಿಡಿಯೋ ಬಿಡುಗಡೆ, ಅದು ನಕಲಿ !
Team Udayavani, May 25, 2017, 11:37 AM IST
ನವದೆಹಲಿ: ನಿಯಂತ್ರಣ ರೇಖೆಯಲ್ಲಿ ಪಾಕ್ ನೆಲೆ ಧ್ವಂಸಗೊಳಿಸಿದ್ದಾಗಿ ಭಾರತ ಹೇಳಿದ ಮಾರನೇ ದಿನ, ಮೇ 13ರಂದು ನಾವೂ ಭಾರತದ ನೆಲೆಗಳನ್ನು ಧ್ವಂಸಗೊಳಿಸಿದ್ದಾಗಿ ಪಾಕ್ ಸೇನೆ ಹೇಳಿದೆ. ನಮ್ಮ ನಾಗರಿಕ ಪ್ರದೇಶಗಳ ಮೇಲೆ ದಾಳಿ ನಡೆಸುತ್ತಿದ್ದ ಭಾರತದ ಬಂಕರ್ಗಳನ್ನು ನಾಶ ಮಾಡಿದ್ದಾಗಿ ಅದು ಹೇಳಿದೆ. ಈ ಬಗ್ಗೆ 87 ಸೆಕೆಂಡ್ಗಳ ವಿಡಿಯೋ ಒಂದನ್ನು ಬಿಡುಗಡೆ ಮಾಡಿದೆ.
ಈ ಬಗ್ಗೆ ಫೇಸ್ಬುಕ್ನಲ್ಲಿ ವಿಸ್ತೃತ ಹೇಳಿಕೆಯನ್ನು ಪಾಕ್ ಸೇನಾ ವಕ್ತಾರ ಮೇಣ ಜಣ ಆಸಿಫ್ಗ ಫೂರ್ ಪೋಸ್ಟ್ ಮಾಡಿದ್ದಾರೆ. ಆದರೆ ಪಾಕ್ ಸೇನೆ ಬಿಡುಗಡೆ ಮಾಡಿದ ಈ ವಿಡಿಯೋ ಸಂಪೂರ್ಣ ನಕಲಿ ಎಂದು ಭಾರತೀಯ ಸೇನೆ ಹೇಳಿದೆ. ವಿಡಿಯೋದಲ್ಲಿರುವ ಕಟ್ಟಡಗಳು ಬುಲೆಟ್ ತಡೆಯುವಷ್ಟು ಗಟ್ಟಿಮುಟ್ಟಾಗಿ ಕಾಣುತ್ತಿವೆ. ಜತೆಗೆ ಮೋರ್ಟರ್, ಫಿರಂಗಿ ದಾಳಿಯಾದರೆ ಮೇಲ್ಭಾಗದಲ್ಲಿ ಸ್ಫೋಟವಾಗುತ್ತದೆ.
ಆದರೆ ವಿಡಿಯೋದಲ್ಲಿ ಸುಧಾರಿತ ಸ್ಫೋಟಕದಿಂದಾದಂತೆ ಕೆಳಭಾಗದಿಂದ ಸ್ಫೋಟವಾಗಲ್ಲ. ಆದ್ದರಿಂದ ಇದು ನಕಲಿ ಎಂದು ಮೂಲಗಳು ಹೇಳಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra: ಬೈಕ್ ಸವಾರನನ್ನು ತಪ್ಪಿಸಲು ಹೋಗಿ ಬಸ್ ಪಲ್ಟಿ… 10 ಮಂದಿ ಮೃತ್ಯು
Karnataka ಸೇರಿ 4ರಾಜ್ಯಗಳಿಗೆ ಬೇಕಿದ್ದ ಹಂತಕ ಅರೆಸ್ಟ್, 2000 CCTV ಪರಿಶೀಲಿಸಿದ್ದ ಪೊಲೀಸರು
Maharashtra: ದಿಢೀರನೆ ಊರಿಗೆ ತೆರಳಿದ ಶಿಂಧೆ; ಮತ್ತೆ ಮುಂದುವರಿದ ʼಮಹಾ ಸಿಎಂʼ ಕಗ್ಗಂಟು
Sambhal Mosque Survey: ಜಾಮಾ ಮಸೀದಿಯ ಸಮೀಕ್ಷೆಗೆ ತಡೆ ನೀಡಿದ ಸುಪ್ರೀಂಕೋರ್ಟ್
Jammu Kashmir: ದೊಡ್ಡ ಯೋಜನೆ ವಿಫಲ; ಉಗ್ರರ ಅಡಗುತಾಣವನ್ನು ಧ್ವಂಸ ಮಾಡಿದ ಸೇನೆ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.